ವಿಶ್ವ ತಾಯಂದಿರ ದಿನ 2022: ನಿಮ್ಮ ತಾಯಿಗೆ ನೀವು ನೀಡಬಹುದಾದ ಅತ್ಯುತ್ತಮ ಗ್ಯಾಜೆಟ್ಸ್‌!

|

ಪ್ರತಿಯೊಂದು ಜೀವಿಗೂ ಜನ್ಮನೀಡುವ ಜನ್ಮದಾತೆ ಅಮ್ಮ. ಅಂತಹ ತಾಯಿಯ ಪ್ರೀತಿಯನ್ನು ಕೆಲವೇ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ತಾಯಯಿ ಮಮತೆಯನ್ನು ನೆನೆಯಲು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ ಆದರೂ ಕೂಡ ತಾಯಿಯ ತ್ಯಾಗ, ಪ್ರೀತಿ ಮಮತೆಯನ್ನು ಸಾರುವುದಕ್ಕಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ವಿಶ್ವ ತಾಯಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶ್ವ ತಾಯಂದಿರ ದಿನದ ಪ್ರಯುಕ್ತ ತಾಯಿಗೆ ವಿಶೇಷ ಉಡುಗೊರೆ ನೀಡುವುದಕ್ಕೆ ಪ್ರತಿಯೊಬ್ಬರು ಕೂಡ ಬಯಸುತ್ತಾರೆ.

ಸ್ಮಾರ್ಟ್‌ವಾಚ್‌

ತಾಯಂದಿರ ದಿನದಂದು ತಾಯಿಗೆ ವಿಶೇಷ ಉಡುಗೊರೆ ನೀಡುವುದಕ್ಕೆ ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಅನೇಕ ಗ್ಯಾಜೆಟ್ಸ್‌ಗಳು ಲಭ್ಯವಿವೆ. ಅದರಲ್ಲೂ ಹೆಚ್ಚಿನ ಜನರು ಈ ದಿನವನ್ನು ವಿಶೇಷವಾಗಿಡಲು ಅಮ್ಮನಿಗೆ ಸ್ಮಾರ್ಟ್‌ಫೋನ್‌, ಇಯರ್‌ಫೋನ್‌, ಸ್ಮಾರ್ಟ್‌ವಾಚ್‌ ಸೇರಿದಂತೆ ವಿಶೇಷವಾದ ಗ್ಯಾಜೆಟ್ಸ್‌ಗಳನ್ನು ನೀಡಲು ಬಯಸುತ್ತಾರೆ. ಹಾಗಾದ್ರೆ ವಿಶ್ವ ತಾಯಂದಿರ ದಿನದಂದು ನಿಮ್ಮ ತಾಯಿಗೆ ಉಡುಗೊರೆ ನೀಡಲು 10,000ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಗ್ಯಾಜೆಟ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌ಗಳು

ಸ್ಮಾರ್ಟ್‌ಫೋನ್‌ಗಳು

ತಾಯಂದಿರ ದಿನದಂದು ನಿಮ್ಮ ತಾಯಿಗೆ ನೀವು ಹೊಸ ಸ್ಮಾರ್ಟ್‌ಫೋನ್‌ ಅನ್ನು ಉಡುಗೊರೆಯಾಗಿ ನೀಡಲು ಬಯಸಿದರೆ 10,000ರೂ. ಒಳಗೆ ಅನೇಕ ಫೋನ್‌ಗಳು ದೊರಯಲಿವೆ. ಇದರಲ್ಲಿ ರಿಯಲ್‌ಮಿ ನಾರ್ಜೊ 30A ಸ್ಮಾರ್ಟ್‌ಫೋನ್‌ ಕೂಡ ಒಂದಾಗಿದೆ. ಹಾಗೆಯೇ ನೀವು ಸುಮಾರು 13,000 ರೂಪಾಯಿಗಳಲ್ಲಿ ಫೋನ್‌ ಖರೀದಿಸುವುದಾದರೆ ರೆಡ್ಮಿ ನೋಟ್‌ 10S ಸ್ಮಾರ್ಟ್‌ಫೋನ್‌ ಅನ್ನು ಪರಿಗಣಿಸಬಹುದು. ಈ ಡಿವೈಸ್‌ ಅಮೆಜಾನ್‌ನಲ್ಲಿ 13,999ರೂ.ಗೆ ಪಟ್ಟಿಮಾಡಲಾಗಿದೆ. ಇದನ್ನು ನೀವು ಇ-ಕಾಮರ್ಸ್ ಸೈಟ್‌ನಲ್ಲಿ 1,500ರಿಯಾಯಿತಿ ಕೂಪನ್ ದೊರೆಯಲಿದೆ. ಇದರಿಂದ ಈ ಫೋನ್‌ ಅನ್ನು 12,499ರೂ.ಗೆ ಖರೀದಿಸಲು ಸಾಧ್ಯವಾಗಲಿದೆ.

ವಾಯರ್‌ಲೆಸ್ ಇಯರ್‌ಫೋನ್‌ಗಳು

ವಾಯರ್‌ಲೆಸ್ ಇಯರ್‌ಫೋನ್‌ಗಳು

ಇನ್ನು ನೀವು ನಿಮ್ಮ ತಾಯಿಗೆ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಉಡುಗೊರೆ ನೀಡಲು ಬಯಸಿದರೆ ಅತ್ಯುತ್ತಮ ಆಯ್ಕೆಯ ಇಯರ್‌ಫೋನ್‌ಗಳು ಲಭ್ಯವಿವೆ. ಇದರಲ್ಲಿ ನೀವು ಸೌಂಡ್‌ಕೋರ್ ಏರ್ 2 ಪ್ರೊ ಅನ್ನು ಖರೀದಿಸಬಹುದು. ಇದು ಅತ್ಯುತ್ತಮ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳಲ್ಲಿ ಇದು ಒಂದಾಗಿದೆ. ಈ ಇಯರ್‌ ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಬೆಂಬಲಿಸುತ್ತದೆ. ಜೊತೆಗೆ ಇದು ನಾಯ್ಸ್‌ ಅನ್ನು ಫಿಲ್ಟರ್ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಇಯರ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ನಿಮಗೆ 7,999 ರೂ. ಬೆಲೆಗೆ ಲಭ್ಯವಾಗಲಿದೆ.

ಸ್ಮಾರ್ಟ್ ಲ್ಯಾಂಪ್‌

ಸ್ಮಾರ್ಟ್ ಲ್ಯಾಂಪ್‌

ನಿಮ್ಮ ತಾಯಿಗೆ ಸ್ಮಾರ್ಟ್‌ಲ್ಯಾಂಪ್‌ ನೀಡುವುದಕ್ಕೆ ಬಯಸಿದರೆ Mi ಸ್ಮಾರ್ಟ್ ಬೆಡ್‌ಸೈಡ್ ಲ್ಯಾಂಪ್ 2 ಅನ್ನು ಉತ್ತಮ ಆಯ್ಕೆಯಾಗಿರಲಿದೆ. ಇದು ಅಮೆಜಾನ್‌ನಲ್ಲಿ 2,799ರೂ.ಬೆಲೆಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್ ಲ್ಯಾಂಪ್ 11 ವರ್ಷಗಳ ವರೆಗಿನ ಬಾಳಿಕೆಯನ್ನು ನೀಡಲಿದೆ. ಇದರಲ್ಲಿ ನೀವು ಲೈಟ್‌ ಕಲರ್‌ ಮತ್ತು ಬ್ರೈಟ್‌ನೆಸ್‌ ಅನ್ನು ಕಸ್ಟಮೈಸ್ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿಕೊಳ್ಳುತ್ತಿದೆ. ಈ ಸ್ಮಾರ್ಟ್‌ ಲ್ಯಾಂಪ್‌ನಲ್ಲಿ ಫ್ಲೋ ಮೋಡ್ ಹೊಂದಿದೆ. ಇದು ಬೆಳಕಿನ ಬಣ್ಣವನ್ನು ಸ್ವಯಂಚಾಲಿತವಾಗಿ ಬದಲಾಯಿಸಲು ದೀಪವನ್ನು ಸಕ್ರಿಯಗೊಳಿಸುತ್ತದೆ. ಹಾಗೆಯೇ ಈ ಡಿವೈಸ್‌ ಟಚ್-ಪ್ಯಾನಲ್ ಅನ್ನು ಸಹ ಹೊಂದಿದೆ, ಇದರಿಂದ ಒಬ್ಬರು ವಾಲ್ಯೂಮ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿದೆ.

ಸ್ಮಾರ್ಟ್ ಸ್ಪೀಕರ್

ಸ್ಮಾರ್ಟ್ ಸ್ಪೀಕರ್

ನೀವು ಉಡುಗೊರೆ ನೀಡಬಹುದಾದ ಮತ್ತೊಂದು ಉತ್ತಮ ಆಯ್ಕೆ ಎಂದರೆ ಅದು ಸ್ಮಾರ್ಟ್ ಸ್ಪೀಕರ್ ಆಗಿದೆ. ಇದರಲ್ಲಿ ಅಮೆಜಾನ್‌ನ ಎಕೋ ಶೋ 5 ಉತ್ತಮ ಆಯ್ಕೆಯಾಗಿದೆ. ಇದರ ಬೆಲೆ 4,499ರೂ, ಆಗಿದೆ. ಇನ್ನು ಈ ಸ್ಮಾರ್ಟ್‌ ಸ್ಪೀಕರ್‌ 5.5 ಇಂಚಿನ ಸ್ಮಾಲ್‌ ಸ್ಕ್ರೀನ್‌ ಅನ್ನು ಹೊಂದಿದೆ. ಈ ಡಿವೈಸ್‌ಗಳು ನಿಮ್ಮ ಮನೆಯನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಅವಕಾಶ ನೀಡಲಿವೆ.

ಸ್ಮಾರ್ಟ್ ವಾಚ್

ಸ್ಮಾರ್ಟ್ ವಾಚ್

ತಾಯಂದಿರಿಗೆ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆಗಳಲ್ಲಿ ಸ್ಮಾರ್ಟ್ ವಾಚ್ ಕೂಡ ಸೇರಿದೆ. ಇದರಲ್ಲಿ Mi ಬ್ಯಾಂಡ್ 6, ಅಮಾಜ್‌ಫೀಟ್‌ ಬಿಪ್‌ ಯು ಪ್ರೊ, ಅಮಾಜ್‌ಫಿಟ್‌ ಬಿಪ್‌ ಎಸ್‌ ಲೈಟ್‌ ಮತ್ತು ರಿಯಲ್‌ಮಿ ವಾಚ್‌ 2 ಪ್ರೊ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ವಾಚ್‌ಗಳು ಹೃದಯ ಬಡಿತ ಮತ್ತು SpO2 ಅನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಲಿವೆ.

Best Mobiles in India

Read more about:
English summary
Mother’s Day is just around the corner and you might be looking for some special gifts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X