50,000 ರೂ. ಒಳಗೆ ಲಭ್ಯ ಇರುವ ಲ್ಯಾಪ್‌ಟಾಪ್‌ಗಳು: ಫೀಚರ್ಸ್, ಬೆಲೆ ಬಗ್ಗೆ ತಿಳಿಯಿರಿ
ಈಗಂತೂ ವೃತ್ತಿಪರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅವಶ್ಯಕ. ಇದರ ನಡುವೆ ಆಸುಸ್, ರಿಯಲ್‌ಮಿ, ಹೆಚ್‌ಪಿ ಹಾಗೂ ಡೆಲ್ ಸೇರಿದಂತೆ ಇತರೆ ಕಂಪೆನಿಗಳು ಭಿನ್ನ ವಿಭಿನ್ನವಾದ ಫೀಚರ್ಸ್ ಇರುವ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಈ ಲ್ಯಾಪ್‌ಟಾಪ್‌ಗಳು ಹೆಚ್ಚು ಆಕರ್ಷಕವಾಗಿದ್ದು, ಹೆಚ್ಚಿನ ಕಾರ್ಯಕ್ಷಮತೆ ಹೊಂದಿವೆ.

ಹೌದು, ವ್ಯವಹಾರ, ವೃತ್ತಿ ಮತ್ತು ಹೆಚ್ಚಿನ ಕೌಶಲ್ಯಗಳನ್ನು ಕಲಿಯಲು ಅಥವಾ ಕಲಿಸಲು ಲ್ಯಾಪ್‌ಟಾಪ್‌ಗಳು ಸಹಾಯಕವಾಗಲಿವೆ. ಲ್ಯಾಪ್‌ಟಾಪ್‌ಗಳಿಂದ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಾದರು ಸ್ವಾತಂತ್ರ್ಯವಾಗಿ ಕೆಲಸ ಮಾಡಬಹುದಾಗಿದೆ. ಹಾಗಿದ್ರೆ ನೀವೇನಾದರೂ ಈ ಸಮಯದಲ್ಲಿ ಉತ್ತಮ ದಕ್ಷತೆ ಇರುವ ಹಾಗೂ ಹಲವು ಫೀಚರ್ಸ್ ಇರುವ 50,000ರೂ. ಒಳಗೆ ಲಭ್ಯವಾಗುವ ಲ್ಯಾಪ್‌ಟಾಪ್ ಖರೀದಿಸಬೇಕು ಎಂದುಕೊಂಡಿದ್ದರೆ ಈ ಲೇಖನದಲ್ಲಿ ಅವುಗಳ ಪಟ್ಟಿಯ ಜೊತೆಗೆ ಕೆಲವು ಫೀಚರ್ಸ್ ಹಾಗೂ ಬೆಲೆ ಬಗ್ಗೆ ವಿವರಿಸಲಾಗಿದೆ ಓದಿರಿ.

ಆಸುಸ್ ವಿವೋಬುಕ್ 15
ಆಸುಸ್ ವಿವೋಬುಕ್ 15 X515JA-EJ592WS ಲ್ಯಾಪ್‌ಟಾಪ್ ನಿಮಗೆ 42,990ರೂ. ಗಳಿಗೆ ಲಭ್ಯವಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ 1920 x 1080 ಪಿಕ್ಸೆಲ್ ರೆಸಲ್ಯೂಶನ್ ಇರುವ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಕೋರ್ i5 10ನೇ ಜನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM ಹಾಗೂ 512 GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಇದರಲ್ಲಿದೆ.

ರಿಯಲ್‌ಮಿ ಬುಕ್ ಸ್ಲಿಮ್ ಲ್ಯಾಪ್‌ಟಾಪ್
ರಿಯಲ್‌ಮಿ ಬುಕ್ ಸ್ಲಿಮ್ ಲ್ಯಾಪ್‌ಟಾಪ್ ಗೆ 44,999ರೂ. ಆಫರ್ ಬೆಲೆ ನಿಗದಿ ಮಾಡಲಾಗಿದೆ. ಈ ಲ್ಯಾಪ್‌ಟಾಪ್ 14 ಇಂಚಿನ 2160 x 1440 ಪಿಕ್ಸೆಲ್ ರೆಸಲ್ಯೂಶನ್ ಇರುವ ಡಿಸ್‌ಪ್ಲೇ ಹೊಂದಿದ್ದು, 8 GB RAM ಮತ್ತು 256 GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಪಡೆದಿದ್ದು, ಇಂಟೆಲ್ ಕೋರ್ i3 11ನೇ ಜನ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.

ಹೆಚ್‌ಪಿ 14s-dy2508TU
ಹೆಚ್‌ಪಿ 14s-dy2508TU (6X360PA) ಲ್ಯಾಪ್‌ಟಾಪ್ 40,999ರೂ. ಗಳ ಆಫರ್ ಬೆಲೆ ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್ 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಜೊತೆಗೆ ಕೋರ್ i3 11ನೇ ಜನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ 512GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದಿದೆ.

ಆಸುಸ್ ವಿವೋಬುಕ್ 15
ಆಸುಸ್ ವಿವೋಬುಕ್ 15 X515JA-EJ562TS ಲ್ಯಾಪ್‌ಟಾಪ್ 49,890ರೂ. ಗಳ ಬೆಲೆ ಪಡೆದಿದೆ. ಹಾಗೆಯೇ ಇದು 15.6 ಇಂಚಿನ 1920 x 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದು, ಕೋರ್ i5 10ನೇ ಜನ್ ಪ್ರೊಸೆಸರ್ ಬಲ ಪಡೆದಿದೆ. ಇನ್ನು 8 GB RAM ಹಾಗೂ 512 SSD ಇಂಟರ್ನಲ್ ಸ್ಟೋರೇಜ್ ಆಯ್ಕೆ ಇದರಲ್ಲಿದೆ.

ಹೆಚ್‌ಪಿ 15s-fq2629TU (546K7PA)
ಹೆಚ್‌ಪಿ 15s-fq2629TU (546K7PA) ಲ್ಯಾಪ್‌ಟಾಪ್‌ಗೆ 45,800ರೂ. ನಿಗದಿ ಮಾಡಲಾಗಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ 1920 x 1080 ಪಿಕ್ಸೆಲ್ ರೆಸಲ್ಯೂಶನ್ ಇರುವ ಡಿಸ್‌ಪ್ಲೇ ಪಡೆದಿದೆ. ಹಾಗೆಯೇ ಇಂಟೆಲ್ ಕೋರ್ i3 11ನೇ ಜನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM ಹಾಗೂ 512 GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದಿದೆ.

ಎಂಎಸ್ಐ ಮಾಡರ್ನ್ 14 B5M-242IN
ಎಂಎಸ್ಐ ಮಾಡರ್ನ್ 14 B5M-242IN ಲ್ಯಾಪ್‌ಟಾಪ್ 45,990ರೂ. ಗಳ ಆಫರ್ ಬೆಲೆ ಪಡೆದಿದೆ. ಈ ಲ್ಯಾಪ್‌ಟಾಪ್ 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 1920 x 1080 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ ಹೆಕ್ಸಾ ಕೋರ್ ರೈಜೆನ್ 5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದ್ದು, 8 GB RAM ಹಾಗೂ 512 GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ.


Click it and Unblock the Notifications








