ಅತ್ಯುತ್ತಮ ಮೆಶ್ ವೈ-ಫೈ ರೂಟರ್‌ಗಳಿವು: ಬೆಲೆ, ಫೀಚರ್ಸ್‌ ವಿವರ ಇಲ್ಲಿದೆ

|

ಮನೆಯಲ್ಲಿಯೇ ಇದ್ದುಕೊಂಡು ಕೆಲಸ ಮಾಡುವವರು ಅಥವಾ ವ್ಯಾಪಾರ ಉದ್ದೇಶಕ್ಕೆ ಇಂಟರ್ನೆಟ್‌ ಬಳಕೆ ಮಾಡುವವರು ಹಲವಾರು ರೀತಿಯಲ್ಲಿ ಇಂಟರ್ನೆಟ್‌ ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿದೆ. ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸರಿಯಾಗಿ ಕೆಲಸ ಮಾಡಲಾಗದೆ ಹಲವರು ತಮ್ಮ ಮೇಲಾಧಿಕಾರಿಗಳಿಂದ ತೆಗಳಿಸಿಕೊಂಡಿರುವ ಅದೆಷ್ಟೋ ಘಟನೆಗಳ ನಮ್ಮ ಕಣ್ಣ ಮುಂದಿವೆ. ಪರಿಣಾಮ ಈ ಸಮಸ್ಯೆಯಿಂದ ಮುಕ್ತವಾಗಬೇಕಾದರೆ ನೀವು ಅತ್ಯುತ್ತಮ ಮೆಶ್ ವೈ-ಫೈ ರೂಟರ್‌ಗಳನ್ನು ಖರೀದಿ ಮಾಡಬೇಕಿದೆ.

ಇಂಟರ್ನೆಟ್

ಹೌದು, ಯಾವುದೇ ಸ್ಥಳದಲ್ಲಿದ್ದರೂ ಸಹ ತಡೆರಹಿತ ಇಂಟರ್ನೆಟ್ ಸಂಪರ್ಕವನ್ನು ಪಡೆಯಲು ಈ ಮೆಶ್(Mesh) ವೈ-ಫೈ ರೂಟರ್‌ ಸಹಾಯಕವಾಲಿವೆ. ಭಾರತದಲ್ಲಿ ಲಭ್ಯವಿರುವ ಹಾಗೂ ಅತ್ಯುತ್ತಮ ಗುಣಮಟ್ಟ ಹೊಂದಿರುವ ಪ್ರಮುಖ ಮೆಶ್ ವೈ-ಫೈ ರೂಟರ್‌ಗಳ ಪಟ್ಟಿ ಮಾಡಲಾಗಿದ್ದು, ಇವುಗಳ ಆಫರ್‌ ಬೆಲೆ ಹಾಗೂ ಕೆಲವು ಫೀಚರ್ಸ್‌ ಅನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನೆಟ್‌ಗೇರ್ ಆರ್ಬಿ RBK50

ನೆಟ್‌ಗೇರ್ ಆರ್ಬಿ RBK50

ನೆಟ್‌ಗೇರ್ ಆರ್ಬಿ RBK50 Tri ಬ್ಯಾಂಡ್ ಮೆಶ್ ವೈಫೈ ಸಿಸ್ಟಮ್ ಗೆ ಅಮೆಜಾನ್‌ನಲ್ಲಿ 17,499ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಡಿವೈಸ್‌ ಯಾವುದೇ ಸಂಪರ್ಕಿತ ಡಿವೈಸ್‌ಗಳಿಗೆ ಗರಿಷ್ಠ 200mbps ವರೆಗಿನ ಇಂಟರ್ನೆಟ್ ಅನ್ನು ಒದಗಿಸುತ್ತವೆ. ಹಾಗೆಯೇ ಆಂಟಿ-ವೈರಸ್, ಆಂಟಿ-ಮಾಲ್‌ವೇರ್ ಮತ್ತು ಡೇಟಾ ಕಳ್ಳತನದಿಂದ ರಕ್ಷಣೆ ಒದಗಿಸುವ ಸಲುವಾಗಿ ಮಲ್ಟಿ ಲೇಯರ್ ಭದ್ರತಾ ಸಾಫ್ಟ್‌ವೇರ್ ಫೀಚರ್ಸ್‌ ಪಡೆದುಕೊಂಡಿದೆ. ಜೊತೆಗೆ 5000 ಚದರ ಅಡಿ ವ್ಯಾಪ್ತಿವರೆಗೂ ವೈ-ಫೈ ವಿಸ್ತರಿಸಲಿದೆ.

ಗೂಗಲ್ ನೆಸ್ಟ್ AC2200

ಗೂಗಲ್ ನೆಸ್ಟ್ AC2200

ಗೂಗಲ್ ನೆಸ್ಟ್ AC2200 ವೈ-ಫೈ ಮೆಶ್ ಸಿಸ್ಟಮ್‌ಗೆ ಅಮೆಜಾನ್‌ನಲ್ಲಿ 37,949ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಡಿವೈಸ್ ವೈ-ಫೈ ನೆಟ್‌ವರ್ಕ್ ಅನ್ನು ಹೊಂದಿಸಲು ಮೋಡೆಮ್‌ಗೆ ಸಂಪರ್ಕಿಸುವ ವೈ-ಫೈ ರೂಟರ್ ಆಯ್ಕೆಯನ್ನು ಪಡದಿದೆ. ಇದರ ಜೊತೆಗೆ ಹೆಚ್ಚುವರಿ ಕವರೇಜ್‌ ಪಡೆಯಲು ಸಹ ಅನುವು ಮಾಡಿಕೊಡುತ್ತದೆ. ಅದರಂತೆ ಈ ಡಿವೈಸ್‌ 4400 ಚದರ ಅಡಿಗಳವರೆಗೆ ಇಂಟರ್ನೆಟ್‌ ಸೇವೆ ನೀಡಲಿದೆ.

ಲಿಂಕ್ಸಿಸ್ ವೆಲೋಪ್ ಟ್ರೈಬ್ಯಾಂಡ್ AC2200

ಲಿಂಕ್ಸಿಸ್ ವೆಲೋಪ್ ಟ್ರೈಬ್ಯಾಂಡ್ AC2200

ಲಿಂಕ್ಸಿಸ್ ವೆಲೋಪ್ ಟ್ರೈಬ್ಯಾಂಡ್ AC2200 ಮೆಶ್ Wi-Fi 5 ರೂಟರ್ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ 23,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಟ್ರೈ-ಬ್ಯಾಂಡ್ ಸಂಪರ್ಕವನ್ನು ಹೊಂದಿದ್ದು, ಸ್ವಯಂ-ನವೀಕರಣಗಳ ಸಾಮರ್ಥ್ಯ ಸಹ ಇದರಲ್ಲಿದೆ. ಅಮೆಜಾನ್ ಅಲೆಕ್ಸಾ ವಾಯ್ಸ್‌ ಅಸಿಸ್ಟೆಂಟ್ ಫೀಚರ್ಸ್‌ ಅನ್ನು ಪಡೆದುಕೊಂಡಿರುವ ಇದನ್ನು ಎಷ್ಟೇ ದೂರದಲ್ಲಿದ್ದರೂ ಆಪ್‌ ಮೂಲಕ ಮೊಬೈಲ್‌ನಿಂದಲೇ ಇದನ್ನು ನಿಯಂತ್ರಣ ಮಾಡಬಹುದಾಗಿದೆ.

ಟಿಪಿ-ಲಿಂಕ್ ಡೆಕೊ E4

ಟಿಪಿ-ಲಿಂಕ್ ಡೆಕೊ E4

ಟಿಪಿ-ಲಿಂಕ್ ಡೆಕೊ E4 ಹೋಲ್ ಹೋಮ್ ಮೆಶ್ ವೈ-ಫೈ ಸಿಸ್ಟಮ್ ಅನ್ನು ಅಮೆಜಾನ್‌ನಲ್ಲಿ 6,999ರೂ. ಗಳಿಗೆ ಕೊಂಡುಕೊಳ್ಳಬಹುದು. ಈ ಡಿವೈಸ್ ನಿಂದ ಬರೋಬ್ಬರಿ 100 ಡಿವೈಸ್‌ಗಳಿಗೆ ಸಂಪರ್ಕ ಕಲ್ಪಿಸಿಕೊಳ್ಳಬಹುದಾಗಿದೆ. ಜೊತೆಗೆ 1167 Mbps ವೇಗವನ್ನು ಇದು ಒದಗಿಸುತ್ತದೆ. ಹಾಗೆಯೇ ಯಾವುದೇ ನೆಟ್‌ವರ್ಕ್‌ ಇಲ್ಲದ ಸ್ಥಳದಲ್ಲೂ ಸಹ ಇದು ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಇನ್ನುಳಿದಂತೆ 4,000 ಚದರ ಅಡಿಗಳಷ್ಟು ಪ್ರದೇಶಕ್ಕೆ ವೈ-ಫೈ ಸೇವೆಯನ್ನು ನೀಡುತ್ತದೆ.

ಟೆಂಡಾ MW3

ಟೆಂಡಾ MW3

ಟೆಂಡಾ MW3 ಹೋಲ್ ಹೋಮ್ ಮೆಶ್ ವೈಫೈ ಸಿಸ್ಟಮ್‌ಗೆ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ 5,499ರೂ. ಗಳ ಆಫರ್‌ ಬೆಲೆ ನಿಗದಿ ಮಾಡಿವೆ. ಈ ಡಿವೈಸ್ ಸ್ಟ್ರೀಮಿಂಗ್, ಗೇಮಿಂಗ್, ವಿಡಿಯೋ ಕಾಲ್ ಮತ್ತು ಇನ್ನಿತರೆ ಚಟುವಟಿಕೆಗೆ ಹೆಚ್ಚಿನ ಕಾರ್ಯಕ್ಷಮತೆ ನೀಡುತ್ತದೆ. ಇದು ಪ್ರತಿ ಯೂನಿಟ್‌ಗೆ 1500 ಚದರ ಅಡಿಗಳಿಗೆ ವೈ ಫೈ ವಿಸ್ತರಿಸಲಿದ್ದು, ಅವಶ್ಯಕತೆಯ ಆಧಾರದ ಮೇಲೆ ವಿಸ್ತರಣೆಯನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಈ ವೈ-ಫೈ ರೂಟರ್‌ ಅನ್ನು ಟೆಂಡವೈ-ಫೈ ಮೊಬೈಲ್ ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದಾಗಿದೆ.

Best Mobiles in India

English summary
There are several types of WiFi routers available in India. in This article, we detailed the best-performing routers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X