ಟಾಪ್‌ 9 ಉತ್ತಮ ನಾಯ್ಸ್‌ ಕ್ಯಾನ್ಸಲಿಂಗ್‌ ಇಯರ್‌ಬಡ್ಸ್‌ಗಳು ಇಲ್ಲಿವೆ!

|

ಸ್ಮಾರ್ಟ್‌ ಜಗತ್ತಿನಲ್ಲಿ ಇಯರ್‌ಬಡ್ಸ್‌ಗಳನ್ನು ಗ್ರಾಹಕರು ಹೆಚ್ಚಾಗಿ ಇಷ್ಟ ಪಡುತ್ತಿದ್ದಾರೆ. ಆಡಿಯೋ ವಿಭಾಗದಲ್ಲಿ ಈ ಇಯರ್‌ಬಡ್ಸ್‌ಗಳು ಭಾರೀ ಜನಪ್ರಿಯತೆ ಗಳಿಸಿಕೊಂಡಿವೆ. ಅದರಲ್ಲೂ ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ ಇರುವ ಇಯರ್‌ಬಡ್ಸ್‌ಗಳಿಗೆ ಉತ್ತಮ ಬೇಡಿಕೆ ಇದೆ.

ಇಯರ್‌ಬಡ್ಸ್‌

ಹೌದು, ಇಯರ್‌ಬಡ್ಸ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದ್ದು, ಅದರಂತೆ ಕಂಪೆನಿಗಳು ಸಹ ವಿವಿಧ ಫೀಚರ್ಸ್‌ ಇರುವ ಇಯರ್‌ಬಡ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬರುತ್ತಿವೆ. ನಾಯ್ಸ್ ಕ್ಯಾನ್ಸಲಿಂಗ್ ಆಯ್ಕೆ ಇರುವ ಇಯರ್‌ಬಡ್ಸ್‌ ಎಲ್ಲರಿಗೂ ಅಚ್ಚುಮೆಚ್ಚು. ಸಾಮಾನ್ಯ ಇಯರ್‌ಬಡ್ಸ್‌ಗಳಿಗೆ ಹೋಲಿಸಿದರೆ ಈ ಸ್ಮಾರ್ಟ್‌ ಗ್ಯಾಜೆಟ್‌ಗಳಿಗೆ ಸ್ವಲ್ಪ ಹೆಚ್ಚಿನ ಬೆಲೆ ತೆರಬೇಕು. ಆದರೆ, ಇಲ್ಲಿ ಬಜೆಟ್‌ ಬೆಲೆಗೆ ಉತ್ತಮ ಗುಣಮಟ್ಟ ಇರುವ ಇಯರ್‌ಬಡ್ಸ್‌ಗಳ ಬಗ್ಗೆ ವಿವರಿಸಿದ್ದೇವೆ ಓದಿರಿ.

ಸೋನಿ WF-1000XM4

ಸೋನಿ WF-1000XM4

ಈ ಇಯರ್‌ಬಡ್ಸ್‌ ಅತ್ಯುತ್ತಮ ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ ಹೊಂದಿದೆ. ಈ ಡಿವೈಸ್‌ ಓಎಸ್ ಹಾಗೂ ಆಂಡ್ರಾಯ್ಡ್‌ ಎರಡಕ್ಕೂ ಬೆಂಬಲ ನೀಡಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ 8 ಗಂಟೆಗಳ ಕಾಲ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತದೆ. ಇದನ್ನು ನೀವು ಅಮೆಜಾನ್‌, ಕ್ರೋಮಾ ಸೈಟ್‌ನಲ್ಲಿ 16,990ರೂ.ಗಳ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ.

ಪ್ಯಾನಾಸೋನಿಕ್ RZ-S500W

ಪ್ಯಾನಾಸೋನಿಕ್ RZ-S500W

ಈ ಇಯರ್‌ಬಡ್ಸ್‌ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಕ್ವಾಲಿಟಿ ಹೊಂದಿದೆ. ನಾಯ್ಸ್ ಕ್ಯಾನ್ಸಲಿಂಗ್‌ ಆಯ್ಕೆ ಇರುವ ಈ ಇಯರ್‌ಬಡ್ಸ್‌ ಬ್ಲೂಟೂತ್ ಆವೃತ್ತಿ 5.0 ಜೊತೆಗೆ 6.5 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತದೆ. ಹಾಗೆಯೇ 5,795ರೂ. ಗಳಿಗೆ ಅಮೆಜಾನ್‌ನಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.

ಇಯರ್‌ಫನ್‌ ಏರ್‌ ಪ್ರೊ

ಇಯರ್‌ಫನ್‌ ಏರ್‌ ಪ್ರೊ

ಈ ಇಯರ್‌ಬಡ್ಸ್‌ ಉತ್ತಮ ಶಬ್ಧ ರದ್ಧತಿ ಆಯ್ಕೆ ಹೊಂದಿದ್ದು, ಇನ್‌ಬಿಲ್ಟ್‌ ಮೈಕ್ ಹಾಗೂ ನಿಯಂತ್ರಣ ಆಯ್ಕೆಗಳನ್ನು ಒಳಗೊಂಡಿದೆ. ಜೊತೆಗೆ 7 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದ್ದು, ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ.

ಸೋನಿ WF-1000XM3

ಸೋನಿ WF-1000XM3

ಈ ಇಯರ್‌ಬಡ್ಸ್ ಉತ್ತಮ ಕ್ವಾಲಿಟಿಯ ಜೊತೆಗೆ ಅತ್ಯುತ್ತಮ ನಾಯ್ಸ್ ಕ್ಯಾನ್ಸಲಿಂಗ್‌ ಆಯ್ಕೆ ಪಡೆದಿದೆ. ಇದರಲ್ಲಿ 5.0 ಬ್ಲೂಟೂತ್ ಆವೃತ್ತಿ ಇದ್ದು, 6 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಪಡೆದಿದೆ. ಇನ್ನುಳಿದಂತೆ ಅಮೆಜಾನ್‌ ಸೈಟ್‌ನಲ್ಲಿ 9,550ರೂ. ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು.

ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 3

ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 3

ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 3 aptX ಅಡಾಪ್ಟಿವ್ ಬೆಂಬಲಿತ ಬ್ಲೂಟೂತ್ ಆಯ್ಕೆ ಪಡೆದಿದೆ. 7 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಇದರಲ್ಲಿದ್ದು, ಇನ್‌ಬಿಲ್ಟ್ ಮೈಕ್‌ ಹಾಗೂ ನಿಯಂತ್ರಣದಂತಹ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಅಮೆಜಾನ್‌ನಲ್ಲಿ 15,990ರೂ. ಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು.

ಬೋಸ್ ಕ್ವೈಟ್ ಕಂಫರ್ಟ್ ಇಯರ್‌ಬಡ್ಸ್

ಬೋಸ್ ಕ್ವೈಟ್ ಕಂಫರ್ಟ್ ಇಯರ್‌ಬಡ್ಸ್

ಈ ಇಯರ್‌ಬಡ್ಸ್ ಉತ್ತಮ ಶಬ್ಧ ರದ್ಧತಿ ಆಯ್ಕೆಯನ್ನು ಪಡೆದಿದ್ದು, 6 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಜೊತೆಗೆ ಇನ್‌ಬಿಲ್ಟ್‌ ಮೈಕ್‌ ಹಾಗೂ ನಿಯಂತ್ರಣದ ಆಯ್ಕೆ ಇದರಲ್ಲಿದೆ. ಇದನ್ನು ಅಮೆಜಾನ್‌ನಲ್ಲಿ17,990ರೂ. ಗಳಿಗೆ ಕೊಂಡುಕೊಳ್ಳಬಹುದು.

ಸೋನಿ WF-SP800N

ಸೋನಿ WF-SP800N

ಈ ಸ್ಮಾರ್ಟ್‌ ಗ್ಯಾಜೆಟ್‌ ವ್ಯಾಯಾಮ ಹಾಗೂ ಕ್ರೀಡಾ ಸಂದರ್ಭಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನಾಯ್ಸ್ ಕ್ಯಾನ್ಸಲಿಂಗ್‌ ಇಯರ್‌ಬಡ್ಸ್‌ ಉತ್ತಮ ಸಂಗೀತದ ಅನುಭವ ನೀಡಲಿವೆ. ಈ ಡಿವೈಸ್‌ ಆಂಡ್ರಾಯ್ಡ್‌ ಹಾಗೂ ಓಎಸ್‌ಗಳಿಗೆ ಬೆಂಬಲ ನೀಡುತ್ತದೆ. ಇನ್ನು ಅಮೆಜಾನ್‌ನಲ್ಲಿ 13,990ರೂ. ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.

ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 2

ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 2

ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ ಇರುವ ಪ್ರಮುಖ ಇಯರ್‌ಬಡ್ಸ್‌ಗಳಲ್ಲಿ ಇದೂ ಒಂದು. ಈ ಇಯರ್‌ಬಡ್ಸ್‌ ಆಂಡ್ರಾಯ್ಡ್‌ ಹಾಗೂ ಓಎಸ್‌ಗೆ ಬೆಂಬಲಿಸುತ್ತದೆ. ಜೊತೆಗೆ 7 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಅಮೆಜಾನ್‌ನಲ್ಲಿ ಇದರ ಅರಂಭಿಕ ಬೆಲೆ 19,590ರೂ. ಗಳಾಗಿದೆ.

ಬೀಟ್ಸ್ ಸ್ಟುಡಿಯೋ ಬಡ್ಸ್

ಬೀಟ್ಸ್ ಸ್ಟುಡಿಯೋ ಬಡ್ಸ್

ಬೀಟ್ಸ್ ಸ್ಟುಡಿಯೋ ಬಡ್ಸ್ ಬಜೆಟ್ ಬೆಲೆಯಲ್ಲಿ ಲಭ್ಯ ಇರುವ ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆಯ ಇಯರ್‌ಬಡ್ಸ್‌ಆಗಿದೆ. ಇದರಲ್ಲಿ 5.2 ಬ್ಲೂಟೂತ್ ಆವೃತ್ತಿ ಇದ್ದು, 5 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಇರಲಿದೆ. ಅಮೆಜಾನ್‌ನಲ್ಲಿ ಈ ಡಿವೈಸ್‌ನ್ನು ನೀವು 10,999ರೂ. ಗಳ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ.

Best Mobiles in India

English summary
Earbuds are becoming increasingly popular among consumers. Especially the earbuds with noise canceling option are in great demand.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X