ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!

|

ಜಿಯೋ, ವೊಡಫೋನ್ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು ಈಗಾಗಲೇ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಆಫರ್‌ನ ವಿವಿಧ ಪ್ಲ್ಯಾನ್‌ಗಳನ್ನು ನೀಡುತ್ತಿವೆ. ಅವುಗಳಲ್ಲಿ ಹಲವು ಹೆಚ್ಚಿನ ಉಚಿತ ಡೇಟಾ ಲಭ್ಯವಿರುವ ಪ್ಲ್ಯಾನ್‌ಗಳಾಗಿದ್ದು, ಇಂಟರ್ನೆಟ್‌ಗೆ ಬೆಸ್ಟ್ ಎನಿಸಿವೆ. ಆದ್ರೆ ಈಗ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೊ ಸ್ಟ್ರಿಮಿಂಗ್ ಮಾಡುವ ಮತ್ತು ಲೈವ್‌ ಟಿವಿ ವೀಕ್ಷಿಸುವ ಹೊಸ ಟ್ರೆಂಡ್‌ ಶುರುವಾಗಿದ್ದು, ಇದಕ್ಕೆ ಹೆಚ್ಚಿನ ಡೇಟಾ ಬೇಕಾಗಿದೆ ಅಲ್ಲವೇ.

ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!

ಹೌದು, ಸದ್ಯ ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ಫ್ಲೆಕ್ಸ್, ಅಮೆಜಾನ್ ಪ್ರೈಮ್, ಜೀ5, ಹಾಟ್‌ಸ್ಟಾರ್‌ ಸೇರಿದಂತೆ ಇನ್ನೂ ಹಲವು ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳ ಬಳಕೆ ಹೆಚ್ಚಾಗಿದೆ. ಈ ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳಿಗೆ ಗ್ರಾಹಕರು ಸಬ್‌ಸ್ಕ್ರೈಬ್‌ ಆಗಿರುತ್ತಾರೆ. ಆಪ್‌ಗಳಲ್ಲಿ ವಿಡಿಯೊ ವೀಕ್ಷಿಸಲು ಅಧಿಕ ಡೇಟಾ ಬೇಕಾಗಿರುತ್ತದೆ. ಅದಕ್ಕಾಗಿ ಪ್ರತಿದಿನ ಉಚಿತ 2GB ಡೇಟಾ ಅದಕ್ಕೂ ಹೆಚ್ಚಿನ ಡೇಟಾ ಪ್ಲ್ಯಾನ್‌ಗಳು ಉತ್ತಮ.

ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!

ಪ್ರಸ್ತುತ ಜಿಯೋ, ವೋಡಾಫೋನ್ ಮತ್ತು ಏರ್‌ಟೆಲ್ ಕಂಪನಿಗಳ ಗ್ರಾಹಕರಿಗೆ ಅಧಿಕ ಉಚಿತ ಡೇಟಾ ಲಭ್ಯವಾಗುವ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಕೇಲವು ಪ್ಲ್ಯಾನ್‌ಗಳು ಪ್ರತಿದಿನ 2GB ಮತ್ತು ಅದಕ್ಕಿಂತಲೂ ಅಧಿಕ ಡೇಟಾ ಪ್ರಯೋಜನವನ್ನು ನೀಡುತ್ತವೆ. ಈ ಕುರಿತು ಇಂದಿನ ಈ ಲೇಖನದಲ್ಲಿ ಸದ್ಯ ಟೆಲಿಕಾಂ ಕಂಪನಿಗಳ ಅಧಿಕ ಡೇಟಾ ಪ್ಲ್ಯಾನ್‌ಗಳ ಕುರಿತು ಮಾಹಿತಿಯನ್ನು ನೋಡೋಣ ಬನ್ನಿರಿ.

ಓದಿರಿ : ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?ಓದಿರಿ : ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?

ಹೆಚ್ಚಿನ ಡೇಟಾ ಅಗತ್ಯ

ಹೆಚ್ಚಿನ ಡೇಟಾ ಅಗತ್ಯ

ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ಫ್ಲೆಕ್ಸ್‌, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್ ಇಂತಹ ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳಲ್ಲಿ ವಿಡಿಯೊ ವೀಕ್ಷಿಸುವಾಗ ಡೇಟಾ ಹೆಚ್ಚಾಗಿ ಬಳಕೆಯಾಗುತ್ತದೆ. ವಿಡಿಯೊಗಳ ಗುಣಮಟ್ಟವು ಉತ್ತಮವಾಗಿದ್ದು, ಪ್ರತಿದಿನ 1GB ಡೇಟಾ ಕಡಿಮೆ ಎನಿಸುತ್ತದೆ. ವಿಡಿಯೊ ಸ್ಟ್ರಿಮಿಂಗ್ ಮಾಡುವವರು ಹೆಚ್ಚಿನ ಡೇಟಾ ಲಭ್ಯವಿರುವ ಪ್ಲ್ಯಾನ್‌ಗಳನ್ನು ರೀಚಾರ್ಜ್‌ ಮಾಡಿಕೊಳ್ಳುವುದು ಉತ್ತಮ.

ಜಿಯೋ ಪ್ಲ್ಯಾನ್‌ಗಳು

ಜಿಯೋ ಪ್ಲ್ಯಾನ್‌ಗಳು

ಜಿಯೋ ಟೆಲಿಕಾಂ ಕಂಪನಿಯ ಜನಪ್ರಿಯ ಪ್ಲ್ಯಾನ್‌ಗಳು 28 ದಿನಗಳ ವ್ಯಾಲಿಡಿಟಿಯ 198ರೂ ಪ್ಲ್ಯಾನ್, 398ರೂ. ಪ್ಲ್ಯಾನ್ 70 ದಿನ ವ್ಯಾಲಿಡಿಟಿ, 448ರೂ.ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿ, 498ರೂ.ಪ್ಲ್ಯಾನ್‌ 91 ದಿನಗಳ ವ್ಯಾಲಿಡಿಟಿ ಒಳಗೊಂಡಿವೆ. ಹಾಗೆಯೇ 498ರೂ.ಗಳ ಪ್ಲ್ಯಾನ್‌ನಲ್ಲಿನ 2GB ಡೇಟಾ ಸಾಕಾಗದಿದ್ದರೇ ಗ್ರಾಹಕರು ಮತ್ತೆ 28 ದಿನಗಳ ವ್ಯಾಲಿಡಿಟಿಯ 299ರೂ. ಪ್ಲ್ಯಾನ್‌ ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಈ ಪ್ಲ್ಯಾನ್‌ನಲ್ಲಿ 3GB ಡೇಟಾ ಲಭ್ಯವಾಗಲಿದೆ.

ಓದಿರಿ : ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!ಓದಿರಿ : ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!

ವೊಡಾಫೋನ್ ಪ್ಲ್ಯಾನ್‌ಗಳು

ವೊಡಾಫೋನ್ ಪ್ಲ್ಯಾನ್‌ಗಳು

28 ದಿನಗಳ ವ್ಯಾಲಿಡಿಟಿಯ 229ರೂ.ಗಳ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 2GB ಡೇಟಾ ಸೌಲಭ್ಯ ಪಡೆಯುವ ಆಯ್ಕೆ ಇದೆ. ಹಾಗೆಯೇ ಪ್ರತಿದಿನ 3GB ಡೇಟಾದ 349ರೂ.ಪ್ಲ್ಯಾನ್‌ ಸಹ ಇದೆ. ಅಲ್ಲದೇ 28 ದಿನಗಳ ವ್ಯಾಲಿಡಿಟಿಯ ಪ್ರತಿದಿನ 2.5GB ಡೇಟಾ ಒಳಗೊಂಡ 255ರೂ ಪ್ಲ್ಯಾನ್‌ ಆಯ್ಕೆಯನ್ನು ಒಳಗೊಂಡಿದೆ. 511ರೂ.ಗಳ ಪ್ಲ್ಯಾನ್‌ ಪ್ರತಿದಿನ 2GB ಡೇಟಾವನ್ನು ಪ್ರಯೋಜನ ಹೊಂದಿದೆ ವ್ಯಾಲಿಡಿಟಿಯು 28ದಿನಗಳು ಮಾತ್ರ.

ಏರ್‌ಟೆಲ್ ಪ್ಲ್ಯಾನ್‌ಗಳು

ಏರ್‌ಟೆಲ್ ಪ್ಲ್ಯಾನ್‌ಗಳು

ಏರ್‌ಟೆಲ್‌ನ 82 ದಿನಗಳ ವ್ಯಾಲಿಡಿಟಿಯ 499ರೂ. ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ದೊರೆಯಲಿದೆ. ಹಾಗೆಯೇ 28ದಿನಗಳ ವ್ಯಾಲಿಡಿಟಿಯ 299ರೂ.ಪ್ಲ್ಯಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ. ಪ್ರತಿದಿನ 3GB ಡೇಟಾ ಒಳಗೊಂಡ 349ರೂ. ಪ್ಲ್ಯಾನ್‌ ಸಹ ಇದ್ದು, ಆದರೆ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. Wynk ಮ್ಯೂಸಿಕ್ ಸೌಲಭ್ಯವು ಸಹ ಇರಲಿದೆ.

ಓದಿರಿ : ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?ಓದಿರಿ : ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?

Best Mobiles in India

English summary
The industry has witnessed a sharp increase in subscribers of OTT applications who are now driving massive data volume on the network. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X