ಅಲ್ಪಾವಧಿ ಮಾನ್ಯತೆ ಬಯಸೋರಿಗೆ ಇಲ್ಲಿವೆ ಬೆಸ್ಟ್‌ ಪ್ರಿಪೇಯ್ಡ್‌ ಪ್ಲಾನ್‌ಗಳು!

|

ಪ್ರಸ್ತುತ ದಿನಗಳಲ್ಲಿ ದೇಶದ ಅಗ್ರ ಮೂರು ಟೆಲಿಕಾಂಗಳಾಗಿ ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ಗುರುತಿಸಿಕೊಂಡಿವೆ. ಈ ಮೂರು ಟೆಲಿಕಾಂ ಕಂಪೆನಿಗಳು ತಮ್ಮ ಗ್ರಾಹಕರಿಗಾಗಿ ವಿಶೇಷ ಪ್ರಿಪೆಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಅಲ್ಪಾವಧಿ ಪ್ಲಾನ್‌ಗಳ ಜೊತೆಗೆ ದೀರ್ಘಾವಧಿ ಪ್ಲಾನ್‌ಗಳನ್ನು ಪರಿಚಯಿಸಿವೆ. ಜೊತೆಗೆ ಅಧಿಕ ಡೇಟಾ ಪ್ರಯೋಜನ ನೀಡುವ ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಿವೆ. ಇವುಗಳಲ್ಲಿ ಅಲ್ಪಾವಧಿ ಮಾನ್ಯತೆ ನೀಡುವ ಪ್ಲಾನ್‌ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಏರ್‌ಟೆಲ್

ಹೌದು, ಜಿಯೋ, ಏರ್‌ಟೆಲ್ ಅಥವಾ ವಿ ಟೆಲಿಕಾಂ ಕಂಪೆನಿಗಳು ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಗ್ರಾಹಕರು ತಮ್ಮ ಇಷ್ಟದ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಇವುಗಳಲ್ಲಿ 300ರೂ. ಒಳಗಿನ ಪ್ರಿಪೇಯ್ಡ್‌ ಪ್ಲಾನ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. ಈ ಪ್ಲಾನ್‌ಗಳಲ್ಲಿ ಅನಿಯಮಿತ ಕರೆ ಪ್ರಯೋಜನ, ದೈನಂದಿನ ಎಸ್‌ಎಂಎಸ್‌ ಹಾಗೂ ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ 300ರೂ. ಒಳಗೆ ಲಭ್ಯವಾಗುವ ಅತ್ಯುತ್ತಮ ಪ್ರಿಪೇಯ್ಡ್‌ ಪ್ಲಾನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ 209ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್ 209ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ 209ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ ಅಲ್ಪಾವಧಿಯ ಪ್ಲಾನ್‌ಗಳಲ್ಲಿ ಒಂದಾಗಿದೆ. ಈ ಪ್ಲಾನ್‌ ನಿಮಗೆ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಲಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಅನಿಯಮಿತ ಕರೆ ಪ್ರಯೋಜನ, ಪ್ರತಿದಿನ 1 GB ಡೇಟಾ ಹಾಗೂ ದಿನನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗಲಿದೆ. ಇನ್ನು ಈ ಪ್ಲ್ಯಾನ್ ಏರ್‌ಟೆಲ್ ಹೆಲೊ ಟ್ಯೂನ್‌ ಸೇವೆಯನ್ನು ಪಡದುಕೊಳ್ಳಬಹುದಾಗಿದೆ.

ಏರ್‌ಟೆಲ್‌ 239ರೂ. ಪ್ರಿಪೇಯ್ಡ್‌ ಪ್ಲಾನ್‌
ಇನ್ನು ಏರ್‌ಟೆಲ್‌ ಟೆಲಿಕಾಂನ 239ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ ನಿಮಗೆ 24 ದಿನಗಳ ಮಾಣ್ಯತೆಯನ್ನು ನೀಡಲಿದೆ. ಈ ಸಮಯದಲ್ಲಿ ಅನ್‌ಲಿಮಿಟೆಡ್‌ ಕಾಲ್ಸ್‌ ಮತ್ತು ದೈನಂದಿನ 1GB ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಿಗಲಿದೆ.

ಏರ್‌ಟೆಲ್‌ 265ರೂ.ಪ್ರಿಪೇಯ್ಡ್‌ ಪ್ಲಾನ್‌
ಏರ್‌ಟೆಲ್‌ ಟೆಲಿಕಾಂನ 265ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ನೀಡಲಿದೆ. ಇನ್ನು ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಪ್ರತಿದಿನ 1GB ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಿಗಲಿದೆ.

ಏರ್‌ಟೆಲ್ 296ರೂ. ಕ್ಯಾಲೆಂಡರ್ ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್ 296ರೂ. ಕ್ಯಾಲೆಂಡರ್ ಪ್ರಿಪೇಯ್ಡ್‌ ಪ್ಲಾನ್‌

ಇನ್ನು ಏರ್‌ಟೆಲ್‌ ಕಂಪೆನಿ 296ರೂ, ಬೆಲೆಯಲ್ಲಿ ಇತ್ತೇಚಿಗೆ ಕ್ಯಾಲೆಮಡ್‌ ಅವಧಿಯ ಪ್ರಿಪೇಯ್ಡ್‌ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ ನಿಮಗೆ 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ಪ್ಲ್ಯಾನ್‌ನಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು ಪೂರ್ತಿ ತಿಂಗಳಿಗೆ ಒಟ್ಟು 25GB ಡೇಟಾ ಪ್ರಯೋಜನ ನೀಡಲಿದೆ. ಡೇಟಾ ಖಾಲಿಯಾದ ನಂತರ, ಬಳಕೆದಾರರು ಪ್ರತಿ MB ಗೆ 50 ಪೈಸೆ ಪಾವತಿಸಬೇಕಾಗುತ್ತದೆ.

ಜಿಯೋ 259ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 259ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ ಟೆಲಿಕಾಂ ಪರಿಚಯಿಸಿರುವ 259ರೂ ಪ್ರಿಪೇಯ್ಡ್‌ ಪ್ಲಾನ್‌ ನಿಮಗೆ 30 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ ಪ್ರತಿನಿತ್ಯ 1.5GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ದೈನಂದಿ 100SMS ಪ್ರಯೋಜನ ಸಿಗಲಿದೆ. ಇದಲ್ಲದೆ ಹೆಚ್ಚುವರಿಯಾಗಿ Jio ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ಸಿಗಲಿದೆ.

ಜಿಯೋ 239ರೂ. ಪ್ರಿಪೇಯ್ಡ್ ಪ್ಲಾನ್‌
ಜಿಯೋ 239ರೂ. ಪ್ರಿಪೇಯ್ಡ್ ಪ್ಲಾನ್‌ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಪ್ರತಿನಿತ್ಯ ಅನಿಯಮಿ ಧ್ವನಿ ಕರೆಗಳು ಮತ್ತು ದೈನಂದಿನ 1.5GB ಡೇಟಾವನ್ನು ನೀಡುತ್ತದೆ. ಜೊತೆಗೆ ದಿನಕ್ಕೆ 100 SMS ಸೌಲಭ್ಯ ಕೂಡ ಲಭ್ಯ. ಇದಲ್ಲದೆ ಈ ಪ್ಲಾನ್‌ ಜಿಯೋ ಚಲನಚಿತ್ರಗಳು, ಜಿಯೋ ಕ್ಲೌಡ್ ಮತ್ತು ವಿವಿಧ ಜಿಯೋ ಸೇವೆಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡಲಿದೆ.

ವಿ ಟೆಲಿಕಾಂ 239 ಪ್ರಿಪೇಯ್ಡ್ ಪ್ಲಾನ್‌

ವಿ ಟೆಲಿಕಾಂ 239 ಪ್ರಿಪೇಯ್ಡ್ ಪ್ಲಾನ್‌

ವಿ ಟೆಲಿಕಾಂ 239ರೂ. ಪ್ರಿಪೇಯ್ಡ್‌ ಪ್ಲಾನ್‌ 24ದಿನಗಳ ವ್ಯಾಲಿಡಿಟಿ ನೀಡಲಿದೆ. ಇನ್ನು ಈ ಪ್ಲಾನ್‌ನಲ್ಲಿ ನೀವು ಪ್ರತಿದಿನ 1GB ದೈನಂದಿನ ಡೇಟಾ, ದೈನಂದಿನ 100 SMS ಮತ್ತು ಅನಿಯಮಿತ ಕರೆ ಪ್ರಯೋಜನ ನೀಡಲಿದೆ.

ವಿ ಟೆಲಿಕಾಂ 299ರೂ. ಪ್ರಿಪೇಯ್ಡ್‌ ಪ್ಲಾನ್‌
ವಿ ಟೆಲಿಕಾಂ 299ರೂ. ಪ್ರಿಪೇಯ್ಡ್ ಪ್ಲಾನ್‌ 28ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ ನಿಮಗೆ ದೈನಂದಿನ 1.5GB ಡೇಟಾ, ದಿನಕ್ಕೆ 100SMS ಹಾಗೂ ಅನಿಯಮಿತ ಕರೆ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಈ ಪ್ಲಾನ್‌ ಬಿಂಜ್ ಆಲ್-ನೈಟ್ ಫೀಚರ್ಸ್‌ ಹೊಂದಿದೆ. ಇದು ಬಳಕೆದಾರರಿಗೆ ಸರ್ಫ್ ಮಾಡಲು, ಸ್ಟ್ರೀಮ್ ಮಾಡಲು ಮತ್ತು ಮಧ್ಯರಾತ್ರಿಯಿಂದ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಶೇರ್‌ ಮಾಡಲು ಅನುಮತಿಸುತ್ತದೆ.

Best Mobiles in India

Read more about:
English summary
Best Prepaid plans with daily data benefits under Rs 300

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X