ಆಂಡ್ರಾಯ್ಡ್, ಐಫೋನ್‌ಗಳಿಗೆ ಅತ್ಯುತ್ತಮ ಮೆಸೇಜಿಂಗ್ ಆಪ್‌ಗಳಿವು!

|

ಈ ಕಾಲದಲ್ಲಿ ಬಹುಪಾಲು ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇವೆ. ಸ್ಮಾರ್ಟ್‌ಫೋನ್‌ ಕೇವಲ ಕರೆ ಮಾಡುವುದಕ್ಕಷ್ಟೇ ಅಲ್ಲದೆ ಹಲವಾರು ರೀತಿಯಲ್ಲಿ ಬಳಕೆಗೆ ಬರುತ್ತಿದೆ. ಅದರಲ್ಲೂ ಫೋಟೋ, ವಿಡಿಯೋ ಅಥವಾ ಫೈಲ್‌ಗಳನ್ನು ಶೇರ್‌ ಮಾಡಿಕೊಳ್ಳಲು ಜೊತೆಗೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿ ಜೊತೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತವೆ. ಆದರೆ, ಇದಕ್ಕೆ ಮೆಸೇಜಿಂಗ್‌ ಆಪ್‌ಗಳು ಅಗತ್ಯವಾಗಿವೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಮೆಸೇಜಿಂಗ್‌ ಆಪ್‌ಗಳು ಬಹಳ ಪ್ರಮುಖವಾದ ಪಾತ್ರ ವಹಿಸುತ್ತವೆ. ಮಾರುಕಟ್ಟೆಯಲ್ಲಿ ಈ ಕಾರಣಕ್ಕಾಗಿಯೇ ಹಲವಾರು ರೀತಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳು ಇವೆಯಾದರೂ ನಿಮ್ಮ ಆಂಡ್ರಾಯ್ಡ್ ಹಾಗೂ ಐಫೋನ್‌ಗೆ ಯಾವುದು ಸೂಕ್ತ ಹಾಗೂ ಈ ಮೆಸೇಜಿಂಗ್‌ ಆಪ್‌ಗಳು ಹೇಗೆಲ್ಲಾ ಕಾರ್ಯನಿರ್ವಹಿಸುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌

ಆಂಡ್ರಾಯ್ಡ್ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಅತ್ಯುತ್ತಮ ಹಾಗೂ ಮೊದಲ ಸ್ಥಾನದಲ್ಲಿರುವ ಆಪ್‌ ಎಂದರೆ ಅದು ವಾಟ್ಸಾಪ್‌. ಜಗತ್ತಿನಲ್ಲಿಯೇ ಹೆಚ್ಚಾಗಿ ಬಳಕೆ ಮಾಡುವ ಆಪ್‌ ಎಂಬ ಜನಪ್ರಿಯತೆ ಇದಕ್ಕಿದೆ. ಇದರಲ್ಲಿ ಫೋಟೋ, ವಿಡಿಯೋ, ಫೈಲ್‌ ಹಾಗೂ ಲಿಂಕ್‌‌ಗಳನ್ನು ಶೇರ್ ಮಾಡುವುದರ ಜೊತೆಗೆ ಚಾಟಿಂಗ್‌, ವಿಡಿಯೋ ಹಾಗೂ ಇಂಟರ್ನೆಟ್‌ ಕರೆ ಸೌಲಭ್ಯ ಸಹ ಇದೆ.

ಆಪ್‌

ಈ ಆಪ್‌ ನಲ್ಲಿ ಹಲವು ಜನರಿಗೆ ಒಮ್ಮೆಲೆ ವಿಡಿಯೋ ಹಾಗೂ ಇಂಟರ್ನೆಟ್‌ ಕರೆ ಮಾಡಬಹುದಾಗಿದೆ. ಹಾಗೆಯೇ ಲೊಕೇಶನ್‌ ಸೌಲಭ್ಯ ಇದರಲ್ಲಿದ್ದು, ನೀವು ಯಾವ ಸ್ಥಳದಲ್ಲಿದ್ದೀರಿ ಎಂಬುದನ್ನು ನಿಮಗೆ ಬೇಕಾದವರ ಜೊತೆ ಶೇರ್‌ ಮಾಡಿಕೊಳ್ಳಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ವಾಟ್ಸಾಪ್‌ ಫೋನ್ ಪೇ ಹಾಗೂ ಗೂಗಲ್‌ ಪೇ ರೀತಿ ಯುಪಿಐ ಮೂಲಕ ಹಣವನ್ನು ಟ್ರಾನ್ಸ್ಫರ್ ಮಾಡುವ ಫೀಚರ್ಸ್‌ ಹೊಂದಿದೆ . ಈ ಆಪ್‌ನ ವಿಶೇಷತೆ ಎಂದರೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಇದ್ದು, ಭದ್ರತೆಗೆ ಯಾವುದೇ ಧಕ್ಕೆ ಇರುವುದಿಲ್ಲ.

ಮೆಸೇಂಜರ್‌

ಮೆಸೇಂಜರ್‌

ಮೆಸೇಂಜರ್‌ ಆಪ್‌ ಫೇಸ್‌ಬುಕ್‌ ಅಥವಾ ಮೆಟಾ ಒಡೆತನದ ಆಪ್‌ ಆಗಿದೆ. ಇದು ಪ್ರಮುಖವಾಗಿ ಫೇಸ್‌ಬುಕ್‌ನಲ್ಲಿ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಚಾಟ್‌ ಮಾಡಲು, ಮಾಹಿತಿ ರವಾನಿಸಲು, ವಿಡಿಯೋ ಹಾಗೂ ಫೋಟೋ, ಡಾಕ್ಯುಮೆಂಟ್‌ ಶೇರ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಫೇಸ್‌ಬುಕ್‌ನಲ್ಲಿರುವ ಸ್ನೇಹಿತರ ಸಂಪರ್ಕಗಳನ್ನು ಸ್ವಯಂಚಾಲಿತವಾಗಿ ನೀಡುತ್ತದೆ. ಇದರೊಂದಿಗೆ ಯೂನಿಕ್‌ ಕೋಡ್‌ ಸ್ಕ್ಯಾನ್ ಮಾಡುವ ಮೂಲಕ ಇತರರನ್ನು ನಿಮ್ಮ ಜೊತೆ ಚಾಟ್‌ ಮಾಡಲು ಅನುಮತಿಸಬಹುದು.

ವಿಡಿಯೋ

ಈ ಆಪ್‌ನಲ್ಲೂ ವಿಡಿಯೋ ಹಾಗೂ ಇಂಟರ್ನೆಟ್‌ ಕಾಲ್‌ ಮಾಡುವ ಅವಕಾಶದ ಜೊತೆಗೆ ಲೊಕೇಶನ್‌ ಶೇರ್‌ ಮಾಡಿಕೊಳ್ಳುವ ಆಯ್ಕೆಯನ್ನೂ ನೀಡಲಾಗಿದೆ. ಹಾಗೆಯೇ ಸಮೆಸೆಂಜರ್ ರೂಮ್‌ ಫೀಚರ್ಸ್‌ ಇದ್ದು, ಇದರಲ್ಲಿ 50 ಜನರ ಗ್ರೂಪ್‌ ರಚಿಸಿ ಚಾಟ್‌ ಮಾಡಬಹುದಾಗಿದೆ.

ಟೆಲಿಗ್ರಾಮ್

ಟೆಲಿಗ್ರಾಮ್

ಟೆಲಿಗ್ರಾಮ್ ಈಗಂತೂ ಹೆಚ್ಚಾಗಿ ಮುನ್ನೆಲೆಗೆ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ದೊಡ್ಡ ಗಾತ್ರದ ಫೈಲ್‌ಗಳನ್ನು ಶೇರ್‌ ಮಾಡುವ ಫೀಚರ್ಸ್‌ ಪಡೆದಿರುವುದು. ಇನ್ನು ಮೊಬೈಲ್‌ ಹಾಗೂ ಡೆಸ್ಕ್‌ಟಾಪ್‌ಗಳಿಗೆ ವೇಗದ ಸಂದೇಶ ಕಳುಹಿಸುವ ಪ್ರಮುಖ ಆಪ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಜಾಹೀರಾತಿನ ಕಿರಿಕಿರಿ ಇರುವುದಿಲ್ಲ. ಈ ಆಪ್‌ನಲ್ಲೂ ಸಹ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್‌ ಇದ್ದು, ಚಾಟ್ ಇತಿಹಾಸವನ್ನು ಕ್ಲೌಡ್‌ನಲ್ಲಿ ಸ್ಟೋರೇಜ್‌ ಮಾಡಿಕೊಳ್ಳಬಹುದಾಗಿದೆ ಇದಕ್ಕೆ ಗಾತ್ರದ ಆಯ್ಕೆಯೇ ಇಲ್ಲ.

ಆಪ್‌

ಈ ಆಪ್‌ನ ಇನ್ನೊಂದು ಪ್ರಮುಖ ವಿಷಯ ಎಂದರೆ ಇದರಲ್ಲಿ ಬರೋಬ್ಬರಿ 200,000 ಜನರು ಇರುವ ಒಂದು ಗ್ರೂಪ್‌ ಅನ್ನು ರಚಿಸಬಹುದಾದ ಆಯ್ಕೆ ನೀಡಲಾಗಿದೆ. ಈ ಕಾರಣಕ್ಕೆ ವ್ಯವಹಾರಿಕವಾಗಿಯೇ ಇದನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಸಿಗ್ನಲ್

ಸಿಗ್ನಲ್

ವಾಟ್ಸಾಪ್‌ಗೆ ಪರ್ಯಾಯ ಆಪ್‌ ಸಿಗ್ನಲ್‌ ಎಂದು ಹೇಳಲಾಗುತ್ತದೆ. ಈ ಆಪ್‌ನಲ್ಲಿ ಮಿಲಿಟರಿ ದರ್ಜೆಯ ಭದ್ರತೆ ಇದೆ. ಈ ಆಪ್‌ ಮೂಲಕ ಇಂಟರ್ನೆಟ್‌ ಕರೆ ಹಾಗೂ ಗ್ರೂಪ್‌ ರಚನೆ ಮಾಡಿ ಸಂದೇಶ ಕಳುಹಿಸಬಹುದಾಗಿದೆ ಹಾಗೆಯೇ ಫೋಟೋ, ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳಬಹುದಾಗಿದೆ.

ಅಪ್‌ಡೇಟ್‌

ಈ ಆಪ್‌ನಲ್ಲಿ ಇತ್ತೀಚೆಗಷ್ಟೇ ಹೊಸ ಅಪ್‌ಡೇಟ್‌ ಫೀಚರ್ಸ್‌ ನೀಡಲಾಗಿದೆ. ಈ ಮೂಲಕ ಎಡಿಟರ್‌ ಆಯ್ಕೆಯಲ್ಲಿ ಇಮೇಜ್ ಬ್ಲರ್ ಮಾಡಬಹುದು. ಇದರೊಂದಿಗೆ ಸ್ಟಿಕ್ಕರ್‌ಗಳು, ಪ್ರತಿಕ್ರಿಯೆಗಳು, ಡಾರ್ಕ್ ಮೋಡ್, ಎಮೋಜಿ, ನೋಟಿಫಿಕೇಶನ್‌ ಮ್ಯೂಟ್‌ ಮಾಡಬಹದಾದ ಆಯ್ಕೆ ಸೇರಿದಂತೆ ಇನ್ನಿತರ ಫೀಚರ್ಸ್‌ ನೀಡಲಾಗಿದೆ.

ಸ್ಕೈಪ್

ಸ್ಕೈಪ್

ಸ್ಕೈಪ್‌ ಹಳೆಯ ಹಾಗೂ ಹೆಚ್ಚು ಜನಪ್ರಿಯ ಆಪ್‌ಗಳಲ್ಲಿ ಒಂದಾಗಿದೆ. ಈ ಆಪ್‌ನಲ್ಲೂ ಸಹ ಸಂದೇಶ ಕಳುಹಿಸಬಹುದು ಹಾಗೂ ಕರೆ ಮಾಡಬಹುದಾಗಿದೆ. ಜೊತೆಗೆ ಈ ಆಪ್‌ ಮೊಬೈಲ್‌ ಜೊತೆ ಡೆಸ್ಕ್‌ಟಾಪ್‌ ಆವೃತ್ತಿಯನ್ನೂ ಹೊಂದಿದೆ. ಈ ಆಪ್‌ ಡಿಸ್‌ಪ್ಲೇ ಶೇರ್‌ ಮಾಡಿಕೊಳ್ಳಲು, ಗ್ರೂಪ್‌ ವಿಡಿಯೋ ಕರೆಗಳಿಗೆ ಸೇರಲು, ಫೈಲ್‌ಗಳನ್ನು ಶೇರ್‌ ಮಾಡಲು, ಕಾಲ್‌ ರೆಕಾರ್ಡ್ ಅನುವು ಮಾಡಿಕೊಡುತ್ತದೆ. ಪ್ರಮುಖವಾಗಿ ಇದು ವೃತ್ತಿಪರ ಬಳಕೆಗೆ ಸೂಕ್ತವಾಗಿದೆ.

ಡಿಸ್ಕಾರ್ಡ್

ಇವು ಸಾಮಾನ್ಯವಾಗಿ ಬಹುಪಾಲು ಜನರು ಬಳಸುವ ಆಪ್‌ಗಳಾಗಿದ್ದು, ಇವುಗಳ ಹೊರತಾಗಿ, ಡಿಸ್ಕಾರ್ಡ್, ವೈಬರ್, ಲೈನ್, ವಿಚಾಟ್ ಸೇರಿದಂತೆ ಇನ್ನೂ ಅನೇಕ ಚಾಟಿಂಗ್ ಅಪ್ಲಿಕೇಶನ್‌ಗಳು ಟೆಕ್‌ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ಎಲ್ಲಾ ಆಪ್‌ಗಳು ಪೈಪೋಟಿಯಲ್ಲಿ ಫೀಚರ್ಸ್‌ಗಳನ್ನು ನೀಡುತ್ತಾ ಬಳಕೆದಾರರನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಾ ಸಾಗುತ್ತಿದೆ.

Best Mobiles in India

English summary
Most everyone has a smartphone these days. In this article, we have given the details of important messaging apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X