ವಿದ್ಯಾರ್ಥಿಗಳಿಗೆ ಸೂಕ್ತವಾಗುವ ವಿಂಡೋಸ್‌ 10 ಲ್ಯಾಪ್‌ಟಾಪ್‌ಗಳು: ಇಲ್ಲಿದೆ ಫೀಚರ್ಸ್ !

|

ವಿಂಡೋಸ್‌ 10 ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯಗೊಂಡಿವೆ. ಅದರಲ್ಲೂ ಹಲವಾರು ಲ್ಯಾಪ್‌ಟಾಪ್‌ಗಳು ಲಭ್ಯ ಇದ್ದು, ಪ್ರಮುಖ ಬ್ರಾಂಡ್‌ಗಳ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚಾಗಿಯೇ ಇದೆ. ಇದಕ್ಕೆ ತಕ್ಕಂತೆ ಕಂಪೆನಿಗಳೂ ಸಹ ವಿವಿಧ ಫೀಚರ್ಸ್‌ ಇರುವ ವಿಂಡೋಸ್‌ 10 ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿವೆ.

ಹೌದು, ಇಂದಿನ ಅತ್ಯಂತ ವೇಗದ ಕಾಲಕ್ಕೆ ಅನುಗುಣವಾಗಿ ಈ ಲ್ಯಾಪ್‌ಟಾಪ್‌ಗಳು ಕಾರ್ಯನಿರ್ವಹಿಸಲಿವೆ. ಅದರಲ್ಲೂ ವಿನ್ಯಾಸದಲ್ಲಿ ಕೊಂಚ ಭಿನ್ನತೆಯಿಂದ ಗಮನ ಸೆಳೆಯುವ ನೋಟ ಪಡೆದುಕೊಂಡಿವೆ. ಹಾಗಿದ್ದರೆ, ಯಾವ ವಿಂಡೋಸ್‌ 10 ಲ್ಯಾಪ್‌ಟಾಪ್‌ಗಳು ಎಷ್ಟು ಬೆಲೆ ಹೊಂದಿವೆ?, ಯಾವ ಕಂಪೆನಿಯ ಲ್ಯಾಪ್‌ಟಾಪ್‌ಗಳು ಏನೆಲ್ಲಾ ಫೀಚರ್ಸ್‌ ಪಡೆದಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಲೆನೊವೊ ಥಿಂಕ್‌ಬುಕ್‌ 15

ಲೆನೊವೊ ಥಿಂಕ್‌ಬುಕ್‌ 15

ಈ ಲ್ಯಾಪ್‌ಟಾಪ್‌ 15.6 FHD IPS ಡಿಸ್‌ಪ್ಲೇ ಹೊಂದಿದ್ದು, ಇದು 300nits ಆಯ್ಕೆ ಪಡೆದಿದೆ. 11ನೇ ಜನ್ ಇಂಟೆಲ್ ಕೋರ್ i5-1135G7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್‌ ಇಂಟೆಲ್ ಗ್ರಾಫಿಕ್ಸ್ ಇಂಟಿಗ್ರೇಟೆಡ್ ಹೊಂದಿದೆ. 8GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಇದರಲ್ಲಿದ್ದು, ಇದನ್ನು ಅಪ್‌ಗ್ರೇಡ್‌ ಸಹ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್‌ನ್ನು ಅಮೆಜಾನ್‌ನಲ್ಲಿ 59,300ರೂ. ಗಳಿಗೆ ಕೊಂಡು ಕೊಳ್ಳಬಹುದಾಗಿದೆ. ಇದರ ಮೂಲ ಬೆಲೆ 68,990ರೂ. ಗಳಾಗಿದೆ.

ಲೆನೊವೊ ಐಡಿಯಾ ಪ್ಯಾಡ್ ಸ್ಲಿಮ್‌ 3

ಲೆನೊವೊ ಐಡಿಯಾ ಪ್ಯಾಡ್ ಸ್ಲಿಮ್‌ 3

ಲೆನೊವೊ ಐಡಿಯಾ ಪ್ಯಾಡ್ ಸ್ಲಿಮ್‌ 3 ಲ್ಯಾಪ್‌ಟಾಪ್‌ 15.6 ಇಂಚಿನ FHD ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು ಇಂಟೆಲ್ ಕೋರ್ 3 ಪ್ರೊಸೆಸರ್ (10 ನೇ ಜನ್)ನ ನಲ್ಲಿ ಕಾರ್ಯನಿರ್ವಹಿಸಲಿದ್ದು , ಯುಹೆಚ್‌ಡಿ ಗ್ರಾಫಿಕ್ಸ್ ಫ್ರಮ್ ಇಂಟೆಲ್ ಹೊಂದಿದೆ. ಇದು ವಿಸ್ತರಿಸಿಕೊಳ್ಳಬಹುದಾದ 8GB RAM ಹಾಗೂ 1TB ಇಂಟರ್ನಲ್ ಸ್ಟೋರೇಜ್ ಆಯ್ಕೆ ಪಡೆದಿದೆ. ಹಾಗೆಯೇ 45Wh ನ ಬ್ಯಾಟರಿ ಸಾಮರ್ಥ್ಯ ಇದರಲ್ಲಿದ್ದು, ವೇಗದ ಚಾರ್ಜಿಂಗ್‌ ಆಯ್ಕೆ ಪಡೆದಿದೆ. ಇದನ್ನು ಅಮೆಜಾನ್‌ನಲ್ಲಿ 59,500ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಲೆನೊವೊ V15

ಲೆನೊವೊ V15

ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. 11 ನೇ ಜನ್‌ ಇಂಟೆಲ್‌ ಪ್ರೊಸೆಸರ್ I ಸಿಪಿಯುನೊಂದಿಗೆ ಕಾರ್ಯನಿರ್ವಹಿಸಲಿದ್ದು, ಇಂಟೆಲ್ ಗ್ರಾಫಿಕ್ಸ್‌ ಇದರಲ್ಲಿದೆ. ಇನ್ನುಳಿದಂತೆ 4 GBRAM ಹಾಗೂ 256 GB ಇಂಟರ್ನಲ್‌ ಸ್ಟೋರೇಜ್‌ ಇದರಲ್ಲಿದ್ದು, ಅಮೆಜಾನ್‌ನಲ್ಲಿ ಇದರ ಆರಂಭಿಕ ಬೆಲೆ 34,900 ರೂ. ಗಳಾಗಿದೆ.

ಏಸರ್ ಆಸ್ಪೈರ್ 3

ಏಸರ್ ಆಸ್ಪೈರ್ 3

ಈ ಲ್ಯಾಪ್‌ಟಾಪ್‌ 15.6 ಇಂಚಿನ FHD ಡಿಸ್‌ಪ್ಲೇ ಹೊಂದಿದ್ದು, ಅಪಾಯಕಾರಿ ನೀಲಿ ಬೆಳಕಿನಿಂದ ರಕ್ಷಣೆ ನೀಡುವ ಫೀಚರ್ಸ್‌ ಪಡೆದಿದೆ. ಇನ್ನು 10 ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಸಿಪಿಯು ನಿಂದ ಕಾರ್ಯನಿರ್ವಹಿಸಲಿದ್ದು, ಇಂಟಿಗ್ರೇಟೆಡ್ ಇಂಟೆಲ್ ಯುಹೆಚ್‌ಡಿ ಗ್ರಾಫಿಕ್ಸ್ಇದರಲ್ಲಿದೆ. ಇನ್ನು 8 GB RAM ಹಾಗೂ 1TB ಇಂಟರ್ನಲ್‌ ಸ್ಟೋರೇಜ್‌ ಇದ್ದು, RAM ಅನ್ನು 40 GB ವರೆಗೂ ಹೆಚ್ಚಿಸಿಕೊಳ್ಳಬಹುದಾಗಿದೆ. ಈ ಲ್ಯಾಪ್‌ಟಾಪ್‌ನ್ನು ನೀವು ಅಮೆಜಾನ್‌ನಲ್ಲಿ 31,429ರೂ. ಗಳಿಗೆ ಖರೀದಿ ಮಾಡಬಹುದು.

ಹೆಚ್‌ಪಿ 14 (2021)

ಹೆಚ್‌ಪಿ 14 (2021)

ಹೆಚ್‌ಪಿ ಲ್ಯಾಪ್‌ಟಾಪ್‌ 14 ಇಂಚು FHD IPS ಮೈಕ್ರೋ-ಎಡ್ಜ್ ಡಿಸ್‌ಪ್ಲೇ ಹೊಂದಿದ್ದು, ಇದು 250 nits ಬ್ರೈಟ್‌ನೆಸ್ ಹೊಂದಿದೆ. ಜೊತೆಗೆ ಇಂಟೆಲ್ ಕೋರ್ 3 (11 ನೇ ಜನ್) ನಲ್ಲಿ ಕಾರ್ಯನಿರ್ವಹಿಸಲಿದ್ದು, ಇಂಟಿಗ್ರೇಟೆಡ್ ಇಂಟೆಲ್ ಯುಹೆಚ್‌ಡಿ ಗ್ರಾಫಿಕ್ಸ್ ಇದರಲ್ಲಿದೆ. 8 GB RAM ಹಾಗೂ 256 GB ಇಂಟರ್ನಲ್‌ ಸ್ಟೋರೇಜ್‌ ಇದರಲ್ಲಿದೆ. RAM ಅನ್ನು 16 GB ಗೆ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಇದನ್ನು ಅಮೆಜಾನ್‌ ಮೂಲಕ 40,700ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

 ಆಸುಸ್ ಈಬುಕ್‌12

ಆಸುಸ್ ಈಬುಕ್‌12

ಈ ಲ್ಯಾಪ್‌ಟಾಪ್‌ 11.6 ಇಂಚಿನ HD LED ಬ್ಯಾಕ್‌ಲಿಟ್ ಆಂಟಿ ಗ್ಲೇರ್ ಡಿಸ್‌ಪ್ಲೇ ಹೊಂದಿದ್ದು, ಇದು 250 nits ಬ್ರೈಟ್‌ನೆಸ್ ಪಡೆದಿದೆ. ಇನ್ನುಳಿದಂತೆ ಇಂಟೆಲ್ ಡ್ಯುಯಲ್ ಕೋರ್ N4020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇಂಟಿಗ್ರೇಟೆಡ್ ಗ್ರಾಫಿಕ್‌ ಕಾರ್ಡ್‌ ಪಡೆದಿದೆ. ಹಾಗೆಯೇ 4GB RAM ಹಾಗೂ 64GB ಇಂಟರ್ನಲ್‌ ಸ್ಟೋರೇಜ್‌ ಹೊಂದಿದ್ದು, ಅಮೆಜಾನ್‌ನಲ್ಲಲಿ ಆಫರ್‌ ಬೆಲೆಯಲ್ಲಿ 21,990ರೂ. ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ.

Best Mobiles in India

English summary
Windows 10 is very popular in market. In this article we have detailed the top Windows 10 laptops today.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X