Subscribe to Gizbot

ಏರ್‌ಟೆಲ್‌ನಿಂದ ಉಚಿತವಾಗಿ 90 GB ಡೇಟಾ: ಷರತ್ತು ಅನ್ವಯ..!

Written By:

ಭಾರ್ತಿ ಏರ್‌ಟೆಲ್ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಕಂಪನಿಯಾಗಿದ್ದು, ಈಗಾಗಲೇ ಅನೇಕ ಆಫರ್ ಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಇದೇ ಮಾದರಿಯಲ್ಲಿ 90 GB ಡೇಟಾವನ್ನು ಉಚಿತವಾಗಿ ನೀಡಲು ಮುಂದಾಗಿದೆ. ಈಗಾಗಲೇ ಹೊಸ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೊಸ ಆಫರ್ ಗಳನ್ನು ನೀಡುವ ಏರ್‌ಟೆಲ್. ಈ ಬಾರಿ ಅದನ್ನು ಪುನರ್ವತಿಸಿದೆ.

ಏರ್‌ಟೆಲ್‌ನಿಂದ ಉಚಿತವಾಗಿ 90 GB ಡೇಟಾ: ಷರತ್ತು ಅನ್ವಯ..!

ಓದಿರಿ: ಬಿಟ್‌ಕಾಯಿನ್‌ಗಿಂತಲೂ ಹೆಚ್ಚಿನ ಲಾಭಕ್ಕಾಗಿ ಲಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿ..!

ಇಂದು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಹುವಾವೆ ಕಂಪನಿಯ ಹಾನರ್ 7X ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಏರ್‌ಟೆಲ್‌ನಿಂದ 90GB ಉಚಿತ ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಇದು ಫೋಸ್ಟ್‌ ಪೇಯ್ಡ್ ಮತ್ತು ಪ್ರೀಪೇಯ್ಡ್ ಬಳಕೆದಾರರಿಗೆ ಈ ಆಫರ್ ಅನ್ನು ತ್ವರೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಾನರ್ 7X ಸ್ಮಾರ್ಟ್‌ಫೋನ್‌:

ಹಾನರ್ 7X ಸ್ಮಾರ್ಟ್‌ಫೋನ್‌:

ಇಂದಿನಿಂದ ಆನ್‌ಲೈನ್‌ ಶಾಪಿಂಗ್ ತಾಣ ಅಮೆಜಾನ್ ನಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿರುವ ಹಾನರ್ 7X ಸ್ಮಾರ್ಟ್‌ಫೋನ್‌ ರೂ.12,999ಕ್ಕೆ ಮಾರಾಟವಾಗಲಿದ್ದು, 4GB RAM/32GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ರೂ.15,999ಕ್ಕೆ 4GB RAM/64GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ದೊರೆಯಲಿದೆ.

ಆಫರ್ ಪಡೆಯುವುದು ಹೇಗೆ?

ಆಫರ್ ಪಡೆಯುವುದು ಹೇಗೆ?

ಫೋಸ್ಟ್‌ ಪೇಯ್ಡ್ ಮತ್ತು ಪ್ರೀಪೇಯ್ಡ್ ಬಳಕೆದಾರರಿಗೆ ಈ ಆಫರ್ ಲಭ್ಯವಿದ್ದು, ಒಟ್ಟು ಆರು ತಿಂಗಳ ರಿಚಾರ್ಜ್ ಮಾಡಿದ ಸಂದರ್ಭದಲ್ಲಿ ಪ್ರತಿ ತಿಂಗಳು 15GB ಡೇಟಾವನ್ನು ನೀಡಲಿದೆ. ಇದರಿಂದಾಗಿ ಒಟ್ಟು 90GB ಡೇಟಾ ಬಳಕೆಗೆ ದೊರೆಯಲಿದೆ. ಇದು ಉಚಿತವಾಗಿ ಲಭ್ಯವಿರಲಿದೆ ಎನ್ನಲಾಗಿದೆ.

ಆಫರ್ ಏನೀದೆ..?

ಆಫರ್ ಏನೀದೆ..?

ಏರ್ ಟೆಲ್ ಬಳಕೆದಾರರು ರೂ. 349ಕ್ಕೆ ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ದಿನಕ್ಕೆ 2GB ಡೇಟಾವನ್ನು ನೀಡಲಿದೆ. ಇದರಲ್ಲಿ ಬಳಕೆದಾರರು ಒಟ್ಟು 71GB ಡೇಟಾ (56GB+15GB) ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bharti Airtel 90GB Data. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot