ಏರ್‌ಟೆಲ್‌ಗೆ ಇಂತಹ ಕೆಟ್ಟ ಪರಿಸ್ಥಿತಿ ಬರುತ್ತೆ ಅಂತ ಯಾರೂ ಕೂಡ ಊಹಿಸಿರಲಿಲ್ಲ!!

|

ಒಂದು ಕಾಲದಲ್ಲಿ ಭಾರತ ಮಾತ್ರವಲ್ಲದೆ ಹಲವು ದೇಶಗಳ ಟೆಲಿಕಾಂ ದಿಗ್ಗಜನಾಗಿ ಮೆರೆದಿದ್ದ ಭಾರ್ತಿ ಏರ್‌ಟೆಲ್‌ ಕಂಪೆನಿಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆದರೆ, ಜಿಯೋಯಿಂದಾಗಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಉಂಟಾಗಿರುವ ಅನಿರೀಕ್ಷಿತ ಬೆಳವಣಿಗೆಯ ಎಫೆಕ್ಟ್ ಏರ್‌ಟೆಲ್ ಅನ್ನು ಕಂಗೆಡಿಸಿದೆ. ಕಳೆದ ಒಂದು ವರ್ಷದಲ್ಲಿ ಏರ್‌ಟೆಲ್ ಬರೋಬ್ಬರಿ 5.7 ಕೋಟಿ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿರುವ ಕುರಿತಾದ ಅಂಕಿ ಅಂಶಗಳನ್ನು ಗುರುವಾರ ಬಿಡುಗಡೆಗೊಳಿಸಿದೆ.

ಹೌದು, ನವೆಂಬರ್ 2018ರ ನವಂಬರ್ ಅಂತ್ಯಕ್ಕೆ 34.1 ಕೋಟಿ ಗ್ರಾಹಕರನ್ನು ಹೊಂದಿದ್ದ ಏರ್‌ಟೆಲ್ 2018 ಡಿಸೆಂಬರ್ ಅಂತ್ಯಕ್ಕೆ ಕೇವಲ 28.42 ಕೋಟಿ ಗ್ರಾಹಕರ ಸಂಖ್ಯೆಯನ್ನು ಹೊಂದಿರುವುದಾಗಿ ತಿಳಿದುಬಂದಿದೆ. ಈ ಮೂಲಕ ಕಂಪೆನಿಯು ಕೇವಲ ಒಂದೇ ತಿಂಗಳಲ್ಲಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡಂತಾಗಿದ್ದು, ಇದೇ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಯೊಂದು ಒಂದು ವರ್ಷದಲ್ಲಿ ಇಷ್ಟು ಗ್ರಾಹಕರನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ.

ಏರ್‌ಟೆಲ್‌ಗೆ ಇಂತಹ ಕೆಟ್ಟ ಪರಿಸ್ಥಿತಿ ಬರುತ್ತೆ ಅಂತ ಯಾರೂ ಕೂಡ ಊಹಿಸಿರಲಿಲ್ಲ!!

ಈ ರಿಪೋರ್ಟ್‌ನಿಂದಾಗಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಬಳಕೆದಾರರ ನಡುವಿನ ಅಂತರ ಇನ್ನಷ್ಟು ಕಡಿಮೆಯಾದಂತಾಗಿದೆ. 2019ರ ಮೊದಲ ಮೂರು ತಿಂಗಳಿನಲ್ಲಿ ಜಿಯೋ ಕಂಪೆನಿ ಏರ್‌ಟೆಲ್‌ಗಿಂತ ಹೆಚ್ಚು ಗ್ರಾಹಕರನ್ನು ಹೊಂದುವ ನಿರೀಕ್ಷೆಯನ್ನು ಹೊಂದಲಾಗಿದೆ. ಕಳೆದ ಡಿಸೆಂಬರ್ ತಿಂಗಳ ಟ್ರಾಯ್ ಮಾಹಿತಿ ಅನ್ವಯ ಇದರ ವೇಗ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಲಾಗಿದೆ. ಹಾಗಾದರೆ, ಏರ್‌ಟೆಲ್‌ಗೆ ಇಂತಹ ಕೆಟ್ಟ ಪರಿಸ್ಥಿತಿ ಬಂದಿದ್ದು ಹೇಗೆ?, ಡಿಸೆಂಬರ್ ವೇಳೆಗೆ ದೇಶದ ಟೆಲಿಕಾಂ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬೇಸತ್ತು ಹೊರಹೋದ ಏರ್‌ಟೆಲ್ ಗ್ರಾಹಕರು!

ಬೇಸತ್ತು ಹೊರಹೋದ ಏರ್‌ಟೆಲ್ ಗ್ರಾಹಕರು!

ಇದ್ದಕ್ಕಿದ್ದಂತೆಯೇ ಇಷ್ಟೊಂದು ಪ್ರಮಾಣದಲ್ಲಿ ಮೊಬೈಲ್ ಗ್ರಾಹಕರು ಏರ್ ಟೆಲ್ ಸಂಪರ್ಕದಿಂದ ವಿಮುಖವಾಗಲು ಕಾರಣವೇನೆಂಬುದು ಗೊತ್ತಾಗಿಲ್ಲ. ಆದರೆ, ಕಾಲ್‌ಡ್ರಾಪ್ ಸಮಸ್ಯೆ ಮತ್ತು ಇಂಟರ್ನೆಟ್ ವೇಗ ಸಂಬಂಧಿತ ತಾಂತ್ರಿಕ ತೊಂದರೆಗಳಿಂದ ಬೇಸತ್ತು ಹೆಚ್ಚಿನ ಗ್ರಾಹಕರು ಏರ್‌ಟೆಲ್ ಕನೆಕ್ಷನ್ ನಿಂದ ವಿಮುಖರಾಗಿದ್ದಾರೆಂದು ಮಾರುಕಟ್ಟೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.

ಜಿಯೋ 4G ಎಫೆಕ್ಟ್!

ಜಿಯೋ 4G ಎಫೆಕ್ಟ್!

ಏರ್‌ಟೆಲ್‌ಗೆ ಹೋಲಿಸಿಕೊಂಡರೆ ಜಿಯೋ ಇಂದು ಅತ್ಯುತ್ತಮ 4G ಸೇವೆಯನ್ನು ಒದಗಿಸುತ್ತಿದೆ. ಜಿಯೋವಿನ ಡೇಟಾ ಬೆಲೆಯೂ ಸಹ ಕಡಿಮೆ ಇದೆ. ಇದರಿಂದಾಗಿ ಏರ್‌ಟೆಲ್ ಗ್ರಾಹಕರು ಜಿಯೋನತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಡಿಸೆಂಬರ್ ಅಂತ್ಯಕ್ಕೆ ಜಿಯೋ ಒಟ್ಟು ಬಳಕೆದಾರರ ಸಂಖ್ಯೆ 28 ಕೋಟಿಗೆ ಏರಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ದೇಶದ ಒಟ್ಟು ಫೋನ್ ಚಂದಾದಾರರು?

ದೇಶದ ಒಟ್ಟು ಫೋನ್ ಚಂದಾದಾರರು?

2018 ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಒಟ್ಟು 117.18 ಕೋಟಿ ಮೊಬೈಲ್ ಫೋನ್ ಚಂದಾದಾರರು ಇದ್ದಾರೆ ಎಂದು ಟ್ರಾಯ್ ರಿಪೋರ್ಟ್ ತಿಳಿಸಿದೆ. ಇದರಲ್ಲಿ 17.39 ಲಕ್ಷ ಹೊಸ ಗ್ರಾಹಕರ ಸೇರ್ಪಡೆಯಾಗಿದೆ. ಇನ್ನು ಖಾಸಗಿ ಟೆಲಿಕಾಂ ಕಂಪೆನಿಗಳು ಶೇಕಡ 89.99 ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಸರ್ಕಾರಿ ಕಂಪೆನಿಗಳ ಪಾಲು ಶೇಕಡಾ 10.01 ರಷ್ಟು ಮಾತ್ರ.

ಜಿಯೋ ನಾಗಾಲೋಟ!

ಜಿಯೋ ನಾಗಾಲೋಟ!

ಭಾರತದ 4G ಆಟಗಾರ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಕಳೆದ ವರ್ಷವೂ ತನ್ನ ನಾಗಾಲೋಟವನ್ನು ಮುಂದುವರೆಸಿದೆ. ಕಳೆದ ವರ್ಷದ ಚಂದಾದಾರಿಕೆ ರೇಸ್‌ನಲ್ಲಿ ನೇತೃತ್ವ ವಹಿಸಿರುವ ಜಿಯೋ ದೇಶದಾದ್ಯಂತ ಸುಮಾರು 88.01 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದೆ, ನವೆಂಬರ್ 30ರ ವೇಳೆಗೆ ಜಿಯೊ ಚಂದಾದಾರರ ಸಂಖ್ಯೆ 27.16 ಕೋಟಿ ದಾಟಿದೆ.

ಎರಡನೇ ಸ್ಥಾನ BSNLಗೆ!

ಎರಡನೇ ಸ್ಥಾನ BSNLಗೆ!

ಇತ್ತೀಚಿಗಷ್ಟೇ ಜಿಯೋಗಿಂತಲೂ ಮೂರು ಪಟ್ಟು ಡೇಟಾ ನೀಡಿ ಆಶ್ಚರ್ಯ ಮೂಡಿಸಿದ್ದ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸಂಸ್ಥೆ ಚಂದಾರರನ್ನು ಸೆಳೆಯುವಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನವೆಂಬರ್ 30ರ ವೇಳೆಗೆ ಬಿಎಸ್‌ಎನ್‌ಎಲ್ ಸಂಸ್ಥೆ 3.78 ಲಕ್ಷ ಚಂದಾದಾರರನ್ನು ಸೇರಿಸಿ ಟೆಲಿಕಾಂನಲ್ಲಿ ಎರಡನೇ ಸ್ಥಾನ ಪಡೆದಿದೆ.

ಕನಿಷ್ಠಕ್ಕೆ ಇಳಿದ ಏರ್‌ಟೆಲ್!

ಕನಿಷ್ಠಕ್ಕೆ ಇಳಿದ ಏರ್‌ಟೆಲ್!

ಭಾರತ ಟೆಲಿಕಾಂನಲ್ಲಿ ಹಲವು ವರ್ಷಗಳ ಕಾಲ ರಾಜನಂತೆ ಮೆರೆದಿದ್ದ ಏರ್‌ಟೆಲ್ ನವೆಂಬರ್ ತಿಂಗಳಿನಲ್ಲಿ ಮಣ್ಣುಮುಕ್ಕಿದೆ. ನವೆಂಬರ್ 30ರ ವೇಳೆಗೆ ಏರ್‌ಟೆಲ್ ಕೇವಲ 1.02 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದ್ದು, ಒಟ್ಟಾರೆಯಾಗಿ, ನವೆಂಬರ್ ಅಂತ್ಯದ ವೇಳೆಗೆ ಏರ್‌ಟೆಲ್‌ನ ಚಂದಾದಾರರು 34.18 ಕೋಟಿಯಷ್ಟು ಇದ್ದಾರೆ ಎಂದು ರಿಪೋರ್ಟ್ ತಿಳಿಸಿದೆ.

ವೊಡಾಫೋನ್ ಐಡಿಯಾಗೆ ಸಂಕಷ್ಟ!

ವೊಡಾಫೋನ್ ಐಡಿಯಾಗೆ ಸಂಕಷ್ಟ!

ದೇಶದ ಅತಿ ದೊಡ್ಡ ಟೆಲಿಕಾಂ ಆಗಿ ಹೊರಹೊಮ್ಮಿರುವ ವೊಡಾಫೋನ್ ಐಡಿಯಾಗೆ ನವೆಂಬರ್ ತಿಂಗಳು ಸಂಕಷ್ಟವನ್ನು ತಂದುಕೊಂಡಿದೆ. ಪ್ರಸ್ತುತ ಅತಿದೊಡ್ಡ ಟೆಲಿಕಾಂಸೇವಾ ಪೂರೈಕೆದಾರ ವೊಡಾಫೋನ್ ಐಡಿಯಾ 65.26 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಇನ್ನು ನವೆಂಬರ್ ಅಂತ್ಯದ ವೇಳೆಗೆ ವೊಡಾಫೋನ್ ಐಡಿಯಾ ಚಂದಾದಾರಿಕೆ 42.11 ಕೋಟಿ ಗಳಷ್ಟಿದೆ.

ಭಾರತದಲ್ಲಿ ದಾಖಲೆ ಸೃಷ್ಟಿಸಲು ಸ್ಯಾಮ್‌ಸಂಗ್ ರೆಡಿ!..ಫೆ.5ಕ್ಕೆ ಬೆಚ್ಚಿಬೀಳಲಿದೆ ಮಾರುಕಟ್ಟೆ!!

ಭಾರತದಲ್ಲಿ ದಾಖಲೆ ಸೃಷ್ಟಿಸಲು ಸ್ಯಾಮ್‌ಸಂಗ್ ರೆಡಿ!..ಫೆ.5ಕ್ಕೆ ಬೆಚ್ಚಿಬೀಳಲಿದೆ ಮಾರುಕಟ್ಟೆ!!

ಇದೇ ತಿಂಗಳ 5ನೇ ತಾರೀಖಿನಿಂದ 7,990ರೂ.ಗಳಿಂದ ಆರಂಭವಾಗಿರುವ 'ಗ್ಯಾಲಾಕ್ಸಿ ಎಂ' ಸರಣಿ ಸ್ಮಾರ್ಟ್‌ಫೋನ್‌ಗಳು ಮಾರಾಟಕ್ಕೆ ಬರುತ್ತಿರುವುದು ಮೊಬೈಲ್ ಪ್ರಿಯರಿಗೆ ಇನ್ನಿಲ್ಲದ ಸಂತೋಷವನ್ನು ಉಂಟುಮಾಡಿದೆ. ಭಾರತದಲ್ಲಿ ಚೀನಾ ಕಂಪೆನಿಗಳ ಆರ್ಭಟವನ್ನು ಕಡಿಮೆ ಮಾಡಲು ಸ್ಯಾಮ್‌ಸಂಗ್ ಕೇವಲ 7,990 ರೂ.ಗಳಿಂದ ತನ್ನ ನೂತನ ಸ್ಮಾರ್ಟ್‌ಫೋನ್ ಸರಣಿಯನ್ನು ಆರಂಭಿಸಿದ ನಂತರ ಮೊಬೈಲ್ ಪ್ರಿಯರು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಗೆ ಕಾತುರರಾಗಿದ್ದಾರೆ.

ಹೌದು, ಮೊಬೈಲ್ ಪ್ರಿಯರು ಮೂಕವಿಸ್ಮಿತರಾದರೆ, ಇತರೆ ಮೊಬೈಲ್ ಕಂಪೆನಿಗಳು ತಲೆಮೇಲೆ ಕೈಹೊತ್ತು ಕುಳಿತಿರುವಂತಹ ಹೊಸ 'ಗ್ಯಾಲಾಕ್ಸಿ ಎಂ' ಸರಣಿ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಕೈಸೇರಲು ತಯಾರಾಗಿವೆ. ಇಡೀ ಭಾರತದ ಮೊಬೈಲ್ ಲೋಕವೇ ನಂಬಲೂ ಸಾಧ್ಯವಾಗದಂತಹ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ಸ್ಯಾಮ್‌ಸಂಗ್ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ದಾಖಲೆಯೊಂದನ್ನು ಸೃಷ್ಟಿಸಲು ತಯಾರಾಗಿದೆ.

ಸ್ಯಾಮ್‌ಸಂಗ್ ಬ್ರ್ಯಾಂಡ್‌ನಲ್ಲಿ 6.3 ಇಂಚ್ ನೋಚ್ ಡಿಸ್‌ಪ್ಲೇ, 5,000mAh ಬ್ಯಾಟರಿಯಂತಹ ಫೀಚರ್ಸ್ ಮೊಬೈಲ್ ಒಂದು ಈಗ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿರುವುದು ಇದಕ್ಕೆ ಮೊದಲ ಕಾರಣ ಎನ್ನಬಹುದು. ಹಾಗಾದರೆ, ಕೇವಲ ಎರಡು ದಿನಗಳ ಹಿಂದಷ್ಟೇ ಭಾರತಕ್ಕೆ ಮಾತ್ರ ಬಿಡುಗಡೆಯಾಗಿರುವ ನೂತನ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಆ ಫೋನ್‌ಗಳನ್ನು ಖರೀದಿಸಲು ಜನರು ಕಾತುರರಾಗಿರುವುದು ಏಕೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳ ಬಿಡುಗಡೆ!!

'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳ ಬಿಡುಗಡೆ!!

ಈ ಮೊದಲೇ ಸ್ಯಾಮ್‌ಸಂಗ್ ಕಂಪೆನಿ ಮಾಹಿತಿ ನೀಡಿದಂತೆ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳು ನೆನ್ನೆ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ದೇಶದಲ್ಲಿ ಬಿಡುಗಡೆಯಾಗಿವೆ. ಭಾರತದ ಮೊಬೈಲ್ ಮಾರುಕಟ್ಟೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸ್ಯಾಮ್‌ಸಂಗ್ ತಯಾರಿಸಿರುವ ನೂತನ ಸರಣಿಯ ಸ್ಮಾರ್ಟ್‌ಪೋನ್‌ಗಳು ಇವಾಗಿದ್ದು, ಚೀನಾ ಮೊಬೈಲ್ ಕಂಪೆನಿಗಳು ಸಹ ಬೆಚ್ಚಿಬೀಳುವಂತಹ ಬೆಲೆ ಮತ್ತು ಫೀಚರ್ಸ್‌ಗಳನ್ನು ಹೊತ್ತು ಮಾರುಕಟ್ಟೆಗೆ ಬಿಡುಗಡೆಯಾಗಿವೆ.

ಬೆಲೆಗೆ ಊಹಿಸಲಾಗದ ಫೀಚರ್ಸ್!

ಬೆಲೆಗೆ ಊಹಿಸಲಾಗದ ಫೀಚರ್ಸ್!

ಸ್ಯಾಮ್‌ಸಂಗ್ ಕಂಪೆನಿಯ ಇತಿಹಾಸದಲ್ಲೇ ಅತ್ಯಂತ ಕಡಿಮೆ ಬೆಲೆ ಹೆಚ್ಚು ಫೀಚರ್ಸ್ ಹೊತ್ತಿರುವ ಸ್ಮಾರ್ಟ್‌ಫೋನ್‌ಗಳಾಗಿ ಗ್ಯಾಲಾಕ್ಸಿ ಎಂ ಸರಣಿ ಸ್ಮಾರ್ಟ್‌ಪೋನ್‌ಗಳು ಕಾಣಿಸಿಕೊಂಡಿವೆ. ಚೀನಾ ಮೊಬೈಲ್ ಕಂಪೆನಿಗಳಿಗಿಂತಲೂ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ಹೆಚ್ಚು ಫೀಚರ್ಸ್ ನೀಡಿದ ಕೀರ್ತಿಗೆ ಸ್ಯಾಮ್ಸಂಗ್ ಇದೀಗ ಪಾತ್ರವಾಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಫೋನ್‌ಗಳು ಇನ್ಫಿನಿಟಿ ಡಿಸ್ಪ್ಲೇ, ಡ್ಯುಯಲ್ ಕ್ಯಾಮೆರಾ, 5,000 mAh ಬ್ಯಾಟರಿ ಮತ್ತು ಫೇಸ್‌ ಅನ್‌ಲಾಕ್‌ ಫೀಚರ್ಸ್ ಅನ್ನು ಹೊತ್ತು ಆಶ್ಚರ್ಯ ಮೂಡಿಸಿವೆ.

ಹೇಗಿದೆ ಗ್ಯಾಲಾಕ್ಸಿ M20?

ಹೇಗಿದೆ ಗ್ಯಾಲಾಕ್ಸಿ M20?

ಚೀನಾ ಮೊಬೈಲ್ ಕಂಪೆನಿಗಳು ಬೆಚ್ಚಿಬಿಳುವಂತೆ ಮಾಡಿರುವ ಸ್ಯಾಮ್‌ಸಂಗ್‌ನ ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನ್‌ ಇಂದು ಮೊಬೈಲ್ ಮಾರುಕಟ್ಟೆಯ ಹಾಟ್‌ಫೇವರೇಟ್ ಆಗುವ ಲಕ್ಷಣಗಳನ್ನು ಹೊಂದಿದೆ. ಗ್ಯಾಲಾಕ್ಸಿ ಎಂ 20 ಸ್ಮಾರ್ಟ್‌ಫೋನ್ ಬೆಲೆ ಕೇವಲ 10,990 ರೂ.ಗಳಿಂದ ಆರಂಭವಾಗಿದ್ದರೆ, ಅದರ ಫೀಚರ್ಸ್ ಮಾತ್ರ 25 ಸಾವಿರ ರೂ.ಗಳಿಂತ ಹೆಚ್ಚು ಬೆಲೆಯ ಸ್ಯಾಮ್‌ಸಂಗ್ ಫೋನ್‌ಗಳನ್ನು ಹೋಲುತ್ತಿವೆ. ನೋಚ್ ವಿನ್ಯಾಸದ 6.3 ಇಂಚ್ ಡಿಸ್‌ಪ್ಲೇ, 5,000mAh ಬ್ಯಾಟರಿಯಂತಹ ಫೀಚರ್ಸ್ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿವೆ.

ಗ್ಯಾಲಾಕ್ಸಿ M20 ಡಿಸ್‌ಪ್ಲೇ!

ಗ್ಯಾಲಾಕ್ಸಿ M20 ಡಿಸ್‌ಪ್ಲೇ!

19.5: 9 ಆಕಾರ ಅನುಪಾತದೊಂದಿಗೆ 6.3 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. 1080x2340 ಪಿಕ್ಸೆಲ್ ಸಾಮರ್ಥ್ಯದ ಇನ್ಫಿನಿಟಿ-ವಿ ಪ್ರದರ್ಶನದ ಈ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿಮಾಡಿಸಿದಂತೆ ಇರಲಿದೆ. ಅದಕ್ಕಿಂತಲೂ ಇದು ಹೆಚ್ಚು ಗಟ್ಟಿಮುಟ್ಟಾದ ಡಿಸ್‌ಪ್ಲೇಯಾಗಿದೆ. ಇನ್ನು ಡಿಸ್‌ಪ್ಲೇ ನೋಚ್ ವಿನ್ಯಾಸದೊಂದಿಗೆ ಹಿಂಬಾಗದಲ್ಲಿ ಎರಡು ಕ್ಯಾಮೆರಾಗಳು ಮತ್ತು ಫಿಂಗರ್‌ಪ್ರಿಂಟ್ ಫೀಚರ್ ಇರುವುದನ್ನು ನೋಡಬಹುದಾಗಿದೆ.

ಗ್ಯಾಲಾಕ್ಸಿ M20 ಫೀಚರ್ಸ್!

ಗ್ಯಾಲಾಕ್ಸಿ M20 ಫೀಚರ್ಸ್!

3 ಜಿಬಿ ಮತ್ತು 4 ಜಿಬಿ RAM ಮಾದರಿಗಳಲ್ಲಿ ಎಕ್ಸನೋಸ್ಸ್ 7904 Soc ಪ್ರೊಸೆಸರ್ ಮತ್ತು ಮಾಲಿ-ಜಿ 71 ಜಿಪಿಯು ಹೊತ್ತು ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಸ್ಯಾಮ್ಸಂಗ್ ಎಕ್ಸ್ಪೀರಿಯನ್ಸ್ 9.5 ಯುಎಕ್ಸ್ ಆಧರಿಸಿ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ನೀಡಲಿದೆ. 32 ಜಿಬಿ ಮತ್ತು 64 ಜಿಬಿ ಮೆಮೊರಿ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಲಭ್

ಗ್ಯಾಲಾಕ್ಸಿ M20 ಕ್ಯಾಮೆರಾ!

ಗ್ಯಾಲಾಕ್ಸಿ M20 ಕ್ಯಾಮೆರಾ!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ M20 ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ ಎಫ್ / 1.9 ಅಪಾರ್ಚರ್‌ನಲ್ಲಿ 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸಂವೇದಕಗಳು ಹಿಂಬಾಗದ ಕ್ಯಾಮೆರಾದ ಶಕ್ತಿಯಾಗಿವೆ. ಇನ್ನು F/ 2.0 ಅಪಾರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರುವುದು ಸೆಲ್ಫೀ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಈ ಸೆಲ್ಫಿ ಕ್ಯಾಮೆರಾವು ಫೇಸ್‌ ಅನ್‌ಲಾಕ್‌ಗೂ ಸಹಾಯಕವಾಗಿದೆ.

ಗ್ಯಾಲಾಕ್ಸಿ M20 ಇತರೆ ಫೀಚರ್ಸ್!

ಗ್ಯಾಲಾಕ್ಸಿ M20 ಇತರೆ ಫೀಚರ್ಸ್!

ಯುಎಸ್‌ಬಿ ಟೈಪ್ ಸಿ ಚಾರ್ಜರ್ ಮೂಲಕ ವೇಗದ ಚಾರ್ಜಿಂಗ್ ಬೆಂಬಲಿಸುವ 5,000 ಎಮ್ಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಸಪೋರ್ಟ್, 512 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ, ಇನ್ಫಿನಿಟಿ-ವಿ ಡಿಸ್‌ಪ್ಲೇಯಂತಹ ಅತ್ಯುತ್ತಮ ಫೀಚರ್ಸ್ ಅನ್ನು ಹೊಂದಿದೆ. ಇದು ಬಜೆಟ್ ಸ್ಮಾರ್ಟ್‌ಫೋನ್ ಆದರೂ, " 14nm, 4x ಕಾರ್ಟೆಕ್ಸ್- A73 @ 1.8GHz ಮತ್ತು 4x ಕಾರ್ಟೆಕ್ಸ್- A53 @ 1.8GHz ಪ್ರೊಸೆಸರ್ ಅನ್ನು ಹೊಂದುವ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯಲು ತುದಿಗಾಲಿನಲ್ಲಿ ನಿಂತಿದೆ.

ಹೇಗಿದೆ ಗ್ಯಾಲಾಕ್ಸಿ M10?

ಹೇಗಿದೆ ಗ್ಯಾಲಾಕ್ಸಿ M10?

ಬಿಡುಗಡೆಯಾದ ಮೊದಲ ದಿನವೇ ಭಾರತದ ಮೊಬೈಲ್ ಮಾರುಕಟ್ಟೆಯನ್ನು ನಡಿಗಿಸಿರುವ ಸ್ಯಾಮ್‌ಸಂಗ್ ಕಂಪೆನಿಯ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಆಗಿ 'ಗ್ಯಾಲಾಕ್ಸಿ M10' ಹೊರಹೊಮ್ಮಿದೆ. ಮೊಬೈಲ್ ಪ್ರಿಯರು ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ 19: 9 ಆಕಾರ ಅನುಪಾತದೊಂದಿಗೆ 6.2 ಇಂಚಿನ ಹೆಚ್‌ಡಿ ಪ್ಲಸ್ ಬಿಗ್ ಡಿಸ್‌ಪ್ಲೇ, ಆಂಡ್ರಾಯ್ಡ್ 8.1 ಓರಿಯೊ, 3,400mAh ಬ್ಯಾಟರಿ ಪ್ಯಾಕ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 7,990 ರೂ.ಗಳಿಂದ ಆರಂಭವಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

19:9 ಆಕಾರ ಅನುಪಾತದೊಂದಿಗೆ 6.2-ಇಂಚಿನ ಹೆಚ್‌ಡಿ ಪ್ಲಸ್ ಇನ್ಫಿನಿಟಿ- V ಡಿಸ್‌ಪ್ಲೇಯನ್ನು ಗ್ಯಾಲಾಕ್ಸಿ M10 ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ. ಆದರೆ, ಎಂ20ಗೆ ಹೋಲಿಸಿದರೆ ಈ M10 ಸ್ಮಾರ್ಟ್‌ಪೋನ್ ಸ್ಕ್ರೀನ್ ರೆಸಲ್ಯೂಷನ್ ಕಡಿಮೆಇದೆ. M10 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ 720x1520 ಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಹೆಚ್‌ಡಿ ಪ್ಲಸ್ ವಿಡಿಯೋಗಳ ವೀಕ್ಷಣಗೆ ಅಡ್ಡಿಯಿಲ್ಲ. ಇನ್ನು ಈ ಫೋನ್ ಕೂಡ ಡಿಸ್ಪ್ಲೇ ನೋಚ್ ವಿನ್ಯಾಸವನ್ನು ಹೊಂದಿರುವುದು ವಿಶೇಷ ಎನ್ನಬಹುದು.

ಗ್ಯಾಲಾಕ್ಸಿ M10 ಫೀಚರ್ಸ್!

ಗ್ಯಾಲಾಕ್ಸಿ M10 ಫೀಚರ್ಸ್!

2 ಜಿಬಿ ಮತ್ತು 3 ಜಿಬಿ RAM ಮಾದರಿಗಳಲ್ಲಿ ಎಕ್ಸನೋಸ್ಸ್ 7904 Soc ಪ್ರೊಸೆಸರ್ ಮತ್ತು ಮಾಲಿ-ಜಿ 71 ಜಿಪಿಯು ಹೊತ್ತು ಗ್ಯಾಲಾಕ್ಸಿ M10 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಈ ಫೋನ್ ಕೂಡ ಸ್ಯಾಮ್ಸಂಗ್ ಎಕ್ಸ್ಪೀರಿಯನ್ಸ್ 9.5 ಯುಎಕ್ಸ್ ಆಧರಿಸಿ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ನೀಡಲಿದೆ. 16 ಜಿಬಿ ಮತ್ತು 32 ಜಿಬಿ ಮೆಮೊರಿ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ. ಮೈಕ್ರೊ ಎಸ್‌ಡಿ ಕಾರ್ಡಿನ ಮೂಲಕ 512 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಗ್ಯಾಲಾಕ್ಸಿ M10 ಕ್ಯಾಮೆರಾ!

ಗ್ಯಾಲಾಕ್ಸಿ M10 ಕ್ಯಾಮೆರಾ!

ಗ್ಯಾಲಾಕ್ಸಿ M10 ಸ್ಮಾರ್ಟ್‌ಪೋನ್ ಕೂಡ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ ಎಫ್ / 1.9 ಅಪಾರ್ಚರ್‌ನಲ್ಲಿ 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸಂವೇದಕಗಳು ಹಿಂಬಾಗದ ಕ್ಯಾಮೆರಾದ ಶಕ್ತಿಯಾಗಿವೆ. ಇನ್ನು F/ 2.0 ಅಪಾರ್ಚರ್‌ನೊಂದಿಗೆ 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರುವುದು ಸೆಲ್ಫೀ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಈ ಸೆಲ್ಫಿ ಕ್ಯಾಮೆರಾವು ಫೇಸ್‌ ಅನ್‌ಲಾಕ್‌ಗೂ ಸಹಾಯಕವಾಗಿದೆ.

ಬೆಲೆ ಕೇವಲ 7,990 ರೂ.ಗಳಿಂದ ಆರಂಭ!

ಬೆಲೆ ಕೇವಲ 7,990 ರೂ.ಗಳಿಂದ ಆರಂಭ!

ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಂ ಸರಣಿ ಸ್ಮಾರ್ಟ್‌ಪೋನ್‌ ಬೆಲೆಗಳು ಕೇವಲ 7,990 ರೂ.ಗಳಿಂದ ಆರಂಭವಾಗಿವೆ. ಬೇಸಿಕ್ ಮಾದರಿಯ 2 ಜಿಬಿ RAM / 16 ಜಿಬಿ ಮಾದರಿಯ ''ಗ್ಯಾಲಾಕ್ಸಿ ಎಂ 10'' ಸ್ಮಾರ್ಟ್‌ಪೋನ್ ಬೆಲೆ 7,990 ರೂ.ಗಳಾದರೆ, 3 ಜಿಬಿ RAM / 32 ಜಿಬಿ ಮಾದರಿಯ 'ಗ್ಯಾಲಾಕ್ಸಿ ಎಂ 10 ಬೆಲೆ ಕೇವಲ 8,990ರೂ.ಗಳಾಗಿವೆ. ಇನ್ನು 3 ಜಿಬಿ RAM / 32 ಜಿಬಿ ಮಾದರಿಯ ಗ್ಯಾಲಾಕ್ಸಿ ಎಂ 20 ಸ್ಮಾರ್ಟ್‌ಫೋನ್ ಬೆಲೆ 10,990 ರೂ.ಗಳಾದರೆ, 4 ಜಿಬಿ RAM / 64 ಜಿಬಿ ಮೆಮೊರಿಯ ಎಂ20 ಫೋನ್ ಬೆಲೆ ಕೇವಲ 12,990.ರೂ.ಗಳಾಗಿವೆ.

Most Read Articles
Best Mobiles in India

English summary
Bharti Airtel managed to once again eke out a surprise net profit on a ... helped again by one-time gains, but losses continued for India even as the erstwhile. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more