Subscribe to Gizbot

IPL ಪ್ರಿಯರಿಗೆ ಜಿಯೋ ಭರ್ಜರಿ ಆಫರ್: ಮೊಬೈಲ್‌ನಲ್ಲೇ ಮ್ಯಾಚ್ ನೋಡಲು 2 ರೂ.ಗೆ 1GB 4G ಡೇಟಾ.!

Written By:

ದೇಶಿಯ ಕ್ರಿಕೆಟ್ ಟೂರ್ನಿ IPL ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಈಗಾಗಲೇ ತಯಾರಿ ಶುರು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯುವ ಸಲುವಾಗಿ ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸದೊಂದು ಡೇಟಾ ಪ್ಲಾನ್ ಅನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಮೂಲಕ ತನ್ನ ಆಪ್ ಮೂಲಕವೇ ಸ್ಮಾರ್ಟ್‌ಫೋನಿನಲ್ಲಿಯೇ ಲೈವ್ ಕ್ರಿಕೆಟ್ ಆನಂದಿಸಲಿ ಎನ್ನುವ ಯೋಜನೆ ರೂಪಿಸಿದೆ.

ಜಿಯೋ ಆಫರ್: ಮೊಬೈಲ್‌ನಲ್ಲೇ ಮ್ಯಾಚ್ ನೋಡಲು 2 ರೂ.ಗೆ 1GB 4G ಡೇಟಾ.!

ಜಿಯೋ ಆರಂಭದ ನಂತರದಲ್ಲಿ ಸ್ಮಾರ್ಟ್‌ಫೋನಿನಲ್ಲಿಯೇ ಲೈವ್ ಟಿವಿ ಮತ್ತು ಲೈವ್ ಕ್ರಿಕೆಟ್ ನೋಡುವವರ ಸಂಖ್ಯೆಯೂ ಅಧಿಕವಾಗಿದ್ದು, ಇದನ್ನೇ ಗುರಿಯಾಗಿಸಿಕೊಂಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಬಳಕೆದಾರರಿಗೆ ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್ ವೊಂದನ್ನು ಲಾಂಚ್ ಮಾಡಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಅತೀ ಹೆಚ್ಚಿನ ಡೇಟಾವನ್ನು ಬಳಕೆಗೆ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್:

ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್:

ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್ IPL ಅಭಿಮಾನಿಗಳಿಗಾಗಿಯೇ ವಿಶೇಷವಾಗಿ ರೂಪಿಸಿರುವ ಪ್ಲಾನ್ ಆಗಿದೆ. ರೂ.251ಕ್ಕೆ ದೊರೆಯಲಿರುವ ಈ ಪ್ಲಾನ್‌ನಲ್ಲಿ ಬಳಕೆದಾರರು ಡೇಟಾ ಲಾಭವನ್ನು ಮಾತ್ರವೇ ಪಡೆದುಕೊಳ್ಳಬಹುದಾಗಿದ್ದು, 102 GB ಡೇಟಾವನ್ನು ಬಳಕೆ ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

51 ದಿನ ವ್ಯಾಲಿಡಿಟಿ:

51 ದಿನ ವ್ಯಾಲಿಡಿಟಿ:

ಈ ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್ ಒಟ್ಟು 51 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದ್ದು, ಈ ಕುರಿತು ಜಿಯೋ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ದಿನಕ್ಕೆ 2GB ಇಲ್ಲವೇ ಯಾವುದೇ ಮಿತಿ ಇಲ್ಲದೇ ಡೇಟಾವನ್ನು ಬಳಕೆ ನೀಡುವ ಸಾಧ್ಯತೆ ಇದೆ.

ಇನ್ನು ಇದೆ:

ಇನ್ನು ಇದೆ:

ಈ ಪ್ಲಾನ್ ಅಲ್ಲದೇ ಜಿಯೋ ತನ್ನ ಬಳಕೆದಾರರಿಗೆ ಕ್ರಿಕೆಟ್ ಅನುಭವನ್ನು ಹೆಚ್ಚಿಸುವ ಸಲುವಾಗಿ 'ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್" ಎಂಬ ಮೊಬೈಲ್ ಗೇಮ್‌ವೊಂದನ್ನು ಲಾಂಚ್ ಮಾಡಲಿದ್ದು, ಇದರಲ್ಲಿ ಬಳಕೆದಾರರು ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ಲೈವ್ ಶೋ:

ಲೈವ್ ಶೋ:

ಇದಲ್ಲದೇ ತನ್ನ ಮೈ ಜಿಯೋ ಆಪ್‌ನಲ್ಲಿ 'ಜಿಯೋ ಧನ್ ಧನಾ ಧನ್ ಲೈವ್' ಎನ್ನುವ ಕಾಮಿಡಿ ಶೋವೊಂದನ್ನು ಆಯೋಜಿಸುತ್ತಿದ್ದು, ಮೈ ಜಿಯೋ ಆಪ್ ಮೂಲಕ ಬಳಕೆದಾರರು ಈ ಶೋವನ್ನು ನೋಡಬಹುದಾಗಿದೆ. ಇದನ್ನು ಜಿಯೋ ಮತ್ತು ಇತರೆ ಬಳಕೆದಾರರ ನೋಡಲು ಅನುವು ಮಾಡಿಕೊಟ್ಟಿದೆ.

ಜಿಯೋ ಕ್ರಿಕೆಟ್ ಪ್ಲೇ:

ಜಿಯೋ ಕ್ರಿಕೆಟ್ ಪ್ಲೇ:

ಈ ಗೇಮ್ ಒಟ್ಟು 11 ಭಾರತೀಯ ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದ್ದು, ಎಲ್ಲ ಸ್ಮಾರ್ಟ್ ಫೋನ್ ಬಳಕೆದಾರರು ಈ ಗೇಮ್ ಆಡಬಹುದಾಗಿದ್ದು, ಗೆದ್ಧವರಿಗೆ ಹೆಚ್ಚಿನ ಪ್ರಮಾಣದ ಬಹುಮಾನವನ್ನು ಜಿಯೋ ನೀಡುವ ಕೆಲಸವನ್ನು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ನಿಮ್ಮ ಹಣಕ್ಕೆ ಬಡ್ಡಿ ನೀಡಲಿದೆ ಜಿಯೋ: ಶುರುವಾಗಲಿದೆ ಜಿಯೋ ಪೇಮೆಂಟ್ ಬ್ಯಾಂಕ್..!

English summary
Reliance Jio Launches Cricket Season Prepaid Plan with 102GB Data for Rs 251. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot