ಹೊಸ ಫೋನ್ ಬುಕ್ ಮಾಡಿದವರಿಗೆ ಸೆಂಕೆಡ್ಸ್ ಫೋನ್ ಕೊಟ್ಟ ಫ್ಲಿಪ್‌ಕಾರ್ಟ್...! ಎಚ್ಚರ..!

|

ದೇಶಿಯ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಅನ್ನು ವಾಲ್‌ಮಾರ್ಟ್ ಖರೀದಿಸಿದ ಸುದ್ದಿ ಹೆಚ್ಚು ಸದ್ದು ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟ್ ಗ್ರಾಹರರೊಬ್ಬರಿಗೆ ವಂಚನೆ ಮಾಡಿದ ಪ್ರಕರಣವೊಂದು ವರದಿಯಾಗಿದೆ. ಈ ಮೂಲಕ ಫ್ಲಿಪ್‌ಕಾರ್ಟ್‌ಗೆ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ ಎನ್ನಲಾಗಿದೆ. ಬಿಗ್ ಶಾಪಿಂಗ್ ಡೇ ಹೆಸರಿನಲ್ಲಿ ಮೋಸ ಮಾಡಿದೆ ಎನ್ನಲಾಗಿದೆ.

ಹೊಸ ಫೋನ್ ಬುಕ್ ಮಾಡಿದವರಿಗೆ ಸೆಂಕೆಡ್ಸ್ ಫೋನ್ ಕೊಟ್ಟ ಫ್ಲಿಪ್‌ಕಾರ್ಟ್...!


ಬಿಗ್ ಶಾಪಿಂಗ್ ಡೇ ಅಂಗವಾಗಿ ಸಾಕಷ್ಟು ಆಫರ್ ಗಳನ್ನು ನೀಡಿದ್ದ ಫ್ಲಿಪ್‌ಕಾರ್ಟ್ ದಾಖಲೆ ಪ್ರಮಾಣದಲ್ಲಿ ವಹಿವಾಟು ನಡೆಸಿತ್ತು. ಅಲ್ಲದೇ ಬಳಕೆದಾರರಿಗೆ ಹೆಚ್ಚಿನ ಆಫರ್ ಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಅಮೆಜಾನ್‌ಗೆ ಸೆಡ್ಡು ಹೊಡೆದಿತ್ತು. ಆದರೆ ಅದ್ಯ ಬಿಗ್ ಶಾಪಿಂಗ್ ಡೇ ಹೆಸರಿನಲ್ಲಿ ಹೊಸ ವಸ್ತುಗಳನ್ನು ಮಾರಾಟ ಮಾಡುವ ಬದಲು ಹಳೇಯ ಮತ್ತು ಬಳಸಿದ ವಸ್ತುಗಳನ್ನು ಮತ್ತೇ ಮಾರಾಟ ಮಾಡಿದೆ ಎನ್ನಲಾಗಿದೆ.

ಹೊಸ ಫೋನ್ ಬದಲಿಗೆ ಹಳೇಯದು:

ಹೊಸ ಫೋನ್ ಬದಲಿಗೆ ಹಳೇಯದು:

ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇ ಅಂಗವಾಗಿ ಆಪಲ್ ಐಫೋನ್ ಬೆಲೆಯಲ್ಲಿ ಭಾರಿ ಕಡಿತವನ್ನು ಮಾಡಿತ್ತು. ಈ ಸಂದರ್ಭದಲ್ಲಿ ನೂತನ ಐಫೋನ್ 6S ಬುಕ್ ಮಾಡಿದವರಿಗೆ ಹೊಸ ಫೋನ್ ಬದಲಾಗಿದೆ. ನವೀಕರಣಗೊಂಡ (ರಿಫರ್ಬಿಶಿಡ್) ಫೋನ್ ಅನ್ನು ಫ್ಲಿಪ್‌ಕಾರ್ಟ್ ಮಾರಾಟ ಮಾಡಿದೆ ಎನ್ನಲಾಗಿದೆ.

ಗುರು ಗ್ರಾಮದ ವ್ಯಕ್ತಿ

ಗುರು ಗ್ರಾಮದ ವ್ಯಕ್ತಿ

ಗುರು ಗ್ರಾಮದ ಅಲಾಮ್ ಎನ್ನುವವರು ಕಳೆದ ಕೆಲವು ದಿನಗಳ ಹಿಂದೆ ನಡೆದಂತಹ ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್‌ನಲ್ಲಿ ಐಫೋನ್ 6S ಬುಕ್ ಮಾಡಿದ್ದರೂ ಎನ್ನಲಾಗಿದ್ದು, ಈ ವೇಳೆಯಲ್ಲಿ ನವೀಕರಣಗೊಂಡ (ರಿಫರ್ಬಿಶಿಡ್) ಫೋನ್ ಅನ್ನು ಫ್ಲಿಪ್‌ಕಾರ್ಟ್ ನೀಡಿದೆ ಎನ್ನಲಾಗಿದೆ.

ಆಪಲ್‌ನಿಂದಲೇ ಮಾಹಿತಿ:

ಆಪಲ್‌ನಿಂದಲೇ ಮಾಹಿತಿ:

ಐಫೋನ್ 6S ಖರೀದಿಸಿದವರು ಬಳಸುವ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳು ಎದುರಾದ ಸಂದರ್ಭದಲ್ಲಿ ಅದನ್ನು ಸರ್ವೀಸ್ ಮಾಡಿಸಲು ಆಪಲ್ ಸೇವಾ ಕೇಂದ್ರಕ್ಕೆ ತೆಗೆದುಕೊಂಡ ಹೊದ ಸಂದರ್ಭದಲ್ಲಿ ಇದು ಹೊಸ ಫೋನ್ ಅಲ್ಲ, ನವೀಕರಣಗೊಂಡ (ರಿಫರ್ಬಿಶಿಡ್) ಫೋನ್ ಎಂಬ ಮಾಹಿತಿಯೂ ದೊರೆತಿದೆ.

ಸರ್ವೀಸ್ ಮಾಡುವುದಿಲ್ಲ:

ಸರ್ವೀಸ್ ಮಾಡುವುದಿಲ್ಲ:

ಈಗಾಗಲೇ ಐಫೋನ್ 6S ಅನ್ನು ನವೀಕರಣಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಈ ಫೋನ್ ಅನ್ನು ಉಚಿತವಾಗಿ ಸರ್ವೀಸ್ ಮಾಡಿಕೊಡಲು ಸಾಧ್ಯವಿಲ್ಲ ಎಂದು ಆಪಲ್ ತಿಳಿಸಿದ್ದು, ಹೊಸ ಫೋನ್ ಎಂದು ಕೊಂಡಿದ್ದ ಅಲಾಮ್, ಸದ್ಯ ನವೀಕೃತ ಫೋನ್ ಅನ್ನು ಮಾರಾಟ ಮಾಡಿ ಮೋಸ ಮಾಡಿದ ಫ್ಲಿಪ್‌ಕಾರ್ಟ್ ವಿರುದ್ಧ ಕೇಸು ದಾಖಲಿಸಿದ್ದಾರೆ.

ಹಿಂದೆಯೂ ಆಗಿತ್ತು:

ಹಿಂದೆಯೂ ಆಗಿತ್ತು:

ಈ ಹಿಂದೆಯೂ ಹಲವು ಬಾರಿ ಈ ಮಾದರಿಯ ಘಟನೆಗಳು ನಡೆದಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಒಮ್ಮೆ ಆನ್‌ ಲೈನಿನಲ್ಲಿ ವಸ್ತುಗಳನ್ನು ಬುಕ್ ಮಾಡುವ ಸಂದರ್ಭದಲ್ಲಿ ಅವು ಉತ್ತಮವಾಗಿಯೇ ಎಂಬುದನ್ನು ನೋಡಿಕೊಳ್ಳುವುದು ಉತ್ತಮ ಎನ್ನಲಾಗಿದೆ.

ಎಚ್ಚರ:

ಎಚ್ಚರ:

ಆಫರ್ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ಅವುಗಳ ಸೆಲ್ಲರ್ ಯಾರು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ಈ ರೀತಿಯಲ್ಲಿ ಮೋಸ ಹೋಗುವ ಸಾಧ್ಯತೆ ಅಧಿಕವಾಗಿರುತ್ತದೆ. ಒಟ್ಟಿನಲ್ಲಿ ಬಳಕೆದಾರು ಎಚ್ಚರವಾಗಿರುವುದು ಉತ್ತಮ.

Best Mobiles in India

English summary
Big Billion Fraud: Man sold refurbished iPhone as new on Flipkart. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X