ಲ್ಯಾಪ್‌ಟಾಪ್‌, ಸ್ಪೀಕರ್ಸ್‌, ಹೆಡ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌!

|

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಉತ್ತಮ ಡಿಸ್ಕೌಂಟ್‌ ಜೊತೆಗೆ ಪ್ರಮುಖ ಡಿವೈಸ್‌ಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲೂ ಎಲೆಕ್ಟ್ರಾನಿಕ್ಸ್‌ ಡಿವೈಸ್‌ಗಳ ಮೇಲೆ ಭಾರಿ ರಿಯಾಯಿತಿ ಘೋಷಣೆ ಮಾಡಿದೆ.

 ಬಿಲಿಯನ್ ಡೇಸ್‌ ಸೇಲ್‌

ಹೌದು, ಬಿಗ್ ಬಿಲಿಯನ್ ಡೇಸ್‌ ಸೇಲ್‌ನಲ್ಲಿ ಪ್ರಮುಖ ಬ್ರಾಂಡ್‌ಗಳ ಲ್ಯಾಪ್‌ಟಾಪ್‌, ಸ್ಪೀಕರ್‌, ಹೆಡ್‌‌ಫೋನ್‌ ಸೇರಿದಂತೆ ಇನ್ನಿತರ ಡಿವೈಸ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಲಾಗಿದೆ. ಹಾಗೆಯೇ ಆಕ್ಸಿಸ್‌ ಬ್ಯಾಂಕ್‌ , ಐಸಿಐಸಿಐ ಬ್ಯಾಂಕ್‌ ಗ್ರಾಹಕರಿಗೆ ಇನ್ನೂ ಹೆಚ್ಚಿನ ರಿಯಾಯಿತಿ ನೀಡಲಾಗಿದೆ. ಹಾಗಾದರೆ ಯಾವ ಡಿವೈಸ್‌ಗಳಿಗೆ ಎಷ್ಟು ಬೆಲೆ ಹಾಗೂ ಪ್ರಮುಖ ಫೀಚರ್ಸ್‌ ಏನು ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿರಿ.

ರೆಡ್‌ಮಿ ಬುಕ್‌ 15 ಇ-ಲರ್ನಿಂಗ್‌ ಆವೃತ್ತಿ

ರೆಡ್‌ಮಿ ಬುಕ್‌ 15 ಇ-ಲರ್ನಿಂಗ್‌ ಆವೃತ್ತಿ

ರೆಡ್‌ಮಿ ಬುಕ್‌ 15 ಇ-ಲರ್ನಿಂಗ್‌ ಆವೃತ್ತಿ ಲ್ಯಾಪ್‌ಟಾಪ್‌ನ ಸಾಮಾನ್ಯ ಬೆಲೆ 51,990 ರೂ.ಗಳಾಗಿದ್ದು, ಇದನ್ನು ನೀವು ಆಫರ್‌ ಬೆಲೆ 28,990 ರೂ.ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಈ ಮೂಲಕ ಈ ಲ್ಯಾಪ್‌ಟಾಪ್‌ 44% ರಿಯಾಯಿತಿ ಪಡೆದಿದೆ. ಈ ನೋಟ್‌ಬುಕ್ 15.6 ಇಂಚಿನ ಫುಲ್‌ HD ಆಂಟಿ-ಗ್ಲೇರ್ ಡಿಸ್‌ಪ್ಲೇ ಹೊಂದಿದ್ದು, 11ನೇ ಜೆನ್‌ ಇಂಟೆಲ್‌ ಕೋರ್‌ i3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. 8GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಎಂಎಸ್‌ಐ ಮಾಡರ್ನ್ 14 B5M-242IN

ಎಂಎಸ್‌ಐ ಮಾಡರ್ನ್ 14 B5M-242IN

ಎಂಎಸ್‌ಐ ಮಾಡರ್ನ್ 14 B5M-242IN ಡಿವೈಸ್‌ಗೆ 30% ರಿಯಾಯಿತಿ ನೀಡಲಾಗಿದ್ದು, ಇದನ್ನು ನೀವು 42,990 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು 14 ಇಂಚಿನ ಫುಲ್‌ HD ಡಿಸ್‌ಪ್ಲೇ ಜೊತೆಗೆ 60Hz ರಿಫ್ರೆಶ್ ರೇಟ್‌ ಒಳಗೊಂಡಿದೆ. ಹಾಗೆಯೇ Ryzen 5 5500U ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 8GB RAM ಮತ್ತು 512GB SSD ಇಂಟರ್‌ ಸ್ಟೋರೇಜ್‌ ಇದರಲ್ಲಿದೆ.

ಆಸುಸ್‌ ವಿವೊಬುಕ್‌ ಪ್ರೊ 15

ಆಸುಸ್‌ ವಿವೊಬುಕ್‌ ಪ್ರೊ 15

ಆಸುಸ್‌ ವಿವೊಬುಕ್‌ ಪ್ರೊ M6500IH-HN701WS ಲ್ಯಾಪ್‌ಟಾಪ್‌ 24 % ರಿಯಾಯಿತಿ ಪಡೆದಿದ್ದು, ಇದರ ಬೆಲೆ 62,990 ರೂ.ಗಳಾಗಿದೆ. ಇದು 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 144Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದೆ. ಹಾಗೆಯೇ Nvidia GeForce GTX 1650 Max Q ಗ್ರಾಫಿಕ್ಸ್ ಕಾರ್ಡ್ ಜೊತೆಗೆ AMD Ryzen 7 4800H ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. ಲ್ಯಾಪ್‌ಟಾಪ್ 16GB DDR4 RAM ಹಾಗೂ 12GB ಸ್ಟೋರೇಜ್ ಆಯ್ಕೆ ಪಡೆದಿದೆ.

ಬೋಸ್ ಕ್ವೈಟ್ ಕಂಫರ್ಟ್ 35 II

ಬೋಸ್ ಕ್ವೈಟ್ ಕಂಫರ್ಟ್ 35 II

ಬೋಸ್ ಕ್ವೈಟ್ ಕಂಫರ್ಟ್ 35 II ಗೆ 45 % ರಿಯಾಯಿತಿ ನೀಡಲಾಗಿದ್ದು, 15,990 ರೂ.ನಿಗದಿ ಮಾಡಲಾಗಿದೆ. ಬೋಸ್ ಕ್ವೈಟ್ ಕಂಫರ್ಟ್ 35 II ವೈರ್‌ಲೆಸ್ ಹೆಡ್‌ಫೋನ್‌ಗಳಾಗಿದ್ದು, ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಆಯ್ಕೆ ಪಡೆದಿವೆ. ಈ ಹೆಡ್‌ಫೋನ್‌ಗಳು ಬ್ಲೂಟೂತ್ ಅಥವಾ ಎನ್‌ಎಫ್‌ಸಿ ಮೂಲಕ 20 ಗಂಟೆಗಳವರೆಗೆ ಪ್ಲೇಟೈಮ್ ಅನ್ನು ನೀಡುತ್ತವೆ.

ಸೋನಿ WI-XB400

ಸೋನಿ WI-XB400

ಸೋನಿ WI-XB400 49 % ರಿಯಾಯಿತಿ ಪಡೆದಿದ್ದು, ಕೇವಲ 2,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಸೋನಿ WI-XB400 ವೈರ್‌ಲೆಸ್ ಇಯರ್‌ಫೋನ್‌ ಆಗಿದ್ದು, 9mm ಡ್ರೈವರ್‌ಗಳನ್ನು ಹೊಂದಿದೆ. ಬ್ಲೂಟೂತ್ 4.2 ಸಂಪರ್ಕದ ಆಯ್ಕೆ ಪಡೆದಿದ್ದು, 10 ಮೀಟರ್‌ಗಳ ವಾಯರ್‌ಲೆಸ್ ವ್ಯಾಪ್ತಿಯನ್ನು ಹೊಂದಿದೆ. ಇದು 15 ಗಂಟೆಗಳವರೆಗೆ ಬ್ಯಾಟರಿ ಬ್ಯಾಪ್‌ಅಪ್‌ ಸಾಮರ್ಥ್ಯ ಹೊಂದಿವೆ.

ಸ್ಕಲ್‌ ಕ್ಯಾಂಡಿ Ink'd Plus

ಸ್ಕಲ್‌ ಕ್ಯಾಂಡಿ Ink'd Plus

ಈ Skull candy Ink'd Plus ವೈರ್ಡ್ ಇಯರ್‌ಫೋನ್‌ಗಳಿಗೆ 43 % ರಿಯಾಯಿತಿ ನೀಡಲಾಗಿದ್ದು, 999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.10mm ಆಡಿಯೋ ಡ್ರೈವರ್‌ ಆಯ್ಕೆಯ ಜೊತೆಗೆ ಇಯರ್‌ಬಡ್‌ಗಳು ಆರಾಮದಾಯಕವಾದ ಸಿಲಿಕೋನ್ ಇಯರ್ ಕುಶನ್‌ ಹೊಂದಿವೆ.

ಸ್ಯಾಮ್‌ಸಂಗ್‌ HW-T42E/XL

ಸ್ಯಾಮ್‌ಸಂಗ್‌ HW-T42E/XL

ಈ ಡಿವೈಸ್‌ಗೆ 61 % ರಿಯಾಯಿತಿ ನೀಡಲಾಗಿದ್ದು, 6,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಸ್ಯಾಮ್‌ಸಂಗ್‌ HW-T42E/XL 2.1 ಚಾನೆಲ್ ಸೌಂಡ್‌ಬಾರ್ ಆಗಿದ್ದು, ಈ ಡಿವೈಸ್‌ 150W ನ ಔಟ್‌ಪುಟ್‌ಗಾಗಿ 6.5 ಇಂಚಿನ ಸಬ್ ವೂಫರ್ ಆಯ್ಕೆ ಪಡೆದಿದೆ. ಗೇಮ್ ಮೋಡ್ ಫೀಚರ್‌ ಸಹ ಇದರಲ್ಲಿದ್ದು, USB ರೀಡರ್, ಆಪ್ಟಿಕಲ್ ಇನ್‌ಪುಟ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆ ಪಡೆದಿದೆ.

ಮೊಟೊರೊಲಾ ಆಂಫಿಸೌಂಡ್ X ಹೋಮ್ ಥಿಯೇಟರ್

ಮೊಟೊರೊಲಾ ಆಂಫಿಸೌಂಡ್ X ಹೋಮ್ ಥಿಯೇಟರ್

ಮೊಟೊರೊಲಾ ಆಂಫಿಸೌಂಡ್ X ಹೋಮ್ ಥಿಯೇಟರ್ 57% ರಿಯಾಯಿತಿಯೊಂದಿಗೆ 8,999 ರೂ.ಗಳಿಗೆ ಲಭ್ಯವಾಗಲಿದೆ. 150W ನ ಆಡಿಯೊ ಔಟ್‌ಪುಟ್‌ಗಾಗಿ 70W ಸಬ್‌ವೂಫರ್ ಅನ್ನು ಒಳಗೊಂಡಿದೆ. 5.1-ಚಾನೆಲ್ ಕಾನ್ಫಿಗರೇಶನ್ ಇದರಲ್ಲಿದ್ದು, ಮೂರು ಆಡಿಯೊ ಡ್ರೈವರ್‌ಗಳನ್ನು ಹೊಂದಿದೆ. ಈ ಹೋಮ್ ಥಿಯೇಟರ್ ಬ್ಲೂಟೂತ್ v5.0 ಕನೆಕ್ಟಿವಿಟಿ ಆಯ್ಕೆ ಪಡೆದಿದೆ.

ಸೋನಿ ಬ್ರಾವಿಯಾ KD-50X74K

ಸೋನಿ ಬ್ರಾವಿಯಾ KD-50X74K

ಸೋನಿ ಬ್ರಾವಿಯಾ KD-50X74K 38 % ರಿಯಾಯಿತಿ ಪಡೆದಿದ್ದು, 52,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. 3,840x2,160 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 4K ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 60Hz ರಿಫ್ರೆಶ್ ರೇಟ್‌ ನೀಡಲಿದೆ. ಇನ್‌ಬಿಲ್ಟ್ ಕ್ರೊಮಾಕಾಸ್ಟ್ ಹಾಗೂ ಪ್ಲೇ ಸ್ಟೋರ್‌ ಇದ್ದು, ಗೂಗಲ್‌ ಟಿವಿ ಆಯ್ಕೆ ಪಡೆದಿದೆ. ಈ ಸ್ಮಾರ್ಟ್‌ ಟಿವಿ 20W ಡೌನ್‌ವರ್ಡ್-ಫೈರಿಂಗ್ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಆಡಿಯೊ ಮೂಲಕ ಉತ್ತಮ ಅನುಭವ ನೀಡಲಿದೆ.

Vu GloLED ಸ್ಮಾರ್ಟ್ ಟಿವಿ

Vu GloLED ಸ್ಮಾರ್ಟ್ ಟಿವಿ

Vu GloLED ಸ್ಮಾರ್ಟ್ ಟಿವಿ 41% ರಿಯಾಯಿತಿ ಪಡೆದಿದ್ದು, 31,999 ರೂ.ಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಟಿವಿ 60Hz ರಿಫ್ರೆಶ್ ರೇಟ್‌ ಜೊತೆಗೆ 4K LED 50 ಇಂಚಿನ ಡಿಸ್‌ಪ್ಲೇ ಹೊಂದಿದೆ. 104W ನ ಸಂಯೋಜಿತ ಆಡಿಯೊ ಔಟ್‌ಪುಟ್‌ಗಾಗಿ ನಾಲ್ಕು ಸ್ಪೀಕರ್‌ಗಳ ಆಯ್ಕೆ ಪಡೆದಿದೆ ಹಾಗೆಯೇ ಸಬ್‌ವೂಫರ್‌ನೊಂದಿಗೆ ಉತ್ತಮ ಆಡಿಯೋ ಅನುಭವ ನೀಡಲಿದೆ.

Best Mobiles in India

English summary
Flipkart Big Billion Days is selling flagship devices with great discounts. it has announced a huge discount on electronics devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X