Home
ಸುದ್ದಿಜಾಲ

ಭಾರತೀಯತೆಗೆ ಮೆರಗು ತಂದಿದೆ ತಂತ್ರಜ್ಞಾನ..! ಟೆಕ್ ಮೈಲಿಗಲ್ಲುಗಳು..!

By Avinash

ಭಾರತ ಇಂದು 72ನೇ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ಅನೇಕ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆ ಮಾಡಿರುವ ಭಾರತ ಕಳೆದ 70 ವರ್ಷಗಳಲ್ಲಿ ಹಲವು ಹಿರಿಮೆಗಳಿಗೆ ಪಾತ್ರವಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತ ಟೆಕ್‌ ಲೋಕದಲ್ಲಿ ತನ್ನದೇ ಆದ ಗೌರವವನ್ನು ಹೊಂದಿದೆ.

ಭಾರತೀಯತೆಗೆ ಮೆರಗು ತಂದಿದೆ ತಂತ್ರಜ್ಞಾನ..! ಟೆಕ್ ಮೈಲಿಗಲ್ಲುಗಳು..!

ಟೆಕ್‌ ಲೋಕದಲ್ಲಿ ಅತ್ಯುತ್ತಮ ಪ್ರಗತಿಯನ್ನು ಭಾರತ ಹೊಂದಿದೆ. ಸ್ವಾತಂತ್ರ್ಯ ನಂತರ ಭಾರತೀಯ ಟೆಕ್‌ ಲೋಕದಲ್ಲಿ ಏನೇನಾಯ್ತು ಎಂಬುದರ ಸಂಕ್ಷಿಪ್ತ ನೋಟವನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದು, ಕಳೆದ 72 ವರ್ಷಗಳಲ್ಲಿ ಭಾರತದ ಪ್ರಮುಖ ಟೆಕ್‌ ಮೈಲಿಗಲ್ಲುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1951

1951

ಮೊದಲ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯನ್ನು ಪಶ್ಚಿಮ ಬಂಗಾಳದ ಕರಗ್‌ಪುರದಲ್ಲಿ ಸ್ಥಾಪಿಸಲಾಯಿತು.

1954

1954

ಅಣುಶಕ್ತಿಯ ಕುರಿತು ಸಂಶೋದನೆ ಮಾಡಲು ಟ್ರೋಂಬೆಯಲ್ಲಿ ಆಟೋಮಿಕ್‌ ಎನರ್ಜಿ ಎಸ್ಟಾಬ್ಲಿಶ್‌ಮಂಟ್‌ ಸೆಟ್‌ಅಪ್‌ ಸ್ಥಾಪಿಸಲಾಯಿತು. ನಂತರ ಇದನ್ನು 1967ರಲ್ಲಿ ಬಾಬಾ ಆಟೋಮಿಕ್‌ ರಿಸರ್ಚ್‌ ಸೆಂಟರ್‌ ಎಂದು ಮರುನಾಮಕರಣ ಮಾಡಲಾಯಿತು.

1958

1958

ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು (Defence Research and Development Organization- DRDO) ಸ್ಥಾಪಿಸಲಾಯಿತು.

1959

1959

ಭಾರತದಲ್ಲಿ ನಿಯಮಿತವಾದ ಟೆಲಿವಿಷನ್‌ ಕಾರ್ಯಕ್ರಮಗಳು ಪ್ರಾರಂಭವಾದವು.

1959

1959

ಟಾಟಾ ಇನ್ಸಟಿಟ್ಯೂಟ್ ಆಫ್‌ ಫಂಡಮೆಂಟಲ್‌ ರಿಸರ್ಚ್‌ ಟಿಐಎಫ್‌ಆರ್‌ ಆಟೋಮೆಟಿಕ್ ಕಂಪ್ಯೂಟರ್‌ನ್ನು ಅಭಿವೃದ್ಧಿಪಡಿಸಿತು. ಇದು ಭಾರತದ ಮೊದಲ ಡಿಜಿಟಲ್ ಕಂಪ್ಯೂಟರ್ ಆಗಿತ್ತು.

1968

1968

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಪ್ರಾರಂಭವಾಯಿತು. ಪಂಚ್‌ಕಾರ್ಡ್‌ ಸೇವೆಯನ್ನು ನೀಡಲು ಆರಂಭಿಸಿತು.

1969

1969

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಾರಂಭವಾಯಿತು.

1970

1970

ಪ್ರಗತಿ ಹೊಂದುತ್ತಿದ್ದ ಎಲೆಕ್ಟ್ರಾನಿಕ್ಸ್‌ ಮತ್ತು ಕಂಪ್ಯೂಟಿಂಗ್‌ ಪ್ರಚಾರಕ್ಕಾಗಿ ಕೇಂದ್ರದಲ್ಲಿ ಎಲೆಕ್ಟ್ರಾನಿಕ್ಸ್‌ ಇಲಾಖೆ ಪ್ರಾರಂಭವಾಯಿತು.

1974

1974

ಭಾರತದ ಮೊದಲ ಅಣುಬಾಂಬ್‌ ಸ್ಮೈಲಿಂಗ್‌ ಬುದ್ಧ (Pokhran-1) ರಾಜಸ್ಥಾನದ ಪೋಕ್ರಾನ್‌ನಲ್ಲಿ ಯಶಸ್ವಿ ಪರೀಕ್ಷೆ.

1978

1978

ಭಾರತಕ್ಕೆ ಐಬಿಎಮ್‌ ಹೊರಗೆ, ಈ ವರ್ಷದಲ್ಲಾದ ಮಿನಿ ಕಂಪ್ಯೂಟರ್ ನೀತಿಯಿಂದ ವಿಪ್ರೋ, ಹೆಚ್‌ಸಿಎಲ್‌ನಂತಹ ಕಂಪನಿಗಳು ಹುಟ್ಟಿಕೊಂಡವು.

1981

1981

ಇನ್ಫೋಸಿಸ್ ಪ್ರಾರಂಭ. ಐಟಿ ಸೇವೆಗಳನ್ನು ಹೊರಗುತ್ತಿಗೆ ಸೇವೆಯಾಗಿ ನೀಡುವ ಕಾರ್ಯವನ್ನು ಇನ್ಫೋಸಿಸ್ ಆರಂಭಿಸಿತು.

1983

1983

ಇನ್ಸಾಟ್‌-1B ಉಪಗ್ರಹ ಉಡಾವಣೆ. ಇದರಿಂದ ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆಯ ಕಾರ್ಯನಿರ್ವಹಣೆ ಆರಂಭವಾಯಿತು.

1986

1986

ಭಾರತೀಯ ರೈಲ್ವೇಯಲ್ಲಿ ಸೀಟುಗಳನ್ನು ಕಾಯ್ದಿರಿಸಲು ಗಣಕೀಕೃತ ವ್ಯವಸ್ಥೆಯನ್ನು ತರಲಾಯಿತು.

1991

1991

ಭಾರತಕ್ಕೆ LPG ನೀತಿ ಅಳವಡಿಕೆ. ಇದರಿಂದ ಟೆಕ್‌ ಲೋಕದಲ್ಲಿ ಬಹಳಷ್ಟು ಕ್ರಾಂತಿ ಆಯಿತು. ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಈ ನೀತಿಯಿಂದ ಹೂಡಿಕೆ ಮಾಡಲು ಮುಂದಾದವು.

2008

2008

ಇಸ್ರೋ ಚಂದ್ರಯಾನ 1 ಲಾಂಚ್ ಮಾಡಿತು. ಇದು ಭಾರತದ ಮೊದಲ ಚಂದ್ರನ ಮೇಲಿನ ಪ್ರಯೋಗವಾಗಿತ್ತು.

2013

2013

ಮಂಗಳಯಾನವನ್ನು ಇಸ್ರೋ 2013ರಲ್ಲಿ ಕೈಗೊಂಡಿತು. ಇದು ಮಂಗಳನ ಕುರಿತ ಭಾರತದ ಮೊದಲ ಪ್ರಯೋಗಾರ್ಥ ಯೋಜನೆಯಾಗಿತ್ತು.

2016

2016

ಭಾರತ ಸರ್ಕಾರದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದಿಂದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯನ್ನು ಬೇರ್ಪಡಿಸಿ ಪ್ರತ್ಯೇಕ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯವನ್ನು ಪ್ರಾರಂಭಿಸಲಾಯಿತು.

1991

1991

ಭಾರತ ತನ್ನ ಮೊದಲ ಸೂಪರ್‌ ಕಂಪ್ಯೂಟರ್‌ ಪರಮ್‌ 8000ನ್ನು ಹೊಂದಿತು.

Best Mobiles in India

English summary
biggest tech milestones of Independent India. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+