ಐಫೋನ್‌ಗಿಂತ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನ್ನು ಬಿಲ್‌ಗೇಟ್ಸ್‌ ಏಕೆ ಇಷ್ಟಪಡುತ್ತಾರೆ..?

By Gizbot Bureaau
|

ಮೈಕ್ರೋಸಾಫ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ಬಿಲ್‌ಗೇಟ್ಸ್ ಆಪಲ್‌ ಐಫೋನ್‌ಗಿಂತ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸಲು ಇಷ್ಟಪಡುತ್ತಾರೆ ಎಂಬುದು ಬಹಿರಂಗವಾಗಿದೆ. ಆಂಡ್ರಾಯ್ಡ್ ಎಕೋ ಸಿಸ್ಟಮ್‌ನಲ್ಲಿ ಈಗಾಗಲೇ ಮೈಕ್ರೋಸಾಫ್ಟ್ ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ಮಾಡಿರುವುದರಿಂದ ಬಿಲ್‌ಗೇಟ್ಸ್‌ ಅವರಿಗೆ ಸ್ಮಾರ್ಟ್‌ಫೋನ್‌ ಬಳಕೆ ಮತ್ತಷ್ಟು ಸುಲಭ ಮತ್ತು ಸರಳವಾಗಿದೆ.

ಐಫೋನ್‌ಗಿಂತ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನ್ನು ಬಿಲ್‌ಗೇಟ್ಸ್‌ ಇಷ್ಟಪಡುತ್ತಾರೆ?

ಕ್ಲಬ್‌ಹೌಸ್‌ ಎಂಬ ಆಡಿಯೋ ಚಾಟ್‌ ಆಪ್‌ನ ಸಂದರ್ಶನದಲ್ಲಿ ಭಾಗಿಯಾದ ಬಿಲ್‌ಗೇಟ್ಸ್‌, ಐಫೋನ್‌ಗಳನ್ನು ಆಗಾಗ ಬಳಸುತ್ತೇನೆ. ಆದರೆ, ನನ್ನ ಜೊತೆ ಯಾವಾಗಲೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಇರುತ್ತದೆ ಎಂದು ಹೇಳಿದ್ದಾರೆ. ಪತ್ರಕರ್ತ ಆಂಡ್ರೂ ರಾಸ್‌ ಸೊರ್ಕಿನ್‌ ಅವರ ಸಂದರ್ಶನದಲ್ಲಿ ನಾನು ಎಲ್ಲದರ ಬಗ್ಗೆ ನಿಗಾ ಇಡಲು ಬಯಸುವುದರಿಂದ, ನಾನು ನಿಜವಾಗಿಯೂ ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದೇನೆ ಎಂದು ಬಿಲ್‌ಗೇಟ್ಸ್‌ ತಿಳಿಸಿದ್ದಾರೆ.

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಬಿಲ್‌ಗೇಟ್ಸ್‌ ಮೂರನೇ ಸ್ಥಾನದಲ್ಲಿದ್ದು, 135 ಬಿಲಿಯನ್‌ ಡಾಲರ್‌ ಆಸ್ತಿ ಹೊಂದಿದ್ದಾರೆ. ಕೆಲವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ತಯಾರಕರು ನನಗೆ ಸುಲಭವಾಗುವ ರೀತಿಯಲ್ಲಿ ಮೈಕ್ರೋಸಾಫ್ಟ್ ಸಾಫ್ಟ್‌ವೇರ್ ಅನ್ನು ಮೊದಲೇ ಇನ್‌ಸ್ಟಾಲ್‌ ಮಾಡಿದ್ದಾರೆ ಎಂದು ಗೇಟ್ಸ್‌ ಹೇಳಿದ್ದಾರೆ.

ಆಪರೇಟಿಂಗ್ ಸಿಸ್ಟಂನೊಂದಿಗೆ ಸಾಫ್ಟ್‌ವೇರ್ ಹೇಗೆ ಸಂಪರ್ಕವಾಗುತ್ತದೆ ಎಂಬುದರ ಕುರಿತು ಅವರು ಯೋಚನೆ ಮಾಡುತ್ತಾರೆ. ಹಾಗಾಗಿ ನಾನು ಕೂಡ ಅದನ್ನೇ ಬಳಸುತ್ತಿದ್ದೇನೆ. ನಿಮಗೆ ತಿಳಿದಿದೆ, ನನ್ನ ಬಹಳಷ್ಟು ಸ್ನೇಹಿತರು ಐಫೋನ್ ಹೊಂದಿದ್ದಾರೆ, ಆದ್ದರಿಂದ ಯಾವುದೇ ಶುದ್ಧತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಏನಿದು ಕ್ಲಬ್‌ಹೌಸ್‌..?

ಕ್ಲಬ್‌ಹೌಸ್ ಆಡಿಯೋ ಚಾಟ್‌ ಆಪ್‌ ಪ್ರಸ್ತುತ ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ ಮತ್ತು ಇದನ್ನು ಎಂಟು ಮಿಲಿಯನ್‌ಗೂ ಹೆಚ್ಚು ಡೌನ್‌ಲೋಡ್‌ ಮಾಡಲಾಗಿದೆ. ಗೂಗಲ್‌ ಪ್ಲೇ ಸೋರ್‌ನಲ್ಲಿ ಈ ಆಪ್‌ ಲಭ್ಯವಿದ್ದರೂ, ಸೈನ್ ಅಪ್ ಮಾಡಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಕಂಪನಿ ಪರಿಹರಿಸುವ ಕೆಲಸವನ್ನು ಮಾಡುತ್ತಿದೆ.

Best Mobiles in India

English summary
Bill Gets Prefers Android Over iPhone Here's Why

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X