ವರ್ಲ್ಡ್ ವೈಡ್‌ ವೆಬ್‌ ಬೆಳವಣಿಗೆಯ ವಿಶಿಷ್ಟತೆ ಏನು?

By Suneel
|

ಇಂಟರ್‌ನೆಟ್‌ 1960 ರಿಂದ ಮಿಲಿಟರಿ ಪಡೆಗಳ ವಿಶಿಷ್ಟ ರೀತಿಯ ಪ್ರಯೋಗಗಳು ಮತ್ತು ಕೆಲವು ಸಂಸ್ಕೃತಿಗಳ ಸೃಜನಾತ್ಮಕತೆಯಿಂದ ಆರಂಭವಾಯಿತು. ಹಾಗೂ ವರ್ಲ್ಡ್ ವೈಡ್‌ ವೆಬ್‌ ಕಳೆದ 24 ವರ್ಷಗಳಿಂಧ ತನ್ನ ಬೆಳವಣಿಗೆಯಲ್ಲಿ ಗಂಭೀರ ಬದಲಾವಣೆಯನ್ನು ಕಂಡಿತು. ಅಲ್ಲದೆ ಹೆಚ್ಚಿನ ರೀತಿಯಲ್ಲಿ ಇಂಟರ್‌ನೆಟ್‌ನ ಸ್ಫೋಟಕ ಬೆಳವಣಿಗೆ ತಂತ್ರಜ್ಞಾನ, ಉದ್ಯಮ ಕ್ಷೇತ್ರ, ಸಂಸ್ಕೃತಿಗಳಿಂದ ಆಯಿತು.

ಓದಿರಿ: ಥೈಲೆಂಡ್‌ನಲ್ಲಿ ಫೇಸ್‌ಬುಕ್‌ ಕಛೇರಿ ಆರಂಭ

ಈ ಲೇಖನದಲ್ಲಿ ನಾವು ಇಂಟರ್‌ನೆಟ್‌ ಹಾಗೂ ವರ್ಲ್ಡ್ ವೈಡ್‌ ವೆಬ್‌ ಬೆಳವಣಿಗೆಯ ಕೆಲವು ವಿಶಿಷ್ಟ ಮಾಹಿತಿಯನ್ನು ವಿವರಿಸುತ್ತಿದ್ದೇವೆ. ಇಂಟರ್‌ನೆಟ್‌ನ ಕೆಲವು ಅದ್ಭುತ ಸತ್ಯ ಸಂಗತಿಯ ವಿಚಾರಗಳನ್ನು ತಿಳಿಯಲು ನೀವು ಈ ಲೇಖನ ಓದಿ

ಇಂಟರ್‌ನೆಟ್‌ಗೆ ಸುಮಾರು 50 ದಶಲಕ್ಷ ಹಾರ್ಸ್‌ಪವರ್‌ ವಿಧ್ಯುತ್‌ ಅವಶ್ಯಕತೆ ಇರುತ್ತದೆ.

ಇಂಟರ್‌ನೆಟ್‌ಗೆ ಸುಮಾರು 50 ದಶಲಕ್ಷ ಹಾರ್ಸ್‌ಪವರ್‌ ವಿಧ್ಯುತ್‌ ಅವಶ್ಯಕತೆ ಇರುತ್ತದೆ.

ಅಂದಾಜಿನಂತೆ 8.7 ಬಿಲಿಯನ್‌ ವಿದ್ಯುನ್ಮಾನ ಸಾಧನಗಳು ಇಂಟರ್‌ನೆಟ್‌ಗೆ ಸಂಪರ್ಕದಲ್ಲಿ ಇರಬೇಕಾಗಿದೆ. ಗಣನೀಯವಾಗಿ ಇಂಟರ್‌ನೆಟ್‌ ಚಾಲನೆಯಲ್ಲಿರಲು ವಿದ್ಯುತ್‌ ಅತ್ಯಾವಶ್ಯಕವಾಗಿದೆ. ರಸ್ಸೆಲ್ ಸೀಜ್‌ಮತ್ತು ಮೈಕೆಲ್ ಸ್ಟೀವನ್ಸ್ ರವರು ಇಂಟರ್‌ ನೆಟ್‌ ಚಾಲನೆಯಲ್ಲಿರಲು 50 ದಶಲಕ್ಷ ಬ್ರೇಕ್‌ ಹಾರ್ಸ್‌ಪವರ್‌ ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಂಟರ್‌ನೆಟ್‌ ಒಂದು ಇಮೇಲ್‌ ಸಂದೇಶ ಉತ್ಪಾದಿಸಲು 2 ಬಿಲಿಯನ್‌ ಇಲೆಕ್ಟ್ರಾನ್ಸ್ ಬೇಕಾಗಿದೆ

ಇಂಟರ್‌ನೆಟ್‌ ಒಂದು ಇಮೇಲ್‌ ಸಂದೇಶ ಉತ್ಪಾದಿಸಲು 2 ಬಿಲಿಯನ್‌ ಇಲೆಕ್ಟ್ರಾನ್ಸ್ ಬೇಕಾಗಿದೆ

ಮೈಕೆಲ್ ಸ್ಟೀವನ್ಸ್ ಮತ್ತು ವ್ಸಾಸ್‌ ರವರು 50 ಕಿಲೋಬೈಟ್‌ ಸಂದೇಶ ಉತ್ಪಾದಿಸಲು 8 ಬಿಲಿಯನ್‌ ಇಲೆಕ್ಟ್ರಾನ್‌ಗಳು ಬೇಕು ಎಂದು ಅಂದಾಜಿಸಿದ್ದಾರೆ.

 ಭೂಮಿ ಮೇಲಿನ ಜನಸಂಖ್ಯೆ 7 ಬಿಲಿಯನ್, ಇಂಟರ್‌ನೆಟ್‌ ಬಳಕೆದಾರರು 2.4 ಬಿಲಿಯನ್‌

ಭೂಮಿ ಮೇಲಿನ ಜನಸಂಖ್ಯೆ 7 ಬಿಲಿಯನ್, ಇಂಟರ್‌ನೆಟ್‌ ಬಳಕೆದಾರರು 2.4 ಬಿಲಿಯನ್‌

ಈ ಲೆಕ್ಕಚಾರವು ನಿಖರವಾಗಿಲ್ಲದಿದ್ದರೂ, 2 ಬಿಲಿಯನ್‌ ಜನರು ಬಳಸುವುದಂತು ಖಂಡಿತ ಎಂಬುದು ಇಂಟರ್‌ನೆಟ್‌ನ ಲೆಕ್ಕಚಾರವಾಗಿದೆ. ಕೆಲವರು ವಾರಕ್ಕೊಮ್ಮೆ ಬಳಸುವುದರಿಂದ ಈ ರೀತಿ ಹೇಳಲಾಗಿದೆ.

ಇಂಟರ್‌ನೆಟ್ ತೂಕ ಒಂದು ಸ್ಟ್ರಾಬೆರಿ ತೂಕವಾಗಿದೆ.

ಇಂಟರ್‌ನೆಟ್ ತೂಕ ಒಂದು ಸ್ಟ್ರಾಬೆರಿ ತೂಕವಾಗಿದೆ.

ರಸ್ಸೆಲ್‌ ಸೀಜ್‌ ಒಬ್ಬ ಭೌತಶಾಸ್ತ್ರ ವಿಜ್ಞಾನಿಯಾಗಿದ್ದು ಕೆಲವು ನಿಖರ ಸಂಖ್ಯೆಗಳನ್ನು ನೀಡಿದ್ದಾನೆ. ಪರಮಾಣು ಭೌತಶಾಸ್ತ್ರದ ಊಹೆ ಪ್ರಕಾರ ಇಂಟರ್‌ನೆಟ್‌ನಲ್ಲಿ ಚಲಿಸುತ್ತಿರುವ "ಡಾಟಾ- ಇನ್‌-ಮೋಶನ್‌' ಬಿಲಿಯನ್‌ಗಳ ಮೇಲೆ ಬಿಲಿಯನ್‌ ಇಲೆಕ್ಟ್ರಾನ್‌ಗಳು ಸುಮಾರು 50 ಗ್ರಾಂ ಸೇರಿಸಲಿದೆ . ಅದು ಒಂದು ಸ್ಟ್ರಾಬೆರಿ ತೂಕವಾಗಿದ್ದು 2 ಔನ್ಸ್‌ಗೆ ಸಮವಾಗಿದೆ

ಪ್ರಸ್ತುತದಲ್ಲಿ 8.7 ಬಿಲಿಯನ್ ಮಷಿನ್‌ಗಳು ಇಂಟರ್‌ನೆಟ್‌ ಸಂಪರ್ಕಿಸುತ್ತಿವೆ.

ಪ್ರಸ್ತುತದಲ್ಲಿ 8.7 ಬಿಲಿಯನ್ ಮಷಿನ್‌ಗಳು ಇಂಟರ್‌ನೆಟ್‌ ಸಂಪರ್ಕಿಸುತ್ತಿವೆ.

ಅವುಗಳೆಂದರೆ, ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳು, ಡೆಸ್ಕ್‌ಟಾಪ್ಸ್, ಸರ್‌ವರ್‌ಗಳು, ವೈರ್‌ಲೆಸ್ ರೌಟರ್ಸ್‌ ಮತ್ತು ಹಾಟ್‌ಸ್ಪಾಟ್ಸ್, ಕಾರ್‌ ಜಿಪಿಎಸ್‌, ರಿಸ್ಟ್‌ವಾಚಸ್, ರೆಫ್ರಿಜರೇಟರ್ಸ್ ಮತ್ತು ಸೋಡಾ ಪಾಪ್‌ ಮಷಿನ್ಸ್. ಇಂಟರ್‌ನೆಟ್‌ ಶತಕೋಟಿ ಗ್ಯಾಜೆಟ್ಸ್‌ಗಳನ್ನು ಒಳಗೊಂಡಿದ್ದು, 2020 ವೇಳೆಗೆ 40 ಬಿಲಿಯನ್‌ ಗ್ಯಾಜೆಟ್ಸ್‌ಬೆಳೆಯುವ ನಿರೀಕ್ಷೆ ಇದೆ.

ಪ್ರತಿ 60 ಸೆಕೆಂಡುಗಳಿಗೆ, 72 ಘಂಟೆಗಳಿಗೊಮ್ಮೆ ಯೂಟೂಬ್‌ ವೀಡಿಯೋಗಳು ಅಪ್‌ಲೋಡ್‌

ಪ್ರತಿ 60 ಸೆಕೆಂಡುಗಳಿಗೆ, 72 ಘಂಟೆಗಳಿಗೊಮ್ಮೆ ಯೂಟೂಬ್‌ ವೀಡಿಯೋಗಳು ಅಪ್‌ಲೋಡ್‌

ಈ 72 ಘಂಟೆಗಳಲ್ಲಿ ಅತಿಹೆಚ್ಚು ವೀಡಿಯೋಗಳು ಬೆಕ್ಕು, ಶೇಕ್‌ ಡ್ಯಾನ್ಸ್‌ ಬಗ್ಗೆ ಅಪ್‌ಲೋಡ್‌ ಆಗುತ್ತವೆ. ಯಾರು ಕೂಡ ನೋಡಲು ಆಸಕ್ತಿ ತೋರಿಸದಿರುವ ವೀಡಿಯೋಗಳನ್ನು ಹಲವರು ಸೇರ್‌ ಮಾಡುತ್ತಾರೆ. ಹಾಗೂ ಕೆಲವು ವಿಜೃಂಭಣೆಯ ಆಚರಣೆ ವೀಡಿಯೋಗಳು ಕೂಡ ಅಪ್‌ಲೋಡ್‌ ಆಗುತ್ತವೆ.

ನೆಟ್‌ ನಿಲ್ಲುವ ಮೊದಲು ಇಲೆಕ್ಟ್ರಾನ್‌ಗಳು ಕೆಲವು ಡಜೆನ್‌ ಮೀಟರ್‌ಗಳು ಚಲಿಸುತ್ತವೆ

ನೆಟ್‌ ನಿಲ್ಲುವ ಮೊದಲು ಇಲೆಕ್ಟ್ರಾನ್‌ಗಳು ಕೆಲವು ಡಜೆನ್‌ ಮೀಟರ್‌ಗಳು ಚಲಿಸುತ್ತವೆ

ಹೌದು ಇಲೆಕ್ಟ್ರಾನ್‌ಗಳು ನೆಟ್‌ ನಿಲ್ಲುವ ಮೊದಲು ಕೆಲವೇ ಮೀಟರ್‌ಗಳು ಮಾತ್ರ ಚಲಿಸುತ್ತವೆ. ಇಲೆಕ್ಟ್ರಾನ್‌ಗಳು ಕಂಪ್ಯೂಟರ್‌ನ ಹಲವು ಸಾಧನಗಳಿಂದ ಸೆಳೆಯಲ್ಪಡುವುದರಿಂದ ಈ ರೀತಿಯ ಕಾರ್ಯಚಟುವಟಿಕೆ ಜರುಗುತ್ತದೆ.

ಇಂಟರ್‌ನೆಟ್‌ನ 5 ಮಿಲಿಯನ್‌ ಟೆರಾಬೈಟ್ಸ್‌ನ ತೂಕ ಒಂದು ಮರಳಿನ ಕಣಕ್ಕಿಂತ ಕಡಿಮೆ

ಇಂಟರ್‌ನೆಟ್‌ನ 5 ಮಿಲಿಯನ್‌ ಟೆರಾಬೈಟ್ಸ್‌ನ ತೂಕ ಒಂದು ಮರಳಿನ ಕಣಕ್ಕಿಂತ ಕಡಿಮೆ

5 ಮಿಲಿಯನ್‌ ಟಿಬಿ ಡಾಟಾವನ್ನು ಕೂಡ ಒಂದು ಮರಳಿನ ಕಣದ ತೂಕಕ್ಕಿಂತ ಕಡಿಮೆಯಾಗಿ ಮಾರ್ಪಾಡಿಸಬಹುದು.

ಉತ್ತರ ಅಮೇರಿಕದಲ್ಲಿ ಶೇಕಡ 78 ಕ್ಕಿಂತ ಹೆಚ್ಚು ಜನರು ನೆಟ್‌ ಬಳಸುತ್ತಾರೆ.

ಉತ್ತರ ಅಮೇರಿಕದಲ್ಲಿ ಶೇಕಡ 78 ಕ್ಕಿಂತ ಹೆಚ್ಚು ಜನರು ನೆಟ್‌ ಬಳಸುತ್ತಾರೆ.

ಇಂಟರ್‌ನೆಟ್‌ ಬಳಕೆ ಮಾಡಲು ಯುಎಸ್‌ಎ ಮತ್ತು ಇಂಗ್ಲೀಷ್‌ ಭಾಷೆ ಹೆಚ್ಚು ಪ್ರಭಾವ ಬೀರಿದೆ. ಅಮೇರಿಕನ್ನರಿಗೆ ಇಂಟರ್‌ನೆಟ್‌ ದಿನನಿತ್ಯ ಜೀವನದ ಒಂದು ಭಾಗವಾಗಿರುವ ಬಗ್ಗೆ ಇದು ನಿದರ್ಶನವಾಗಿದೆ.

ಏಷಿಯಾದಲ್ಲಿ 1.7 ಬಿಲಿಯನ್ ನಷ್ಟು ಇಂಟರ್‌ನೆಟ್‌ ಬಳಕೆದಾರರು.

ಏಷಿಯಾದಲ್ಲಿ 1.7 ಬಿಲಿಯನ್ ನಷ್ಟು ಇಂಟರ್‌ನೆಟ್‌ ಬಳಕೆದಾರರು.

ಇದು ಸತ್ಯ ಸಂಗತಿಯಾಗಿದೆ. ಜಪಾನ್‌, ಸೌತ್‌ ಕೋರಿಯಾ, ಭಾರತ, ಚೀನಾ, ಹಾಂಗ್‌ಕಾಂಗ್, ಮಲೇಷಿಯಾ, ಸಿಂಗಾಪುರ್ ದೇಶಗಳು ಹೆಚ್ಚು ಬಳಸುವ ಸಾಲಿನಲ್ಲಿವೆ. ಹಾಗೂ ವೆಬ್‌ ಪುಟಗಳು ಹೆಚ್ಚಿನದಾಗಿ ಏಷಿಯಾ ಭಾಷೆಗಳಲ್ಲೇ ಪ್ರಕಟವಾಗುತ್ತಿವೆ. ಆದರೆ ಪ್ರಧಾನವಾಗಿ ಇಂಗ್ಲೀಷ್ ಭಾಷೆಯಲ್ಲೇ ವೆಬ್‌ ಚಾಲನೆಯಾಗುತ್ತಿದೆ.

Most Read Articles
Best Mobiles in India

English summary
Since its inception in the 1960's, the Internet has grown from a military experiment into a gigantic living organism filled with oddities and subcultures. Since the World Wide Web launched 24 years ago, the Net has seen truly explosive growth in tech, business, and culture.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more