ಥೈಲೆಂಡ್‌ನಲ್ಲಿ ಫೇಸ್‌ಬುಕ್‌ ಕಛೇರಿ ಆರಂಭ

Posted By:

ಪ್ರಪಂಚದಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಸಾಮಾಜಿಕ ಜಾಲತಾಣ ಥೈಲೆಂಡ್‌ನಲ್ಲಿ ತನ್ನ ಮೊದಲ ಕಛೇರಿಯನ್ನು ಸ್ಥಾಪಿಸಿದೆ. ಈ ಕಛೇರಿಯ ಸ್ಥಾಪನೆಯನ್ನು ಬ್ಯಾಂಕಾಕ್‌ನ ನದಿತೀರದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಆಚರಿಸುವ ಮೂಲಕ ಚಾಲನೆ ನೀಡಿದೆ. ಆದರೆ ತನ್ನ ಕಛೇರಿಯನ್ನು ಯಾವ ಪ್ರದೇಶದಲ್ಲಿ ಪ್ರಾರಂಭಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗ ಗೊಳಿಸಿಲ್ಲ.

ಓದಿರಿ:ಗೂಗಲ್‌ ಬಳಕೆದಾರರಿಗೆ ಮಾತ್ರ ಸಾಗರ ಸೌಂದರ್ಯ ನೋಡುವ ಅವಕಾಶ

ಥೈಲೆಂಡ್‌ನಲ್ಲಿ ಫೇಸ್‌ಬುಕ್‌ ಕಛೇರಿ ಆರಂಭ

ಫೇಸ್‌ಬುಕ್‌ನ ಏಷಿಯಾ ಪೆಸಿಫಿಕ್‌ ಉಪಾಧ್ಯಕ್ಷ ಮಾತನಾಡಿ ಥೈಲೆಂಡ್‌ನ ಸ್ಥಳೀಯ ಉದ್ಯಮಿಗಳಿಗೆ ಫೇಸ್‌ಬುಕ್‌ ಮೂಲಕ ಜಾಹೀರಾತು ನೀಡಿ ಅವರ ವ್ಯವಹಾರಕ್ಕೆ ಸಹಾಯ ನೀಡುವುದು ತಮ್ಮ ಮೂಲ ಆಶಯ ಎಂದು ಹೇಳಿದ್ದಾರೆ.

ಇದಕ್ಕೆ ಉದಾಹರಣೆಯಂತೆ ಆನ್‌ಲೈನ್‌ ಜಾಹೀರಾತಿಗಾಗಿ ಅಲ್ಲಿನ ಚೈನ್‌ JQ ರೆಸ್ಟೋರೆಂಟ್‌ನ ಸೀಫುಡ್‌ ಅನ್ನು ವೀಡಿಯೋ ಮೂಲಕ ಫೇಸ್‌ಬುಕ್‌ನಲ್ಲಿ ನಿರೂಪಿಸಿದ್ದಾರೆ. ಇದರಿಂದ ಗ್ರಾಹಕರು ನೇರವಾಗಿ ತಮಗಿಷ್ಟವಾದ ಆಹಾರ ಪದಾರ್ಥಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಥೈಲೆಂಡ್‌ ಪ್ರಸ್ತುತದಲ್ಲಿ ತಿಂಗಳಿಗೆ 37 ಮಿಲಿಯನ್‌ ಫೇಸ್‌ಬುಕ್‌ ಬಳಕೆದಾರರನ್ನು ಹೊಂದಿದ್ದು, ದಕ್ಷಿಣ ಏಷಿಯಾದ ದೇಶಗಳಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಲ್ಲದೇ ಗರಿಷ್ಟ 2 ಘಂಟೆ ಸಮಯ ಫೇಸ್‌ಬುಕ್‌ ಬಳಕೆದಾರರನ್ನು ಹೊಂದಿದ್ದು, ಸಾಮಾನ್ಯವಾಗಿ ಪ್ರತಿಯೊಬ್ಬರು ದಿನಕ್ಕೆ 35 ನಿಮಿಷಗಳ ಕಾಲ ಬಳಸುತ್ತಾರೆ.

ಥೈಲೆಂಡ್‌ನಲ್ಲಿ ಫೇಸ್‌ಬುಕ್‌ ಕಛೇರಿ ಆರಂಭ

ಶೇಕಡ 94 ರಷ್ಟು ಥೈಲೆಂಡ್‌ ಜನರು ಮೊಬೈಲ್‌ ಮೂಲಕ ಫೇಸ್‌ಬುಕ್‌ ಬಳಸುತ್ತಿದ್ದು, ಅವರಲ್ಲಿ ಶೇಕಡ 74 ರಷ್ಟು ಮಂದಿ ಫೇಸ್‌ಬುಕ್‌ ಮೂಲಕ ಬ್ಯುಸಿನೆಸ್‌ ಸಂಬಂಧಿಸಿದ ವಿಷಯಗಳಲ್ಲಿ ಸಂಪರ್ಕದಲ್ಲಿರುತ್ತಾರೆ.

ಫೇಸ್‌ಬುಕ್‌ ಈಗಾಗಲೇ ಸಂಪೂರ್ಣವಾಗಿ ಥೈಲೆಂಡ್‌ ಮಾರುಕಟ್ಟೆ ಜಾಹೀರಾತಿಗಾಗಿ ತನ್ನ ದತ್ತಾಂಶವನ್ನ ಬಳಸಿಕೊಂಡು ಸೆಪ್ಟೆಂಬರ್‌ 30 ರೊಳಗೆ ತನ್ನ ನಿರ್ಧಿಷ್ಟ ಗ್ರಾಹಕರನ್ನು ತಲುಪಲು ಅವಕಾಶ ಕಲ್ಪಿಸಿದೆ. ಈಗಾಗಲೇ ಸೇವೆಯು ಭಾಗಶಃ ತಿಳಿದಿದ್ದು, Dtac ಮತ್ತು Lazada ಎಂಬುವವರಿಂದ ಜಾಹೀರಾತುಗಳನ್ನು ನೋಡಿರಬಹುದು ಎಂದು ಹೇಳಲಾಗಿದೆ.

ಥೈಲೆಂಡ್‌ನಲ್ಲಿ ಫೇಸ್‌ಬುಕ್‌ ಕಛೇರಿ ಆರಂಭ

ಪ್ರೆಸ್‌ ಕಾನ್ಫರೆನ್ಸ್ ಅನ್ನು ಖ್ಲಾಂಗ್‌ ಸನ್‌ ಜಿಲ್ಲೆಯ ಜಂ ಫ್ಯಾಕ್ಟರಿಯಲ್ಲಿ ಆಯೋಜಿಸಿ, ಫೇಸ್‌ಬುಕ್‌ ಕಛೇರಿಯನ್ನು ಬ್ಯಾಂಕಾಕ್‌ನ ಮುಖ್ಯ ಉದ್ಯಮ ಮತ್ತು ವಹಿವಾಟು ಜಿಲ್ಲೆಯಲ್ಲಿ ತೆರೆಯಲು ಇಚ್ಛಿಸಿದ್ದು, ಥೈಲೆಂಡ್‌ ದೇಶದ ಉಸ್ತುವಾರಿಗಾಗಿ ಹುಡುಕಾಟ ಕೈಗೊಂಡಿರುವುದಾಗಿ ಹೇಳಿಕೊಂಡಿದೆ.

English summary
Facebook, the world's largest social network and Thailand's national pastime, launched its first office in Thailand yesterday with a party at a riverside restaurant in Bangkok.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot