ಬ್ಲ್ಯಾಕ್‌ ಫ್ರೈಡೇ ಆಫರ್‌; ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ರಿಯಾಯಿತಿ

|

ಬ್ಲ್ಯಾಕ್‌ ಫ್ರೈಡೇ ಎಂಬ ಹೆಸರಿನಲ್ಲಿ ವಿದೇಶದಲ್ಲಿ ವಾರ್ಷಿಕ ಶಾಪಿಂಗ್ ಆರಂಭವಾಗಿದೆ. ಅಲ್ಲಿ ಹಲವಾರು ಡಿವೈಸ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಲಿವೆ. ಅದರಂತೆ ಭಾರತದಲ್ಲೂ ಸಹ ಇದೇ ರೀತಿಯಾಗಿ ಕೆಲವು ಇ-ಕಾಮರ್ಸ್‌ ತಾಣಗಳು ಬ್ಲ್ಯಾಕ್‌ ಫ್ರೈಡೇ ಸೇಲ್‌ ಆರಂಭಿಸಿವೆ. ಅದರಲ್ಲಿ ಕ್ರೋಮಾ ಪ್ರಮುಖವಾಗಿದೆ. ಈ ಹಿಂದೆ ಪ್ರಮುಖ ಇ-ಕಾಮರ್ಸ್‌ ತಾಣಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಹಬ್ಬದ ಋತುವಿನಲ್ಲಿ ಗ್ಯಾಜೆಟ್‌ಗಳಿಗೆ ಭರ್ಜರಿ ಆಫರ್‌ ಘೋಷಣೆ ಮಾಡಿದ್ದನ್ನು ಗಮನಿಸಬಹುದು.

ಎಲೆಕ್ಟ್ರಾನಿಕ್ಸ್

ಹೌದು, ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಚಿಲ್ಲರೆ ಮಾರಾಟಗಳ ಸ್ಟೋರ್‌ಗಳಲ್ಲಿ ಪ್ರಮುಖವಾದ ಕ್ರೋಮಾ ಹಾಗೂ ಸ್ಯಾಮ್‌ಸಂಗ್‌ ಸೇರಿದಂತೆ ಇತರೆ ಇ-ಕಾಮರ್ಸ್‌ ತಾಣಗಳು ಈ ವರ್ಷ ತಮ್ಮದೇ ಆದ ರೀತಿಯಲ್ಲಿ ಬ್ಲ್ಯಾಕ್‌ ಫ್ರೈಡೇ ಮಾರಾಟ ಆರಂಭಿಸಿವೆ. ಈ ಸಮಯದಲ್ಲಿ ನೀವು ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಗ್ಯಾಜೆಟ್‌ಗಳನ್ನು ಆಫರ್‌ ಬೆಲೆಗೆ ಖರೀದಿ ಮಾಡಬಹುದು. ಈ ಆಫರ್‌ ನವೆಂಬರ್ 27 ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಿದ್ರೆ ಯಾವ ಡಿವೈಸ್‌ ಎಷ್ಟು ಡಿಸ್ಕೌಂಟ್ ಪಡೆದಿದೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22

ಸಾಮಾನ್ಯ ದಿನಗಳಲ್ಲಿ ಹಾಗೂ ಇತರೆ ರಿಟೇಲರ್‌ ಸ್ಟೋರ್‌ಗಳಲ್ಲಿ ನೀವು ಈ ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದಾದರೆ 62,999 ರೂ. ಗಳನ್ನು ಪಾವತಿ ಮಾಡಬೇಕು. ಆದರೆ, ಈ ಆಫರ್‌ನಲ್ಲಿ ಕೇವಲ 52,999 ರೂ. ಗಳಿಗೆ ಖರೀದಿ ಮಾಡಬಹುದು. ಸ್ಯಾಮ್‌ಸಂಗ್ ಶಾಪ್ ಆಪ್‌ನಿಂದ ಮೊದಲ ಬಾರಿಗೆ ಯಾವುದೇ ಉತ್ಪನ್ನವನ್ನು ಖರೀದಿದರೆ 2,000 ಹೆಚ್ಚುವರಿ ರಿಯಾಯಿತಿ ಲಭ್ಯವಾಗಲಿದ್ದು, ಈ ಮೂಲಕ ನೀವು ಈ ಸ್ಮಾರ್ಟ್‌ಫೋನ್‌ ಅನ್ನು 50,999 ರೂ. ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌3

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌3

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌3 ಸ್ಮಾರ್ಟ್‌ಫೋನ್‌ ಸಾಮಾನ್ಯ ದರ 69,999ರೂ. ಗಳಾಗಿದ್ದು, ಬ್ಲ್ಯಾಕ್ ಫ್ರೈಡೇ ಆಫರ್ ಮೂಲಕ 59,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದಲ್ಲದೇ 2,000 ರೂ. ಗಳ ವೆಲ್ಕಮ್ ವೋಚರ್ ಪಡೆದು ಕೊಳ್ಳಬಹುದಾಗಿದ್ದು, ಅಂತಿಮವಾಗಿ ನೀವು ಈ ಫೋನ್‌ಗೆ 57,999ರೂ. ಗಳನ್ನು ನೀಡಬೇಕಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನ್‌ ಅನ್ನು ಈ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ 32,999ರೂ. ಗಳಿಗೆ ಮಾರಾಟ ಮಾಡಲಾಗುತ್ತಿದ್ದು, 30,999 ರೂ. ಗಳಿಗೂ ಖರೀದಿ ಮಾಡಬಹುದು. ಹೇಗೆಂದರೆ ಗ್ರಾಹಕರು ಸ್ಯಾಮ್‌ಸಂಗ್ ಶಾಪ್ ಆಪ್‌ ಮೂಲಕ ಮೊದಲು ಖರೀದಿ ಮಾಡುತ್ತಿದ್ದರೆ 2,000 ರೂ. ಗಳ ರಿಯಾಯಿತಿ ದೊರೆಯುತ್ತದೆ.

ಮ್ಯಾಕ್‌ಬುಕ್ ಏರ್ 2022 ಮತ್ತು ಮ್ಯಾಕ್‌ಬುಕ್ ಪ್ರೊ

ಮ್ಯಾಕ್‌ಬುಕ್ ಏರ್ 2022 ಮತ್ತು ಮ್ಯಾಕ್‌ಬುಕ್ ಪ್ರೊ

ನೀವೇನಾದರೂ ಮ್ಯಾಕ್‌ಬುಕ್ ಡಿವೈಸ್‌ಗಳನ್ನು ಖರೀದಿ ಮಾಡಬೇಕು ಎಂದುಕೊಂಡರೆ ಈ ಸಮಯದಲ್ಲಿ ನೀವು ಭಾರೀ ಹಣ ಉಳಿತಾಯ ಮಾಡಬಹುದು. ಯಾಕೆಂದರೆ ಈ ಸೇಲ್‌ನಲ್ಲಿ ನೀವು 10,000 ರೂ. ಗಳ ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ. ಅಂದರೆ 105,090 ರೂ. ಗಳ ಮೂಲ ಬೆಲೆ ಇರುವ ಮ್ಯಾಕ್‌ಬುಕ್ ಏರ್ (2022) ಅನ್ನು 95,090ರೂ. ಗಳಿಗೆ ಖರೀದಿ ಮಾಡಬಹುದು.

ಆಪಲ್‌ ಮ್ಯಾಕ್‌ಬುಕ್‌‌ ಏರ್ 2020

ಆಪಲ್‌ ಮ್ಯಾಕ್‌ಬುಕ್‌‌ ಏರ್ 2020

ಇನ್ನು ಆಪಲ್‌ ಮ್ಯಾಕ್‌ಬುಕ್‌‌ ಏರ್ 2020 ಸಾಮಾನ್ಯ ದರ 99,900 ರೂ. ಗಳಾಗಿದ್ದು, ನೀವು ಕೇವಲ 77,090 ರೂ. ಗಳಿಗೆ ಖರೀದಿ ಮಾಡಬಹುದು. ಆದರೆ, ಇದಕ್ಕೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಬೇಕಿದೆ. ಆಗ ಮಾತ್ರ 87,090 ರೂ. ಗಳ ಆಫರ್‌ ಬೆಲೆ ಇರುವ ಡಿವೈಸ್‌ 10,000 ಹೆಚ್ಚುವರಿ ರಿಯಾಯಿತಿ ಪಡೆದುಕೊಂಡು 77,090 ರೂ. ಗಳಿಗೆ ಲಭ್ಯವಾಗುತ್ತದೆ.

ಐಪ್ಯಾಡ್‌ 9 ಜನ್

ಐಪ್ಯಾಡ್‌ 9 ಜನ್

ಐಪ್ಯಾಡ್‌ 9 ಜನ್ ಅನ್ನು ಕ್ರೋಮಾದಲ್ಲಿ ನೀವು 26,900 ರೂ. ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಈ ಆಫರ್‌ನಲ್ಲಿ 3,000 ರೂ. ಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಇನ್ನು ಈ ಡಿವೈಸ್‌ನ ಮೂಲ ದರ 29,900 ರೂ. ಗಳು.

ರೆಡ್ಮಿ ಸ್ಮಾರ್ಟ್‌TV HD

ರೆಡ್ಮಿ ಸ್ಮಾರ್ಟ್‌TV HD

ರೆಡ್ಮಿ ಸ್ಮಾರ್ಟ್‌TV HD ಗೆ ಕ್ರೋಮಾದಲ್ಲಿ 3,000 ರೂ. ಗಳ ರಿಯಾಯಿತಿ ಲಭ್ಯವಾಗಲಿದ್ದು, ಈ ಮೂಲಕ ನೀವು 12,999 ರೂ. ಗಳಿಗೆ 32 ಇಂಚಿನ ಟಿವಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

Best Mobiles in India

English summary
Black Friday 2022: Best deals from Samsung, Xiaomi and others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X