ಬ್ಲ್ಯಾಕ್‌ ಫ್ರೈಡೇ ಸೇಲ್‌; ಐಫೋನ್ ಪ್ರಿಯರಿಗೆ ಬಂಪರ್‌ ಆಫರ್!

|

ಹಲವಾರು ಇ-ಕಾಮರ್ಸ್‌ ತಾಣಗಳು ಬ್ಲ್ಯಾಕ್‌ ಫ್ರೈಡೇ ಪ್ರಯುಕ್ತ ಗ್ಯಾಜೆಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಣೆ ಮಾಡಿವೆ. ಅದರಂತೆ ಸ್ಮಾರ್ಟ್‌ಫೋನ್‌ ಹಾಗೂ ಇತರೆ ಡಿವೈಸ್‌ಗಳನ್ನು ನೀವು ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬಹುದು. ಅದರಲ್ಲೂ ನೀವೇನಾದರೂ ಪ್ರೀಮಿಯಂ ಫೋನ್‌ಗಳನ್ನು ಖರೀದಿ ಮಾಡಬೇಕು ಎಂದರೆ ಇದಕ್ಕಿಂತ ಬೇರೆ ಸಮಯ ಸಿಗುವುದಿಲ್ಲ ಎನಿಸುತ್ತದೆ. ಯಾಕೆಂದರೆ ಆಪಲ್‌ ಫೋನ್‌ಗಳು ಈ ಸೇಲ್‌ನಲ್ಲಿ ಹೆಚ್ಚಿನ ರಿಯಾಯಿತಿ ಪಡೆದುಕೊಂಡಿವೆ.

ಆಪಲ್‌ ಪೋನ್‌

ಹೌದು, ನೀವೇನಾದರೂ ಈ ಸಮಯದಲ್ಲಿ ಆಪಲ್‌ ಪೋನ್‌ ಖರೀದಿ ಮಾಡಬೇಕೆಂದುಕೊಂಡಿದ್ದರೆ ತಡ ಮಾಡಬೇಡಿ. ಯಾಕೆಂದರೆ ಈ ಬ್ಲ್ಯಾಕ್‌ ಫ್ರೈಡೇ ಸೇಲ್‌ ಪ್ರಯುಕ್ತ ಹಮ್ಮಿಕೊಂಡಿರುವ ಥ್ಯಾಂಕ್ಸ್‌ಗಿವಿಂಗ್ ಡೀಲ್‌ ನಲ್ಲಿ ಐಫೋನ್ 12, ಐಫೋನ್ 13, ಐಫೋನ್ 14 ಪ್ರೊ ಫೋನ್‌ಗಳನ್ನು ಫ್ಲಿಪ್‌ಕಾರ್ಟ್‌, ಅಮೆಜಾನ್‌ ಹಾಗೂ ಆಪಲ್‌ನ ಅಧೀಕೃತ ರಿಟೇಲರ್‌ ಸ್ಟೋರ್‌ ಹಾಗೂ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

ಹೆಚ್‌ಡಿಎಫ್‌ಸಿ

ಇನ್ನು ಈಗಾಗಲೇ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ 41,900 ರೂ.ಗಿಂತ ಹೆಚ್ಚಿನ ಖರೀದಿಗೆ ಆಪಲ್‌ 6000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಹಾಗಿದ್ರೆ, ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನಲ್ಲಿ ಈ ಮೂರು ಫೋನ್‌ಗಳಲ್ಲಿ ಯಾವ ವೇರಿಯಂಟ್‌ ಫೋನ್‌ಗಳು ಎಷ್ಟು ಡಿಸ್ಕೌಂಟ್‌ ಪಡೆದುಕೊಂಡಿವೆ, ವಿನಿಮಯ ಆಫರ್‌ ಎಷ್ಟು, ಯಾವ ಬ್ಯಾಂಕ್‌ನ ಕ್ರೆಡಿಟ್‌ಕಾರ್ಡ್ ನಲ್ಲಿ ಎಷ್ಟು ಡಿಸ್ಕೌಂಟ್‌ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ 12 ಬೆಲೆ ಎಷ್ಟು?

ಐಫೋನ್‌ 12 ಬೆಲೆ ಎಷ್ಟು?

ನೀವೇನಾದರೂ ಈ ಸಮಯದಲ್ಲಿ ಐಫೋನ್‌ 12 ಅನ್ನು ಖರೀದಿ ಮಾಡಬೇಕು ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಆಪರ್‌ ಇದೆ. ಈ ಫೋನ್ ಬೆಲೆಯನ್ನು ಅಮೆಜಾನ್‌ನಲ್ಲಿ 48,999 ರೂ.ಗಳಿಗೆ ನಿಗದಿ ಮಾಡಲಾಗಿದ್ದು, ಇದಕ್ಕೆ 13,300 ವರೆಗಿನ ಎಕ್ಸ್‌ಚೇಂಜ್ ಆಫರ್‌ ಸಹ ನೀಡಲಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 48,999ರೂ. ಗಳ ನ್ನು ನಿಗದಿ ಮಾಡಲಾಗಿದ್ದು, ಸಿಟಿ ಬ್ಯಾಂಕ್ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್‌ನಿಂದ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿ ಮಾಡಿದರೆ 2,000ರೂ. ವರೆಗೆ ರಿಯಾಯಿತಿ ಪಡೆಯಬಹುದು. ಜೊತೆಗೆ 17,500 ರೂ. ವರೆಗಿನ ವಿನಿಮಯ ಆಫರ್‌ ಸಹ ಇದರಲ್ಲಿದೆ.

ಐಫೋನ್‌ 13 ಗೆ 45,499 ರೂ. ಗಳು.

ಐಫೋನ್‌ 13 ಗೆ 45,499 ರೂ. ಗಳು.

ಫ್ಲಿಪ್‌ಕಾರ್ಟ್‌ನಲ್ಲಿ 128GB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯದ ಐಫೋನ್‌ 13 ಫೋನ್‌ಗೆ 62,999 ರೂ. ಇದ್ದು, 17,500 ರೂ. ಗಳ ವರೆಗೆ ವಿನಿಮಯ ಅಫರ್‌ ಸಹ ನೀಡಲಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಹಾಗೂ ಡೆಬಿಟ್‌ ಕಾರ್ಡ್‌ಗಳ ಮೇಲೆ ಮತ್ತೆ 1000 ರೂ. ಗಳ ರಿಯಾಯಿತಿ ಸಹ ಲಭ್ಯವಾಗಲಿದೆ. ಇನ್ನು ಅಮೆಜಾನ್‌ನಲ್ಲಿ 256GB ಸ್ಟೋರೇಜ್‌ ವೇರಿಯಂಟ್‌ನ ಫೋನ್‌ಗೆ 74,900 ಬೆಲೆ ಇದ್ದು, 13,300 ರೂ.ಗಳ ವರೆಗೆ ವಿನಿಮಯ ಆಫರ್‌ ಪಡೆಯಬಹುದಾಗಿದೆ. ಆದರೆ ಈ ಪ್ಲಾಟ್‌ಫಾರ್ನ್‌ನಲ್ಲಿ 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ಆಪಲ್‌ ಫೋನ್‌ ಲಭ್ಯತೆ ಇಲ್ಲ.

ಐಫೋನ್ 14 ಪ್ರೊ ನಲ್ಲಿ 16,300 ರೂ. ಎಕ್ಸ್‌ಚೇಂಜ್‌ ಆಫರ್‌

ಐಫೋನ್ 14 ಪ್ರೊ ನಲ್ಲಿ 16,300 ರೂ. ಎಕ್ಸ್‌ಚೇಂಜ್‌ ಆಫರ್‌

ಆಪಲ್‌ನ ಐಫೋನ್ 14 ಪ್ರೊ 1TB ಗೋಲ್ಡ್ ಅಮೆಜಾನ್‌ನಲ್ಲಿ 1,79,900 ರೂ. ಗಳ ಬೆಲೆಯನ್ನು ಹೊಂದಿದ್ದು, ವಿನಿಮಯ ಆಫರ್‌ನಲ್ಲಿ 16,300 ರೂ. ಗಳ ರಿಯಾಯಿತಿ ಪಡೆಯಬಹುದು. ಹಾಗೆಯೇ ಫ್ಲಿಪ್‌ಕಾರ್ಟ್‌ನಲ್ಲಿಯೂ ಈ ಫೋನ್ ಬೆಲೆ 1,79,900 ರೂ. ಗಳಿದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳಲ್ಲಿ 4,000 ರೂ. ವರೆಗೆ ರಿಯಾಯಿತಿ ಪಡೆಯವುದರ ಜೊತೆಗೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್ ಕಾರ್ಡ್‌ ಮೂಲಕ 5% ರಷ್ಟು ರಿಯಾಯಿತಿ ಸಹ ಪಡೆದುಕೊಳ್ಳಬಹುದಾಗಿದೆ.

Best Mobiles in India

Read more about:
English summary
Black Friday Thanksgiving Deals, iPhones get huge discounts on amazon and flipkart.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X