Subscribe to Gizbot

ಬ್ಲಾಕ್ ಬೇರಿ ಕಿಯೋನ್ ಲಾಂಚ್: ಬೆಲೆ, ವಿಶೇಷತೆ ಕುರಿತ ಮಾಹಿತಿ.!

Written By: Lekhaka

ಭಾರತದಲ್ಲಿ ಬ್ಲಾಕ್ ಬೇರಿ ಕಿಯೋನ್ ಸ್ಮಾರ್ಟ್ ಫೋನ್ ಲಾಂಚ್ ಆಗಿದ್ದು ರೂ. 39,990ಕ್ಕೆ ದೊರೆಯುತ್ತಿದ್ದು, ದೆಹಲಿಯಲ್ಲಿ ಕಂಪನಿಯೂ ಈ ಸ್ಮಾರ್ಟ್ ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಬ್ಲಾಕ್ ಬೇರಿ ಕಿಯೋನ್ ಲಾಂಚ್: ಬೆಲೆ, ವಿಶೇಷತೆ ಕುರಿತ ಮಾಹಿತಿ.!

ಈ ಸ್ಮಾರ್ಟ್ ಫೋನ್ ನಲ್ಲಿ ಕ್ವಾರ್ಟಿ ಕೀ ಪ್ಯಾಡ್ ಕಾಣಬಹುದಾಗಿದೆ. ಅಲ್ಲದೇ ವಿನ್ಯಾಸವು ಉತ್ತಮವಾಗಿದೆ. ಇದು ಬ್ಲಾಕ್ ಬೇರಿ ಬಿಡುಗಡೆ ಮಾಡಿರುವ ಮೊದಲ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲಾಕ್ ಬೇರಿ ಕಿಯೋನ್ ವಿನ್ಯಾಸ:

ಬ್ಲಾಕ್ ಬೇರಿ ಕಿಯೋನ್ ವಿನ್ಯಾಸ:

ಬ್ಲಾಕ್ ಬೇರಿ ಕಿಯೋನ್ ಮೆಟಾಲಿಕ್ ಫ್ರೆಂ ಹೊಂದಿದೆ. ಅಲ್ಲದೆ ಹಿಂಭಾಗದಲ್ಲಿ ಫೋನ್ ಹಿಡಿದುಕೊಳ್ಳಲು ನೀಡುರುವ ಟೆಕ್ಟ್ಚರ್ ಉತ್ತಮವಾಗಿದೆ. ಕೀ ಪಾಡ್ ನ ಸ್ಪೆಸ್ ಬಾರ್ ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ನೀಡಲಾಗಿದೆ.

ಕ್ವಾರ್ಟಿ ಕೀಪ್ಯಾಡ್:

ಕ್ವಾರ್ಟಿ ಕೀಪ್ಯಾಡ್:

ಈ ಫೋನಿನಲ್ಲಿ ಟೆಚ್ ಪ್ಯಾಡ್ ನೊಂದಿಗೆ ಕ್ವಾರ್ಟಿ ಕೀಪ್ಯಾಡ್ ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿಯೇ ಎಲ್ಲಾ ಆಪ್ ಗಳನ್ನು ನಿಯಂತ್ರಿಸುವ ಅವಕಾಶವನ್ನು ಮಾಡಿಕೊಟ್ಟಿದ್ದು, ಶಾರ್ಟ್ ಕಟ್ ಗಳನ್ನು ನೀಡಿದೆ.

ಡಿಸ್ ಪ್ಲೇ ಮತ್ತು ವಿಶೇಷತೆ

ಡಿಸ್ ಪ್ಲೇ ಮತ್ತು ವಿಶೇಷತೆ

ಈ ಫೋನಿನಲ್ಲಿ 4.5 ಇಂಚಿನ FHD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಗೊರಿಲ್ಲ ಗ್ಲಾಸ್ 4 ಸುರಕ್ಷೆಯು ಇದಕ್ಕಿದೆ. ಅಲ್ಲದೆ 2.5GHz ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಜೊತೆಗೆ 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದನ್ನು 2 TB ವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. 3404mAh ಬ್ಯಾಟರಿ ಇದೆ. ವೇಗದ ಚಾರ್ಜಿಂಗ್ ಲಭ್ಯವಿದ್ದು, ಆಂಡ್ರಾಯ್ಡ್ 7.1.1 ನಲ್ಲಿ ಕಾರ್ಯನಿರ್ವಹಿಸಲಿದೆ.

ಆಗಸ್ಟ ನಿಂದ ಫೇಸ್ಬುಕ್ ಟಿವಿ ಶೋಗಳ ಪ್ರಾರಂಭ ಸಂಭವ

ಕ್ಯಾಮೆರಾ:

ಕ್ಯಾಮೆರಾ:

ಬ್ಲಾಕ್ ಬೇರಿ ಕಿಯೋನ್ ಫೋನಿನಲ್ಲಿ 12 MP ಹಿಂಭಾಗದ ಕ್ಯಾಮೆರಾ ಇದ್ದು, ಡ್ಯುಯಲ್ LED ಫ್ಲಾಷ್ ಇದರಲ್ಲಿದ್ದು, 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಅಲ್ಲದೇ ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ:

ಬೆಲೆ ಮತ್ತು ಲಭ್ಯತೆ:

ಈ ಸ್ಮಾರ್ಟ್ ಫೊನ್ ರೂ., 39,990ಕ್ಕೆ ದೊರೆಯಲಿದ್ದು, ಆಗಸ್ಟ್ 8 ರಿಂದ ಅಮೆಜಾನ್ ನಲ್ಲಿ ಸೇಲ್ ಆರಂಭವಾಗಲಿದೆ. ಅಲ್ಲದೇ ಇದರಲ್ಲಿ ಲಿಮಿಟೆಡ್ ಅಡಿಷನ್ ಬ್ಲಾಕ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
BlackBerry KEYone has been launched in India today at a price of Rs. 39,990. The sale of the KEYone debuts on August 8 exclusively via Amazon.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot