ಬ್ಲೂಪಂಕ್ಟ್ ಟಿವಿ ಆನಿವರ್ಸರಿ ಸೇಲ್‌: ಫ್ಲಿಪ್‌ಕಾರ್ಟ್‌ನಲ್ಲಿ ಸಿಗಲಿದೆ 40% ಡಿಸ್ಕೌಂಟ್‌!

|

ಜರ್ಮನ್‌ ಮೂಲದ ಬ್ಲೂಪಂಕ್ಟ್‌ ಕಂಪೆನಿ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಪ್ರೀಮಿಯಂ ಸ್ಮಾರ್ಟ್‌ಟಿವಿಗಳ ಮೂಲಕ ಸ್ಮಾರ್ಟ್‌ಟಿವಿ ಪ್ರಿಯರ ಗಮನಸೆಳೆದಿದೆ. ಟಿವಿ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿರುವ ಬ್ಲೂಪಂಕ್ಟ್‌ ಇದೀಗ ಭಾರತದಲ್ಲಿ ತನ್ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ತಿದೆ. ತನ್ನ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ ಭಾರತದ ಮಾರುಕಟ್ಟೆಯಲ್ಲಿ ವಿಶೇಷ ಡಿಸ್ಕೌಂಟ್‌ ಆಫರ್‌ ಅನ್ನು ಕೂಡ ಘೊಷಣೆ ಮಾಡಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಬ್ಲೂಪಂಕ್ಟ್‌ ಟಿವಿಗಳ ಮೇಲೆ 40% ವರೆಗೆ ಡಿಸ್ಕೌಂಟ್‌ ನೀಡಲಾಗ್ತಿದೆ.

ಬ್ಲೂಪಂಕ್ಟ್‌

ಹೌದು, ಬ್ಲೂಪಂಕ್ಟ್‌ ಕಂಪೆನಿ ತನ್ನ ಪ್ರೀಮಿಯಂ ಸ್ಮಾರ್ಟ್‌ಟಿವಿಗಳ ಮೇಲೆ 40% ತನಕ ಡಿಸ್ಕೌಂಟ್‌ ನೀಡುತ್ತಿದೆ. ತನ್ನ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ ಫ್ಲಿಪ್‌ಕಾರ್ಟ್‌ನಲ್ಲಿ ತನ್ನ ವಿಶೇಷ ವಾರ್ಷಿಕೋತ್ಸವ ಸೇಲ್‌ ಅನ್ನು ನಡೆಸುತ್ತಿದೆ. ಈ ಸೇಲ್‌ ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್‌ ಆಗಿದ್ದು, ಆಗಸ್ಟ್ 3, 2022 ರವರೆಗೆ ನಡೆಯಲಿದೆ. ಈ ಡಿಸ್ಕೌಂಟ್‌ ಸೇಲ್‌ನಲ್ಲಿ 32-ಇಂಚುಗಳಿಂದ 65-ಇಂಚಿನವರೆಗಿನ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವುದಕ್ಕೆ ಅವಕಾಶ ಸಿಗಲಿದೆ.

ಬ್ಲೂಪಂಕ್ಟ್‌

ಇನ್ನು ಬ್ಲೂಪಂಕ್ಟ್‌ ಕಂಪೆನಿ ಬಜೆಟ್‌ ಸ್ನೇಹಿ ಶ್ರೇಣಿಯ ಸ್ಮಾರ್ಟ್‌ಟಿವಿಗಳಿಂದ ಸೈ ಎನಿಸಿಕೊಂಡಿದೆ. 100 ವರ್ಷಗಳಿಗೂ ಹೆಚ್ಚು ಪರಂಪರೆಯನ್ನು ಹೊಂದಿರುವ ಬ್ಲೂಪಂಕ್ಟ್‌ ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುವ ಪ್ರಮುಖ ಮತ್ತು ಪ್ರೀಮಿಯಂ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಸದ್ಯ ಭಾರತದಲ್ಲಿ, ಬ್ಲೂಪಂಕ್ಟ್‌ ಟಿವಿಗಳನ್ನು SPPL (ಸೂಪರ್ ಪ್ಲಾಸ್ಟ್ರೋನಿಕ್ಸ್ ಪ್ರೈ. ಲಿಮಿಟೆಡ್) ನಿಂದ ತಯಾರಿಸಲಾಗಿದ್ದು, ಭಾರತದ ಅತಿದೊಡ್ಡ ಟಿವಿ ತಯಾರಕ ಎನ್ನುವ ಶ್ರೇಯವನ್ನು ಕೂಡ ಹೊಂದಿದೆ. ಹಾಗಾದ್ರೆ ಬ್ಲೂಪಂಕ್ಟ್‌ ವಾರ್ಷಿಕೋತ್ಸವದ ಸೇಲ್‌ನಲ್ಲಿ ಯಾವೆಲ್ಲಾ ಟಿವಿಗಳು ಡಿಸ್ಕೌಂಟ್‌ನಲ್ಲಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ಲೂಪಂಕ್ಟ್‌ ಸೈಬರ್ ಸೌಂಡ್ 32-ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 32-ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್‌ ಸೌಂಡ್‌ 32 ಇಂಚಿನ ಸ್ಮಾರ್ಟ್‌ಟಿವಿ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್‌ ಮೂಲಕ ಕೇವಲ 13,499ರೂ.ಬೆಲೆಗೆ ದೊರೆಯಲಿದೆ. ಈ ಸ್ಮಾರ್ಟ್‌ಟಿವಿ 1366 x 768 ಹೆಚ್‌ ರೆಡಿ ಪಿಕ್ಸೆಲ್‌ ರೆಸಲ್ಯೂಶನ್‌ ಒಳಗೊಂಡ 32 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 16:9 ರಚನೆಯು ಅನುಪಾತವನ್ನು ಒಳಗೊಂಡಿದೆ. ಜೊತೆಗೆ 40W ಸ್ಪೀಕರ್ ಔಟ್‌ಪುಟ್ ಅನ್ನು ಬೆಂಬಲಿಸುವ 2 ಸ್ಪೀಕರ್‌ಗಳನ್ನು ಹೊಂದಿದೆ.

ಬ್ಲೂಪಂಕ್ಟ್‌ ಸೈಬರ್ ಸೌಂಡ್ 40 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 40 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 40 ಇಂಚಿನ ಟಿವಿ ವಿಶೇಷ ವಾರ್ಷಿಕೋತ್ಸವದ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ ಮೂಲಕ 15,999ರೂ. ಬೆಲೆಗೆ ಲಭ್ಯವಿದೆ. ಈ ಸ್ಮಾರ್ಟ್‌ಟಿವಿ 1366 x 768 ಹೆಚ್‌ಡಿ ರೆಡಿ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 40W ಸೌಂಡ್‌ ಔಟ್‌ಪುಟ್‌ ಅನ್ನು ನೀಡಲಿದೆ. ಜೊತೆಗೆ 1GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಬ್ಲೂಪಂಕ್ಟ್‌ ಸೈಬರ್ ಸೌಂಡ್ 42 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 42 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 42 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಟಿವಿ 1,920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಇದೀಗ 19,999ರೂ. ಬೆಲೆಗೆ ಲಭ್ಯವಾಗಲಿದೆ. ಇದು 1GB RAM ಮತ್ತು 8GB ROM ಅನ್ನು ಹೊಂದಿದ್ದು, 40W ಸ್ಪೀಕರ್ ಔಟ್‌ಪುಟ್‌ನೊಂದಿಗೆ ಡ್ಯುಯಲ್‌ ಸ್ಪೀಕರ್‌ಗಳನ್ನು ಹೊಂದಿದೆ.

ಬ್ಲೂಪಂಕ್ಟ್‌ ಸೈಬರ್ ಸೌಂಡ್ 43 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 43 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 43 ಇಂಚಿನ ಅಲ್ಟ್ರಾ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಸದ್ಯ ಈ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 27,999ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ 2GB RAM ಮತ್ತು 8GB ROM ಸ್ಟೊರೇಜ್‌ ಅನ್ನು ಹೊಂದಿದೆ. ಇದು 50W ಸ್ಪೀಕರ್ ಔಟ್‌ಪುಟ್ ಅನ್ನು ಒಳಗೊಂಡಿದೆ.

ಬ್ಲೂಪಂಕ್ಟ್‌ ಸೈಬರ್ ಸೌಂಡ್ 50 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 50 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 50 ಇಂಚಿನ ಅಲ್ಟ್ರಾ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಟಿವಿ 16:9 ರಚನೆಯ ಅನುಪಾತವನ್ನು ಹೊಂದಿದ್ದು, 60Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 33,999ರೂ.ಬೆಲೆಗೆ ದೊರೆಯಲಿದೆ. ಇದು ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್‌ನೊಂದಿಗೆ 60W ಸ್ಪೀಕರ್ ಔಟ್‌ಪುಟ್‌ ನೀಡಲಿದೆ.

ಬ್ಲೂಪಂಕ್ಟ್‌ ಬೆಜೆಲ್-ಲೆಸ್ 55-ಇಂಚಿನ ಟಿವಿ

ಬ್ಲೂಪಂಕ್ಟ್‌ ಬೆಜೆಲ್-ಲೆಸ್ 55-ಇಂಚಿನ ಟಿವಿ

ಈ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 55-ಇಂಚಿನ ಟಿವಿ ಬೆಜೆಲ್‌ ಲೆಸ್‌ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಟಿವಿ 38,999 ರೂ.ಬೆಲೆಗೆ ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ. ಇದು ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್ ಟ್ರೂಸರೌಂಡ್ ಪ್ರಮಾಣೀಕೃತ ಆಡಿಯೊ, ಡಾಲ್ಬಿ MS12 ತಂತ್ರಜ್ಞಾನದೊಂದಿಗೆ 60W ಸೌಂಡ್‌ ಔಟ್‌ಪುಟ್‌ ಅನ್ನು ಹೊಂದಿದೆ. ಟಿವಿ ರಿಮೋಟ್ ಅನ್ನು ಗೂಗಲ್ ಅಸಿಸ್ಟೆಂಟ್ ಮೂಲಕ ನಿಯಂತ್ರಿಸಬಹುದಾಗಿದೆ.

ಬ್ಲೂಪಂಕ್ಟ್‌ ಸೈಬರ್ ಸೌಂಡ್ 65 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 65 ಇಂಚಿನ ಟಿವಿ

ಬ್ಲೂಪಂಕ್ಟ್‌ ಸೈಬರ್ ಸೌಂಡ್ 65 ಇಂಚಿನ ಟಿವಿ ಅಲ್ಟ್ರಾ-ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್‌ ಬೆಲೆಯಲ್ಲಿ 55,999ರೂ. ಗಳಿಗೆ ದೊರೆಯಲಿದೆ. ಈ ಸ್ಮಾರ್ಟ್‌ಟಿವಿ ಇತ್ತೀಚಿನ ಆಂಡ್ರಾಯ್ಡ್ 10 ನಿಂದ ಚಾಲಿತವಾಗಿದೆ. ಇನ್ನು ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್ ಟ್ರೂಸರೌಂಡ್ ಪ್ರಮಾಣೀಕೃತ ಆಡಿಯೊ ಮತ್ತು ಡಾಲ್ಬಿ MS12 ಧ್ವನಿಯೊಂದಿಗೆ 60W ಸ್ಪೀಕರ್ ಔಟ್‌ಪುಟ್‌ನೊಂದಿಗೆ ಬರುತ್ತದೆ.

ಬ್ಲೂಪಂಕ್ಟ್‌

ಇನ್ನು ಬ್ಲೂಪಂಕ್ಟ್‌ ವಾರ್ಷಿಕೋತ್ಸವ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಬಗ್ಗೆ ಸೂಪರ್ ಪ್ಲಾಸ್ಟೋನಿಕ್ PVT. LTD, ಸಿಇಒ, ಶ್ರೀ ಅವ್ನೀತ್ ಸಿಂಗ್ ಮರ್ವಾ ತಮ್ಮ ಗ್ರಾಹಕರಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ವರ್ಷದಲ್ಲಿ ನಮ್ಮಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ನಮ್ಮ ಎಲ್ಲಾ ಗ್ರಾಹಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ ಎಂದಿದ್ದಾರೆ.

Best Mobiles in India

Read more about:
English summary
Blaupunkt Anniversary Sale: up to 40% discount available on Flipkart

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X