ಭಾರತದಲ್ಲಿ ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌ ಲಾಂಚ್; 30 ಗಂಟೆಗಳ ಪ್ಲೇಬ್ಯಾಕ್ ಟೈಮ್‌!

|

ಬ್ಲೂಪಂಕ್ಟ್ ಕಂಪೆನಿಯು ಬಹುಮುಖ್ಯವಾಗಿ ಕಾರ್ ಆಡಿಯೊ ಉಪಕರಣಗಳಲ್ಲಿ ತನ್ನದೇ ಆದ ಮೇಲುಗೈ ಸಾಧಿಸಿದೆ. ಇದರ ನಡುವೆ ಅಲ್ಟ್ರಾ ಹೆಚ್‌ಡಿ (4K) ಸ್ಮಾರ್ಟ್ ಆಂಡ್ರಾಯ್ಡ್ ಟಿವಿಗಳನ್ನು ಕೈಗೆಟಕುವ ದರದಲ್ಲಿ ಪರಿಚಯಿಸಿ ಜನಮನ್ನಣೆ ಗಳಿಸಿಕೊಂಡಿದೆ. ಹಾಗೆಯೇ ಹೆಚ್ಚಿನ ಗುಣಮಟ್ಟದ ಸ್ಟೀರಿಯೋ ಸಿಸ್ಟಮ್‌ ಗಳನ್ನು ಪರಿಚಯಿಸುವುದರ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದು, ಈ ನಡುವೆ ಈಗ ಹೊಸ ಇಯರ್‌ಬಡ್ಸ್‌ಗಳನ್ನು ಪರಿಚಯಿಸಿದೆ.

ಇಯರ್‌ಬಡ್‌

ಹೌದು, ಭಾರತದಲ್ಲಿ ಬ್ಲೂಪಂಕ್ಟ್ BTW20 ಇಯರ್‌ಬಡ್‌ಗಳನ್ನು ಪರಿಚಯಿಸಲಾಗಿದೆ. ಈ ಇಯರ್‌ಬಡ್‌ ಬರೋಬ್ಬರಿ 30 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌‌ ಆಯ್ಕೆ, ಅತ್ಯುತ್ತಮ ಬೇಸ್‌ ಅನುಭವ ಸೇರಿಂದಂತೆ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಿದ್ರೆ ಭಾರತದಲ್ಲಿ ಇದರ ಬೆಲೆ ಎಷ್ಟು, ಇದು ಹೊಂದಿರುವ ಆಕರ್ಷಕ ಫೀಚರ್ಸ್‌ ಯಾವುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಪ್ರಮುಖ ವಿವರ

ಪ್ರಮುಖ ವಿವರ

ಬ್ಲೂಪಂಕ್ಟ್ BTW20 (Blaupunkt BTW20) ಇಯರ್‌ಬಡ್ಸ್‌ ಇನ್‌ ಇಯರ್‌ ವಿನ್ಯಾಸದ ಆಯ್ಕೆ ಪಡೆದುಕೊಂಡಿದ್ದು, ತುಂಬಾನೇ ಹಗುರವಾಗಿದೆ. ಅದರಲ್ಲೂ ಚಾರ್ಜಿಂಗ್‌ ಕೇಸ್‌ ಆಕರ್ಷಕ ನೋಟದೊಂದಿಗೆ ಇಯರ್‌ಬಡ್‌ಗಳ ಬ್ಯಾಟರಿ ಸ್ಥಿತಿಯನ್ನು ಎಲ್ಇಡಿ ಮೂಲಕ ತೋರಿಸಲಾಗುತ್ತದೆ. ಇದರೊಂದಿಗೆ ಈ ಇಯರ್‌ಬಡ್ಸ್‌ ವಾಟರ್‌ ಹಾಗೂ ಸ್ವೆಟ್‌ ಪ್ರತಿರೋಧಕ್ಕಾಗಿ IPX5 ರೇಟಿಂಗ್ ಆಯ್ಕೆ ಹೊಂದಿರುವುದು ವಿಶೇಷ.

ಫೀಚರ್ಸ್‌ ಏನಿದೆ?

ಫೀಚರ್ಸ್‌ ಏನಿದೆ?

ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌ ಡೀಪ್‌ ಬೇಸ್‌ ಆಯ್ಕೆಯ ಜೊತೆಗೆ ಉತ್ತಮ ಹೆಚ್‌ಡಿ ಧ್ವನಿ ಅನುಭವಕ್ಕಾಗಿ 10mm ಡೈನಾಮಿಕ್ ಡ್ರೈವರ್‌ಗಳನ್ನು ಪಡೆದುಕೊಂಡಿದೆ. ಹಾಗೂ 20 Hz (Min) - 20 KHz (Max) ಫ್ರೀಕ್ವೆನ್ಸಿ ರೆಸ್ಪಾನ್ಸ್ ಜೊತೆಗೆ ಇನ್‌ಬಿಲ್ಟ್‌ ಮೈಕ್ರೊಫೋನ್‌ ಆಯ್ಕೆ ಮಾತ್ರ ನಿಮ್ಮನ್ನು ತಲ್ಲೀನಗೊಳಿಸುತ್ತದೆ. ಈ ಮೈಕ್ರೊಫೋನ್‌ ಯಾವುದೇ ಅನವಶ್ಯಕ ಶಬ್ದಗಳ ಅಡಚಣೆಯನ್ನು ದೂರ ಸರಿಸುವ ಮೂಲಕ ನಿಮಗೆ ಸ್ಪಷ್ಟವಾದ ಕರೆ ಅನುಭವವನ್ನು ನೀಡುತ್ತದೆ.

ವಾಯ್ಸ್‌ ಅಸಿಸ್ಟೆಂಟ್‌

ವಾಯ್ಸ್‌ ಅಸಿಸ್ಟೆಂಟ್‌

ಈ ಮೇಲೆ ತಿಳಿಸಿದ ಫೀಚರ್ಸ್‌ಗಳ ಜೊತೆಗೆ ಹೆಚ್ಚುವರಿಯಾಗಿ, ನೀವು ಮ್ಯೂಸಿಕ್‌ ಅನ್ನು ಈ ಬಡ್ಸ್‌ಗಳ ಮೂಲಕವೇ ಕಂಟ್ರೋಲ್‌ ಮಾಡಬಹುದು. ಅಂದರೆ ಮ್ಯೂಸಿಕ್‌ ಅನ್ನು ಪ್ಲೇ ಮಾಡಬಹುದು, ಪಾಸ್‌ ಮಾಡಬಹುದು ಹಾಗೂ ವಾಲ್ಯೂಮ್‌ ಅನ್ನು ನಿಯಂತ್ರಿಸಬಹುದು. ಇದರೊಂದಿಗೆ ಗೂಗಲ್‌ ಅಸಿಸ್ಟೆಂಟ್‌ ಹಾಗೂ ಸಿರಿ ಆಯ್ಕೆ ನಿಮ್ಮನ್ನು ಇನ್ನಷ್ಟು ಪುಳಕಿತರನ್ನಾಗಿಸುತ್ತದೆ.

ಬ್ಯಾಟರಿ ಸಾಮರ್ಥ್ಯ ಹೇಗಿದೆ?

ಬ್ಯಾಟರಿ ಸಾಮರ್ಥ್ಯ ಹೇಗಿದೆ?

ಇಷ್ಟೆಲ್ಲಾ ಫೀಚರ್ಸ್‌ ಇರುವ ಈ ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌ ಬ್ಯಾಟರಿ ಸಾಮರ್ಥ್ಯದಲ್ಲೂ ಒಂದು ಕೈ ಮೇಲಿದೆ. ಈ ಇಯರ್‌ಬಡ್ಸ್‌ 30 ಗಂಟೆಗಳ ಒಟ್ಟು ಪ್ಲೇಬ್ಯಾಕ್ ಸಮಯ ನೀಡಲಿದ್ದು, ಚಾರ್ಜಿಂಗ್‌ ಆಯ್ಕೆಗಾಗಿ ಯುಎಸ್‌ಬಿ - C ಪೋರ್ಟ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು ಪಾಸ್ಟ್‌ ಚಾರ್ಜಿಂಗ್‌ ಬೆಂಬಲ ಪಡೆದಿದೆ. ಇನ್ನು 10 ನಿಮಿಷ ಚಾರ್ಜ್‌ ಮಾಡಿದರೆ 30 ನಿಮಿಷಗಳವರೆಗೆ ರನ್‌ಟೈಮ್ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಆಫರ್‌ ಬೆಲೆ 1,299 ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಈ ಇಯರ್‌ಬಡ್ಸ್‌ ಮೂಲ ದರ 3,299 ರೂ. ಗಳಾಗಿದೆ. ಹೊಸದಾಗಿ ಲಾಂಚ್‌ ಮಾಡಲಾಗಿರುವ ಕಾರಣ 58 % ಡಿಸ್ಕೌಂಟ್ ನೀಡಲಾಗಿದ್ದು, ನೀವು 1,299 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇನ್ನು ಈ ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌ ರಿಟೇಲರ್‌ ಸ್ಟೋರ್‌ ಹಾಗೂ ಅಮೆಜಾನ್‌ನಲ್ಲೂ ಲಭ್ಯವಿದೆ. ಜೊತೆಗೆ ಈ ಡಿವೈಸ್‌ ಬಿಳಿ, ಕಪ್ಪು, ನೀಲಿ ಮತ್ತು ಹಸಿರು ಬಣ್ಣದ ನಾಲ್ಕು ವೇರಿಯಂಟ್ ನಲ್ಲಿ ಲಭ್ಯವಾಗುವುದರಿಂದ ನಿಮ್ಮಿಷ್ಟದ ಇಯರ್‌ಬಡ್ಸ್‌ ಆಯ್ಕೆಗೆ ಅವಕಾಶ ನೀಡಲಾಗಿದೆ.

Best Mobiles in India

Read more about:
English summary
Blaupunkt BTW20 Earbuds Introduced in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X