ಭಾರತದಲ್ಲಿ ಬ್ಲೂಪಂಕ್ಟ್‌ನಿಂದ ಎರಡು ಸೌಂಡ್‌ಬಾರ್‌ ಅನಾವರಣ; ಬೆಲೆ ಎಷ್ಟೆಂದು ತಿಳಿಯಿರಿ!

|

ಬ್ಲೂಪಂಕ್ಟ್ ಕಂಪೆನಿಯು ಆಡಿಯೋ ವಿಭಾಗದಲ್ಲಿ ಅತ್ಯುತ್ತಮ ದರ್ಜೆಯ ಡಿವೈಸ್‌ಗಳನ್ನು ಪರಿಚಯಿಸಿ ಹೆಚ್ಚು ಜನಪ್ರಿಯಗೊಂಡಿದೆ. ಅದರಲ್ಲೂ ಕಾರ್‌ ಆಡಿಯೋ ಉಪಕರಣಗಳಲ್ಲಿ ಇದು ಇತರೆ ಕಂಪೆನಿಗಳಿಗಿಂತ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ನಡುವೆ ನೆಕ್‌ಬ್ಯಾಂಡ್‌, ಇಯರ್‌ಬಡ್ಸ್‌, ಹೆಡ್‌ಫೋನ್‌ ಸೇರಿದಂತೆ ಇತರೆ ಪ್ರಮುಖ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಇದೀಗ ಇವುಗಳ ಸಾಲಿಗೆ ಎರಡು ಹೊಸ ಸೌಂಡ್‌ ಬಾರ್‌ ಸೇರಿಕೊಳ್ಳಲಿವೆ.

ಬ್ಲೂಪಂಕ್ಟ್

ಹೌದು, ಭಾರತದಲ್ಲಿ ಬ್ಲೂಪಂಕ್ಟ್ ಹೊಸ ಎರಡು ಸೌಂಡ್‌ಬಾರ್ ಶ್ರೇಣಿಯನ್ನು ಲಾಂಚ್‌ ಮಾಡಲಾಗಿದ್ದು, ಇದರಲ್ಲಿ ಬ್ಲೂಪಂಕ್ಟ್ SBA15 ಮತ್ತು ಬ್ಲೂಪಂಕ್ಟ್ SBA15GM ಸೌಂಡ್‌ಬಾರ್‌ಗಳು ಆಕರ್ಷಕ ನೋಟದೊಂದಿಗೆ ಅತ್ಯುತ್ತಮ ಸೌಂಡ್‌ ಕ್ವಾಲಿಟಿ ನೀಡಲಿವೆ. ಹಾಗಿದ್ರೆ ಇವುಗಳ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಈ ಡಿವೈಸ್‌ಗಳಿಗೆ ನಿಗದಿಪಡಿಸಲಾದ ಬೆಲೆ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಬ್ಲೂಪಂಕ್ಟ್ SBA15 ಸೌಂಡ್‌ಬಾರ್‌ 2 ಇಂಚಿನ ಡ್ಯುಯಲ್ ಸ್ಪೀಕರ್‌ ಆಯ್ಕೆ ಪಡೆದುಕೊಂಡಿದ್ದು, 14W ನ ಸೌಂಡ್‌ ನೀಡಲಿದೆ. ಹಾಗೆಯೇ SBA15GM ಸೌಂಡ್‌ಬಾರ್‌ 2 .5 ಇಂಚಿನ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದ್ದು, 15W ನ ಆಡಿಯೊ ಔಟ್‌ಪುಟ್ ಅನ್ನು ಒದಗಿಸುತ್ತದೆ. ಈ ಎರಡೂ ಸೌಂಡ್‌ಬಾರ್‌ಗಳು ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಇರುವುದು ವಿಶೇಷ. ಅದರಲ್ಲೂ ಉತ್ತಮ ಕ್ವಾಲಿಟಿಯ ಮೆಟಿರಿಯಲ್‌ ಬಳಕೆ ಮಾಡಿಕೊಂಡು ಇವುಗಳನ್ನು ನಿರ್ಮಾಣ ಮಾಡಿದ್ದು, ದೀರ್ಘ ಬಾಳಿಕೆ ಬರುತ್ತವೆ.

ಸೌಂಡ್‌ಬಾರ್‌

ಈ ಎರಡೂ ಸೌಂಡ್‌ಬಾರ್‌ಗಳು ಗೇಮಿಂಗ್‌ ಆಡುವವರಿಗೆ ಉತ್ತಮ ಅನುಭವ ನೀಡಲಿವೆ. ಯಾಕೆಂದರೆ ಗೇಮರ್‌ಗಳನ್ನೇ ಗುರಿಯಾಗಿಸಿಕೊಂಡು ಈ ಡಿವೈಸ್‌ಗಳನ್ನು ತಯಾರು ಮಾಡಲಾಗಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಪಿಸಿ ಹಾಗೂ ಟಿವಿಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದ್ದು, ವೀಕ್ಷಣೆ ಸಂದರ್ಭದಲ್ಲಿ ಹೆಚ್ಚಿನ ಮೋಜು ಸಿಗಲಿದೆ.

SBA15GM

ಇದರೊಂದಿಗೆ SBA15GM ಸೌಂಡ್‌ಬಾರ್‌ ಸ್ಪೋರ್ಟ್ಸ್ LED ಲೈಟ್‌ಆಯ್ಕೆ ಹೊಂದಿದ್ದು, ಸಂಗೀತಕ್ಕೆ ತಕ್ಕಂತೆ ಲೈಟ್‌ ಬೆಳಗುತ್ತವೆ. ಹಾಗೆಯೆ ಕನೆಕ್ಟಿವಿಟಿ ವಿಷಯದಲ್ಲಿ ಮೈಕ್ರೋ TF ಕಾರ್ಡ್, ಆಕ್ಸ್ ಇನ್‌, ಯುಎಸ್‌ಬಿ ಇನ್‌, 10 ಮೀಟರ್‌ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಬ್ಲೂಟೂತ್‌, ಎಫ್‌ಎಮ್‌ ಹಾಗೂ TWS ಸೌಲಭ್ಯ ಇವುಗಳಲ್ಲಿದೆ. ಒಂದೇ ಬಾರಿಗೆ ಎರಡು ಸೌಂಡ್‌ಬಾರ್‌ಗಳನ್ನು ಕನೆಕ್ಟ್‌ ಮಾಡುವ ಆಯ್ಕೆ ಇದರಲ್ಲಿದ್ದು, ಇದರಿಂದ ಇನ್ನಷ್ಟು ಹೆಚ್ಚಿನ ಆಡಿಯೊ ಅನುಭವವನ್ನು ಪಡೆಯಬಹುದಾಗಿದೆ. ಇನ್ನು ಈ ಸೌಂಡ್‌ಬಾರ್‌ಗಳನ್ನು ಲಾಂಚ್‌ ಮಾಡುವ ಮುನ್ನವೇ ಈ ತಿಂಗಳ ಆರಂಭದಲ್ಲಿ ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌ ಅನ್ನು ಸಹ ಲಾಂಚ್‌ ಮಾಡಿದೆ.

ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌

ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌

ಈ ಸೌಂಡ್‌ಬಾರ್‌ಗಳನ್ನು ಲಾಂಚ್‌ ಮಾಡುವ ಮುನ್ನವೇ ಬ್ಲೂಪಂಕ್ಟ್ BTW20 ಇಯರ್‌ಬಡ್ಸ್‌ ಅನ್ನು ಲಾಂಚ್ ಮಾಡಲಾಗಿದೆ. ಬ್ಲೂಪಂಕ್ಟ್ BTW20 (Blaupunkt BTW20) ಇಯರ್‌ಬಡ್ಸ್‌ ಇನ್‌ ಇಯರ್‌ ವಿನ್ಯಾಸದ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದರ ಚಾರ್ಜಿಂಗ್‌ ಕೇಸ್‌ ಆಕರ್ಷಕ ನೋಟದೊಂದಿಗೆ ಇಯರ್‌ಬಡ್‌ಗಳ ಬ್ಯಾಟರಿ ಸ್ಥಿತಿಯನ್ನು ಎಲ್ಇಡಿ ಮೂಲಕ ತೋರಿಸುತ್ತದೆ. ಇದಿಷ್ಟೇ ಅಲ್ಲದೆ, ವಾಟರ್‌ ಹಾಗೂ ಸ್ವೆಟ್‌ ಪ್ರತಿರೋಧಕ್ಕಾಗಿ IPX5 ರೇಟಿಂಗ್ ಆಯ್ಕೆ ಹೊಂದಿರುವುದು ವಿಶೇಷ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಬ್ಲೂಪಂಕ್ಟ್ SBA15 ಮತ್ತು ಬ್ಲೂಪಂಕ್ಟ್ SBA15GM ಸೌಂಡ್‌ಬಾರ್‌ಗಳು ಟರ್ಬೋವೋಲ್ಟ್‌ ವೇಗದ ಚಾರ್ಜಿಂಗ್‌ ತಂತ್ರಜ್ಞಾನಕ್ಕೆ ಬೆಂಬಲ ನೀಡಲಿದ್ದು, ಚಾರ್ಜಿಂಗ್‌ ಗಾಗಿ ದೀರ್ಘ ಸಮಯ ಮೀಸಲಿಡಬೇಕಿಲ್ಲ. ಜೊತೆಗೆ 2,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇರುವುದರಿಂದ 12 ಗಂಟೆಗಳ ಬ್ಯಾಕಪ್‌ ನೀಡುತ್ತವೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಕೊಡುಗೆ ಬೆಲೆಯಾಗಿ ಬ್ಲೂಪಂಕ್ಟ್ SBA15 ಗೆ 1,099 ರೂ. ಹಾಗೂ ಬ್ಲೂಪಂಕ್ಟ್ SBA15GM ಗೆ 1,399ರೂ. ಗಳನ್ನು ನಿಗದಿ ಮಾಡಲಾಗಿದೆ. ಇವುಗಳನ್ನು ಖರೀದಿ ಮಾಡಬೇಕೆಂದರೆ ನೀವು ಕಂಪೆನಿಯ ಅಧಿಕೃತ ವೆಬ್‌ಸೈಟ್‌ ಹಾಗೂ ಅಮೆಜಾನ್‌ ಇಂಡಿಯಾಗೆ ಭೇಟಿ ನೀಡಬೇಕಿದೆ.

Best Mobiles in India

English summary
Blaupunkt SBA15 and SBA15GM Soundbars Launched in India with budget price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X