ಬ್ಲೂವೇಲ್ ಚಾಲೆಂಜ್: 'ಮಕ್ಕಳನ್ನು ಕೊಲ್ಲುವ ಆಟ'

By Tejaswini P G

  ಬ್ಲೂವೇಲ್ ಚ್ಯಾಲೇಂಜ್ ಅಥವಾ ಬ್ಲೂವೇಲ್ ಸೂಸೈಡ್ ಗೇಮ್ ಎಂದು ಕರೆಸಿಕೊಳ್ಳುವ ಆಟವೊಂದು ಆನ್ಲೈನ್ ನಲ್ಲಿ ಬಂದಾಗಿನಿಂದ ಹಲವು ಹದಿಹರೆಯದ ಮಕ್ಕಳ ಜೀವವನ್ನು ಬಲಿತೆಗೆದುಕೊಂಡಿರುವ ವರದಿಗಳು ಕೇಳಿಬಂದಿದೆ. ಆ ಮಕ್ಕಳ ಸಾವಿಗೆ ಈ ಆಟವೇ ಕಾರಣ ಎಂದು ಹೇಳಲಾಗುತ್ತಿದ್ದರೂ ಯಾವುದೇ ರೀತಿಯ ಖಚಿತ ಪುರಾವೆಗಳು ಎಲ್ಲೂ ದೊರೆತಿಲ್ಲ.

   ಬ್ಲೂವೇಲ್ ಚಾಲೆಂಜ್: 'ಮಕ್ಕಳನ್ನು ಕೊಲ್ಲುವ ಆಟ'

  ಇದನ್ನು ಪರಿಶೀಲಿಸಲೆಂದೇ ಸ್ಥಾಪಿಸಲ್ಪಟ್ಟ CERT-In ನ ತನಿಖೆಯೂ ಹಲವು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಭವಿಸಿದ ಹದಿಹರೆಯದ ಮಕ್ಕಳ ಆತ್ಮಹತ್ಯೆ ಪ್ರಕರಣಗಳಿಗೂ ಬ್ಲೂವೇಲ್ ಚ್ಯಾಲೇಂಜ್ ಗೇಮ್ ಗೂ ನೇರ ನಂಟನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.

  ಲೋಕಸಭೆಯಲ್ಲಿ ನೀಡಿದ ಲಿಖಿತ ರೂಪದ ಉತ್ತರವೊಂದರಲ್ಲಿ,ಕೇಂದ್ರ ಸಚಿವರು MoS(ಹೋಮ್) ಆದ ಹನ್ಸ್ರಾಜ್ ಗಂಗಾರಾಮ್ ಅಹಿರ್ ಅವರು ವಿವಿಧ ರಾಜ್ಯಗಳಲ್ಲಿ ಬ್ಲೂವೇಲ್ ಚ್ಯಾಲೇಂಜ್ ಗೇಮ್ ನ ಕಾರಣದಿಂದ ನಡೆದಿದೆ ಎನ್ನಲಾಗುವ ಮಕ್ಕಳ ಆತ್ಮಹತ್ಯೆ ಪ್ರಕರಣಗಳ ತನಿಖೆ ನಡೆಸುವ ಸಲುವಾಗಿ ಡೈರೆಕ್ಟರ್ ಜನರಲ್- ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್-ಇಂಡಿಯಾ (CERT-In) ಇವರ ನೇತ್ರತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು ಎಂದು ತಿಳಿಸಿದ್ದಾರೆ.

  "ಸಧ್ಯದ ಸಂದರ್ಭವನ್ನು ಎಚ್ಚರಿಕೆಯಿಂದ ಗಮನಿಸಲು ಮತ್ತು ಬ್ಲೂವೇಲ್ ಆಟದ ಪ್ರತಿಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಲಾಗಿತ್ತು.CERT-In ಸಮಿತಿಯು ಇಂಟರ್ನೆಟ್ ಚಟುವಟಿಕೆಗಳನ್ನು, ಅವರು ಬಳಸಿದ ಸಾಧನಗಳ ಚಟುವಟಿಕೆಗಳನ್ನು, ಕರೆಗಳ ರೆಕಾರ್ಡ್ ಅನ್ನು,ಸಾಮಾಜಿಕ ಜಾಲತಾಣದ ಚಟುವಟಿಕೆಗಳನ್ನು ಮತ್ತು ಇತರ ಫಾರೆನ್ಸಿಕ್ ಪುರಾವೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ್ದು, ಈ ಘಟನೆಗಳಲ್ಲಿ ರಕ್ಷಿಸಲಾದ ಮಕ್ಕಳೊಂದಿಗೆ ಸಂವಾದವನ್ನು ಕೂಡ ನಡೆಸಿದೆ" ಎಂದು ಹೇಳಿದ್ದಾರೆ.

  "ಈ ಯಾವುದೇ ಘಟನೆಗಳಲ್ಲಿ ಬ್ಲೂವೇಲ್ ಚ್ಯಾಲೇಂಜ್ ಗೇಮ್ ನ ಪಾತ್ರವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ" ಎಂದು ಅಹಿರ್ ತಿಳಿಸಿದ್ದಾರೆ. ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಫೋರ್ಮೇಶನ್ ಟೆಕ್ನಾಲಜಿ(MeitY) ಸಲ್ಲಿಸಿರುವ ಅಫಿಡವಿಟ್ ನಲ್ಲಿ ಬ್ಲೂವೇಲ್ ಚ್ಯಾಲೇಂಜ್ ಗೇಮ್ ನ ಕಾರಣದಿಂದ ನಡೆದಿದೆ ಎನ್ನಲಾಗುವ ಮಕ್ಕಳ ಆತ್ಮಹತ್ಯೆ ಪ್ರಕರಣಗಳ ತನಿಖೆ ನಡೆಸುವ ಸಲುವಾಗಿ ಡೈರೆಕ್ಟರ್ ಜನರಲ್- ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್-ಇಂಡಿಯಾ (CERT-In) ಇವರ ನೇತ್ರತ್ವದಲ್ಲಿ 7-ಮಂದಿ ಯ ಸಮಿತಿಯೊಂದನ್ನು ರಚಿಸಲಾಗಿತ್ತು ಎಂದು ತಿಳಿಸಲಾಗಿದೆ.

  ಫ್ಲಿಪ್‌ಕಾರ್ಟ್‌ 2018ರ ಮೊದಲ ಸೇಲ್‌ನಲ್ಲಿ ರೂ.2018ಕ್ಕೆ 4G ಸ್ಮಾರ್ಟ್‌ಫೋನ್..!

  ಈ ಸಮಿತಿಯು ಅದರ ಮಧ್ಯಂತರ ಸಂಶೋಧನೆಗಳಲ್ಲಿ "ತಮಗೆ ವರದಿ ಮಾಡಲ್ಪಟ್ಟ ಯಾವುದೇ ಆತ್ಮಹತ್ಯೆ ಘಟನೆಗಳಲ್ಲಿ ಬ್ಲೂವೇಲ್ ಚ್ಯಾಲೆಂಜ್ ಗೇಮ್ ನ ಪಾತ್ರವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ" ಎಂದು ಸೂಚಿಸಿದೆ.

  ರಶ್ಯಾದ ಆರೋಪಿಯೊಬ್ಬನಿಂದ ಸೃಷ್ಟಿಸಲ್ಪಟ್ಟಿದೆ ಎನ್ನಲಾದ ಬ್ಲೂವೇಲ್ ಚ್ಯಾಲೇಂಜ್ ಗೇಮ್ ,ಅದನ್ನು ಆಡುವ ಆಟಗಾರರಿಗೆ 50 ದಿನಗಳ ಕಾಲ ಭಯಾನಕ ಮತ್ತು ಸ್ವಯಂ ವಿನಾಶಕಾರಿ ಚಟುವಟಿಕೆಗಳನ್ನು ನಡೆಸುವಂತೆ ಮಾನಸಿಕವಾಗಿ ಪ್ರಚೋದಿಸುತ್ತದೆ ಎನ್ನಲಾಗಿದೆ.ಈ ಆಟದ ಕೊನೆಯಲ್ಲಿ ಅಂತಿಮ ಹೆಜ್ಜೆಯಾಗಿ ತಮ್ಮನ್ನು ತಾವೇ ಕೊಲ್ಲುವಂತೆ ಪ್ರಚೋದಿಸಲಾಗುತ್ತದೆಯಂತೆ.

  ಹೆಚ್ಚುವರಿ ಸಾಲಿಸಿಟರ್ ಜನರಲ್ ಆದ ಪಿ.ಎಸ್.ನರಸಿಂಹ ಅವರು ಅಕ್ಟೋಬರ್ ಮಾಸಾಂತ್ಯದಲ್ಲಿ ದೇಶದಾದ್ಯಂತ ಬ್ಲೂವೇಲ್ ಗೆ ಸಂಬಂಧಿಸಿದಂತೆ 28 ಘಟನೆಗಳು ವರದಿಯಾಗಿವೆ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದ್ದರು.

  ಬ್ಲೂವೇಲ್ ನ ಸೃಷ್ಟಿಕರ್ತನನ್ನು ಬಂಧಿಸಲಾಗಿದ್ದರೂ ಈ ಆಟ ಭಾರೀ ತ್ವರಿತ ಗತಿಯಲ್ಲಿ ಆನ್ಲೈನ್ ನಲ್ಲಿ ಹರಡುತ್ತಿದ್ದು, ಹಲವರನ್ನು, ಹೆಚ್ಚಾಗಿ ಹದಿಹರೆಯದವರನ್ನು ಅತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುತ್ತಿದೆ. ಕೆಲದಿನಗಳ ಹಿಂದಷ್ಟೇ ಹೈದರಾಬಾದ್ ನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು , ಈ ಸಾವಿಗೂ ಬ್ಲೂವೇಲ್ ಚ್ಯಾಲೇಂಜ್ ಕಾರಣ ಎಂದು ಹೇಳಲಾಗುತ್ತಿದೆ.

  Read more about:
  English summary
  A CERT-In investigation has now stated that no connection has been established relating to incidents of children committing suicide after playing online "Blue Whale Challenge Game" in states and union territories.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more