Subscribe to Gizbot

ಬ್ಲೂವೇಲ್ ಆಟಕ್ಕೆ ಚೆನ್ನೈ ವಿಧ್ಯಾರ್ಥಿ ಬಲಿ!..ಡೆತ್‌ನೋಟ್ ನೋಡಿ ಎಲ್ಲರೂ ಶಾಕ್!!

Written By:

ವಿಕೃತ ಸಾವಿನ ಗೇಮ್‌ ಎಂದೇ ಹೆಸರು ಪಡೆದಿರುವ ಬ್ಲೂವೇಲ್‌ಗೆ ತಮಿಳುನಾಡಿನ ವಿಧ್ಯಾರ್ಥಿಯೋರ್ವ ಬಲಿಯಾಗಿದ್ದಾನೆ.!! ಮಧುರೈನ ಮನ್ನಾರ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ, ಚೆನ್ನೈನ ಮೂಲದ ವಿಘ್ನೇಶ್ ಎಂಬ 19 ವರ್ಷದ ವಿಧ್ಯಾರ್ಥಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಕ್ಕಿಣ ಭಾರತದಲ್ಲಿಯೇ ಬ್ಲೂವೇಲ್‌ನ ಮೊದಲ ಪ್ರಕರಣ ಇದಾಗಿದ್ದು,''ಬ್ಲೂವೇಲ್ ಇದು ಆಟವಲ್ಲ ಡೇಂಜರ್. ಒಮ್ಮೆ ಒಳ ಹೊಕ್ಕರೆ ಹೊರಗೆ ಬರಲಾರೆ'' ಎಂದು ಸಾಯುವ ಮುನ್ನ ವಿಘ್ನೇಶ್ ಬರೆದಿರುವ ಪತ್ರ ಪೊಲೀಸರಿಗೆ ಸಿಕ್ಕಿದೆ. ಜೊತೆಗ ಅವನ ಕೈ ಮೇಲೆ ಕೂಡ ಬ್ಲೂವೇಲ್‌ನ ಲೋಗೊ ತಿಮಿಂಗಿಲದ ಚಿತ್ರ ಬರೆದಿದೆ ಎಂದು ಪೋಲೀಸರು ಸ್ಪಷ್ಟಪಡಿಸಿದ್ದಾರೆ.!!

ಹದಿಹರೆಯದ ಹುಡುಗರನ್ನೆ ಟಾರ್ಗೆಟ್ ಮಾಡುತ್ತಿರುವ ಬ್ಲೂವೇಲ್ ಗೇಮ್ ಇದೀಗ ಎಲ್ಲೆಡೆ ಹಬ್ಬುತ್ತಿದ್ದು, ಹಾಗಾಗಿ, ಏನಿದು ಸೂಸೈಡ್ 'ಬ್ಲೂ ವೇಲ್‌' ಎಂಬ ಭಯಾನಕ ಆನ್‌ಲೈನ್‌ ಗೇಮ್‌? ಮಕ್ಕಳು ಏಕೆ ಈ ಗೇಮ್‌ಗೆ ಆಕರ್ಷಿತರಾಗುತ್ತಾರೆ.? ನಿಮ್ಮ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳುವುದು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
‘ಬ್ಯೂ ವೇಲ್’ ಹೆಸರಿನ ನಿಗೂಢ ಗುಂಪು!!

‘ಬ್ಯೂ ವೇಲ್’ ಹೆಸರಿನ ನಿಗೂಢ ಗುಂಪು!!

ರಷ್ಯಾದಲ್ಲಿ ವಿಕೆ ಹೆಸರಿನ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಲ್ಲಿದ್ದು, ಇದರಲ್ಲಿ ‘ಬ್ಯೂ ವೇಲ್' ಹೆಸರಿನ ನಿಗೂಢ ಗುಂಪೊಂದು ಕಾರ್ಯನಿರ್ವಹಿಸುತ್ತಿದೆ. ತನ್ನನ್ನು ತಾನು ‘ಆನ್‌ಲೈನ್ ಗೇಮ್' ಎಂದು ಕರೆದುಕೊಂಡಿರುವ ‘ಬ್ಲೂ ವೇಲ್'ಗೆ 12 ರಿಂದ 16ರ ನಡುವಿನ ಯುವಕರ ಮೇಲೆ ಕಣ್ಣು.!!

ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ!!

ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ!!

ಈ ಆಟದ ಪ್ರಕಾರ ಮೇಲ್ವಿಚಾರರಕರು ಭಾಗವಹಿಸುವ ಅಭ್ಯರ್ಥಿಗೆ 50 ದಿನ 50 ಸವಾಲುಗಳನ್ನು ನೀಡುತ್ತಾರೆ. ಅಭ್ಯರ್ಥಿಯು ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಜಯಗಳಿಸಬೇಕು. ಒಮ್ಮೆ ಆಟಕ್ಕೆ ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ ಎಂಬ ಷರತ್ತನ್ನು ‘ಬ್ಯೂ ವೇಲ್' ಹೆಸರಿನ ನಿಗೂಢ ಗುಂಪು ಹಾಕುತ್ತದೆ.

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಹೇಗಿರುತ್ತದೆ ಟಾಸ್ಕ್‌ಗಳು?

ಹೇಗಿರುತ್ತದೆ ಟಾಸ್ಕ್‌ಗಳು?

ಬ್ಲೂವೇಲ್ ಗೇಮ್ ಆಟಗಾರನಿಗೆ ಹಾರರ್ ಸಿನಿಮಾ ನೋಡುವುದು, ರಾತ್ರಿ ವೇಳೆಯಲ್ಲಿ ಎದ್ದು ವಾಕ್ ಮಾಡುವುದು, ಹಾಗೂ ತನಗೆ ತಾನೇ ನೋವುಂಟು ಮಾಡಿಕೊಳ್ಳುವುದು ಸೇರಿ ಹಲವು ವಿಕೃತ ಗೇಮ್‌ಗಳಿರುತ್ತವೆ. ಈ ಗೇಮ್‌ಗೆ ಜಗತ್ತಿನಾದ್ಯಂತ ಹಲವು ವಯಸ್ಕರು ಬಲಿಯಾಗುತ್ತಿದ್ದಾರೆ!! ಈವರೆಗೆ 130 ಯುವಕ ಯುವತಿಯರು ಸಾವನ್ನಪ್ಪಿದ್ದಾರೆ ಎಂಬುದು ಅವರ ಸಾಮಾಜಿಕ ಜಾಲತಾಣದ ಕೊನೆಯ ಸ್ಟೇಟಸ್‌ಗಳು ಹೇಳುತ್ತಿವೆ.!!

ಮಾನಸಿಕ ಹಿಡಿತ ಸಾಧಿಸುತ್ತಾರೆ.!!

ಮಾನಸಿಕ ಹಿಡಿತ ಸಾಧಿಸುತ್ತಾರೆ.!!

ಮೊದಲ 49 ದಿನಗಳ ಅಂತರದಲ್ಲಿ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುವಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಅಷ್ಟೊತ್ತಿಗಾಗಲೇ ಗುಂಪಿನ ನಿರ್ವಾಹಕರು ಆಟಕ್ಕೆ ಒಪ್ಪಿದ ಸದಸ್ಯರ ಮೇಲೆ ಮಾನಸಿಕ ಹಿಡಿತ ಸಾಧಿಸಿ, 50ನೇ ದಿನ ಸದಸ್ಯರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೂಚನೆ ನೀಡುತ್ತಾರೆ.!!

ಇದರಿಂದ ಅವರಿಗೆ ಲಾಭ ಏನು?

ಇದರಿಂದ ಅವರಿಗೆ ಲಾಭ ಏನು?

ಅಂತರ್ಜಾಲದಲ್ಲಿ ಜಾರಿಯಲ್ಲಿರುವ ‘ಸೈಕೋ' ಮನಸ್ಥಿತಿಗೆ ಈ ಗೇಮ್ ಅನ್ನು ಹೋಲಿಸಲಾಗಿದೆ. ಚಾಕುವಿನಿಂದ ಚುಚ್ಚಿಕೊಳ್ಳುವುದು, ಚಲಿಸುವ ರೈಲಿನಿಂದ ಹಾರುವುದು, ರಕ್ತನಾಳಗಳನ್ನು ಕೊಯ್ದುಕೊಳ್ಳುವುದು ಹೀಗೆ ಭೀಕರ ಎನ್ನಿಸುವ ದೃಶ್ಯಾವಳಿಗಳಿಂದ ಅಂತರ್ಜಾಲದ ಗುಂಪುಗಳನ್ನು ಹೆಚ್ಚಿಸುವ ತಂತ್ರವೂ ಇದರ ಹಿಂದಿದೆ ಎನ್ನುತ್ತವೆ ಕೆಲವು ವರದಿಗಳು.!!

ಪೋಷಕರು ಎಚ್ಚರಿಕೆ ವಹಿಸುವುದು ಸೂಕ್ತ!!

ಪೋಷಕರು ಎಚ್ಚರಿಕೆ ವಹಿಸುವುದು ಸೂಕ್ತ!!

ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ ಮೂಲಕ ಏನೇನು ಮಾಡುತ್ತಾರೆ ಎಂದು ತಿಳಿದುಕೊಳ್ಳಿ. ಮಕ್ಕಳು ಬ್ಲೂವೇಲ್‌ಗೆ ಆಕರ್ಷಿತರಾಗುವ ಮೊದಲೇ ಮಕ್ಕಳಿಗೆ ಈ ಬ್ಲೂವೇಲ್ ಬಗ್ಗೆ ಮಾಹಿತಿ ನೀಡಿ. ಇವೆಲ್ಲವುಕ್ಕಿಂತ ಮುಂಚೆ ನಿಮ್ಮ ಮಕ್ಕಳಿಗೆ ನಿಮ್ಮ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿ.!!

ಓದಿರಿ:ನಿಮ್ಮ ಹಳೆ ಫೋನ್, ಎಲೆಕ್ಟ್ರಾನಿಕ್ಸ್‌ ವಸ್ತುಗಳಲ್ಲಿ ಚಿನ್ನ!!..ಬಂದಿದೆ ಬಾರಿ ಬೆಲೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Madurai teen hangs himself, leaves note saying 'you can't exit once you enter'to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot