ಬೋಟ್‌ ಕಂಪೆನಿಯಿಂದ ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ! ವಿಶೇಷತೆ ಏನು?

|

ಟೆಕ್‌ ವಲಯದಲ್ಲಿ ಬೋಟ್‌ ಕಂಪೆನಿ ವಿಭಿನ್ನ ಶ್ರೇಣಿಯ ಗ್ಯಾಜೆಟ್ಸ್‌ಗಳ ಮೂಲಕ ಗುರುತಿಸಿಕೊಂಡಿದೆ. ವಿಶೇಷವಾಗಿ ಸ್ಮಾರ್ಟ್‌ ವೆರಿಯೆಬಲ್ಸ್‌ ಡಿವೈಸ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಎಕ್ಸ್‌ಟೆಂಡ್‌ ಟಾಕ್‌ ಎಂಬ ಹೊಸ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಹೆಸರೇ ಸೂಚಿಸುವಂತೆ ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲ್‌ ಅನ್ನು ಬೆಂಬಲಿಸಲಿದೆ. ನಿಮ್ಮ ಫೋನ್‌ ಅನ್ನು ಟಚ್‌ ಮಾಡದೆಯೇ ಕಾಲ್‌ ರಿಸೀವ್‌ ಮಾಡುವುದಕ್ಕೆ ಇದರಿಂದ ಸಾಧ್ಯವಾಗಲಿದೆ.

ಬೋಟ್‌

ಹೌದು, ಬೋಟ್‌ ಕಂಪೆನಿ ಭಾರತದಲ್ಲಿ ಹೊಸ ಎಕ್ಸ್‌ಟೆಂಡ್‌ ಟಾಕ್‌ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಯುವಜನತೆಯ ಆಶಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ಸ್ಪೀಕರ್‌ ಮತ್ತು ಮೈಕ್ರೋಫೋನ್‌ ಅನ್ನು ಕೂಡ ನೀಡಲಾಗಿದ್ದು, ಸ್ಪಷ್ಟ ಧ್ವನಿಯನ್ನು ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು? ಇದರ ಫೀಚರ್ಸ್‌ ಹೇಗಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಎಕ್ಸ್‌ಟೆಂಡ್‌

ಬೋಟ್‌ ಎಕ್ಸ್‌ಟೆಂಡ್‌ ಟಾಕ್‌ ಸ್ಮಾರ್ಟ್‌ವಾಚ್‌ 1.69 ಇಂಚಿನ ಟಚ್‌ಸ್ಕ್ರೀನ್ 2.5D ಡಿಸ್‌ಪ್ಲೇ ಹೊಂದಿದೆ. ಇದು ಹೆಚ್‌ಡಿ ರೆಸಲ್ಯೂಶನ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಹೆಲ್ತ್‌ ಫಿಟ್ನೆಸ್‌ ಆಧಾರಿತ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಫಿಟ್‌ನೆಸ್‌ಗಾಗಿ, 60 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಜೊತೆಗೆ ಆಟೋ-ಡಿಟೆಕ್ಷನ್‌ ಬೆಂಬಲವನ್ನು ಪಡೆದಿದೆ. ಅಂದರೆ ಸ್ಮಾರ್ಟ್‌ವಾಚ್‌ ನಿಮ್ಮ ವ್ಯಾಯಾಮವನ್ನು ಸ್ವಯಂಚಾಲಿತವಾಗಿ ನಿರ್ಧರಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಸಂಬಂಧಿತ

ಇನ್ನು ಆರೋಗ್ಯ-ಸಂಬಂಧಿತ ಫೀಚರ್ಸ್‌ಗಳಲ್ಲಿ ಹೃದಯ ಬಡಿತದ ಮೇಲ್ವಿಚಾರಣೆ, ನಿದ್ರೆಯ ಟ್ರ್ಯಾಕಿಂಗ್, ರಕ್ತದ ಆಮ್ಲಜನಕದ ಮಟ್ಟ (SpO2) ಮಾನಿಟರಿಂಗ್ ಮತ್ತು VO2 ಮ್ಯಾಕ್ಸ್ ಮಾನಿಟರಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್ ವಾಚ್‌ನಲ್ಲಿ ಕ್ಯಾಲೋರಿ ಮತ್ತು ಸ್ಟೆಪ್ಸ್ ಕೌಂಟರ್ ಅನ್ನು ಕೂಡ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಅನ್ನು ನೀವು ವರ್ಕ್ ಔಟ್ ಮಾಡುವಾಗ, ಓಡುವಾಗ ಅಥವಾ ಈಜುವಾಗಲೂ ಕೂಡ ಧರಿಸಬಹುದು. ಏಕೆಂದರೆ ಇದು ನೀರಿನ ಸ್ಪ್ಲಾಶ್ ಪ್ರತಿರೋಧವನ್ನು ಒದಗಿಸುವ IP68 ಪ್ರಮಾಣೀಕರಣವನ್ನು ಹೊಂದಿದೆ.

ಎಕ್ಸ್‌ಟೆಂಡ್‌

ಬೋಟ್‌ ಎಕ್ಸ್‌ಟೆಂಡ್‌ ಸ್ಮಾರ್ಟ್‌ವಾಚ್‌ ಫಿಟ್‌ನೆಸ್ ಮತ್ತು ಆರೋಗ್ಯ ಟ್ರ್ಯಾಕಿಂಗ್, ಅಲಾರಾಂ ಗಡಿಯಾರ, ನಿದ್ರೆ ಟ್ರ್ಯಾಕಿಂಗ್ ಮತ್ತು ಅಧಿಸೂಚನೆಗಳಿಗೆ ಬೆಂಬಲದಂತಹ ಎಲ್ಲಾ ಪ್ರಮಾಣಿತ ಫೀಚರ್ಸ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕಲರ್‌ ಡಿಸ್‌ಪ್ಲೇ ಮತ್ತು ಸಿಲಿಕೋನ್ ಪಟ್ಟಿಯನ್ನು ಹೊಂದಿದ್ದು, ಹಲವು ಆಯ್ಕೆಯ ಬಣ್ಣಗಳಲ್ಲಿ ಬರುತ್ತದೆ. ಆದ್ದರಿಂದ ನಿಮ್ಮ ಆಯ್ಕೆಯ ಬಣ್ಣದ ಸ್ಮಾರ್ಟ್‌ವಾಚ್‌ ಅನ್ನು ಖರೀದಿಸಬಹುದಾಗಿದೆ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 10 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಆದರೆ ನೀವು ಇದರಲ್ಲಿ ಸಾಕಷ್ಟು ಕರೆಗಳನ್ನು ಮಾಡಿದರೆ, ರನ್‌ಟೈಮ್ ಸುಮಾರು ಎರಡು ದಿನಗಳವರೆಗೆ ಕಡಿಮೆಯಾಗುತ್ತದೆ ಎಂದು ಬೋಟ್‌ ಕಂಪೆನಿ ಹೇಳಿಕೊಂಡಿದೆ. ಪ್ರಸ್ತುತ ಸ್ಮಾರ್ಟ್‌ವಾಚ್‌ ಭಾರತದಲ್ಲಿ 2,999ರೂ. ಬೆಲೆ ಹೊಂದಿದೆ. ಇದು ಪಿಚ್ ಬ್ಲಾಕ್, ಚೆರ್ರಿ ಬ್ಲಾಸಮ್ ಮತ್ತು ಟೀಮ್ ಗ್ರೀನ್ ಬಣ್ಣಗಳಲ್ಲಿ ಬರುತ್ತದೆ ಮತ್ತು ಅಮೆಜಾನ್ ಮತ್ತು ಇತರ ಪ್ರಮುಖ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ.

ಬೋಟ್‌

ಇದಲ್ಲದೆ ಬೋಟ್‌ ಕಂಪೆನಿ ಭಾರತದ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಂದರೆ 2Q22 ನಲ್ಲಿ 34.3% ಮಾರುಕಟ್ಟೆ ಪಾಲನ್ನು ಪಡೆದಿದೆ. ಇದು ವರ್ಷದಿಂದ ವರ್ಷಕ್ಕೆ 76.6% ಬೆಳವಣಿಗೆ ಸಾಧಿಸಿದೆ. ಇದು ಇಯರ್‌ವೇರ್ ಡಿವೈಸ್‌ಗಳ ಮೇಲೆ ಕೇಂದ್ರೀಕರಿಸಿದೆ. ಅದರಂತೆ TWS ನಲ್ಲಿ 42.8% ಪಾಲನ್ನು ಹೊಂದಿದೆ.

Best Mobiles in India

Read more about:
English summary
BoAt Compony has launched a new smartwatch called the Extend Talk in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X