ಬೋಟ್‌ನಿಂದ ಅತಿ ಕಡಿಮೆ ಬೆಲೆಯಲ್ಲಿ ಆಕರ್ಷಕ ಸ್ಮಾರ್ಟ್‌ವಾಚ್‌ ಲಾಂಚ್‌! ಫೀಚರ್ಸ್‌ ಹೇಗಿದೆ?

|

ಸ್ಮಾರ್ಟ್‌ವಾಚ್‌ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಭಾರತದಲ್ಲಿ ಸ್ಮಾರ್ಟ್‌ವಾಚ್‌ ಡಿವೈಸ್‌ಗಳ ಆರ್ಭಟ ಜೋರಾಗಿದೆ. ಹಲವು ಕಾರ್ಯಗಳನ್ನು ಮಾಡಬಲ್ಲ ಸ್ಮಾರ್ಟ್‌ವಾಚ್‌ಗಳು ಈ ಜಮಾನದ ಹಾಟ್‌ಫೇವರಿಟ್‌ ಆಗಿವೆ. ಇದರಲ್ಲಿ ಬೋಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಕೂಡ ಸೇರಿವೆ. ಇನ್ನು ಬೋಟ್‌ ಕಂಪೆನಿ ಈಗಾಗಲೇ ಅನೇಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದ್ದು, ಇದೀಗ ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಬೆಂಬಲಿಸಲಿದೆ.

ಸ್ಮಾರ್ಟ್‌ವಾಚ್‌

ಹೌದು, ಬೋಟ್‌ ಕಂಪೆನಿ ಭಾರತದಲ್ಲಿ ಹೊಸ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲ್‌ ಬೆಂಬಲಿಸಲಿದ್ದು, ಇನ್‌ಬಿಲ್ಟ್‌ ಸ್ಪೀಕರ್‌ ಮತ್ತು ಮೈಕ್ರೋಫೋನ್‌ ಸಹಾಯದಿಂದ ಡೈರೆಕ್ಟ್‌ ಆಗಿ ಕಾಲ್‌ ರಿಸೀವ್‌ ಮಾಡಲು ಅವಕಾಶ ನೀಡಲಿದೆ. ಸದ್ಯ ಈ ಹೊಸ ಬೋಟ್‌ ಸ್ಮಾರ್ಟ್ ವಾಚ್ ಇದೀಗ ಆನ್‌ಲೈನ್ ಸ್ಟೋರ್‌ ಮೂಲಕ ಖರೀದಿಸಲು ಲಭ್ಯವಿದೆ. ಆದರೆ ಆಫ್‌ಲೈನ್ ಮಾರಾಟ ಇನ್ನೂ ಪ್ರಾರಂಭವಾಗಿಲ್ಲ. ಹಾಗಾದ್ರೆ ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೋಟ್ ವೇವ್ ಎಲೆಕ್ಟ್ರಾ ಫೀಚರ್ಸ್‌ ಹೇಗಿದೆ?

ಬೋಟ್ ವೇವ್ ಎಲೆಕ್ಟ್ರಾ ಫೀಚರ್ಸ್‌ ಹೇಗಿದೆ?

ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ 1.81 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಹೆಚ್‌ಡಿ ರೆಸಲ್ಯೂಶನ್ ಮತ್ತು 550 ನಿಟ್ಸ್‌ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅಲ್ಯೂಮಿನಿಯಂ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ. ಜೊತೆಗೆ ಸ್ಮಾರ್ಟ್‌ವಾಚ್‌ IP68 ಪ್ರಮಾಣೀಕರಿಸಿದ ವಾಟರ್‌ ಮತ್ತು ಡಸ್ಟ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಅಂದರೆ ನೀವು ಈ ಸ್ಮಾರ್ಟ್‌ವಾಚ್‌ ಧರಿಸಿಕೊಂಡು ಸ್ನಾನ್‌ ಮಾಡಬಹುದು, ಅಲ್ಲದೆ ಸ್ವಿಮ್ಮಿಂಗ್‌ ಕೂಡ ಮಾಡಬಹುದಾಗಿದೆ.

ಬೋಟ್‌

ಇನ್ನು ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ ಫೀಚರ್ಸ್‌ಗಳಲ್ಲಿ ಹೈಲೈಟ್‌ ಅಂದರೆ ಇದರ ಬ್ಲೂಟೂತ್ ಕಾಲ್‌ ಫೀಚರ್ಸ್‌ ಆಗಿದೆ. ಏಕೆಂದರೆ ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಡಿವೈಸ್‌ಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ನೀವು 50 ಕಂಟ್ಯಾಕ್ಟ್‌ಗಳನ್ನು ಸ್ಟೋರೇಜ್‌ ಮಾಡಬಹುದು.. ಅಲ್ಲದೆ ನೇರವಾಗಿ ನಿಮ್ಮ ಸಂಪರ್ಕಗಳಿಗೆ ಕರೆ ಮಾಡುವುದಕ್ಕೆ ಡಯಲ್‌ಪ್ಯಾಡ್‌ ಅನ್ನು ಬಳಸಬಹುದಾಗಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡರಲ್ಲೂ ಕಾರ್ಯನಿರ್ವಹಿಸುತ್ತಿರುವುದರಿಂದ ನೀವು ಗೂಗಲ್‌ ಅಸಿಸ್ಟೆಂಟ್‌ ಮತ್ತು ಆಪಲ್‌ ಸಿರಿಯನ್ನು ಬಳಸಬಹುದಾಗಿದೆ. ಈ ಮೂಲಕ ಡಿಜಿಟಲ್‌ ಅಸಿಸ್ಟೆಂಟ್‌ ಅನ್ನುಸಮರ್ಪಕವಾಗಿ ಬಳಸುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಗೇಮ್‌ಗಳಿಗೆ ಕೂಡ ಅವಕಾಶವನ್ನು ನೀಡಲಿದೆ. ಇದರಲ್ಲಿ Whack-A-Mole.oaboat ಸೇರಿದಂತೆ ಹಲವು ಗೇಮ್‌ಗಳನ್ನು ನೀಡಲಾಗಿದೆ.

ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌

ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ನಲ್ಲಿ ರನ್ನಿಂಗ್‌, ಸೈಕ್ಲಿಂಗ್, ಜಂಪಿಂಗ್ ಮತ್ತು ಎಲಿಪ್ಟಿಕಲ್ ಸೇರಿದಂತೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ಹಾರ್ಟ್‌ಬೀಟ್‌ ಮಾನಿಟರ್‌, SpO2 ಮಾನಿಟರ್ ಮತ್ತು ಸ್ಲೀಪ್ ಟ್ರ್ಯಾಕರ್ ಅನ್ನು ಕೂಡ ನೀಡಲಾಗಿದೆ. ಇದರಲ್ಲಿ ನೀವು ಡೈಲಿ ಆಕ್ಟಿವಿಟಿ ಟ್ರ್ಯಾಕರ್, ಉಸಿರಾಟದ ಟ್ರೈನಿಂಗ್‌ ಮತ್ತು ಹೈಡ್ರೇಶನ್‌ ಆಲರ್ಟ್‌ ಅನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಸ್ಕ್ವೇರ್‌ ಡಯಲ್‌ ಅನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 7 ದಿನಗಳವರೆಗೆ ಮತ್ತು ಬ್ಲೂಟೂತ್ ಕರೆಗೆ ಬಳಸಿದಾಗ 2 ದಿನಗಳವರೆಗಿನ ಬ್ಯಾಟರಿ ಬಾಳಿಕೆ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,799ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ ಮತ್ತು ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್ ವಾಚ್‌ನ ಫಸ್ಟ್‌ ಸೇಲ್‌ ಅಮೆಜಾನ್‌ ಮೂಲಕ ಇದೇ ಡಿಸೆಂಬರ್ 24 ರಿಂದ ಪ್ರಾರಂಭವಾಗಲಿದೆ.

Best Mobiles in India

English summary
boAt Wave Electra Bluetooth calling smartwatch launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X