ಭಾರತದಲ್ಲಿ ಬೌಲ್ಟನ ರೋವರ್ ಸ್ಮಾರ್ಟ್‌ವಾಚ್ ಅನಾವರಣ; 10 ದಿನದ ಬ್ಯಾಟರಿ ಬ್ಯಾಕ್‌ಅಪ್‌

|

ಬೌಲ್ಟ್ ಕಂಪೆನಿಯು ಆಡಿಯೋ ಡಿವೈಸ್‌ಗಳು ಹಾಗೂ ಸ್ಮಾರ್ಟ್‌ವಾಚ್‌ಗಳನ್ನು ಅತ್ಯಾಕರ್ಷಕ ಫೀಚರ್ಸ್‌ ಜೊತೆಗೆ ಅಗ್ಗದ ದರದಲ್ಲಿ ಮಾರುಕಟ್ಟೆಗೆ ಪರಿಚಯಿಸಿ ಜನಮನ್ನಣೆ ಗಳಿಸಿಕೊಂಡಿದೆ. ಹಾಗೆಯೇ ಮಾರುಕಟ್ಟೆಯಲ್ಲಿ ಈ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಆಕರ್ಷಕವಾಗಿದ್ದು, ಈ ವಾಚ್‌ಗಳ ಸಾಲಿಗೆ ಮತ್ತೊಂದು ಹೊಸ ವಾಚ್‌ ಸೇರ್ಪಡೆಗೊಳ್ಳಲಿದೆ. ಈ ಹೊಸ ವಾಚ್‌ 1.3 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ.

ಬೌಲ್ಟ್ ರೋವರ್

ಹೌದು, ಬೌಲ್ಟ್ ರೋವರ್ 1.3 ಸ್ಮಾರ್ಟ್‌ವಾಚ್‌ ಅನ್ನು ಬೌಲ್ಟ್‌ ಕಂಪೆನಿಯು ಅನಾವರಣ ಮಾಡಿದೆ. ಇನ್ನು ಬೌಲ್ಟ್ ಇತ್ತೀಚೆಗೆ ಡ್ರಿಫ್ಟ್, ಕಾಸ್ಮಿಕ್ ಮತ್ತು ರಿಡ್ಜ್ ಸೇರಿದಂತೆ ಮೂರು ಸ್ಮಾರ್ಟ್ ವಾಚ್‌ಗಳನ್ನು ಲಾಂಚ್ ಮಾಡಿತ್ತು. ಇದಾದ ಕೆಲವೇ ವಾರದಲ್ಲಿ ಈ ಹೊಸ ವಾಚ್‌ ಲಾಂಚ್‌ ಆಗಿರುವುದು ವಿಶೇಷ . ಈ ಸ್ಮಾರ್ಚ್‌ವಾಚ್‌ ಬ್ಲೂಟೂತ್ ಕಾಲ್‌ ಫೀಚರ್ಸ್‌, 600nits ಬ್ರೈಟ್‌ಬೆಸ್‌ ಹೊಳಪನ್ನು ನೀಡುತ್ತದೆ. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪ್ರಮುಖ ಫಿಚರ್ಸ್‌

ಪ್ರಮುಖ ಫಿಚರ್ಸ್‌

ಈ ಹೊಸ ಸ್ಮಾರ್ಟ್‌ವಾಚ್‌ 1.3 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 600nits ಬ್ರೈಟ್‌ನೆಸ್‌ ನೀಡಲಿದೆ. ಇದರೊಂದಿಗೆ ಸುಮಾರು 150 ಕ್ಲೌಡ್ ವಾಚ್ ಫೆಸ್‌ ಆಯ್ಕೆ ಇರುವುದು ವಿಶೇಷ. ಹಾಗೆಯೇ ಡಿವೈಸ್‌ನ ಎರಡೂ ಬದಿಗಳಲ್ಲಿ ಎರಡು ಭೌತಿಕ ಬಟನ್‌ಗಳನ್ನು ಹೊಂದಿದ್ದು, ಅವು ನ್ಯಾವಿಗೇಷನ್‌ಗೆ ಸಹಾಯ ಮಾಡುತ್ತದೆ. ಜೊತೆಗೆ ಈ ವಾಚ್‌ನ ಬಾಡಿಯನ್ನು ಸತು ಮಿಶ್ರಲೋಹದಿಂದ ತಯಾರಿಸಲಾಗಿದೆ. ಹೀಗಾಗಿ ಇದು ಬಜೆಟ್‌ ಬೆಲೆಯ ಸ್ಮಾರ್ಟ್‌ವಾಚ್‌ ಆದರೂ ಪ್ರೀಮಿಯಂ ನೋಟ ಹೊಂದಿದೆ.

ಕಾಲಿಂಗ್

ಈ ವಾಚ್‌ ಬ್ಲೂಟೂತ್ ಕಾಲಿಂಗ್ ಫೀಚರ್ಸ್‌ ಹೊಂದಿದ್ದು, ಕಡಿಮೆ ವಿದ್ಯುತ್ ಬಳಕೆ ಫೀಚರ್ಸ್‌ ಆಯ್ಕೆ ಸಹ ಇರುವುದು ಬಳಕೆದಾರರಿಗೆ ವಿಭಿನ್ನ ಅನುಭವ ನೀಡುತ್ತದೆ. ಇದರೊಂದಿಗೆ ಸ್ಥಿರವಾದ ಕರೆಯನ್ನು ಖಚಿತಪಡಿಸಿಕೊಳ್ಳಲು ಸಿಂಗಲ್‌ ಚಿಪ್ ಅನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ ಹೃದಯ ಬಡಿತದ ಸೆನ್ಸರ್‌, SpO2 ಸೆನ್ಸರ್, ನಿದ್ರೆ ಟ್ರ್ಯಾಕರ್ ಸೇರಿದಂತೆ ಇನ್ನೂ ಹತ್ತು ಹಲವಾರು ಆರೋಗ್ಯ ಸಂಬಂಧಿ ಮಾಹಿತಿಯನ್ನು ಟ್ರ್ಯಾಕ್‌ ಮಾಡುತ್ತದೆ.

ಈಜು

ಇದಿಷ್ಟೇ ಅಲ್ಲದೆ ಓಟ, ಈಜು, ನಡಿಗೆ, ಯೋಗ, ರೋಪ್ ಸ್ಕಿಪ್ಪಿಂಗ್ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆಗಳನ್ನು ಪತ್ತೆಹಚ್ಚಲು ರೋವರ್ ಸ್ಮಾರ್ಟ್‌ವಾಚ್ ಸುಮಾರು 100 ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಹೊಂದಿದ್ದು, ಬಳಕೆದಾರರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಹಾಗೆಯೇ ಈ ವಾಚ್‌ನಲ್ಲಿ ನೋಟಿಫಿಕೇಶನ್ ಅನ್ನು ಸಹ ವೀಕ್ಷಿಸಬಹುದಾಗಿದೆ ಮತ್ತು ಕೆಲವೊಂದು ನಿಯಂತ್ರಣಕ್ಕೆ ವಾಯ್ಸ್‌ ಕಂಟ್ರೋಲ್‌ ಫೀಚರ್ಸ್‌ ಸಹ ನೀಡಲಾಗಿದೆ. ಇಷ್ಟೆಲ್ಲಾ ಫೀಚರ್ಸ್‌ ಜೊತೆಗೆ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಸಹ ಹೊಂದಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಹೊಸ ಸ್ಮಾರ್ಟ್‌ವಾಚ್‌ 10 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಇದರೊಂದಿಗೆ ಈ ವಾಚ್‌ ಅನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಲು ಸುಮಾರು 2.5 ಗಂಟೆ ಸಮಯ ನೀಡಬೇಕಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಬೌಲ್ಟ್ ರೋವರ್ ಸ್ಮಾರ್ಟ್ ವಾಚ್ ಅನ್ನು ಭಾರತದಲ್ಲಿ ಕೊಡುಗೆ ಬೆಲೆಯಾಗಿ 2,999 ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ವಾಚ್‌ ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಇದರಲ್ಲಿ ಒಂದು ಕ್ಲಾಸಿಕ್ ಸ್ವಿಚ್ ಆವೃತ್ತಿಯು ಚರ್ಮದ ಕಂದು ಪಟ್ಟಿಯನ್ನು ಹೊಂದಿರಲಿದೆ , ಮತ್ತೊಂದು ಫ್ಲಿಪ್ ಆವೃತ್ತಿಯಲ್ಲಿ ಕಪ್ಪು, ನೀಲಿ ಮತ್ತು ಹಸಿರು ಪಟ್ಟಿಯ ಬಣ್ಣಗಳಲ್ಲಿ ಇರುತ್ತದೆ. ಈ ಎರಡೂ ಪಟ್ಟಿಯನ್ನೂ ಸಹ ಉಚಿತವಾಗಿ ನೀಡಲಾಗುತ್ತದೆ. ಈ ವಾಚ್‌ ಅನ್ನು ಈಗ ಕಂಪೆನಿಯ ವೆಬ್‌ಸೈಟ್ ಹಾಗೂ ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Boult Audio launched Affordable Rover Smartwatch in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X