ಭಾರತ-ಚೀನಾ ಸಂಘರ್ಷ: ಚುರುಕು ಪಡೆದ ಬಾಯ್ಕಟ್ ಚೀನಾ ಅಭಿಯಾನ!

|

ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ. ಆದ್ರೆ ಕೊರೊನಾ ವೈರಸ್ ಉಗಮ ಸ್ಥಾನವಾಗಿರುವ ಚೀನಾ ಭಾರತದೊಂದಿಗೆ ಗಡಿಯಲ್ಲಿ ಕ್ಯಾತೆ ತೆಗೆದಿದೆ. ಭಾರತದಲ್ಲಿ ಈಗಾಗಲೇ ಬಾಯ್ಕಟ್ ಚೀನಾ ಅಭಿಯಾನ ನಡೆಯುತ್ತಿದೆ. ಗಾಲ್ವನ್ ಗಡಿಯಲ್ಲಿ ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಣೆ ನಡೆದಿದ್ದು, ಈ ಹಿನ್ನಲೆಯಲ್ಲಿ ದೇಶದಲ್ಲಿ ಬಾಯ್ಕಟ್ ಚೀನಾ ಅಭಿಯಾನ ಮತ್ತಷ್ಟು ಚುರುಕು ಪಡೆದುಕೊಂಡಿದೆ.

ಮೇಡಿ ಇನ್ ಚೀನಾ

ಹೌದು, ಭಾರತದಲ್ಲಿ ಮೇಡಿ ಇನ್ ಚೀನಾ ವಸ್ತುಗಳ ಬಳಕೆಯನ್ನು ನಿಲ್ಲಿಸುವ ಅಭಿಯಾನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯರು ಚೀನಾ ಮೂಲದ ಉತ್ಪನ್ನಗಳು ಯಾವುವು ಎಂಬ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಸದ್ಯ ಲಡಾಖ್‌ನ ಗಾಲ್ವನ್ ಗಡಿಯಲ್ಲಿ ಉಭಯ ದೇಶಗಳ ಸೇನೆಗಳ ನಡುವಿನ ಸಂಘರ್ಷ ಆದ ಬಳಿಕ ಗೂಗಲ್‌ನಲ್ಲಿ ಚೀನಾ ಉತ್ಪನ್ನಗಳು, ಚೀನಾ ಆಪ್‌ಗಳು ಯಾವುವು ಎಂಬ ಹುಡುಕಾಟ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತಿವೆ.

ಅಪ್ಲಿಕೇಶನ್‌ಗಳ ಲಿಸ್ಟ್

ಭಾರತದಲ್ಲಿ ಬಳಸುವ ಚೀನೀ ಉತ್ಪನ್ನಗಳು ಯಾವುವು, ಚೀನಾ ಮೂಲದ ಅಪ್ಲಿಕೇಶನ್‌ಗಳ ಲಿಸ್ಟ್ ಮಾಹಿತಿಯನ್ನು ತಿಳಿಯಲು ಗೂಗಲ್‌ ಸರ್ಚ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಹಾಗೆಯೇ ಭಾರತದಲ್ಲಿ ಬಳಸುವ ಚೀನಾ ಉತ್ಪನ್ನಗಳಿಗೆ ಪರ್ಯಾಯ ಉತ್ಪನ್ನಗಳು ಯಾವುವು, ಚೀನಾ ಆಪ್ಸ್‌ಗಳಿಗೆ ಪರ್ಯಾಯ ಆಪ್ಸ್‌ಗಳು ಯಾವುವು ಎಂಬ ಬಗ್ಗೆಯೂ ಭಾರತೀಯರು ಗೂಗಲ್ ಸರ್ಚ್ ಮಾಡಿದ್ದಾರೆ. List of Chinese apps, List of Chinese apps in India, List of Chinese products used in India, Alternative to Chinese Products ಹೆಚ್ಚು ಸರ್ಚ್ ನಡೆಸಿದ ಕೀ ವರ್ಡ್ಸ್ ಗಳಾಗಿವೆ.

ಬಾಯ್ಕಟ್ ಚೀನಾ

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಇಂದಿನದಲ್ಲ. ಆದರೆ ಕೊರೊನಾ ನಂತರದ ಇತ್ತೀಚಿನ ದಿನಗಳಲ್ಲಿ ಬಾಯ್ಕಟ್ ಚೀನಾ ಅಭಿಯಾನ ಮುನ್ನೆಲೆಗೆ ಬಂದಿದೆ. ಈ ಹಿನ್ನಲೆಯಲ್ಲಿ ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ #BoycottChina, #BoycottMadeinChina, #BoycottChineseApps ಮತ್ತು #BoycottTiktok ಹ್ಯಾಶ್‌ಟ್ಯಾಗ್‌ಗಳು ಹೆಚ್ಚು ಟ್ರೆಂಡಿಂಗ್‌ ಆಗಿವೆ.

ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್

ಈ ನಡುವೆ ಭಾರತೀಯರು ಬಹಿಷ್ಕರಿಸಬೇಕಾದ 500 ಕ್ಕೂ ಹೆಚ್ಚು ‘ಮೇಡ್ ಇನ್ ಚೀನಾ' ಉತ್ಪನ್ನಗಳ ಪಟ್ಟಿಯನ್ನು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಬಿಡುಗಡೆ ಮಾಡಿದೆ. ಈ ಸಂಸ್ಥೆಯು ಮಾಡಿರುವ ಪಟ್ಟಿಯಲ್ಲಿ ಆಟಿಕೆಗಳು, ಬಟ್ಟೆಗಳು, ಜವಳಿ, ಉಡುಪು, ದೈನಂದಿನ ವಸ್ತುಗಳು, ಅಡಿಗೆ ವಸ್ತುಗಳು, ಪೀಠೋಪಕರಣಗಳು, ಯಂತ್ರಾಂಶ, ಪಾದರಕ್ಷೆಗಳು, ಕೈಚೀಲಗಳು, ಸಾಮಾನುಗಳು, ಎಲೆಕ್ಟ್ರಾನಿಕ್ಸ್, ಸೌಂದರ್ಯವರ್ಧಕಗಳು ಮತ್ತು ಉಡುಗೊರೆ ವಸ್ತುಗಳು, ಎಲೆಕ್ಟ್ರಾನಿಕ್ಸ್, ಕೈಗಡಿಯಾರಗಳು, ರತ್ನಗಳು ಮತ್ತು ಆಭರಣಗಳು, ಲೇಖನ ಸಾಮಗ್ರಿಗಳು, ಕಾಗದ, ಗೃಹೋಪಯೋಗಿ ವಸ್ತುಗಳು ಸೇರಿವೆ.

Best Mobiles in India

English summary
More and more Indians are searching on Google the list of Chinese products to 'boycott'

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X