ಭಾರತ್‌ ಗ್ಯಾಸ್‌ ಖರೀದಿಸುವವರಿಗೆ ಇಲ್ಲಿದೆ ಶುಭ ಸುದ್ದಿ!

|

ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗ್ತಿದೆ. ಇದೇ ಕಾರಣಕ್ಕೆ ಹಲವು ವಲಯಗಳಲ್ಲಿ ಡಿಜಿಟಲೀಕರಣವನ್ನು ಪರಿಚಯಿಸಲಾಗ್ತಿದೆ. ಇದರಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆ ಕೂಡ ಒಂದಾಗಿದೆ. ಈಗಾಗಲೇ ಅನೇಕ ವಲಯಗಳಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆ ಯಶಸ್ವಿಯಾಗಿದೆ. ಸದ್ಯ ಇದೀಗ ಭಾರತ್‌ ಪೆಟ್ರೋಲಿಯಂ ಕಾಪೋರೇಷನ್‌ ಲಿಮಿಟೆಡ್‌ ಕೂಡ ತನ್ನ ಭಾರತ್‌ ಗ್ಯಾಸ್‌ ಗ್ರಾಹಕರಿಗೆ ಧ್ವನಿ ಆಧಾರಿತ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಪರಿಚಯಿಸಿದೆ. ಇದಕ್ಕಾಗಿ ಅಲ್ಟ್ರಾಕ್ಯಾಶ್ ಟೆಕ್ನಾಲಜೀಸ್ ಎಂಬ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಕಾಪೋರೇಷನ್‌

ಹೌದು, ಭಾರತ್‌ ಪೆಟ್ರೋಲಿಯಂ ಕಾಪೋರೇಷನ್‌ ಲಿಮಿಟೆಡ್‌ ಭಾರತ್‌ ಗ್ಯಾಸ್‌ ಖರೀದಿಸುವ ಗ್ರಾಹಕರಿಗೆ ಹೊಸ ಸುದ್ದಿ ನೀಡಿದೆ. ಇನ್ಮುಂದೆ ಗ್ಯಾಸ್‌ ಖರೀದಿಸುವ ಗ್ರಾಹಕರು ತಮ್ಮ ಧ್ವನಿಯನ್ನು ಬಳಸಿಕೊಂಡು ತಮ್ಮ LPG ಸಿಲಿಂಡರ್‌ಗಳನ್ನು ಬುಕ್ ಮಾಡುವುದಕ್ಕೆ ಅವಕಾಶ ನೀಡಿದೆ. ಇದಲ್ಲದೆ ಇಂಟರ್ನೆಟ್ ಇಲ್ಲದ ಸಮಯದಲ್ಲೂ ಜನರು ತಮ್ಮ ಸಿಲಿಂಡರ್‌ಗಳನ್ನು ಸುಲಭವಾಗಿ ಬುಕ್ ಮಾಡಲು ಮತ್ತು UPI 123Pay ಬಳಸಿಕೊಂಡು ಡಿಜಿಟಲ್ ಆಗಿ ಪಾವತಿಸಲು ಅನುಮತಿಸಲು ಮುಂದಾಗಿದೆ. ಹಾಗಾದ್ರೆ ಭಾರತ್‌ ಪೆಟ್ರೋಲಿಯಂ ಕಾಪೋರೇಷನ್‌ ಲಿಮಿಟೆಡ್‌ನ ಹೊಸ ಪಾವತಿ ವ್ಯವಸ್ಥೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೆಟ್ರೋಲಿಯಂ

ಭಾರತ್‌ ಪೆಟ್ರೋಲಿಯಂ ಕಾಪೋರೇಷನ್‌ ಲಿಮಿಟೆಡ್‌ ತನ್ನ ಗ್ರಾಹಕರಿಗೆ ಧ್ವನಿ ಆಧಾರಿತ ಡಿಜಿಟಲ್‌ ಪಾವತಿ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಇನ್ಮುಂದೆ ಕೇವಲ ವಾಯ್ಸ್‌ ಕಾಲ್‌ ಮೂಲಕವೇ ಹಣಪಾವತಿಸಬಹುದಾಗಿದೆ. ಇದು ಹೊಸ ಡಿಜಿಟಲ್‌ ಕ್ರಾಂತಿಯನ್ನು ಬರೆಯಲಿದೆ ಎಂದೇ ಅಂದಾಜಿಸಲಾಗಿದೆ. ಅಲ್ಲದೆ ಈ ವಾಯ್ಸ್‌ ಕಾಲ್‌ ಪಾವತಿಯನ್ನು ಇಂಟರ್‌ನೆಟ್‌ ಇಲ್ಲದೆ ಹೋದರೂ ಕೂಡ ನಡೆಸಬಹುದಾಗಿದೆ. ಇದಕ್ಕಾಗಿ ಆರ್‌ಬಿಐ ಕೆಲ ದಿನಗಳ ಹಿಂದೆ ಪರಿಚಯಿಸಿರುವ UPI 123Pay ಪಾವತಿ ವಿಧಾನವನ್ನು ಬಳಸಿಕೊಳ್ಳಲು ಮುಂದಾಗಿದೆ. ಇದರಿಂದ ಭಾರತ್ ಗ್ಯಾಸ್ ನ ಸುಮಾರು 4 ಕೋಟಿ ಗ್ರಾಹಕರು ಪ್ರಯೋಜನ ಪಡೆಯಬಹುದು ಎನ್ನಲಾಗಿದೆ. ಇನ್ನು RBI ಗವರ್ನರ್ ಪರಿಚಯಿಸಿರು UPI 123PAY ಅನ್ನು ಬಳಸುತ್ತಿರುವ ಮೊದಲ ಕಂಪನಿ ಭಾರತ್‌ ಪೆಟ್ರೋಲಿಯಂ ಕಾಪೋರೇಷನ್‌ ಲಿಮಿಟೆಡ್‌(BPCL) ಆಗಿದೆ. ಇದಕ್ಕಾಗಿ BPCL ಅಲ್ಟ್ರಾಕ್ಯಾಶ್ ಜೊತೆಗೆ ಪಾಲುದಾರಿಕೆ ಹೊಂದಿದೆ. ಇದು ಮೊಬೈಲ್ ಪಾವತಿ ಅಪ್ಲಿಕೇಶನ್ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ ಮತ್ತು ಅಧಿಕೃತಗೊಳಿಸಿದೆ.

ಅಲ್ಟ್ರಾ ಕ್ಯಾಶ್ ಬಳಸಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?

ಅಲ್ಟ್ರಾ ಕ್ಯಾಶ್ ಬಳಸಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?

ಭಾರತ್ ಗ್ಯಾಸ್ ಗ್ರಾಹಕರು ಇಂಟರ್‌ನೆಟ್‌ ಇಲ್ಲದೆ ಹೋದರು ಕೂಡ ಸಿಲಿಂಡರ್‌ ಬುಕ್‌ ಮಾಡಬಹುದಾಗಿದೆ. ಇದಕ್ಕಾಗಿ ಅಲ್ಟ್ರಾಕ್ಯಾಶ್‌ ಅನ್ನು ಬಳಸಬಹುದಾಗಿದೆ. ಇದಕ್ಕಾಗಿ ನೀವು ಫೋನ್‌ನಿಂದ ಸಾಮಾನ್ಯ ಸಂಖ್ಯೆ 08045163554 ಗೆ ಕರೆ ಮಾಡಿ ಮತ್ತು ಭಾರತ್ ಗ್ಯಾಸ್ ಸಿಲಿಂಡರ್ ಬುಕ್‌ ಮಾಡಬಹುದಾಗಿದೆ. ಸದ್ಯ BPCL ಪ್ರಕಾರ, ಹಿಂದಿನ ತಿಂಗಳಲ್ಲಿ 13,000 ಕ್ಕೂ ಹೆಚ್ಚು ಭಾರತ್‌ಗ್ಯಾಸ್ ಗ್ರಾಹಕರು 1 ಕೋಟಿ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಿದ್ದಾರೆ. ಇದು ಮುಂದಿನ ಹನ್ನೆರಡು ತಿಂಗಳಲ್ಲಿ 100 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ಹೊಸ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಲಾಗ್ತಿದೆ.

ಅಲ್ಟ್ರಾಕ್ಯಾಶ್‌ನ

ಇನ್ನು ಇದೇ ಸಂದರ್ಭದಲ್ಲಿ ಅಲ್ಟ್ರಾಕ್ಯಾಶ್‌ನ ಸಹ-ಸಂಸ್ಥಾಪಕ ವಿಶಾಲ್ ಲಾಲ್, ಮುಂದಿನ ಗುಂಪಿನ ಗ್ರಾಹಕರನ್ನು ಡಿಜಿಟಲ್ ಕ್ರಾಂತಿಗೆ ತರುವ ಈ ಅದ್ಭುತ ಪ್ರಯಾಣದಲ್ಲಿ ನಾವು BPCL ಜೊತೆ ಪಾಲುದಾರರಾಗಲು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ. RBI ಮತ್ತು NPCI ಯ ಉಪಕ್ರಮವು ಗ್ರಾಹಕರಿಗೆ ಸರಳವಾದ ಧ್ವನಿ ಕರೆಯಲ್ಲಿ ಪಾವತಿಸಲು ಮತ್ತು ಬುಕ್ ಮಾಡಲು ಅನುಮತಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

Best Mobiles in India

Read more about:
English summary
BPCL company offer a voice-based digital payment feature to BharatGas consumers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X