ಸ್ಮಾರ್ಟ್‌ಫೋನ್‌ ಯುಗಕ್ಕೆ ಮುನ್ನುಡಿ ಬರೆದ ಮೊಬೈಲ್‌ಗಳಿವು; ಅಂದಿನ ಟ್ರೆಂಡ್‌ ಹೇಗಿತ್ತು?

|

ಇಂದು ಮಕ್ಕಳಿಗೆ ಲಾಲಿಹಾಡು ಬೇಕಿಲ್ಲ, ಸ್ಮಾರ್ಟ್‌ಫೋನ್‌ ಇದ್ದರೆ ಸಾಕು, ಬಸ್‌, ಟ್ರೈನ್‌, ವಿಮಾನದ ಟಿಕೆಟ್‌ಗೆ ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ, ಸ್ಮಾರ್ಟ್‌ಫೋನ್‌ ಒಂದಿದ್ದರೆ ಸಾಕು. ಹಾಗೆ ಇಂದು ಎಲ್ಲರೂ ಭೌತಿಕವಾಗಿ ಭೇಟಿಯಾಗುವ ಅವಶ್ಯಕತೆ ಇಲ್ಲ ಬದಲಾಗಿ ನಿಮ್ಮ ಬಳಿ ಒಂದು ಸ್ಮಾರ್ಟ್‌ ಇದ್ದರೆ ಸಾಕು. ಅರೇ ಏನಿದು ಈ ರೀತಿ ಸ್ಮಾರ್ಟ್‌ ಇದ್ದರೆ ಸಾಕು.. ಸಾಕು ಅಂತಾ ಇದ್ದಾರೆ ಅಂದುಕೊಳ್ಳಬೇಡಿ. ಇಂದಿನ ಈ ಪರಿಸ್ಥಿತಿಗೆ ಮುನ್ನುಡಿ ಬರೆದ ಮೊದಲ ಫೋನ್‌ಗಳ ಬಗ್ಗೆ ನಿಮಗೇನಾದರೂ ಗೊತ್ತಾ?, ಜಗತ್ತಿನಲ್ಲಿ ಅವು ಮಾಡಿದ ಬದಲಾವಣೆ ಏನು ಗೊತ್ತಾ?.

ಭಿನ್ನ ಫೀಚರ್ಸ್‌

ಹೌದು, ಇಂದಿನ ಕಾಲದಲ್ಲಿ ಹಲವಾರು ಕಂಪೆನಿಗಳು ವಿವಿಧ ರೀತಿಯ ಸ್ಮಾರ್ಟ್‌ಫೋನ್‌ ಗಳನ್ನು ಭಿನ್ನ ಫೀಚರ್ಸ್‌ ನೀಡಿ ಪರಿಚಯಿಸುತ್ತಿವೆ. ಆದರೆ, ನಮ್ಮ ಹಿಂದಿನ ಪೀಳಿಗೆ ಮೊದಲ ಬಾರಿಗೆ ಸೆಲ್‌ಫೋನ್‌ ಬಳಕೆ ಮಾಡಿದ್ದು ಯಾವಾಗ?, ಆ ವೇಳೆ ಸೆಲ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ಇದ್ದವು, ಮೊಬೈಲ್‌ ಅನ್ನು ಮೊದಲು ತಯಾರು ಮಾಡಿದ್ದು ಯಾರು ಎಂಬ ಬಗ್ಗೆ ಕುತೂಹಲ ಇದ್ದರೆ ಈ ಲೇಖನ ಓದಿ.

1973 ರ ಮೊದಲ ಸೆಲ್ ಫೋನ್ ವಿವರ ಇಲ್ಲಿದೆ ನೋಡಿ

1973 ರ ಮೊದಲ ಸೆಲ್ ಫೋನ್ ವಿವರ ಇಲ್ಲಿದೆ ನೋಡಿ

ಅರೇ 1973 ಕ್ಕೂ ಮೊದಲು ಫೋನ್‌ ಇದ್ದವಲ್ಲ ಎಂದು ನೀವು ಅಂದುಕೊಂಡರೆ ಖಂಡಿತಾ ಸತ್ಯ. ಈ ಮೊದಲು ಸಹ ಫೋನ್‌ಗಳು ಅಸ್ತಿತ್ವದಲ್ಲಿದ್ದವು. ಆದರೆ, ಈ ಫೋನ್‌ಗಳು ವೈರ್ಡ್ ಸಂಪರ್ಕದಿಂದ ಕೆಲಸ ಮಾಡುತ್ತಿದ್ದವು. ಇದರ ನಡುವೆ ಮೊಟರೊಲಾ ಸಂಸ್ಥೆಯಿಂದ ಮೊದಲ ಬಾರಿಗೆ ಡೈನಾಟಾಕ್ 8000 X ಎಂಬ ಡಿವೈಸ್‌ ಅನ್ನು ಪರಿಚಯಿಸಿತ್ತು. ಈ ಡಿವೈಸ್‌ ಒಂದು ಕೆಜಿಗೂ ಹೆಚ್ಚಿನ ತೂಕ ಹೊಂದಿದ್ದು, 30 ನಿಮಿಷಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತಿತ್ತು. ಪ್ರಮುಖ ವಿಷಯ ಏನೆಂದರೆ ಈ ಫೋನ್‌ ಹಲವು ವರ್ಷಗಳ ಬಳಿಕ ಸಾರ್ವಜನಿಕರ ಕೈ ಸೇರಿತು.

1983 ರಲ್ಲಿ ಸಾರ್ವಜನಿಕರು ಬಳಸಿದ ಫೋನ್‌ ಇದು

1983 ರಲ್ಲಿ ಸಾರ್ವಜನಿಕರು ಬಳಸಿದ ಫೋನ್‌ ಇದು

ಡೈನಾಟಾಕ್ 8000X ಸಾರ್ವಜನಿಕರಿಗೆ ಲಭ್ಯವಾಗಲು ಬರೋಬ್ಬರಿ ಹತ್ತು ವರ್ಷ ತೆಗೆದುಕೊಂಡಿತ್ತು. ಅಂದು ಅದರ ಬೆಲೆ 3,24,840 ರೂ. ಗಳು. ಆ ಬೆಲೆಯನ್ನು ಈ ಸಮಯಕ್ಕೆ ಹೋಲಿಕೆ ಮಾಡಿಕೊಂಡರೆ 11,38,363 ರೂ. ಗಳು. ಇದಾದ ಬಳಿಕ ನೋಕಿಯಾ ಕೂಡ ಮೊಟೊರೊಲಾ ಸಂಸ್ಥೆಗೆ ಸೆಡ್ಡು ಹೊಡೆದು 1987 ರಲ್ಲಿ ಮೊಬಿರಾ ಸಿಟಿಮ್ಯಾನ್ 900 ಎಂಬ ಫೋನ್‌ ಅನ್ನು ಲಾಂಚ್‌ ಮಾಡಿತು. ಈ ಫೋನ್‌ ಸಹ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಬೆಲೆ ಹೊಂದಿತ್ತು.

ಫೋನ್‌

ಇನ್ನು 1990 ರ ವೇಳೆಗೆ ಫೋನ್‌ಗಳು ಹೆಚ್ಚು ಜನಪ್ರಿಯವಾದವು. ಇದರ ಭಾಗವಾಗಿ 1992 ರಲ್ಲಿ ಮೊಟೊರೊಲಾ ಮತ್ತೆ ಮೊದಲ ಡಿಜಿಟಲ್ ಮೊಬೈಲ್ ಫೋನ್ ಅನ್ನು ಪರಿಚಯಿಸಿತು. ಅದಕ್ಕೆ ಇಂಟರ್‌ ನ್ಯಾಷನಲ್ 3200 ಎಂದು ಹೆಸರಿಡಲಾಗಿತ್ತು. ಈ ಫೋನ್‌ ಮೊಟೊರೊಲಾದ ಮೊದಲ ಫೋನ್‌ಗಿಂತ ಬೆಲೆಯಲ್ಲಿ ಕಡಿಮೆ ಇತ್ತು. ನಂತರ 1999 ನೋಕಿಯಾ ಮತ್ತೆ 7110 ಎಂಬ ಫೋನ್‌ ಅನ್ನು ಲಾಂಚ್ ಮಾಡಿತ್ತು. ಜೊತೆಗೆ ಬೆಲೆ ಸಹ ಕಡಿಮೆ ಇದ್ದುದರಿಂದ ಸಾಮಾನ್ಯರು ಫೋನ್‌ಗಳನ್ನು ಖರೀದಿ ಮಾಡಲು ಮುಂದಾದರು.

ಮೊದಲ ಟಚ್‌ಸ್ಕ್ರೀನ್ ಫೋನ್ (1992)

ಮೊದಲ ಟಚ್‌ಸ್ಕ್ರೀನ್ ಫೋನ್ (1992)

ಇಂದು ನಾವೆಲ್ಲಾ ಬೆರಳ ತುದಿಯಲ್ಲಿ ಫೋನ್‌ ಅನ್ನು ನಿಯಂತ್ರಣ ಮಾಡುತ್ತೇವೆ. ಆದರೆ, ಈ ಫೀಚರ್ಸ್‌ ಆರಂಭ ಆಗಿದ್ದು 1992 ರಿಂದ. ಇದಕ್ಕೂ ಮೊದಲು ಈ ಸಂಬಂಧ 1965 ರಲ್ಲಿಯೇ ಟಚ್‌ ಸ್ಕ್ರೀನ್‌ ಅನ್ನು ತಯಾರು ಮಾಡಲಾಗಿತ್ತು. ಆದರೆ, ಇದು ಫೋನ್‌ ಆಗಿ ಪರಿವರ್ತನೆ ಗೊಂಡಿದ್ದು ಮಾತ್ರ 1992 ರಿಂದ. ಇದಾದ ಬಳಿಕ ಮಿತ್ಸುಬಿಷಿ ಎಲೆಕ್ಟ್ರಿಕ್ ಜೊತೆಯಲ್ಲಿ ಐಬಿಎಮ್‌ ಸೈಮನ್ ಮೊದಲ ಟಚ್‌ಸ್ಕ್ರೀನ್ ಫೋನ್ ಅನ್ನು ತಯಾರು ಮಾಡಿತು.

ಸ್ಮಾರ್ಟ್‌ಫೋನ್‌

ಈ ಫೋನ್‌ ಅನ್ನು ಈಗಲೂ ಬಹುಪಾಲು ಮಂದಿ ಮೊದಲ ಸ್ಮಾರ್ಟ್‌ಫೋನ್‌ ಎಂದು ಪರಿಗಣಿಸುತ್ತಾರೆ. ಆದರೆ ಇದು ಮೊದಲ ಸ್ಮಾರ್ಟ್‌ಫೋನ್‌ ಅಲ್ಲ. ಯಾಕೆಂದರೆ ಆ ಸಮಯದಲ್ಲಿ ಇನ್ನು ಸ್ಮಾರ್ಟ್‌ಫೋನ್‌ ಯುಗ ಆರಂಭ ಆಗಿರಲಿಲ್ಲ. ಹಾಗಿದ್ರೆ ಮೊದಲ ಸ್ಮಾರ್ಟ್ ಫೋನ್‌ ಯಾವಾಗ ಆರಂಭ ಆಯಿತು ಅನ್ನೋದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

2006 ರಲ್ಲಿ ಲಾಂಚ್‌ ಆಯ್ತು ಮೊದಲ ಸ್ಮಾರ್ಟ್‌ಫೋನ್!

2006 ರಲ್ಲಿ ಲಾಂಚ್‌ ಆಯ್ತು ಮೊದಲ ಸ್ಮಾರ್ಟ್‌ಫೋನ್!

ಮೊದಲ ಸ್ಮಾರ್ಟ್‌ಫೋನ್‌ ಎಂದರೆ ಅದು LG ಪ್ರಾಡಾ ಅಥವಾ ಎಲ್‌ಜಿ KE850 ಎಂಬ ಫೋನ್. ಈ ಫೋನ್‌ 3.89 x 2.13 x 0.47 ಇಂಚುಗಳಷ್ಟು ಗಾತ್ರವನ್ನು ಹೊಂದಿದ್ದು, 240x400 ಪಿಕ್ಸೆಲ್‌ ರೆಸಲ್ಯೂಶನ್‌ ನೀಡುತ್ತಿತ್ತು. ಹಾಗೆಯೇ 8MB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಹಾಗೂ 2MP ಕ್ಯಾಮೆರಾ ಆಯ್ಕೆಯನ್ನು ಪಡೆದುಕೊಂಡಿತ್ತು. ಈ ಫೋನ್ ಅಂದು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಹಾಗೆಯೇ ಆ ವೇಳೆಗೆ ಬರೋಬ್ಬರಿ ಒಂದು ಮಿಲಿಯನ್ ಮಾರಾಟವಾಗಿತ್ತು

2007 ರ ನಂತರ ಸ್ಮಾರ್ಟ್‌ಫೋನ್ ಯುಗ ಆರಂಭ

2007 ರ ನಂತರ ಸ್ಮಾರ್ಟ್‌ಫೋನ್ ಯುಗ ಆರಂಭ

ಆಪಲ್‌ ಐಫೋನ್‌ A1203 ಲಾಂಚ್ ಜೊತೆಗೆ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ ಯುಗ ಆರಂಭ ಆಯಿತು. ಒಂದು ವರ್ಷದಲ್ಲಿ ಆರು ಮಿಲಿಯನ್‌ಗಿಂತಲೂ ಹೆಚ್ಚು ಫೋನ್‌ಗಳು ಮಾರಾಟವಾದವು. ಇದಾದ ಬಳಿಕ 2009 ರಲ್ಲಿ ಸ್ಯಾಮ್‌ಸಂಗ್ ತನ್ನ ಮೊದಲ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ GT-I7500 ಗ್ಯಾಲಕ್ಸಿಯನ್ನು ಲಾಂಚ್‌ ಮಾಡಿತು. ಬಳಿಕ ಹೆಚ್‌ಟಿಸಿ, ಸೋನಿ, ಹವಾಯ್‌ ಕಂಪೆನಿಗಳು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದವು. ಇದರ ಬೆನ್ನಲ್ಲೇ 2006 ಮತ್ತು 2010 ರ ನಡುವೆ ವಿವಿಧ ದೂರಸಂಪರ್ಕ ಕಂಪೆನಿಗಳು ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್ ವಿಭಾಗಕ್ಕೆ ತಮ್ಮ ಸೇವೆ ನೀಡಲು ಮುಂದಾದವು.

ಮೊದಲ ಫೋಲ್ಡಬಲ್‌ ಫೋನ್‌ ಇದು

ಮೊದಲ ಫೋಲ್ಡಬಲ್‌ ಫೋನ್‌ ಇದು

ಇಂದು ಮಾರುಕಟ್ಟೆಯಲ್ಲಿ ಫೋಲ್ಡಬಲ್‌ ಫೋನ್‌ಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಮೊದಲ ಫೋಲ್ಡಬಲ್‌ ಫೋನ್‌ 2018 ರಲ್ಲಿ ಅನಾವರಣ ಆಗಿತ್ತು. 2018 ರಲ್ಲಿ ಚೈನೀಸ್ ಸ್ಟಾರ್ಟ್ಅಪ್ ರಾಯಲ್ ವಿಶ್ವದ ಮೊದಲ ಫೋಲ್ಡಬಲ್‌ ಟಚ್‌ಸ್ಕ್ರೀನ್ ಫೋನ್ ರಾಯಲ್ ಫ್ಲೆಕ್ಸ್‌ಪೈ ಅನ್ನು ಅನಾವರಣ ಮಾಡಿತ್ತು. ಬಳಿಕ 2019 ರಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋಲ್ಡ್‌ ಫೋನ್‌ ಅನ್ನು ಅನ್ನು ಬಿಡುಗಡೆ ಮಾಡಿತು.

 2020 ರ ಬಳಿಕ ಆದ ಬದಲಾವಣೆ

2020 ರ ಬಳಿಕ ಆದ ಬದಲಾವಣೆ

ಆರಂಭದ ಫೋನ್‌ಗಳಿಗೂ ಪ್ರಸ್ತುತ ಲಭ್ಯ ಇರುವ ಫೋನ್‌ಗಳಿಗೆ ಭಾರೀ ವ್ಯತ್ಯಾಸ ಇದೆ. ಕೇವಲ ಒಂದೂವರೆ ದಶಕದಲ್ಲಿ ಅನೇಕ ಅದ್ಭುತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಂದು ಕೇವಲ ಮಾತನಾಡಲು ಬಳಕೆ ಮಾಡಿದ ಫೋನ್‌ ಇಂದು ಬಳಕೆದಾರರ ಅವಿಭಾಜ್ಯ ಅಂಗದಂತೆ ಕೆಲಸ ಮಾಡಲು ಮುಂದಾಗಿದೆ. ಇದರ ಜೊತೆಗೆ ಭವಿಷ್ಯದಲ್ಲಿ ನಾವು ನಿರೀಕ್ಷಿಸಿದ ಇನ್ನೂ ಹತ್ತಾರು ಫೋನ್‌ಗಳು ಮಾರುಕಟ್ಟೆಯಲ್ಲಿ ಆವರಿಸುವುದನ್ನು ಅಲ್ಲಗೆಳೆಯುವಂತಿಲ್ಲ.

Best Mobiles in India

English summary
The details of the world's first Phones, smartphone, Android phone are given in this article.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X