ಮಾರ್ಚ್‌ ವೇಳೆಗೆ ವಿಮಾನದಲ್ಲಿ ಇಂಟರ್‌ನೆಟ್ ಪಕ್ಕಾ!..1GB ಡೇಟಾ ಬೆಲೆ ಎಷ್ಟು ಗೊತ್ತಾ?

|

ಈ ಡಿಜಿಟಲ್ ಯುಗದಲ್ಲಿಯೂ ಸಹ ಭಾರತೀಯರಿಗೆ ಮರೀಚಿಕೆಯಾಗಿದ್ದ ವಿಮಾನದೊಳಗಿನ ವೈಫೈ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗುತ್ತಿದೆ ಎಂದು ಹೇಳಲಾಗಿದೆ. ವಿಮಾನದಲ್ಲಿ ವೈಫೈ ಕುರಿತಾದ ನಿಯಮಾವಳಿಗಳನ್ನು ಸರ್ಕಾರ ಅಂತಿಗೊಳಿಸಿದ ನಂತರ, ವಿಮಾನದಲ್ಲಿ ದೂರ ಸಂಪರ್ಕದ ಪರವಾನಗಿಗಾಗಿ ಈಗಾಗಲೇ ನಾಲ್ಕು ಕಂಪೆನಿಗಳು ಅರ್ಜಿ ಸಲ್ಲಿಸಿದೆ.ಈ ಕಂಪೆನಿಗಳಿಗೆ ಫೆಬ್ರವರಿ ಎರಡನೇ ವಾರದಲ್ಲಿ ದೂರ ಸಂಪರ್ಕ ಇಲಾಖೆ ಪರವಾನಗಿ ನೀಡಲಿದೆ ಎಂದು ತಿಳಿದು ಬಂದಿದೆ.

ಹೌದು, ವಿಮಾನದಲ್ಲಿ ಇಂಟರ್‌ನೆಟ್ ವ್ಯವಸ್ಥೆ ತರಲು ಆಸಕ್ತ ವೈ-ಫೈ ಸೇವೆ ಪೂರೈಕೆದಾರರು ಟೆಲಿಕಾಂ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಟ್ರಾಯ್ ತಿಳಿಸಿತ್ತು. ಇದಕ್ಕೆ ಆಸಕ್ತಿ ತೊರಿಸಿರುವ ಏರ್​ಟೆಲ್, ಜಿಯೋ ಸೇರಿದಂತೆ ಒಟ್ಟು ನಾಲ್ಕು ಟೆಲಿಕಾಂ ಕಂಪೆನಿಗಳು ವಿಮಾನ ಪ್ರಯಾಣಿಕರಿಗೂ ಇಂಟರ್​ನೆಟ್​ ಸೌಲಭ್ಯ ಒದಗಿಸಲು ಅರ್ಜಿ ಸಲ್ಲಿಸಿವೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಹೊಸ ವಿಮಾನಗಳಲ್ಲಿ ಈ ಸೇವೆ ಸಿಗುವ ಸಾಧ್ಯತೆಯಿದೆ.

ಮಾರ್ಚ್‌ ವೇಳೆಗೆ ವಿಮಾನದಲ್ಲಿ ಇಂಟರ್‌ನೆಟ್ ಪಕ್ಕಾ!..1GB ಡೇಟಾ ಬೆಲೆ ಎಷ್ಟು?

ಭಾರತೀಯ ವಿಮಾನ ಪ್ರಯಾಣಿಕರಿಗೆ ವಿಮಾನದೊಳಗೆ ಮೊಬೈಲ್​ ಫೋನ್​ ಬಳಸುವ ಅವಕಾಶ ದೊರೆಯಲಿದೆಅಷ್ಟೇ ಅಲ್ಲದೆ ವಿಮಾನದೊಳಗೆ ಫ್ಲೈ ಕನೆಕ್ಟಿವಿಟಿ ಮೂಲಕ ವೈ-ಫೈ ಮತ್ತು ಇಂಟರ್​ನೆಟ್​ ಬಳಸಲು ಕೂಡ ಟ್ರಾಯ್​ ಅನುಮತಿ ನೀಡಿದೆ. ಹಾಗಾದರೆ, ಭಾರೆತಿಯರಿಗೆ ವಿಮಾನದೊಳಗಿನ ವೈಫೈ ಸೌಲಭ್ಯ ಹೇಗಿರಲಿದೆ?, ವಿಮಾನಯಾನದಲ್ಲಿ ವೈಫೈ ಸೌಲಭ್ಯ ದೊರೆಯಲು ಪಾವತಿಸಬೇಕಾದ ಹಣವೆಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡುವ ತಂತ್ರಜ್ಞಾನ ಈಗ ಲಭ್ಯವಿದ್ದು, 3000 ಮೀಟರ್‌ಗಿಂತ ಮೇಲೆ ಹಾರಲು ಆರಂಭಿಸಿದ ಬಳಿಕ ಇಂಟರ್‌ನೆಟ್‌ ಸಂಪರ್ಕ ನೀಡಬಹುದು ಎನ್ನುವುದು ಟ್ರಾಯ್‌ ಹೇಳಿದ ನಂತರ ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡಲು ಸಂವಹನ ಇಲಾಖೆ ಮುಂದಾಗಿದೆ. ಮಾರ್ಚ್‌ನಿಂದ ಸೇವೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.

ವಿಮಾನಯಾನ ಕಂಪೆನಿಗಳ ತಯಾರಿ!

ವಿಮಾನಯಾನ ಕಂಪೆನಿಗಳ ತಯಾರಿ!

ಈಗಾಗಲೇ ಸ್ಪೈಸ್​ ಜೆಟ್​ ಮತ್ತು ಇಂಡಿಗೊಸಂಸ್ಥೆಗಳು ವಿಮಾನದಲ್ಲಿ ಮೊಬೈಲ್​ ಬಳಕೆಗೆ ಬೇಕಾದ ವ್ಯವಸ್ಥೆಯ ತಯಾರಿಯಲ್ಲಿವೆ ಎಂದು ತಿಳಿದುಬಂದಿದ್ದು, ವಿಮಾನಯಾನ ಸಂಸ್ಥೆಗಳಲ್ಲಿ ವೈ-ಫೈ ಸೇವೆ ಒದಗಿಸಲು ಸೂಕ್ತ ಸೌಲಭ್ಯದ ವ್ಯವಸ್ಥೆ ಇನ್ನಷ್ಟೇ ಕಲ್ಪಿಸಬೇಕಾಗಿದೆ. ಸದ್ಯ ದೇಶದ ಸ್ಪೈಸ್ ಜೆಟ್ ಬೊಯಿಂಗ್ 737 ವಿಮಾನದಲ್ಲಿ ವೈ-ಫೈ ಸೇವೆ ನೀಡುವಂತಹ ಸಕಲ ಸೌಲಭ್ಯವಿದೆ.

ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯ

ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯ

ವಿಮಾನ ಪ್ರಯಾಣದ ವೇಳೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನದ ವೇಳೆ ವೈಫೈ ಸೌಲಭ್ಯ ಒದಗಿಸುವುದರಿಂದ ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯ ನೀಡಿದಂತಾಗುತ್ತದೆ. ಹಾಗಾಗಿ, ಇನ್-ಫ್ಲೈಟ್ ವೈಫೈ ಸೌಲಭ್ಯಕ್ಕೆ ಪ್ರಯಾಣದ ದರದ ಶೇ.30ಕ್ಕಿಂತ ಹೆಚ್ಚು ಶುಲ್ಕ ವಿಧಿಸುವ ಸಾಧ್ಯತೆ ಇದೆ ಈಗ ನಿಜವಾಗುವ ಲಕ್ಷಣಗಳು ಇವೆ ಎಂದು ಹೇಳಲಾಗಿದೆ.

ಗಂಟೆಗೆ 1,000 ರೂ.ಶುಲ್ಕ?

ಗಂಟೆಗೆ 1,000 ರೂ.ಶುಲ್ಕ?

ವಿಮಾನ ಪ್ರಯಾಣದ ವೇಳೆ ಮೊಬೈಲ್ ಮತ್ತು ವೈಫೈ ಸೌಲಭ್ಯ ಸಿಗುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿ ನೀಡುವ ಇಂಟರ್‌ನೆಟ್ ಬೆಲೆ ಎಲ್ಲರನ್ನು ಹೌರಾರುವಂತೆ ಮಾಡಿದೆ. ಪ್ರಯಾಣದ ವೇಳೆ ಅರ್ಧ ಗಂಟೆ ಇಂಟರ್‌ನೆಟ್ ಬಳಕೆಗೆ 500 ರೂ. ಹಾಗೂ ಗಂಟೆಗೆ 1,000 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಅರ್ಧ ಗಂಟೆಗೆ 1GB ಡೇಟಾ ಸಿಗಲಿದೆ ಎನ್ನಲಾಗಿದೆ.

ಪ್ರಯಾಣಿಕರು ಶಾಕ್.

ಪ್ರಯಾಣಿಕರು ಶಾಕ್.

ವಿಮಾನಪ್ರಯಾಣದಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆ ಸುದ್ದಿ ಕೇಳಿ ಖುಷಿಯಾಗಿದ್ದೆವು. ಆದರೆ, ಅರ್ಧಗಂಟೆ ಇಂಟರ್‌ನೆಟ್ ಬಳಕೆಗೆ 500 ರಿಂದ 1,000 ರೂಪಾಯಿ ಶುಲ್ಕ ವಿಧಿಸುವುದನ್ನು ಕೇಳಿ ಶಾಕ್ ಆಗಿದೆ ಎಂದು ವಿಮಾನ ಪ್ರಯಾಣಿಕರು ಹೇಳಿದ್ದಾರೆ. ಇದು ಸಾಮಾನ್ಯರಿಗೆ ಸಾಧ್ಯವಾಗದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಬೆಲೆ ಏಕೆ ಹೆಚ್ಚು?

ಬೆಲೆ ಏಕೆ ಹೆಚ್ಚು?

ಇಂಟರ್‌ನೆಟ್ ಸೇವೆಯನ್ನು ಅಳವಡಿಸಲು ಪ್ರತಿ ವಿಮಾನಕ್ಕೂ 36ರಿಂದ 72 ಲಕ್ಷ ರು.ವರೆಗೂ ವೆಚ್ಚವಾಗಲಿದೆ. ಆ ವೆಚ್ಚವನ್ನು ಪ್ರಯಾಣಿಕರಿಗೆ ಬಳಕೆ ಶುಲ್ಕದ ರೂಪದಲ್ಲಿ ಕಂಪನಿಗಳು ಹೇರಲಿವೆ ಎಂದು ವರದಿಗಳು ಪ್ರಕಟಿಸಿವೆ. ಆದರೆ, ಉಚಿತ ಡೇಟಾದ ನಿರೀಕ್ಷೆಯಲ್ಲಿರುವ ಜನರು ಇದನ್ನು ಒಪ್ಪುತ್ತಾರ ಎಂಬುದನ್ನು ಕಾದುನೋಡಬೇಕಿದೆ.!

Best Mobiles in India

English summary
Soon, travellers can make phone calls, browse internet on flight in india. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X