BSNL, ಜಿಯೋ, ಏರ್‌ಟೆಲ್‌ ಟೆಲಿಕಾಂಗಳ ಹೊಸ ಪ್ರೀಪೇಯ್ಡ್ ಪ್ಲ್ಯಾನ್‌ಗಳು!

|

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಇದರಲ್ಲಿಯೂ ಲಾಕ್‌ಡೌನ್‌ನಿಂದಾಗಿ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಅಧಿಕ ಮತ್ತು ವೇಗದ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಹಲವು ಯೋಜನೆಗಳನ್ನು ಈಗಾಗಲೇ ಪರಿಚಯಿಸಿವೆ. ಹಾಗೆಯೇ ಜುಲೈ 2020 ತಿಂಗಳಿನಲ್ಲಿಯೂ ಚಂದಾದಾರರಿಗೆ ಹಲವು ಅನುಕೂಲಕರ ಪ್ರೀಪೇಯ್ಡ್‌ ಯೋಜನೆಗಳು ಲಭ್ಯ ಇವೆ.

ಬಿಎಸ್‌ಎನ್‌ಎಲ್‌

ಹೌದು, ಜಿಯೋ, ಏರ್‌ಟೆಲ್‌ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಗಳು ಹೊಸ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿವೆ. ಈ ಸಂಸ್ಥೆಗಳ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಅಧಿಕ ಡೇಟಾ ಸೌಲಭ್ಯವನ್ನು ಪಡೆದಿವೆ. ಹೆಚ್ಚಿನ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಮನರಂಜನೆಯ ಪ್ರಯೋಜನಗಳು ಸಹ ದೊರೆಯುತ್ತವೆ. ಜಿಯೋ, ಬಿಎಸ್‌ಎನ್‌ಎಲ್‌ ಹಾಗೂ ಏರ್‌ಟೆಲ್‌ ಹೊಸ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜಿಯೋ ಯೋಜನೆಗಳು

ಜಿಯೋ ಯೋಜನೆಗಳು

ಜಿಯೋ ಟೆಲಿಕಾಂ 2,399 ಮತ್ತು 2,599 ರೂ. ಈ ಎರಡೂ ಯೋಜನೆಗಳು ಆಕರ್ಷಕ ಸೌಲಭ್ಯ ಹೊಂದಿದ್ದು, ಪೂರ್ಣ ಒಂದು ವರ್ಷದ ವ್ಯಾಲಿಡಿಟಿ ಅವಧಿಯನ್ನು ಪಡೆದಿವೆ. ಎರಡೂ ಯೋಜನೆಗಳ ನಡುವಿನ ವ್ಯತ್ಯಾಸವೆಂದರೆ 2,599 ರೂ.ಗಳ ಯೋಜನೆಯೊಂದಿಗೆ ನೀವು ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯ ಲಾಭವನ್ನು ಪಡೆಯುತ್ತೀರಿ. 2,399 ಮತ್ತು 2,599 ರೂ.ಗಳ ಯೋಜನೆಯು ಜಿಯೋ ಟು ಜಿಯೋ ಅಲ್ಲದ ಕರೆಗೆ 12,000 ಎಫ್‌ಯುಪಿ ನಿಮಿಷಗಳೊಂದಿಗೆ ಬರುತ್ತದೆ. ನೀವು ಎರಡೂ ಯೋಜನೆಗಳೊಂದಿಗೆ ಅನಿಯಮಿತ ಕರೆ, 100 ಎಸ್‌ಎಂಎಸ್ / ದಿನವನ್ನು ಪಡೆಯುತ್ತೀರಿ. ಅದರೊಂದಿಗೆ, ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ಇದೆ.

ಏರ್‌ಟೆಲ್‌ ಯೋಜನೆಗಳು

ಏರ್‌ಟೆಲ್‌ ಯೋಜನೆಗಳು

ಏರ್‌ಟೆಲ್‌ ಟೆಲಿಕಾಂ ಮೂರು ಹೊಸ ಯೋಜನೆಗಳು ಆಕರ್ಷಕ ಅನಿಸಿವೆ. 99ರೂ, 129ರೂ ಹಾಗೂ 199ರೂ ಪ್ರೀಪೇಯ್ಡ್‌ ಯೋಜನೆಗಳು ಪ್ರೈಸ್‌ಟ್ಯಾಗ್‌ನಲ್ಲಿವೆ. 99ರೂ. ಪ್ಲ್ಯಾನ್ ಪ್ರತಿದಿನ 100ಎಸ್‌ಎಮ್‌ಎಸ್‌, 1GB ಡೇಟಾ ಹಾಗೂ ಅನಿಯಮಿತ ಕರೆಗಳ ಸೌಲಭ್ಯ ಹೊಂದಿವೆ. 199ರೂ. ಪ್ಲ್ಯಾನ್ ಪ್ರತಿದಿನ 1GB ಡೇಟಾ ಸೌಲಭ್ಯ ಪಡೆದಿದೆ. 129ರೂ.ಪ್ಲ್ಯಾನ್ ಅನಿಯಮಿತ ಕರೆಗಳ ಸೌಲಭ್ಯ ಪಡೆದಿದೆ. ಇದರೊಂದಿಗೆ ಏರ್‌ಟೆಲ್‌ ಇತರೆ ಮನರಂಜನೆಯ ಆಪ್ಸ್‌ಗಳ ಲಭ್ಯತೆ ಪಡೆದಿವೆ.

ಬಿಎಸ್‌ಎನ್‌ಎಲ್‌ ಯೋಜನೆಗಳು

ಬಿಎಸ್‌ಎನ್‌ಎಲ್‌ ಯೋಜನೆಗಳು

ಬಿಎಸ್‌ಎನ್‌ಎಲ್‌ ಸಂಸ್ಥೆಯ ಹೊಸ 365ರೂ. ಯೋಜನೆಯು ಒಂದು ವರ್ಷದ ಪೂರ್ಣ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಡೇಟಾ, ಎಸ್‌ಎಮ್‌ಎಸ್‌ ಸೌಲಭ್ಯ ಹೊಂದಿದೆ. ಹಾಗೆಯೇ ಬಿಎಸ್‌ಎನ್‌ಎಲ್‌ನ 2,399ರೂ. ಯೋಜನೆಯು ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಒಂದು ಅತ್ಯುತ್ತಮ ದೀರ್ಘಾವಧಿಯ ಯೋಜನೆಯ ಆಗಿದೆ.

Best Mobiles in India

English summary
Jio, Airtel, and BSNL have come out with new prepaid plans for their customers which can be used on July.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X