ಹೊಸ ವರ್ಷಕ್ಕೂ ಮುನ್ನ ಗ್ರಾಹಕರಿಗೆ ಬಿಗ್‌ ಅಫರ್‌ ನೀಡಿದ ಬಿಎಸ್‌ಎನ್‌ಎಲ್‌!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಆಕರ್ಷಕ ಡೇಟಾ ಹಾಗೂ ಅನಿಯಮಿತ ಕರೆ ಪ್ರಯೋಜನ ನೀಡುವ ಪ್ಲಾನ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿವೆ. ಇದರ ನಡುವೆಯೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕೂಡ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳ ಮೂಲಕ ಗಮನ ಸೆಳೆದಿದೆ. ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವ ಅನೇಕ ಪ್ಲಾನ್‌ಗಳನ್ನು ಪರಿಚಯಿಸಿ ತನ್ನದೇ ಆದ ಪ್ರಭಾವವನ್ನು ಉಳಿಸಿಕೊಂಡಿದೆ. ಸದ್ಯ ಹೊಸ ವರ್ಷಕ್ಕೂ ಮುನ್ನ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಬಿಗ್‌ ಆಫರ್‌ ನೀಡಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ನ್ಯೂ ಇಯರ್‌ಗೂ ಮುನ್ನ ಹೊಸ ಆಫರ್‌ ಪ್ರಕಟಿಸಿದೆ. ಈ ಮೂಲಕ ಖಾಸಗಿ ಟೆಲಿಕಾಂಗಳಿಗೆ ಬಿಗ್‌ ಶಾಕ್‌ ನೀಡಿದೆ. ಸದ್ಯ ಬಿಎಸ್‌ಎನ್‌ಎಲ್‌ ಹಾಗೂ ಜಿಯೋ ಟೆಲಿಕಾಂಗಳು ಹೊಸ ವರ್ಷದ ಪ್ರಯುಕ್ತ ತಮ್ಮ ದೀರ್ಘಾವಧಿಯ ಪ್ರಿಪೇಯ್ಡ್‌ ಪ್ಲಾನ್‌ಗಳ ಮಾನ್ಯತೆಯನ್ನು ಕ್ರಮವಾಗಿ 60 ದಿನಗಳು ಮತ್ತು 29 ದಿನಗಳವರೆಗೆ ವಿಸ್ತರಿಸಿದೆ. ಈ ಮೂಲಕ ಹೊಸ ವರ್ಷಕ್ಕೂ ಮುನ್ನ ಗ್ರಾಹಕರಿಗೆ ಗುಡ್‌ ನ್ಯೂಸ್‌ ನೀಡಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಟೆಲಿಕಾಂನ ಯಾವ ಪ್ಲಾನ್‌ಗಳಲ್ಲಿ ನಿಮಗೆ ಈ ಆಫರ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್‌ಎನ್‌ಎಲ್‌ 2399ರೂ. ಪ್ರಿಪೇಯ್ಡ್ ಪ್ಲಾನ್‌

ಬಿಎಸ್‌ಎನ್‌ಎಲ್‌ 2399ರೂ. ಪ್ರಿಪೇಯ್ಡ್ ಪ್ಲಾನ್‌

BSNL ತನ್ನ 2399ರೂ.ಗಳ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಹಾರ್ಡ್-ಟು-ಮಿಸ್ ಆಫರ್ ಅನ್ನು ನೀಡುತ್ತಿದೆ. 365 ದಿನಗಳ ಮಾನ್ಯತೆಯನ್ನು ಹೊಂದಿರುವ ಈ ಪ್ಲಾನ್‌ನಲ್ಲಿ ನಿಮಗೆ ಇದಿಗ ಹೆಚ್ಚುವರಿಯಾಗಿ 60 ದಿನಗಳ ಮಾನ್ಯತೆ ಸಿಗಲಿದೆ. ಅಂದರೆ 425 ದಿನಗಳವರೆಗೆ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ ಪ್ರಮೋಷನಲ್‌ ಸ್ವರೂಪದ್ದಾಗಿದ್ದೂ, ಡಿಸೆಂಬರ್ 31, 2021 ರವರೆಗೆ ಲಭ್ಯವಿರುತ್ತದೆ. ಇನ್ನು ಈ ಪ್ಲಾನ್‌ ದೈನಂದಿನ 3GB ಡೇಟಾ ಪ್ರಯೋಜನ ನೀಡಲಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವು ದೊರೆಯಲಿದೆ.

ಜಿಯೋ 2545ರೂ. ಪ್ರಿಪೇಯ್ಡ್ ಪ್ಲಾನ್‌

ಜಿಯೋ 2545ರೂ. ಪ್ರಿಪೇಯ್ಡ್ ಪ್ಲಾನ್‌

ಜಿಯೋ ಟೆಲಿಕಾಂ 2,545ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ ಅನಿಯಮಿತ ಧ್ವನಿ ಕರೆಗಳು, ದೈನಂದಿನ 100 SMS, ಹಾಗೂ ದೈನಂದಿನ 1.5GB ಡೇಟಾ ಪ್ರಯೋಜನ ನೀಡಲಿದೆ. ಇದು 336 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಹೊಸ ವರ್ಷದ ಆಫರ್‌ನಲ್ಲಿ 29 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ. ಇದರಿಂದ ಈ ಪ್ಲಾನ್‌ ಇದೀಗ ಒಟ್ಟು 365 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ಸದ್ಯ ಈ ಆಫರ್ ಜಿಯೋ ವೆಬ್‌ಸೈಟ್ ಮತ್ತು ಮೈಜಿಯೋ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಆದರೆ ಈ ಆಫರ್ ಜನವರಿ 2, 2022 ರಂದು ಮುಕ್ತಾಯಗೊಳ್ಳುತ್ತದೆ. ಇನ್ನು ಈ ಪ್ಲಾನ್‌ ಜಿಯೋಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ನ ಚಂದಾದಾರಿಕೆಗಳನ್ನು ಒದಗಿಸುತ್ತದೆ.

ACT ಪೈಬರ್‌ನೆಟ್‌ ಆಫರ್‌

ACT ಪೈಬರ್‌ನೆಟ್‌ ಆಫರ್‌

ACT ಅಥವಾ ಆಟ್ರಿಯಾ ಕನ್ವರ್ಜೆನ್ಸ್ ಟೆಕ್ನಾಲಜಿ ಫೈಬರ್ನೆಟ್ ಈಗ ತನ್ನ ಸ್ಪೀಡ್ ಬೂಸ್ಟ್ ಆಫರ್‌ ಅನ್ನು ಡಿಸೆಂಬರ್ ಅಂತ್ಯದವರೆಗೆ ಹೆಚ್ಚಿಸಿದೆ. 100 Mbps ಗಿಂತ ಕಡಿಮೆ ಪ್ಲಾನ್‌ಗಳಿಗೆ ಚಂದಾದಾರರಾಗಿರುವ ACT ಗ್ರಾಹಕರನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 100 Mbps ಗೆ ಅಪ್‌ಗ್ರೇಡ್ ಮಾಡಲಾಗುತ್ತದೆ. 100 Mbps ಗಿಂತ ಹೆಚ್ಚಿನ ಆದರೆ 300 Mbps ಗಿಂತ ಕಡಿಮೆ ಇರುವ ಪ್ಲಾನ್ ವೇಗವನ್ನು ಹೊಂದಿರುವ ಗ್ರಾಹಕರು 300 Mbps ಗೆ ಉಚಿತ ಅಪ್‌ಗ್ರೇಡ್‌ಗೆ ಅರ್ಹರಾಗುತ್ತಾರೆ.

ಜಿಯೋದ 2879ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 2879ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋದ 3119ರೂ. ಪ್ರಿಪೇಯ್ಡ್ ಪ್ಲಾನ್‌

ಜಿಯೋದ 3119ರೂ. ಪ್ರಿಪೇಯ್ಡ್ ಪ್ಲಾನ್‌

ಜಿಯೋದ ಈ ಪ್ಲಾನ್‌ ವಾರ್ಷಿಕ ಯೋಜನೆಯಾಗಿದ್ದು, 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಜಿಯೋ ಸೇರಿದಂತೆ ಇತರೆ ನೆಟ್‌ವರ್ಕ್‌ಗಳಿಗೆ ಅನಿಯಮಿತ ಫ್ರೀ ವಾಯಿಸ್‌ ಕಾಲ್‌ ಪ್ರಯೋಜನ ದೊರೆಯಲಿದೆ. ಪ್ರತಿದಿನ 100 SMS ಮತ್ತು Jio ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಏರ್‌ಟೆಲ್ 1799ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್ 1799ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನ್‌ ದೈನಂದಿನ 24GB ಡೇಟಾ ಪ್ರಯೋಜನವನ್ನು ಹೊಂದಿದೆ. ಇದು ಅನಿಯಮಿತ ಕರೆ ಪ್ರಯೋಜನ ಮತ್ತು ಪ್ರತಿದಿನ 100 SMS ಪ್ರಯೋಜನ ನೀಡಲಿದೆ. ಪ್ರೈಮ್‌ ವೀಡಿಯೊ ಮೊಬೈಲ್ ಆವೃತ್ತಿ, ಅಪೊಲೊ 24/7 ಗೆ ಪ್ರವೇಶವನ್ನು ನೀಡುತ್ತವೆ. ಉಚಿತ ಆನ್‌ಲೈನ್ ಕೋರ್ಸ್‌ಗಳು, ಫಾಸ್ಟ್ಯಾಗ್‌ನಲ್ಲಿ ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್, ವಿಂಕ್‌ಮ್ಯೂಸಿಕ್ ಯೋಜನೆಗಳು ಹಾಗೂ ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಗೆ ಪ್ರವೇಶವನ್ನು ನೀಡಲಿವೆ.

ಏರ್‌ಟೆಲ್‌ 2999ರೂ ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ 2999ರೂ ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ ಈ ಪ್ಲಾನ್‌ ದೈನಂದಿನ 2GB ಡೇಟಾವನ್ನು ನೀಡಲಿದೆ. ಈ ಯೋಜನೆ ಅನಿಯಮಿತ ಕರೆ ಪ್ರಯೋಜನ ನೀಡಲಿದೆ. ಜೊತೆಗೆ ಪ್ರಧಾನ ವೀಡಿಯೊ ಮೊಬೈಲ್ ಆವೃತ್ತಿ, ಅಪೊಲೊ 24 | 7 ಪ್ರವೇಶ ನೀಡಲಿದೆ. ಉಚಿತ ಆನ್‌ಲೈನ್ ಕೋರ್ಸ್‌ಗಳು, ಫಾಸ್ಟ್ಯಾಗ್‌ನಲ್ಲಿ ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್, ವಿಂಕ್‌ಮ್ಯೂಸಿಕ್. ಯೋಜನೆಗಳು ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಗೆ ಪ್ರವೇಶದೊಂದಿಗೆ ಬರುತ್ತವೆ.

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.

Most Read Articles
Best Mobiles in India

English summary
BSNL and Jio long-term prepaid plans are giving extra validity till December 31.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X