Subscribe to Gizbot

ಮತ್ತೊಂದು BSNL ಆಫರ್..249 ರೂ.ಗೆ ಪ್ರತಿದಿನ 10GB ಡೇಟಾ, ಮತ್ತೆ?

Written By:

ಜಿಯೋ ಮತ್ತು ಏರ್‌ಟೆಲ್‌ಗೆ ಸೆಡ್ಡು ಹೊಡೆಯಲೇಬೇಕು ಎಂದು ಪಣತೊಟ್ಟಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ಇದೀಗ ಅತ್ಯುತ್ತಮ ಬ್ರಾಡ್‌ಬ್ಯಾಂಡ್ ಆಫರ್ ಅನ್ನು ಬಿಡುಗಡೆಮಾಡಿದೆ.!! ಇದೇ ಮೊದಲ ಬಾರಿಗೆ BSNL ಭರ್ಜರಿ ಬ್ರಾಡ್‌ಬ್ಯಾಂಡ್ ಆಫರ್ ಬಿಡುಗಡೆ ಮಾಡಿದ್ದು, ಟೆಲಿಕಾಂಗೆ ಸೆಡ್ಡು ಹೊಡೆದಿದೆ.!!

ಇತ್ತೀಚಿಗಷ್ಟೆ ಮೊಬೈಲ್ ಬಳಕೆದಾರರಿಗೆ ಪ್ರತಿದಿನ 3GB 3G ಡೇಟಾ ನೀಡಿ ಗಮನಸೆಳೆದಿದ್ದ BSNL ಇದೀಗ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಹವಾ ಎಬ್ಬಿಸಿದ್ದು, ಕೇವಲ 249 ರೂ.ಗಳಿಗೆ ಪ್ರತಿದಿನ 10GB ಡೇಟಾದಂತೆ 300GB ಡೇಟಾ ಆಫರ್ ಪ್ರಕಟಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕ ನೀಡಿದೆ!!

ಓದಿರಿ: ಆಫರ್ ಮುಗಿದರೂ ಜಿಯೋ ಉಚಿತವಾಗಿರುವುದೇಕೆ?..ಎಷ್ಟು ದಿನ ಈ ಆಫರ್?

ಹಾಗಾಗಿ, BSNL ಬಿಡುಗಡೆಮಾಡಿರುವ 249 ರೂ 249 ರೂ. ಹೇಗಿದೆ.? ಪ್ರತಿದಿವಸ ಎಷ್ಟು ಜಿಬಿ ಡೇಟಾ ಬಳಕೆ ಮಾಡಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪ್ರತಿದಿನ 10GB ಡೇಟಾ

ಪ್ರತಿದಿನ 10GB ಡೇಟಾ

249 ರೂ. ಆಫರ್‌ನಲ್ಲಿ ಪ್ರತಿದಿನ 10GB BSNL ಡೇಟಾ ಡೌನ್ಲೋಡ್ ಮಾಡಬಹುದಾಗಿದೆ.ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ದರದಲ್ಲಿ BSNL ಅತ್ಯುತ್ತಮ ಬ್ರಾಡ್‌ಬ್ಯಾಂಡ್ ಸೇವೆಯನ್ನು ನಿಡುತ್ತಿದೆ.!!

ಡೇಟಾ ಸ್ಪೀಡ್ ಎಷ್ಟು?

ಡೇಟಾ ಸ್ಪೀಡ್ ಎಷ್ಟು?

ಕೇವಲ 249 ರೂ.ಗಳಿಗೆ ಪ್ರತಿದಿನ 10GB ಡೇಟಾದಂತೆ 300GB ಡೇಟಾ ಆಫರ್ ನೀಡಿರುವ BSNL ಸ್ಪೀಡ್‌ ವಿಚಾರದಲ್ಲಿ ಮಾತ್ರ ಸ್ಲೋ ಆಗಿದೆ. ಪ್ರತಿದಿನ 10GB ಡೇಟಾವನ್ನು 2MBPS ವೇಗದಲ್ಲಿ ಡೌನ್‌ಲೋಡ್ ಮಾಡಬಹುದು.!

ವ್ಯಾಲಿಡಿಟಿ ಎಷ್ಟು?

ವ್ಯಾಲಿಡಿಟಿ ಎಷ್ಟು?

ಪ್ರತಿದಿನ 10GB ಡೇಟಾದಂತೆ 300GB ಡೇಟಾ ನೀಡಿರುವ BSNL 30ದಿನಗಳಿಗೆ ಆಫರ್ ನೀಡಿದೆ. ಬೇರೆ ಟೆಲಿಕಾಂಗಳು ಕೇವಲ 28 ದಿನಗಳು ಮಾತ್ರ ಆಫರ್ ನಿಡುವುದನ್ನು ನಾವಿಲ್ಲಿ ನೊಡಬಹುದು!!

ಅನಿಯಮಿತ ಉಚಿತ ಕರೆ!!

ಅನಿಯಮಿತ ಉಚಿತ ಕರೆ!!

ಇನ್ನು 249 ರೂ. ಆಫರ್‌ನಲ್ಲಿ BSNL ಗ್ರಾಹಕರು ಎಲ್ಲ ನೆಟ್ವರ್ಕ್ ಗಳೊಂದಿಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು. ಭಾನುವಾರದಂದು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಕರೆಗಳನ್ನು ಮಾಡಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Rs 249 per month; offers data download of 10GB per day & free calls. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot