ಬಿಎಸ್‌ಎನ್‌ಎಲ್‌ನಿಂದ ರೂ.1 ಕ್ಕಿಂತ ಕಡಿಮೆಗೆ 1GB ಇಂಟರ್ನೆಟ್ ಆಫರ್ ಶೀಘ್ರದಲ್ಲಿ!

By Suneel
|

ರಿಲಾಯನ್ಸ್ ಜಿಯೋಗೆ ಕೌಂಟರ್‌ ಕೋಡೋಕೆ ಬಹುಶಃ ಎಲ್ಲ ಟೆಲಿಕಾಂಗಳು ಸಿದ್ಧತೆ ನಡೆಸುತ್ತಿರಬಹುದು. ಕೌಂಟರ್‌ ಕೊಡಲು ಮೊದಲು ಮುಂದಾಗಿರುವುದು ರಾಜ್ಯ ಮಾಲೀಕತ್ವದ ಬಿಎಸ್‌ಎನ್‌ಎಲ್‌. ಈಗ ಬಿಎಸ್‌ಎನ್ಎಲ್‌ ಗ್ರಾಹಕರು ರಿಲಾಯನ್ಸ್ ಜಿಯೋ 4G ಸಿಮ್‌ ಖರೀದಿಸುವ ಬದಲು ಬಿಎಸ್‌ಎನ್‌ಎಲ್‌ ಗ್ರಾಹಕರಾಗೆ ಉಳಿದು ಉತ್ತಮ ಆಫರ್‌ಗಳನ್ನು ಪಡೆಯಬಹುದಾಗಿದೆ.

1 ರೂಪಾಯಿಗೆ 1GB ಇಂಟರ್ನೆಟ್ ಸಿಗುವ ಕಾಲ ಬಂದಾಯ್ತು. ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಅನ್‌ಲಿಮಿಟೆಡ್‌ ಬ್ಯಾಡ್‌ಬ್ಯಾಂಡ್‌ ಡಾಟಾವನ್ನು ಅತೀ ಕಡಿಮೆ ಬೆಲೆಗೆ ನೀಡುತ್ತಿದೆ. ಅದರ ಬೆಲೆ ಎಷ್ಟು ಇತರೆ ಆಫರ್‌ಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿನ ಮಾಹಿತಿ ಓದಿ ತಿಳಿಯಿರಿ.

4G ಡಾಟಾ ಬೆಲೆ: ಜಿಯೋ 4G VS ಏರ್‌ಟೆಲ್‌ VS ವೊಡಾಫೋನ್ VS ಐಡಿಯಾ

ಅನ್‌ಲಿಮಿಟೆಡ್‌ ಬ್ಯಾಡ್‌ಬ್ಯಾಂಡ್‌ ಪ್ಲಾನ್‌

ಅನ್‌ಲಿಮಿಟೆಡ್‌ ಬ್ಯಾಡ್‌ಬ್ಯಾಂಡ್‌ ಪ್ಲಾನ್‌

ಬಿಎಸ್‌ಎನ್‌ಎಲ್‌ ಶೀಘ್ರದಲ್ಲೇ ಅನ್‌ಲಿಮಿಟೆಡ್‌ ವೈರ್‌ಲೈನ್‌ ಬ್ರಾಡ್‌ಬ್ಯಾಂಡ್ ಪ್ಲಾನ್‌ ಅನ್ನು ಲಾಂಚ್‌ ಮಾಡಲಿದ್ದು, 1 ರೂಪಾಯಿಗಿಂತ ಕಡಿಮೆ ಬೆಲೆಗೆ 1GB ಡಾಟಾ ಡೌನ್‌ಲೋಡ್‌ ಮಾಡಬಹುದಾದ ಆಫರ್‌ ಅನ್ನು ನೀಡುತ್ತಿದೆ. ತಿಂಗಳಿಗೆ 300GB ಯಷ್ಟು ಡಾಟಾ ಬಳಸುವವರು ಈ ಪ್ಲಾನ್ ಸಬ್‌ಸ್ಕ್ರೈಬರ್ ಆಗಬಹುದು.

ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಬೆಲೆ ಎಷ್ಟು?

ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಬೆಲೆ ಎಷ್ಟು?

'ಬಿಎಸ್‌ಎನ್‌ಎಲ್‌ ಅತಿ ಕಡಿಮೆಯ ಕೈಗೆಟಕುವ ಬೆಲೆಯಲ್ಲಿ ಪ್ರಮೋಶನಲ್‌ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಪ್ಲಾನ್‌ ಅನ್ನು ರೂ.249 ಕ್ಕೆ ಇದೇ ತಿಂಗಳ (ಸೆಪ್ಟೆಂಬರ್‌) ದಿನಾಂಕ 9 ರಂದು ಲಾಂಚ್‌ ಮಾಡುತ್ತಿದೆ' ಎಂದು ಟೆಲಿಕಾಂ ಪಿಎಸ್‌ಯು ಹೇಳಿದೆ.

ವೈರ್‌ಲೈನ್‌ ಬ್ರಾಡ್‌ಬ್ಯಾಂಡ್ ಸೇವೆ

ವೈರ್‌ಲೈನ್‌ ಬ್ರಾಡ್‌ಬ್ಯಾಂಡ್ ಸೇವೆ

ವೈರ್‌ಲೈನ್ ಬ್ರಾಡ್‌ಬ್ಯಾಂಡ್‌ ಸೇವೆಯ ಅತಿ ಕಡಿಮೆ ಬೆಲೆಯ ಆಫರ್‌ನಿಂದ ಗ್ರಾಹಕರ ಅನುಭವ ಹೆಚ್ಚಲಿದೆ. ಹೊಸ ಗ್ರಾಹಕರು ಸಹ ಬಿಎಸ್‌ಎನ್‌ಎಲ್‌ ವೈರ್‌ಲೈನ್‌ ಬ್ರಾಡ್‌ಬ್ಯಾಂಡ್‌ ಸೇವೆ ಅನುಭವ ಪಡೆಯಲಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ 'ಅನುಪಮ್ ಶ್ರೀವತ್ಸವ'ರವರು ಹೇಳಿದ್ದಾರೆ.

ಅನ್‌ಲಿಮಿಟೆಡ್‌ ಡಾಟಾ

ಅನ್‌ಲಿಮಿಟೆಡ್‌ ಡಾಟಾ

ರೂ.249 ರ ಪ್ಲಾನ್ ಸಬ್‌ಸ್ಕ್ರೈಬರ್ ಮಾಡಿಕೊಂಡವರು ಅನ್‌ಲಿಮಿಟೆಡ್‌ ಬ್ಯಾಡ್‌ಬ್ಯಾಂಡ್‌ ಡಾಟಾವನ್ನು ಯಾವುದೇ ಡಾಟಾ ನಿಯಂತ್ರಣ ಇಲ್ಲದೇ ಡೌನ್‌ಲೋಡ್‌ ಮಾಡಬಹುದಾಗಿದೆ. ಬಿಎಸ್‌ಎನ್‌ಎಲ್‌ ನೀಡುತ್ತಿರುವ ಪ್ಲಾನ್‌ನಲ್ಲಿ 2Mbps ಡಾಟಾ ಡೌನ್‌ಲೋಡ್‌ ವೇಗ ನೀಡುತ್ತಿದೆ.

ತಿಂಗಳಿಗೆ 300GB ಡೌನ್‌ಲೋಡ್‌

ತಿಂಗಳಿಗೆ 300GB ಡೌನ್‌ಲೋಡ್‌

ಬಿಎಸ್‌ಎನ್ಎಲ್‌ ಗ್ರಾಹಕರು ಅನ್‌ಲಿಮಿಟೆಡ್ ವೈರ್‌ಲೈನ್ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಅನ್ನು ಒಂದು ತಿಂಗಳು ನಿರಂತರವಾಗಿ ಬಳಸಿದರೆ, 300 GB ಡಾಟಾವನ್ನು ಕೇವಲ ರೂ.249 ಕ್ಕೆ ಡೌನ್‌ಲೋಡ್‌ ಮಾಡಬಹುದು ಎಂದು ಬಿಎಸ್‌ಎನ್‌ಎಲ್‌ ಹೇಳಿದೆ.

1GB ಗೆ 1 ರೂಪಾಯಿಗಿಂತ ಕಡಿಮೆ ಬೆಲೆ

1GB ಗೆ 1 ರೂಪಾಯಿಗಿಂತ ಕಡಿಮೆ ಬೆಲೆ

ಬಿಎಸ್‌ಎನ್‌ಎಲ್‌ ಲಾಂಚ್‌ ಮಾಡುತ್ತಿರುವ ಡಾಟಾ ಪ್ಲಾನ್‌ನಲ್ಲಿ 1GB ಡಾಟಾ ಡೌನ್‌ಲೋಡ್‌ಗೆ 1 ರೂಪಾಯಿಗಿಂತ ಕಡಿಮೆ ಬೆಲೆ ಇರುತ್ತದೆ. ಗ್ರಾಹಕರು 6 ತಿಂಗಳ ನಂತರ ಬಿಎಸ್‌ಎನ್‌ಎಲ್‌ನ ನಿರಂತರ ಬ್ರಾಡ್‌ಬ್ಯಾಂಡ್‌ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು.

 ರಿಲಾಯನ್ಸ್ ಜಿಯೋಗೆ ಕೌಂಟರ್

ರಿಲಾಯನ್ಸ್ ಜಿಯೋಗೆ ಕೌಂಟರ್

ರಿಲಾಯನ್ಸ್ ಜಿಯೋ ಅಧಿಕೃತ ಬಿಡುಗಡೆ ಸಂದರ್ಭದಲ್ಲಿ ಮುಕೇಶ್‌ ಅಂಬಾನಿಯವರು 'ಇತರೆ ಟೆಲಿಕಾಂಗಳು 1 GB ಡಾಟಾಗೆ 250 ಚಾರ್ಜ್‌ ಮಾಡುತ್ತಾರೆ. ಆದರೆ ರಿಲಾಯನ್ಸ್ ಜಿಯೋ 25-50 ರೂಪಾಯಿ ಚಾರ್ಜ್‌ ಮಾಡುತ್ತದೆ' ಎಂದಿದ್ದರು. ಇದಕ್ಕೆ ಕೌಂಟರ್‌ ಆಗಿ ಈಗ ಬಿಎಸ್‌ಎನ್‌ಎಲ್‌ ರೂ.249 ಕ್ಕೆ ಒಂದು ತಿಂಗಳು ಅನ್‌ಲಿಮಿಟೆಡ್‌ ವೈರ್‌ಲೈನ್‌ ಬ್ರಾಡ್‌ಬ್ಯಾಂಡ್ ಆಫರ್‌ ಲಾಂಚ್‌ ಮಾಡುತ್ತಿದೆ. ಅಲ್ಲದೇ ಹೊಸ ಗ್ರಾಹಕರನ್ನು ಸಹ ಸೆಳೆಯುವ ಪ್ರಯತ್ನ ಇದಾಗಿದೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ MoU ಗೆ ಟೆಲಿಕಾಂ ಇಲಾಖೆಯಿಂದ ಸಹಿ ಮಾಡಿದ್ದು, ಕಾರ್ಯಕ್ಷಮತೆ ಆಧಾರಿತ ಗುರಿ ಬಿಎಸ್‌ಎನ್‌ಎಲ್‌ಗೂ ಸಹ ಇನ್ನುಮುಂದೆ ಇರುತ್ತದೆ.

Best Mobiles in India

Read more about:
English summary
BSNL to counter RJio with unlimited broadband data at Rs 249. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X