4G ಡಾಟಾ ಬೆಲೆ: ಜಿಯೋ 4G VS ಏರ್‌ಟೆಲ್‌ VS ವೊಡಾಫೋನ್ VS ಐಡಿಯಾ

Written By:

ಕುಖ್ಯಾತ 2G ಹಗರಣದಿಂದ ಕರೆ ದರಗಳು ಕಡಿಮೆಯಾದವು. ಅಲ್ಲದೇ ಇಂದು ರಿಲಾಯನ್ಸ್ ಜಿಯೋ 4G ಆಗಮನದಿಂದಾಗಿ ಡಾಟಾ ಸೇವೆಗಳನ್ನು ಕಿತ್ತುಕೊಂಡು ಸಾಗುತ್ತಿದ್ದ ಏರ್‌ಟೆಲ್‌, ಐಡಿಯಾ ಮತ್ತು ವೋಡಾಫೋಗಳಿಗೆ ಈಗ ಸ್ಪರ್ಧಿಯಾಗಿ ರಿಲಾಯನ್ಸ್ ಜಿಯೋ ಎತ್ತರದಲ್ಲಿದೆ.

ಅಧಿಕೃತವಾಗಿ ರಿಲಾಯನ್ಸ್ ಜಿಯೋ ಲಾಂಚ್‌ ವೇಳೆಯಲ್ಲಿ ಮುಕೇಶ್ ಅಂಬಾನಿಯವರು 'ಜಿಯೋ ನೆಟ್‌ವರ್ಕ್‌ನಲ್ಲಿ ವಾಯ್ಸ್ ಕರೆ ಶಾಶ್ವತವಾಗಿ ಇರುತ್ತದೆ ಎಂದು ಪ್ರಕಟಣೆ ಮಾಡಿದ್ದಾರೆ. ಅಲ್ಲದೇ ಯಾವುದೇ ರೋಮಿಂಗ್‌ ಚಾರ್ಜ್ ಇರುವುದಿಲ್ಲ ಮತ್ತು 1GB ಡಾಟಾ ಬೆಲೆ ರೂ.50 ನಿಂದ ಆರಂಭವಾಗಲಿದೆ ಎಂದಿದ್ದಾರೆ. ಅಂದಹಾಗೆ 4G ಡಾಟಾ ಬೆಲೆ ರಿಲಾಯನ್ಸ್ ಜಿಯೋ, ಏರ್‌ಟೆಲ್‌ ಮತ್ತು ಐಡಿಯಾಗಳ ನಡುವೆ ಹೇಗೆ ಭಿನ್ನವಾಗಿದೆ ಎಂಬುದನ್ನು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋ e-KYC ಆಕ್ಟಿವೇಶನ್: ಸಿಮ್ 15 ನಿಮಿಷದಲ್ಲಿ ಆಕ್ಟಿವೇಟ್‌ ಆಗುತ್ತದೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1GB 4G ಡಾಟಾ ಬೆಲೆ

1GB 4G ಡಾಟಾ ಬೆಲೆ

* ರಿಲಾಯನ್ಸ್ ಜಿಯೋ 4G - ರೂ.50
* ಏರ್‌ಟೆಲ್‌ 4G - ರೂ.255
* ವೋಡಾಫೋನ್ 4G - ರೂ.255
* ಐಡಿಯಾ ಸೆಲ್ಯೂಲಾರ್‌ - ರೂ. 246
ಈ ಯೋಜನೆಗಳು 28 ದಿನಗಳ ವ್ಯಾಲಿಡಿಟಿ ಹೊಂದಿವೆ. ಯಾವುದೇ ರಾತ್ರಿ ವೇಳೆ ಬೆನಿಫಿಟ್ಸ್‌ಗಳು ಇಲ್ಲ.

2GB 4G ಡಾಟಾ ಬೆಲೆ

2GB 4G ಡಾಟಾ ಬೆಲೆ

* ರಿಲಾಯನ್ಸ್ ಜಿಯೋ 4G - ಲಭ್ಯವಿಲ್ಲ
* ಏರ್‌ಟೆಲ್‌ 4G - ರೂ.455
* ವೋಡಾಫೋನ್ 4G - ರೂ.359
* ಐಡಿಯಾ ಸೆಲ್ಯೂಲಾರ್‌ - ರೂ. 455
ಈ ಯೋಜನೆಗಳು 28 ದಿನಗಳ ವ್ಯಾಲಿಡಿಟಿ ಹೊಂದಿವೆ. ಯಾವುದೇ ರಾತ್ರಿ ವೇಳೆ ಬೆನಿಫಿಟ್ಸ್‌ಗಳು ಇಲ್ಲ.

4GB 4G ಡಾಟಾ ಬೆಲೆ

4GB 4G ಡಾಟಾ ಬೆಲೆ

* ರಿಲಾಯನ್ಸ್ ಜಿಯೋ 4G - ರೂ.499
* ಏರ್‌ಟೆಲ್‌ 4G - ರೂ.755
* ವೋಡಾಫೋನ್ 4G - ರೂ.559
* ಐಡಿಯಾ ಸೆಲ್ಯೂಲಾರ್‌ - ರೂ. 755
ಈ ಯೋಜನೆಗಳು 28 ದಿನಗಳ ವ್ಯಾಲಿಡಿಟಿ ಹೊಂದಿವೆ. ಯಾವುದೇ ರಾತ್ರಿ ವೇಳೆ ಬೆನಿಫಿಟ್ಸ್‌ಗಳು ಇಲ್ಲ.

ರಿಲಾಯನ್ಸ್‌ ಜಿಯೋ ಅತ್ಯುತ್ತಮ

ರಿಲಾಯನ್ಸ್‌ ಜಿಯೋ ಅತ್ಯುತ್ತಮ

ಮೇಲೆ ತಿಳಿಸಿದ ಡಾಟಾ ದರಗಳನ್ನು ಗಮನಿಸಿದಲ್ಲಿ ರಿಲಾಯನ್ಸ್ ಜಿಯೋ ಇತರೆ ಟೆಲಿಕಾಂಗಳಿಗಿಂತ ಅತ್ಯುಪಯುಕ್ತ ಎಂದು ತಿಳಿಯಬಹುದು. ವಿಶೇಷವೆಂದರೆ ಎಲ್ಲಾ ಜಿಯೋ 4G ಪ್ಲಾನ್‌ಗಳು ಅನ್‌ಲಿಮಿಟೆಡ್‌ ರಾತ್ರಿ ಡಾಟಾ ಬಳಕೆಯನ್ನು 4G ಯಲ್ಲಿ ಒದಗಿಸುತ್ತಿದೆ. ಆದರೆ ವಾಯ್ಸ್ ಕರೆಗಳು ಇದರಲ್ಲಿ ಇರುವುದಿಲ್ಲ.

 ರೂ.1000 ಕ್ಕೆ 4G ಡಾಟಾ ಎಷ್ಟು?

ರೂ.1000 ಕ್ಕೆ 4G ಡಾಟಾ ಎಷ್ಟು?

* ರಿಲಾಯನ್ಸ್ ಜಿಯೋ 4G - 10GB ಡಾಟಾ (28 ದಿನ ವ್ಯಾಲಿಡಿಟಿ), (ಜೊತೆಗೆ ಅನ್‌ಲಿಮಿಟೆಡ್‌ ರಾತ್ರಿ ಡಾಟಾ ಬಳಕೆ+ ವಾಯ್ಸ್ ಕರೆ+ ಉಚಿತ ಮೆಸೇಜ್‌)
* ಏರ್‌ಟೆಲ್‌ 4G - 10GB ಡಾಟಾ (30 ದಿನಗಳ ವ್ಯಾಲಿಡಿಟಿ)
* ವೋಡಾಫೋನ್ 4G - 10GB ((28 ದಿನ ವ್ಯಾಲಿಡಿಟಿ)
* ಐಡಿಯಾ ಸೆಲ್ಯೂಲಾರ್‌ - 6GB(28 ದಿನ ವ್ಯಾಲಿಡಿಟಿ)

 ರೂ.1500 ಕ್ಕೆ 4G ಡಾಟಾ ಎಷ್ಟು?

ರೂ.1500 ಕ್ಕೆ 4G ಡಾಟಾ ಎಷ್ಟು?

* ರಿಲಾಯನ್ಸ್ ಜಿಯೋ 4G - 20GB
* ಏರ್‌ಟೆಲ್‌ 4G - ಲಭ್ಯವಿಲ್ಲ
* ವೋಡಾಫೋನ್ 4G - 15GB
* ಐಡಿಯಾ ಸೆಲ್ಯೂಲಾರ್‌ - 11.5GB

ರೂ.2000 ಕ್ಕೆ 4G ಡಾಟಾ ಎಷ್ಟು?

ರೂ.2000 ಕ್ಕೆ 4G ಡಾಟಾ ಎಷ್ಟು?

* ರಿಲಾಯನ್ಸ್ ಜಿಯೋ 4G - 24GB ಡಾಟಾ ಸಿಗಬಹುದು
* ಏರ್‌ಟೆಲ್‌ 4G - ಲಭ್ಯವಿಲ್ಲ
* ವೋಡಾಫೋನ್ 4G - 20GB
* ಐಡಿಯಾ ಸೆಲ್ಯೂಲಾರ್‌ - 16GB
ರಿಲಾಯನ್ಸ್ ಜಿಯೋ ಮತ್ತು ವೋಡಾಫೋನ್‌ ಹೊರುತಪಡಿಸಿ ಇತರೆ ಟೆಲಿಕಾಂಗಳು 2000 ಕ್ಕಿಂತ ಹೆಚ್ಚಿನ ಬೆಲೆಗೆ ಡಾಟಾ ನೀಡುವುದಿಲ್ಲ.

 ರಿಲಾಯನ್ಸ್ ಜಿಯೋ ಇಂದ 75GB ಡಾಟಾ

ರಿಲಾಯನ್ಸ್ ಜಿಯೋ ಇಂದ 75GB ಡಾಟಾ

ರಿಲಾಯನ್ಸ್ ಜಿಯೋ ರೂ.4999 ಕ್ಕೆ 75GB ಡಾಟಾ ನೀಡಲು ಯೋಜಿಸಿದೆ. ರಿಲಾಯನ್ಸ್ ಜಿಯೋ ಪ್ರೀಮಿಯಂ ಕಂಟೆಂಟ್‌ ಆಪ್ಸ್‌ಗಳಾದ " ಜಿಯೋ ಸಿನೆಮಾ, ಜಿಯೋ ಪ್ಲೇ, ಜಿಯೋ ಬೀಟ್ಸ್' ಆಪ್‌ಗಳ ಆಕ್ಸೆಸ್ ಆಫರ್‌ ನೀಡುತ್ತಿದೆ.

ರಿಲಾಯನ್ಸ್ ಜಿಯೋ

ರಿಲಾಯನ್ಸ್ ಜಿಯೋ

ಇತರೆ ಟೆಲಿಕಾಂಗಳಿಗೆ ಹೋಲಿಸಿದಾಗ ಒಂದೇ ರೀತಿಯ ಟ್ಯಾರಿಫ್ ಪ್ಲಾನ್‌ನಲ್ಲಿ ಶೇಕಡ 25-30 ಹೆಚ್ಚಿನ ಡಾಟಾವನ್ನು ರಿಲಾಯನ್ಸ್ ನೀಡುತ್ತಿದೆ. ಇತರೆ ಉಚಿತ ಬೆನಿಫಿಟ್‌ಗಳು ಸಹ ರಿಲಾಯನ್ಸ್ ಜಿಯೋ ಆಫ್‌ಗಳಿಂದ ಲಭಿಸಲಿದೆ. ಅಲ್ಲದೇ 30,000 ಶಿಕ್ಷಣ ಸ್ಥಂಸ್ಥೆಗಳಲ್ಲಿ ಜಿಯೋ ಆಪ್‌ನ ಆಕ್ಸೆಸ್‌ ಮೂಲಕ ಉಚಿತ ವೈಫೈ ಸಂಪರ್ಕ ಸಾವಿರಾರು ಜನರಿಗೆ ಸಿಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How Much Do You Pay for 4G Data: Jio 4G vs Airtel vs Vodafone. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot