ಅಧೋಗತಿಗಿಳಿದ 'ಬಿಎಸ್​ಎನ್​ಎಲ್'!..ಜಿಯೋ ಎಫೆಕ್ಟ್‌ನಿಂದ ನೌಕರರಿಗೆ ಸಂಬಳವಿಲ್ಲ!!

|

ಟೆಲಿಕಾಂ ಮಾರುಕಟ್ಟೆಯ ಪೈಪೋಟಿ ತಡೆಯಲಾಗದೆ ತತ್ತರಿಸಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ 'ಭಾರತ್ ಸಂಚಾರ ನಿಗಮ ಲಿಮಿಟೆಡ್​' (ಬಿಎಸ್​ಎನ್​ಎಲ್​) 1.76 ಲಕ್ಷ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ವೇತನ ಪಾವತಿಸಿಲ್ಲ ಎಂದು ಹೇಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆಯ ಆದಾಯ ಮಾತ್ರ ಅಧೋಗತಿಯಲ್ಲಿ ಸಾಗಿರುವುದರಿಂದ ವೇತನ ಪಾವತಿಸಲಾಗಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಬಿಎಸ್​ಎನ್​ಎಲ್ ಸಂಸ್ಥೆ ಆರಂಭವಾದ ಇಷ್ಟೂ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಸ್ಥೆಯು ತನ್ನ ಸಿಬ್ಬಂದಿಗೆ ವೇತನ ಪಾವತಿಸಲು ವಿಫಲವಾಗಿದ್ದು, ದೂರಸಂರ್ಪಕ ಸಚಿವ ಮನೋಜ್ ಸಿನ್ಹಾ ಅವರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ. 'ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಸಂಸ್ಥೆಯನ್ನು ಪುನರ್​​ಜ್ಜೀವನಗೊಳಿಸಿ ಉದ್ಯೋಗಿಗಳ ವೇತನ ಪಾವತಿಸಲು ಅನಕೂಲ ಮಾಡಿಕೊಡುವಂತೆ' ಬಿಎಸ್​ಎನ್​ಎಲ್ ಉದ್ಯೋಗಿಗಳ ಒಕ್ಕೂಟವು ಕೋರಿದೆ ಎನ್ನಲಾಗಿದೆ.

ಅಧೋಗತಿಗಿಳಿದ 'ಬಿಎಸ್​ಎನ್​ಎಲ್'!..ಜಿಯೋ ಎಫೆಕ್ಟ್‌ನಿಂದ ನೌಕರರಿಗೆ ಸಂಬಳವಿಲ್ಲ!!

ಬಿಎಸ್​ಎನ್​ಎಲ್​ನ 1.76 ಲಕ್ಷ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ವೇತನ ಪಾವತಿ ಆಗಿಲ್ಲ. ಸಂಸ್ಥೆಯ ಶೇ 50ರಷ್ಟು ಆದಾಯವು ಸಿಬ್ಬಂದಿ ವೇತನ ಪಾವತಿಗೆ ವಿನಿಯೋಗವಾಗುತ್ತಿದ್ದು, ಆದಾಯದ ಪ್ರಮಾಣ ಹೆಚ್ಚಾದಾಗ ವೇತನ ಪಾವತಿ ಸರಳವಾಗುತ್ತದೆ. ಆದರೆ, ಈಗ ಸರ್ಕಾರದ ಯಾವುದೇ ರೀತಿಯ ಹಣಕಾಸಿನ ಬೆಂಬಲ ನೀಡದ ಕಾರಣ ಸಂಸ್ಥೆಯ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಬಿಎಸ್​ಎನ್​ಎಲ್​ ಅಧಿಕಾರಿಯೊಬ್ಬರು ಹೇಳಿದ್ದನ್ನು ಪತ್ರಿಕೆಗಳು ವರದಿ ಮಾಡಿವೆ.

ಟೆಲಿಕಾಂನಲ್ಲಿ ನಡೆಯುತ್ತಿರುವ ಭಾರೀ ದರಸಮರದಿಂದ ಬಿಎಸ್​ಎನ್​ಎಲ್​ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಬಿಎಸ್​ಎನ್​ಎಲ್​ ಸಂಸ್ಥೆ ಸುಮಾರು 8 ಸಾವಿರ ಕೋಟಿಯಷ್ಟು ನಷ್ಟವನ್ನು ಎದುರಿಸುತ್ತಿದೆ. ಇನ್ನು 2017ರ ಆರ್ಥಿಕ ವರ್ಷದಲ್ಲಿ 4,786 ಕೋಟಿಯಷ್ಟು ನಷ್ಟವಾಗಿದ್ದರೆ, 2018ರಲ್ಲಿ 8 ಸಾವಿರ ಕೋಟಿ ಹಾಗೂ 2019ರಲ್ಲಿಯೂ 8,000 ಕೋಟಿಯಷ್ಟು ನಷ್ಟವನ್ನು ಅನುಭವಿಸಿದೆ ಎಂದು ಅಂದಾಜಿಸಲಾಗಿದೆ.

ಅಧೋಗತಿಗಿಳಿದ 'ಬಿಎಸ್​ಎನ್​ಎಲ್'!..ಜಿಯೋ ಎಫೆಕ್ಟ್‌ನಿಂದ ನೌಕರರಿಗೆ ಸಂಬಳವಿಲ್ಲ!!

ಟೆಲಿಕಾಂ ಮಾರುಕಟ್ಟೆಯಲ್ಲಿನ ತೀರ್ವ ದರಸಮರವು ಪ್ರತಿಷ್ಠಿತ ಬಿಎಸ್​ಎನ್​ಎಲ್ ಸಂಸ್ಥೆಯನ್ನು ನುಂಗಿ ಹಾಕುತ್ತಿದೆ. ಕಡಿಮೆ ದರದ ಡೇಟಾ ಹಾಗೂ ಕರೆ ಶುಲ್ಕದಲ್ಲಿ ಸೇವೆ ನೀಡುತ್ತಿರುವ ಜಿಯೋ ಕಂಪೆನಿಗೆ ದೊಡ್ಡ ಸವಾಲಾಗಿದೆ. ಪ್ರಸ್ತುತ ಬಿಎಸ್​ಎನ್​ಎಲ್​ ತೀವ್ರವಾದ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ. ಆದಾಯವಿಲ್ಲದೇ ಬೃಹತ್ ಪ್ರಮಾಣದ ಹಣ ಪಾವತಿಯ ಮೂಲಕ ದಿವಾಳಿತನದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಯುತ್ತಿದೆ ಎಂದು ಬಿಎಸ್​ಎನ್​ಎಲ್​ ಸಂಘ ಹೇಳಿದೆ.

Most Read Articles
Best Mobiles in India

English summary
This is the first instance of the company defaulting on salary payments underlining the tough times for it ahead.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X