ದೇಶದಲ್ಲಿ ಮುಂದಿನ ವರ್ಷದಿಂದ ಬಿಎಸ್‌ಎನ್‌ಎಲ್‌ 4G ಸೇವೆ ಲಭ್ಯ!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳ ಆರ್ಭಟ ಜೋರಾಗಿದೆ. ಇದರ ನಡುವೆಯೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಖಾಸಗಿ ಟೆಲಿಕಾಂಗಳ ನಡುವೆ ಪೈಪೋಟಿ ನಡೆಸುತ್ತಾ ಬಂದಿದೆ. ಸದ್ಯ ಇದೀಗ ಬಿಎಸ್‌ಎನ್‌ಎಲ್‌ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್‌ ಅನ್ನು ನೀಡಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮುಂದಿನ ವರ್ಷ ಸೆಪ್ಟೆಂಬರ್ ವೇಳೆಗೆ ದೇಶಾದ್ಯಂತ ತನ್ನ 4G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಿಂದ ಬಿಎಸ್‌ಎನ್‌ಎಲ್‌ಗೆ ಸುಮಾರು 900 ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಸಂಸತ್ತಿನಲ್ಲಿ ತಿಳಿಸಲಾಗಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಮುಂದಿನ ವರ್ಷ ಸೆಪ್ಟೆಂಬರ್‌ ವೇಳೆಗೆ ದೇಶಾದ್ಯಂತ 4G ಸೇವೆ ಪ್ರಾರಂಭಿಸುವುದಾಗಿ ಹೇಳಿದೆ. ಅಲ್ಲದೆ ದೇಶದ ಎರಡು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಅನ್ನು ಹಿಂತೆಗೆದುಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ಇದರ ಬಗ್ಗೆ ಕೇಂದ್ರ ಸಂವಹನ ರಾಜ್ಯ ಸಚಿವ ದೇವುಸಿಂಗ್ ಚೌಹಾಣ್ ಸಂಸತ್ತಿನಲ್ಲಿ ಲಿಖಿತವಾಗಿ ತಿಳಿಸಿದ್ದಾರೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಟೆಲಿಕಾಂ 4G ಸೇವೆಯಿಂದಾಗುವ ಪ್ರಯೋಜನಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಮುಂದಿನ ವರ್ಷ 4G ನೆಟ್‌ವರ್ಕ್‌ಗೆ ಬದಲಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಂಸತ್‌ ಅದಿವೇಶದಲ್ಲಿ ಕೇಂದ್ರ ಟೆಲಿಕಾಂ ರಾಜ್ಯ ಸಚಿವರು ಈ ವಿಚಾರವನ್ನು ಹೇಳಿದ್ದಾರೆ. BSNL ತನ್ನ 4G ಸೇವೆಗಳ ಪ್ಯಾನ್-ಇಂಡಿಯಾ ರೋಲ್‌ಔಟ್‌ಗೆ ಸೆಪ್ಟೆಂಬರ್ 2022 ಅನ್ನು ಗಡುವು ಎಂದು ನೀಡಿದೆ ಎಂದು ಹೇಳಿದರು. ಅಂದಾಜಿನ ಪ್ರಕಾರ, ದೇಶಾದ್ಯಂತ BSNLನ 4G ಸೇವೆಗಳ ರೋಲ್‌ಔಟ್ ಕಾರ್ಯಾಚರಣೆಯ ಮೊದಲ ವರ್ಷದಲ್ಲಿ ಸುಮಾರು 900 ಕೋಟಿ ರೂಪಾಯಿ ಆದಾಯ ಗಳಿಸಲಿದೆ ಎಂದು ಹೇಳಲಾಗಿದೆ.

BSNL

BSNL ಟೆಲಿಕಾಂ ಈಗಾಗಲೇ 4G ಅಪ್-ಗ್ರೇಡೇಶನ್‌ಗಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್ (NSCS) ನಿಂದ ಅನುಮೋದನೆಯನ್ನು ಪಡೆದುಕೊಂಡಿತ್ತು. ಆದರೆ ನೋಕಿಯಾದ ಉಪಕರಣಗಳೊಂದಿಗೆ ಹೊರತರುವುದು ಅಸುರಕ್ಷಿತ ಎಂದು ಭಾವಿಸಿದ ಕಾರಣ ಸರ್ಕಾರದ ಮಂಡಳಿಯಲ್ಲಿ ನಾಮನಿರ್ದೇಶಿತರು ಅದನ್ನು ರದ್ದುಗೊಳಿಸಿದರು. ಆದಾಗ್ಯೂ, ಈಗ ಕಂಪನಿಯು ಮುಂದಿನ ವರ್ಷದ ವೇಳೆಗೆ ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ 4G ನೆಟ್‌ವರ್ಕ್ ಅನ್ನು ಹೊರತರಲಿದೆ ಎಂದು ಹೇಳಲಾಗಿದೆ.

ಟೆಲಿಕಾಂ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಟೆಲಿಕಾಂ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅನುಮೋದನೆ ನೀಡಿತ್ತು. ಹೆಚ್ಚುವರಿಯಾಗಿ, ಟೆಲಿಕಾಂ ಕಂಪನಿಗಳಿಗೆ ಸ್ಪೆಕ್ಟ್ರಮ್ ಶುಲ್ಕಗಳು ಮತ್ತು AGR ಬಾಕಿಗಳ ಮೇಲೆ ನಾಲ್ಕು ವರ್ಷಗಳ ನಿಷೇಧ ಮಾಡಲು ಸರ್ಕಾರ ನಿರ್ಧರಿಸಿತು. ಆದರೆ BSNL ನ ಮುಂಬರುವ 4G ಟೆಂಡರ್‌ನಲ್ಲಿ ಭಾಗವಹಿಸಲು ಸಿದ್ಧರಿರುವ ಭಾರತೀಯ ಕಂಪನಿಗಳಿಗೆ ಟೆಲ್ಕೋಸ್ (BSNL) ಪರಿಕಲ್ಪನೆಯ ಪುರಾವೆಗಾಗಿ (POC) ಆಸಕ್ತಿಯ ಅಭಿವ್ಯಕ್ತಿಯನ್ನು ಆಹ್ವಾನಿಸಿದೆ. ಈ ಹಿಂದೆ, ಸರ್ಕಾರವು ಟೆಲಿಕಾಂ ಕಂಪನಿಗಳಾದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಎರಡಕ್ಕೂ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯು 4G ಸೇವೆಗಳಿಗೆ ಸ್ಪೆಕ್ಟ್ರಮ್‌ನ ಆಡಳಿತಾತ್ಮಕ ಹಂಚಿಕೆಯನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್‌

ಇದಲ್ಲದೆ ಇತ್ತೀಚಿಗಷ್ಟೇ ಬಿಎಸ್‌ಎನ್‌ಎಲ್‌ ಟೆಲಿಕಾಂ ಲೈಫ್‌ಟೈಂ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಸ್ಥಗಿತಗೊಳಿಸಿದೆ. ಈ ಮೂಲಕ BSNL ದೇಶಾದ್ಯಂತ ತನ್ನ ಎಲ್ಲಾ ಲೈಫ್‌ಟೈಂ ಪ್ರಿಪೇಯ್ಡ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಬಿಎಸ್‌ಎನ್‌ಎಲ್‌ ಈ ಪ್ಲಾನ್‌ಗಳ ಸ್ಥಗಿತಕ್ಕೆ ಕಾರಣ ಏನು ಅನ್ನೊದನ್ನ ತಿಳಿಸಿಲ್ಲ. ಆದರೆ ಈ ಯೋಜನೆಗಳ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಇದಕ್ಕೆ ಪರಿಹಾರವನ್ನು ಕೂಡ ಸೂಚಿಸಿದೆ. ಅಂದರೆ ಲೈಪ್‌ಟೈಂ ಪ್ರಿಪೇಯ್ಡ್ ಗ್ರಾಹಕರನ್ನು 107ರೂ.ಗಳ ಪ್ರೀಮಿಯಂ ಪರ್ ಮಿನಿಟ್‌ ಪ್ಲಾನ್‌ಗಳ ಸ್ಥಳಾಂತರಿಸಲಾಗುವುದಾಗಿ ಹೇಳಿದೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಲೈಫ್‌ಟೈಂ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಸ್ಥಗಿತ ಗೊಳಿಸಿ ಗ್ರಾಹಕರನ್ನು 107 ಪ್ರೀಮಿಯಂ ಪರ್‌ ಮಿನಿಟ್ ಪ್ಲಾನ್‌ಗೆ ಸ್ಥಳಾಂತರಿಸುತ್ತಿದೆ. ಲೈಪ್‌ಟೈಂ ನಿಂದ ಪ್ರಿಮಿಯಂ ಪ್ಲಾನ್‌ಗೆ ಬದಲಾದ ಚಂದಾದಾರರು ಯಾವುದೇ ಉಚಿತಗಳಿಗೆ ಪ್ರವೇಶವನ್ನು ಹೊಂದಿರುವುದಿಲ್ಲ. ಈ ವಲಸೆ ಈಗಾಗಲೇ ಅಂದರೆ ಡಿಸೆಂಬರ್ 1 ರಿಂದ ಪ್ರಾರಂಭವಾಗಿದೆ. ಇನ್ನು ಈ 107ರೂ.ಗಳ ಪ್ರಿಮಿಯಂ ಪ್ಲಾನ್‌ 90 ದಿನಗಳ ಮಾನ್ಯತೆಯ ಅವಧಿಯನ್ನು ನೀಡುತ್ತದೆ.

Most Read Articles
Best Mobiles in India

English summary
BSNL has announced the launch of its 4G services across the country by September next year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X