ಬಿಎಸ್‌ಎನ್‌ಎಲ್‌ನಿಂದ 321ರೂ. ಪ್ಲ್ಯಾನ್‌ ಲಾಂಚ್!..ಭರ್ಜರಿ ಪ್ರಯೋಜನ ಲಭ್ಯ, ಆದರೆ...

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಹಲವು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ಕೆಲವು ಅಧಿಕ ಡೇಟಾ ಯೋಜನೆಗಳ ಮೂಲಕ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುವ ಹೆಜ್ಜೆಗಳನ್ನು ಹಾಕುತ್ತಾ ಮುನ್ನಡೆದಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ಬಿಎಸ್‌ಎನ್‌ಎಲ್‌ ಇದೀಗ ಹೊಚ್ಚ ಹೊಸದೊಂದು ಪ್ರೀಪೇಯ್ಡ್‌ ಪ್ಲ್ಯಾನ್‌ ಪರಿಚಯಿಸಿದ್ದು, ಇದು ಒಂದು ವರ್ಷದ ವ್ಯಾಲಿಡಿಟಿ ಪಡೆದಿದೆ.

ನೂತನವಾಗಿ

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಯು ನೂತನವಾಗಿ 321 ರೂ.ಗಳ ಪ್ರೀಪೇಯ್ಡ್‌ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರಮುಖ ಹೈಲೈಟ್‌ ಆಗಿ ಕಾಣಿಸುತ್ತದೆ. ಈ ಯೋಜನೆಯಲ್ಲಿ ಒಳಬರುವ ಹಾಗೂ ಹೊರಹೋಗುವ ಕರೆಗಳು ಉಚಿತ ಆಗಿರುತ್ತವೆ. ಇದರೊಂದಿಗೆ ಡೇಟಾ ಪ್ರಯೋಜನ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಸಹ ಗ್ರಾಹಕರಿಗೆ ಲಭ್ಯವಾಗಲಿವೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 321ರೂ. ಪ್ಲ್ಯಾನ್‌ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 321ರೂ. ಪ್ಲ್ಯಾನ್‌ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ ಈ ನೂತನ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಹಾಗೆಯೇ ಪ್ರತಿ ತಿಂಗಳು 15GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ತಿಂಗಳಿಗೆ ಒಟ್ಟು 250 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗಲಿದೆ. ಒಳಬರುವ ಹಾಗೂ ಹೊರಹೋಗುವ ಕರೆಗಳು ಉಚಿತ ಆಗಿರುತ್ತವೆ. ಒಂದು ವರ್ಷದ ವರೆಗೆ ಸಿಮ್ ಆಕ್ಟಿವ್ ಆಗಿರುತ್ತದೆ. ಈ ನಿಟ್ಟಿನಲ್ಲಿ ಕಡಿಮೆ ಪ್ರೈಸ್‌ ಟ್ಯಾಗ್‌ನಲ್ಲಿ ಅಧಿಕ ಪ್ರಯೋಜನದ ಯೋಜನೆ ಆಗಿ ಗಮನ ಸೆಳೆದಿದೆ.

ಎಲ್ಲರಿಗೂ ಈ ಪ್ಲ್ಯಾನ್‌ ಲಭ್ಯವಿಲ್ಲ!

ಎಲ್ಲರಿಗೂ ಈ ಪ್ಲ್ಯಾನ್‌ ಲಭ್ಯವಿಲ್ಲ!

ಇದು ರಾಜ್ಯ ಪೊಲೀಸರಿಗೆ ಸಹಾಯ ಮಾಡಲು ಬಿಎಸ್‌ಎನ್‌ಎಲ್‌ (BSNL) ನ ಉತ್ತಮ ಉಪಕ್ರಮವಾಗಿದೆ. ವಿಶೇಷವಾಗಿ ಇದು ಪೊಲೀಸರಿಗೆ ರೂಪಿಸಲಾದ ಪ್ರೀಪೇಯ್ಡ್‌ ಯೋಜನೆ ಆಗಿದೆ. ಸಾಮಾನ್ಯವಾಗಿ ಯಾವುದೇ ಖಾಸಗಿ ಟೆಲಿಕಾಂ ಆಪರೇಟರ್‌ಗಳು ತಮ್ಮ ಗ್ರಾಹಕರಿಗೆ ಇಂತಹ ಯಾವುದೇ ಯೋಜನೆಗಳನ್ನು ನೀಡುವುದಿಲ್ಲ. ಈ ಯೋಜನೆಯು ತಮಿಳುನಾಡು ಟೆಲಿಕಾಂ ವೃತ್ತದ ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌ನಲ್ಲಿ ಕಾಣಿಸುತ್ತದೆ. ಹೀಗಾಗಿ ಇದು ಕೇವಲ ತಮಿಳುನಾಡು ವಲಯಕ್ಕೆ ಮಾತ್ರ ಲಭ್ಯವಿರುತ್ತದೆ. ಉಳಿದ ಇತರೆ ರಾಜ್ಯಗಳಿಗೆ ಲಭ್ಯವಿರುವುದಿಲ್ಲ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ನ ಈ ಯೋಜನೆಯೊಂದಿಗೆ ರೋಮಿಂಗ್‌ನಲ್ಲಿಯೂ ಸಹ ಒಳಬರುವ ವಾಯಿಸ್‌ ಕರೆಗಳು ಉಚಿತವಾಗಿದೆ. ಬಿಎಸ್‌ಎನ್‌ಎಲ್‌ ಸಂಸ್ಥೆಯು ತಮಿಳುನಾಡು ರಾಜ್ಯದಲ್ಲಿ 4G ನೆಟ್‌ವರ್ಕ್‌ಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಹಾಗೆಯೇ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಈ ಯೋಜನೆಯ ರೀಚಾರ್ಜ್‌ಗೆ ಒಲವು ತೋರಬಹುದು, ಏಕೆಂದರೆ ಇದು ಕೈಗೆಟುಕುವ ಬೆಲೆ ಮತ್ತು ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯವನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 599ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಪ್ರತಿದಿನ 5 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ನ ಈ SVT 499 ರೂ. ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಿದ್ದು, ಒಟ್ಟು ಪೂರ್ಣ ಅವಧಿಗೆ 180 GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್‌ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 347ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 347ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 347ರೂ. ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯು 2 GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ.

Best Mobiles in India

English summary
BSNL has launched New Rs. 321 Prepaid Plan for Police Officers in Tamil Nadu.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X