ಮೂರು ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಪರೋಕ್ಷವಾಗಿ ಸುಂಕ ಹೆಚ್ಚಿಸಿದ BSNL!

|

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಅಗ್ಗದ ದರದಲ್ಲಿ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸುವ ಮೂಲಕ ತನ್ನದೇ ಆದ ಸೇವೆ ನೀಡುತ್ತಾ ಬರುತ್ತಿದೆ. ಅದರಲ್ಲೂ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಾದ ಏರ್‌ಟೆಲ್‌ ಹಾಗೂ ಜಿಯೋ ಮತ್ತು ವಿ ಸಂಸ್ಥೆಗಳಿಗೆ ಪೈಪೋಟಿ ನೀಡಲು ಮುಂದಾಗಿರುವ ಬಿಎಸ್‌ಎನ್‌ಎಲ್‌ ತನ್ನ ರೀಚಾರ್ಜ್‌ ಪ್ಲ್ಯಾನ್‌ನಲ್ಲಿನ ದರ ಹೆಚ್ಚಿಗೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್‌ ನೀಡಿದೆ.

ಸಂಚಾರ

ಹೌದು, ಭಾರತ ಸಂಚಾರ ನಿಗಮ ಲಿಮಿಟೆಡ್‌ನ ಗ್ರಾಹಕರು 4G ಅನುಭವ ಪಡೆಯಲು ಕಾತುರರಾಗಿರುವ ನಡುವೆ 3G ಸೇವೆ ಪಡೆಯುತ್ತಿರುವ ಗ್ರಾಹಕರು ಬೇಸರವಾಗುವ ನಿರ್ಧಾರವನ್ನು ಬಿಎಸ್‌ಎನ್‌ಎಲ್‌ ತೆಗೆದುಕೊಂಡಿದೆ. 3G ಪ್ಲಾನ್‌ಗಳಿಗಾಗಿ ಡೇಟಾ ಬೆಲೆಗಳನ್ನು ಹೆಚ್ಚಿಗೆ ಮಾಡಲಾಗಿದ್ದು, ಯಾವೆಲ್ಲಾ ಪ್ಲ್ಯಾನ್‌ ದರ ಹೆಚ್ಚಿಗೆಯಾಗಿದೆ?, ಈ ಪ್ಲ್ಯಾನ್‌ನಲ್ಲಿ ಲಭ್ಯವಾಗುವ ಸೌಲಭ್ಯ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸುಂಕ ಹೆಚ್ಚಿಗೆ ಮಾಡಿಲ್ಲ

ಸುಂಕ ಹೆಚ್ಚಿಗೆ ಮಾಡಿಲ್ಲ

ಗಮನಿಸಬೇಕಾದ ವಿಷಯ ಎಂದರೆ ಸುಂಕಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬದಲಾಗಿ ನೀಡುತ್ತಿದ್ದ ಪ್ರಯೋಜನದ ಸಮಯವನ್ನು ಕಡಿಮೆ ಮಾಡಲಾಗಿದೆ. ಇನ್ನು ಬಿಎಸ್‌ಎನ್‌ಎಲ್‌ ಸುಂಕವನ್ನು ಕಡಿತಗೊಳಿಸಿದ ಮೂರು ಯೋಜನೆಗಳೆಂದರೆ 269 ರೂ, 499 ರೂ. ಹಾಗೂ 799 ರೂ. ಪ್ಲ್ಯಾನ್‌ಗಳು. ಇದರಲ್ಲಿ 269 ರೂ. ಹಾಗೂ 769 ರೂ. ಪ್ಲ್ಯಾನ್‌ ಅನ್ನು ಅಕ್ಟೋಬರ್ 2022 ರಲ್ಲಿ ಪ್ರಾರಂಭಿಸಲಾಗಿದ್ದು, 499 ರೂ. ನ ಪ್ರಿಪೇಯ್ಡ್ ಯೋಜನೆಯು ಹಳೆಯ ಕೊಡುಗೆಯಾಗಿದೆ.

 269 ರೂ.  ಪ್ಲ್ಯಾನ್‌

269 ರೂ. ಪ್ಲ್ಯಾನ್‌

269 ರೂ.ನ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ವಾಯ್ಸ್‌ ಕಾಲ್‌, 2GB ದೈನಂದಿನ ಡೇಟಾ ಹಾಗೂ ಪ್ರತಿನಿತ್ಯ 100 ಎಸ್‌ಎಮ್‌ಎಸ್‌ ಆಯ್ಕೆ ನೀಡಲಿದ್ದು, ಇದರಲ್ಲಿ ಬಿಎಸ್‌ಎನ್‌ಎಲ್‌ ಟ್ಯೂನ್ಸ್ + ಇರೋಸ್ ನೌ ಸೇವೆಗಳು ಮತ್ತು ಹಾರ್ಡಿ ಮೊಬೈಲ್ ಗೇಮ್ಸ್ ಸೇವೆ ಜೊತೆಗೆ ಚಾಲೆಂಜಸ್ ಅರೆನಾ ಮೊಬೈಲ್ ಗೇಮಿಂಗ್ ಸೇವೆ, ಲೋಕಧುನ್, ಝಿಂಗ್ ಮತ್ತು ಹೆಚ್ಚಿನ ಗೇಮಿಂಗ್ ಪ್ರಯೋಜನಗಳು ಇದರಲ್ಲಿ ಸಿಗಲಿದೆ. ಇನ್ನು ಈ ಪ್ಲ್ಯಾನ್‌ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಎಲ್ಲಾ ಸೌಲಭ್ಯದ ಜೊತೆಗೆ ಹಳೆಯ ಪ್ಲ್ಯಾನ್‌ ಒಟ್ಟು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು. ಈ ಮೂಲಕ ದಿನಕ್ಕೆ 8.96 ರೂ.ನಿಂದ 9.60 ರೂ.ಗಳಿಗೆ ಏರಿದಂತೆ ಆಗಿದೆ.

499 ರೂ. ಗಳ ಪ್ಲ್ಯಾನ್‌

499 ರೂ. ಗಳ ಪ್ಲ್ಯಾನ್‌

499 ರೂ. ಗಳ ಪ್ಲ್ಯಾನ್‌ನಲ್ಲಿ 2GB ದೈನಂದಿನ ಡೇಟಾ, ಅನಿಯಮಿತ ವಾಯ್ಸ್‌ ಕಾಲ್‌ ಹಾಗೂ ದಿನವೂ 100 ಎಸ್‌ಎಮ್‌ಎಸ್‌ ಆಯ್ಕೆ ಜೊತೆಗೆ ಬಿಎಸ್‌ಎನ್‌ಎಲ್‌ ಟ್ಯೂನ್ಸ್, ಜಿಂಗ್ ಮತ್ತು ಗೇಮಿಂಗ್ ಪ್ರಯೋಜನಗಳು ಈ ಪ್ಲ್ಯಾನ್‌ನಲ್ಲಿವೆ. ಈ ಎಲ್ಲಾ ಸೌಲಭ್ಯದ ಜೊತೆಗೆ 75 ದಿನಗಳ ಮಾನ್ಯತೆ ಹೊಂದಿರಲಿದೆ. 499 ರೂ. ಗಳ ಹಳೆಯ ಪ್ಲ್ಯಾನ್‌ ಬಗ್ಗೆ ಹೇಳುವುದಾದರೆ ಇದೇ ಸೌಲಭ್ಯಗಳ ಜೊತೆಗೆ 90 ದಿನಗಳ ಮಾನ್ಯತೆ ಇತ್ತು. ಆದರೆ, ಹೊಸ ಪ್ಲ್ಯಾನ್‌ನಲ್ಲಿ 75 ದಿನಗಳ ಮಾನ್ಯತೆ ಹೊಂದಿದ್ದು, ಒಂದು ದಿನದ ಚಾರ್ಜ್‌ 6.65 ರೂ. ಗೆ ಏರಿಕೆ ಆಗಿದೆ.

769 ರೂ. ಗಳ ಪ್ಲ್ಯಾನ್‌

769 ರೂ. ಗಳ ಪ್ಲ್ಯಾನ್‌

769 ರೂ. ಗಳ ಪ್ಲ್ಯಾನ್‌ ನಲ್ಲಿ ದಿನವೂ 2GB ದೈನಂದಿನ ಡೇಟಾ ಹಾಗೂ ಅನಿಯಮಿತ ವಾಯ್ಸ್‌ ಕಾಲ್‌ ಮತ್ತು 100 ಎಸ್‌ಎಮ್‌ಎಸ್‌ ಸೇವೆ ನೀಡಲಾಗುತ್ತದೆ. ಇದರೊಂದಿಗೆ ಎರೋಸ್‌ ನೌ ಸೇರಿದಂತೆ ಇನ್ನಿತರೆ ಮನರಂಜನೆ ಸೇವೆಗಳಿಗೆ ಪ್ರವೇಶ ಪಡೆಯಬಹುದು. ಇದು ಒಟ್ಟಾರೆ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಆದರೆ, ಹಳೆಯ ಇದೇ ಬೆಲೆಯ ರೀಚಾರ್ಜ್‌ ಪ್ಲ್ಯಾನ್‌ 90 ದಿನಗಳ ಮಾನ್ಯತೆ ಹೊಂದಿತ್ತು. ಈ ಮೂಲಕ ಇನ್ಮುಂದೆ ದಿನಕ್ಕೆ 9.15 ರೂ. ಗಳನ್ನು ವ್ಯಯಿಸಬೇಕಾಗುತ್ತದೆ.

Best Mobiles in India

English summary
BSNL Implements Indirect Tariff Hike on Three More Plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X