BSNL: ಬಿಎಸ್‌ಎನ್ಎಲ್‌ನ ಎರಡು ಹೊಸ ಪ್ಲ್ಯಾನ್‌ಗಳಿಗೆ ಶಾಕ್ ಆದ ಖಾಸಗಿ ಟೆಲಿಕಾಂಗಳು!

|

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರದ ಸ್ಪರ್ಧೆ ಜೋರಾಗಿಯೇ ನಡೆಯುತ್ತಿದ್ದು, ಖಾಸಗಿ ಟೆಲಿಕಾಂಗಳೊಂದಿಗೆ ಬಿಎಸ್‌ಎನ್ಎಲ್ ಸಹ ಜಿದ್ದಿಗೆ ಬಿದ್ದಿದೆ. ಕಳೆದ ಡಿಸೆಂಬರ್‌ 2019ರಲ್ಲಿ ಪ್ರೀಪೇಡ್‌ ಪ್ಲ್ಯಾನ್‌ಗಳ ಬೆಲೆ ಹೆಚ್ಚಳವಾದ ನಂತರ ಚಂದಾದಾರರನ್ನು ಆಕರ್ಷಿಸಿಲು ಟೆಲಿಕಾಂಗಳು ಮತ್ತೆ ನೂತನ ಆಫರ್‌ಗಳನ್ನು ನೀಡುತ್ತ ಸಾಗಿವೆ. ಈ ಪೈಕಿ ಬಿಎಸ್ಎನ್ಎಲ್ ಸಹ ಹೊರತಾಗಿಲ್ಲ. ಬಿಎಸ್ಎನ್ಎಲ್ ಇದೀಗ ಎರಡು ಹೊಸ ಪ್ಲ್ಯಾನ್‌ಗಳನ್ನ ಪರಿಚಯಿಸಿದ್ದು, ಖಾಸಗಿ ಟೆಲಿಕಾಂಗಳಿಗೆ ಶಾಕ್ ಆಗಿವೆ.

 ಬಿಎಸ್ಎನ್ಎಲ್ ಸಂಸ್ಥೆ

ಹೌದು, ಬಿಎಸ್ಎನ್ಎಲ್ ಸಂಸ್ಥೆಯು 108ರೂ ಮತ್ತು 1999ರೂ ಬೆಲೆಯ ಎರಡು ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಘೋಷಿಸಿದೆ. ಇವುಗಳಲ್ಲಿ 108ರೂ. ಪ್ಲ್ಯಾನ್ ಅಲ್ಪಾವಧಿಯ ಪ್ರೀಪೇಡ್‌ ಪ್ಲ್ಯಾನ್‌ ಆಗಿದ್ದು, 1999ರೂ. ಪ್ಲ್ಯಾನ್ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ ಆಗಿದೆ. ಹಾಗೆಯೇ ಈ ಎರಡು ಪ್ಲ್ಯಾನ್‌ಗಳು ಪ್ರತಿದಿನ ಡೇಟಾ ಹಾಗೂ ಎಸ್ಎಮ್ಎಸ್ ಪ್ರಯೋಜನಗಳನ್ನು ಒದಗಿಸಲಿವೆ. ಬಿಎಸ್ಎಲ್ಎನ್ಎಲ್‌ನ ಈ ಫ್ಲ್ಯಾನ್‌ಗಳ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಬಿಎಸ್ಎನ್ಎಲ್ 108ರೂ ಪ್ಲ್ಯಾನ್

ಬಿಎಸ್ಎನ್ಎಲ್ 108ರೂ ಪ್ಲ್ಯಾನ್

ಬಿಎಸ್ಎನ್ಎಲ್ 108ರೂ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 250 ನಿಮಿಷ ಉಚಿತ ವಾಯಿಸ್‌ ಕರೆಗಳ ಸೌಲಭ್ಯವು ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 1GB ಡೇಟಾ ದೊರೆಯಲಿದ್ದು, ಒಟ್ಟು ವ್ಯಾಲಿಡಿಟಿ ಅವಧಿಗೆ 500ಎಸ್ಎಮ್ಎಸ್ ಪ್ರಯೋಜನ ಸಹ ಸಿಗಲಿದೆ. 1GB ಡೇಟಾ ಮುಗಿತ ಬಳಿಕ 80 Kbps ವೇಗದಲ್ಲಿ ಡೇಟಾ ಇರಲಿದೆ.

ಬಿಎಸ್ಎನ್ಎಲ್ 1999ರೂ ಪ್ಲ್ಯಾನ್

ಬಿಎಸ್ಎನ್ಎಲ್ 1999ರೂ ಪ್ಲ್ಯಾನ್

ಈಗಾಗಲೇ ಬಹುತೇಕ ಗ್ರಾಹಕರಿಗೆ ಬಿಎಸ್ಎನ್ಎಲ್‌ನ 1999ರೂ ಪ್ಲ್ಯಾನ್ ಬಗ್ಗೆ ತಿಳಿದಿದೆ. ಈ ಪ್ರೀಪೇಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದೆ. ಆದರೆ ರಿಪಬ್ಲಿಕ್ ಡೇ ಪ್ರಯುಕ್ತ ಫೆ.15ರ. ಒಳಗೆ ಈ ಪ್ಲ್ಯಾನ್ ರೀಚಾರ್ಜ್ ಮಾಡಿಕೊಳ್ಳುವ ಗ್ರಾಹಕರಿಗೆ ಹೆಚ್ಚುವರಿಯಾಗಿ 71 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದೆ. ಉಳಿದಂತೆ ಈ ಪ್ಲ್ಯಾನಿನಲ್ಲಿ ಪ್ರತಿದಿನ 250 ನಿಮಿಷ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಇದೆ. ಹಾಗೂ ಪ್ರತಿದಿನ 3GB ಡೇಟಾ ಮತ್ತು ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನಗಳು ದೊರೆಯುತ್ತವೆ.

ಪ್ಲ್ಯಾನ್‌ ಲಭ್ಯತೆ

ಪ್ಲ್ಯಾನ್‌ ಲಭ್ಯತೆ

ಬಿಎಸ್ಎನ್ಎಲ್‌ ಈ ಎರಡು ಆಕರ್ಷಕ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಸದ್ಯ ಕೇರಳ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ಬಿಡುಗಡೆ ಮಾಡಿದೆ. ಚೆನೈ ಮತ್ತು ತಮಿಳನಾಡು ಟೆಲಿಕಾಂ ಸರ್ಕಲ್‌ಗಳಲ್ಲಿ ಈಗಾಗಲೇ ಈ ಪ್ಲ್ಯಾನ್‌ಗಳು ಚಾಲ್ತಿಯಲ್ಲಿವೆ. 1999ರೂ. ಪ್ರೀಪೇಡ್‌ ಪ್ಲ್ಯಾನ್‌ ಕರ್ನಾಟಕದಲ್ಲಿಯೂ ಲಭ್ಯವಿದೆ.

ಅಗ್ಗದ ಬೆಲೆಗೆ ಪ್ರತಿದಿನ 1GB ಡೇಟಾ ನೀಡುವ ಬೆಸ್ಟ್‌ ಪ್ಲ್ಯಾನ್‌ಗಳು!

ಅಗ್ಗದ ಬೆಲೆಗೆ ಪ್ರತಿದಿನ 1GB ಡೇಟಾ ನೀಡುವ ಬೆಸ್ಟ್‌ ಪ್ಲ್ಯಾನ್‌ಗಳು!

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಪ್ರೀಪೇಡ್‌ ಪ್ಲ್ಯಾನ್‌ಗಳ ದರ ಹೆಚ್ಚಳ ಮಾಡಿ ಶಾಕ್ ನೀಡಿದವು. ಆದಾದ ಮೇಲೆ ಗ್ರಾಹಕರು ಕಡಿಮೆ ಬೆಲೆಗೆ ಯಾವ ಪ್ಲ್ಯಾನಿನಲ್ಲಿ ಪ್ರತಿದಿನ ಡೇಟಾ, ಉಚಿತ ಕರೆ ಹಾಗೂ ಅಧಿಕ ವ್ಯಾಲಿಡಿಟಿ ಪ್ರಯೋಜನಗಳಿವೆ ಎಂದು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಸಹ ಡೇಟಾ, ವಾಯಿಸ್ ಕರೆ ಮತ್ತು ವ್ಯಾಲಿಡಿಟಿ ಸೌಲಭ್ಯದ ಆಕರ್ಷಕ ಪ್ಲ್ಯಾನ್‌ ಪರಿಚಯಿಸಿವೆ.

1GB ಡೇಟಾ

ಹೌದು, ಪ್ರಸ್ತುತ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಚಂದಾದಾರರರು ಪ್ರತಿದಿನ 1GB ಡೇಟಾ ಪ್ರಯೋಜನ ಒಳಗೊಂಡಿರುವ ಪ್ರೀಪೇಡ್‌ ಪ್ಲ್ಯಾನ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇನ್ನು ಕೆಲವು ಚಂದಾದಾರರು ವ್ಯಾಲಿಡಿಟಿ ಕಡಿಮೆ ಇದ್ದರೂ ಪ್ರತಿದಿನ 1GB ಡೇಟಾ ಮತ್ತು ಉಚಿತ ವಾಯಿಸ್‌ ಕರೆಗಳ ಸೌಲಭ್ಯಗಳಿರುವ ಅಗ್ಗದ ಪ್ರೀಪೇಡ್‌ ಪ್ಲ್ಯಾನ್‌ಗಳಿಗೆ ಅನಿವಾರ್ಯವಾಗಿ ಮನಸೋಲುತ್ತಿದ್ದಾರೆ. ಸದ್ಯ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್‌ ಟೆಲಿಕಾಂಗಳಲ್ಲಿ ಪ್ರತಿದಿನ 1GB ಡೇಟಾ ಮತ್ತು ವಾಯಿಸ್‌ ಕರೆ ಸೌಲಭ್ಯಗಳಿರುವ ಅಗ್ಗದ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ರಿಲಾಯನ್ಸ್‌ ಜಿಯೋ 149ರೂ. ಪ್ಲ್ಯಾನ್

ರಿಲಾಯನ್ಸ್‌ ಜಿಯೋ 149ರೂ. ಪ್ಲ್ಯಾನ್

ರಿಲಾಯನ್ಸ್‌ ಜಿಯೋ ಪ್ರತಿದಿನ 1GB ಡೇಟಾ ಸೌಲಭ್ಯ ಒಳಗೊಂಡಿರುವ ಹಲವು ಪ್ಲ್ಯಾನ್‌ಗಳಿವೆ. ಅವುಗಳಲ್ಲಿ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ 149ರೂ ಪ್ಲ್ಯಾನ್ ಇದೆ. ಈ ಪ್ರೀಪೇಡ್ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ, ಜಿಯೋ ಟು ಜಿಯೋ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಮತ್ತು ಜಿಯೋದಿಂದ ಇತರೆ ಟೆಲಿಕಾಂಗಳಿಗೆ 300 ಉಚಿತ ನಿಮಿಷಗಳ ಸೌಲಭ್ಯಗಳಿವೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಪ್ರಯೋಜನ ಇದ್ದು, ಜಿಯೋ ಟಿವಿ ಸೇವೆಯು ಸಿಗಲಿದೆ.

ವೊಡಾಫೋನ್ ಅಗ್ಗದ 1GB ಡೇಟಾ ಪ್ಲ್ಯಾನ್‌ಗಳು

ವೊಡಾಫೋನ್ ಅಗ್ಗದ 1GB ಡೇಟಾ ಪ್ಲ್ಯಾನ್‌ಗಳು

ವೊಡಾಫೋನ್‌ ಟೆಲಿಕಾಂ ಸಹ ಪ್ರತಿದಿನ 1GB ಡೇಟಾ ಒದಗಿಸುವ ಅಗ್ಗದ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಹೊಂದಿದೆ. ಅವುಗಳಲ್ಲಿ 199ರೂ ಮತ್ತು 219ರೂ. ಪ್ರೀಪೇಡ್‌ ಪ್ಲ್ಯಾನ್‌ಗಳು ಹೆಚ್ಚು ಆಕರ್ಷಕ ಎನಿಸಿವೆ. 199ರೂ. ಪ್ರೀಪೇಡ್‌ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಅದೇ ರೀತಿ 219ರೂ. ಪ್ರೀಪೇಡ್‌ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಎರಡು ಪ್ಲ್ಯಾನ್‌ಗಳು ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿದಿನ 1GB ಡೇಟಾ ಹಾಗೂ 100ಎಸ್ಎಮ್ಎಸ್ ಪ್ರಯೋಜನ ಒದಗಿಸಲಿದೆ. ಹಾಗೆಯೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಒದಗಿಸಲಿದೆ.

ಏರ್‌ಟೆಲ್ 219ರೂ ಪ್ಲ್ಯಾನ್

ಏರ್‌ಟೆಲ್ 219ರೂ ಪ್ಲ್ಯಾನ್

ಏರ್‌ಟೆಲ್‌ ಟೆಲಿಕಾಂ ಸಹ 219ರೂ ಪ್ರೀಪೇಡ್‌ ಪ್ಲ್ಯಾನ್ ಹೊಂದಿದ್ದು, ಈ ಪ್ಲ್ಯಾನ್ ಪ್ರತಿದಿನ 1GB ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ಯಾವುದೇ ಟೆಲಿಕಾಂಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಹೊಂದಿದ್ದು, ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯಗಳನ್ನು ಪಡೆದಿದೆ. ಇನ್ನು ಈ ಪ್ರೀಪೇಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
BSNL Rs 1,999 prepaid plan is offering benefits for 436 days as part of limited period offer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X