ಡೈಲಿ 2GB, 3GB ಡೇಟಾ ಬೇಕಿದ್ದರೆ ಬಿಎಸ್‌ಎನ್‌ಎಲ್‌ನ ಈ ಪ್ಲಾನ್‌ ಬೆಸ್ಟ್‌!

|

ಪ್ರಸ್ತುತ ಖಾಸಗಿ ಟೆಲಿಕಾಂಗಳ ಆರ್ಭಟದ ನಡುವೆಯೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹಲವು ಆಕರ್ಷಕ ಪ್ಲಾನ್‌ಗಳ ಮೂಲಕ ಗಮನ ಸೆಳೆದಿದೆ. ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವ ಹಲವಾರು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಾ ಬಂದಿದೆ. ಈ ಪೈಕಿ ಕೆಲವು ಪ್ರಿಪೇಯ್ಡ್ ಪ್ಲಾನ್‌ಗಳು ಖಾಸಗಿ ಟೆಲಿಕಾಂಗಳು ನೀಡರುವ ಪ್ರಯೋಜನಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಒಳಗೊಂಡಿವೆ. ಇವುಗಳಲ್ಲಿ ಬಿಎಸ್‌ಎನ್‌ಎಲ್‌ನ 365ರೂ ಪ್ರಿಪೇಯ್ಡ್ ಪ್ಲಾನ್ ಕೂಡ ಒಂದಾಗಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಪರಿಚಯಸಿರುವ ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳು ಖಾಸಗಿ ಟೆಲಿಕಾಂಗಳಿಗಿಂತ ಅಧಿಕ ಪ್ರಯೋಜನ ನೀಡುತ್ತವೆ. ಅದರಲ್ಲೂ ಬಿಎಸ್‌ಎನ್‌ 365ರೂ ಪ್ಲಾನ್‌ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೆಯೇ ಇದರ 398ರೂ, ಪ್ರಿಪೇಯ್ಡ್ ಪ್ಲಾನ್ ಅನಿಯಮಿತ ಡೇಟಾವನ್ನು ಯಾವುದೇ ವೇಗದ ಮಿತಿಯಿಲ್ಲದೆ 30 ದಿನಗಳವರೆಗೆ ನೀಡುತ್ತದೆ.ಹಾಗಾದ್ರೆ ಬಿಎಸ್‌ಎನ್‌ ಪರಿಚಯಿಸಿರುವ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ 2GB ಮತ್ತು 3GB ದೈನಂದಿನ ಡೇಟಾ ನೀಡುವ ಪ್ಲಾನ್‌ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿರಿ.

BSNL 187 ರೂ, ಪ್ರಿಪೇಯ್ಡ್ ಪ್ಲಾನ್

BSNL 187 ರೂ, ಪ್ರಿಪೇಯ್ಡ್ ಪ್ಲಾನ್

ಬಿಎಸ್‌ಎನ್‌ಎಲ್‌ನ ಈ ಪ್ಲಾನ್ ದೈನಂದಿನ 2GB ಡೇಟಾ ಜೊತೆಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ನೀಡುತ್ತದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನು ಬಿಎಸ್‌ಎನ್‌ಎಲ್‌ ನ 199ರೂ ಗಳ ಪ್ರಿಪೇಯ್ಡ್ ಯೋಜನೆ 2 ಜಿಬಿ ದೈನಂದಿನ ಡೇಟಾ, ಅನಿಯಮಿತ ಕರೆ ಪ್ರಯೋಜನಗಳನ್ನು 30 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ ನೀಡಲಿದೆ.

BSNL 247 ಮತ್ತು 250ಪ್ರಿಪೇಯ್ಡ್‌ ಪ್ಲಾನ್‌

BSNL 247 ಮತ್ತು 250ಪ್ರಿಪೇಯ್ಡ್‌ ಪ್ಲಾನ್‌

ಈ ಪ್ಲಾನ್‌ಗಳು 3GB ದೈನಂದಿನ ಡೇಟಾ ಮತ್ತು 250 ನಿಮಿಷಗಳ FUP ಮಿತಿಯೊಂದಿಗೆ ಅನಿಯಮಿತ ಕರೆ ಪ್ರಯೋಜನ ನೀಡಲಿವೆ. ಈ ಪ್ಲಾನ್‌ಗಳು ದಿನಕ್ಕೆ 100 SMS ನೀಡಲಿದ್ದು, 40 ದಿನಗಳ ಮಾನ್ಯತೆಯೊಂದಿಗೆ ಬರಲಿವೆ. ಇದಲ್ಲದೆ BSNL 151 ರೂ ಮತ್ತು 251ರೂ ಪ್ಲಾನ್‌ಗಳನ್ನು ಕೂಡ ಹೊಂದಿದೆ. ಈ ಪ್ಲಾನ್‌ಗಳು ಕ್ರಮವಾಗಿ 40GB ಮತ್ತು 70GB ಡೇಟಾವನ್ನು ನೀಡುತ್ತವೆ ಮತ್ತು 28 ದಿನಗಳ ಮಾನ್ಯತೆಯನ್ನು ಹೊಂದಿವೆ.

BSNL 365ರೂ, ಪ್ರಿಪೇಯ್ಡ್‌ ಪ್ಲಾನ್‌

BSNL 365ರೂ, ಪ್ರಿಪೇಯ್ಡ್‌ ಪ್ಲಾನ್‌

ಈ ಪ್ಲಾನ್‌ ದೀರ್ಘಾವಧಿ ಪ್ಲಾನ್‌ ಆಗಿದೆ. ಇದು ಡೈಲಿ 2GB ದೈನಂದಿನ ಡೇಟಾ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ದಿನಕ್ಕೆ 100 SMS ಗಳನ್ನು ನೀಡುತ್ತದೆ. ಜೊತೆಗೆ ಲೋಕಧುನ್ ವಿಷಯ ಮತ್ತು ಉಚಿತ ಕಾಲರ್ ಟ್ಯೂನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

BSNL 398ರೂ, ಪ್ರಿಪೇಯ್ಡ್ ಪ್ಲಾನ್

BSNL 398ರೂ, ಪ್ರಿಪೇಯ್ಡ್ ಪ್ಲಾನ್

ಈ ಪ್ಲಾನ್‌ನಲ್ಲಿ ನಿಮಗೆ ಯಾವುದೇ ವೇಗ ನಿರ್ಬಂಧವಿಲ್ಲದೆ ಅನಿಯಮಿತ ಡೇಟಾವನ್ನು ಸಿಗಲಿದೆ. ಅಲ್ಲದೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೇರಿದಂತೆ ದಿನಕ್ಕೆ 100 SMS ಉಚಿತವಾಗಿ ಸಿಗಲಿದೆ. ಇನ್ನು ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರೊಂದಿಗೆ BSNL 447ರೂ ಪ್ಲಾನ್‌ ಕೂಡ ಹೊಂದಿದೆ. ಇದು ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಕರೆಗಳು ಮತ್ತು 60 ದಿನಗಳ ವ್ಯಾಲಿಡಿಟಿಯೊಂದಿಗೆ 100GB ಡೇಟಾವನ್ನು ನೀಡುತ್ತದೆ.

BSNL

ಇನ್ನು BSNL 500ರೂ ಗಿಂತ ಕಡಿಮೆ ಬೆಲೆಯಲ್ಲಿ 365 ದಿನಗಳ ಗರಿಷ್ಠ ವ್ಯಾಲಿಡಿಟಿಯನ್ನು ನೀಡಿದರೆ, ಏರ್‌ಟೆಲ್‌, ಜಿಯೋ ಮತ್ತು ವಿ 500 ರೂ.ಗಳ ಅಡಿಯಲ್ಲಿ ಗರಿಷ್ಠ 56 ದಿನಗಳ ವ್ಯಾಲಿಡಿಟಿ ಪ್ಲಾನ್‌ಗಳನ್ನು ಹೊಂದಿವೆ. ಇವುಗಳ್ಲಿ ಏರ್‌ಟೆಲ್ 448ರೂ ಗಳ ಪ್ರಿಪೇಯ್ಡ್ ಪ್ಲಾನ್ ಹೊಂದಿದೆ. ಇದು ದಿನಕ್ಕೆ 2GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಅನ್ನು 56 ದಿನಗಳ ವ್ಯಾಲಿಡಿಟಿ ಯೊಂದಿಗೆ ನೀಡಲಿದೆ. ಇದಲ್ಲದೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಸಬ್‌ಸ್ಕ್ರಿಪ್ಶನ್ ಮತ್ತು ವಿಂಕ್ ಮ್ಯೂಸಿಕ್ ಉಚಿತ ಆನ್‌ಲೈನ್ ಕೋರ್ಸ್‌ಗಳು ಮತ್ತು ಫಾಸ್ಟ್ಯಾಗ್‌ನಲ್ಲಿ 150 ರೂಪಾಯಿ ಕ್ಯಾಶ್‌ಬ್ಯಾಕ್ ಸಿಗಲಿದೆ.

ರಿಲಯನ್ಸ್ ಜಿಯೋ

ಇದೇ ಮಾದರಿಯಲ್ಲಿ ರಿಲಯನ್ಸ್ ಜಿಯೋ ಕೂಡ 444ರೂ ಗಳ ಪ್ರಿಪೇಯ್ಡ್‌ ಪ್ಲಾನ್‌ ಹೊಂದಿದೆ. ಇದು 56 ದಿನಗಳ ಮಾನ್ಯತೆ ಹೊಂದಿದ್ದು, 2GB ದೈನಂದಿನ ಡೇಟಾವನ್ನು ನೀಡುತ್ತದೆ ಮತ್ತು ಅನಿಯಮಿತ ದೇಶೀಯ ಕರೆಗಳನ್ನು ನೀಡುತ್ತದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ದಿನಕ್ಕೆ 100 ಉಚಿತ SMS ನೀಡುತ್ತದೆ.
ಹಾಗೆಯೇ ವಿ ಟೆಲಿಕಾಂ ಕೂಡ 449ರೂ ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ನೀಡುತ್ತದೆ. ಇದು ಡಬಲ್ ಡೇಟಾ ಪ್ರಿಪೇಯ್ಡ್ ಪ್ಲಾನ್ ಆಗಿದ್ದು, ಇದು ವಾರಾಂತ್ಯದ ರೋಲ್ಓವರ್ ಡೇಟಾ ಪ್ರಯೋಜನದೊಂದಿಗೆ 56 ದಿನಗಳವರೆಗೆ 2 ಪ್ಲಸ್ 2, 4GB ದೈನಂದಿನ ಡೇಟಾವನ್ನು ನೀಡುತ್ತದೆ.

Most Read Articles
Best Mobiles in India

English summary
While BSNL’s Rs 365 prepaid plan gives annual benefits, that is, a validity of 365 days, its Rs 398 prepaid plan gives unlimited data without any speed limit for 30 days.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X