ಮೊಬಿಕ್ವಿಕ್ ಜೊತೆ ಕೈಜೋಡಿಸಿ ಮೊಬೈಲ್ ವಾಲೆಟ್ ಲಾಂಚ್ ಮಾಡಿದ BSNL

ಮೊಬಿಕ್ವಿಕ್ ನ ಸಹಭಾಗಿತ್ವದಲ್ಲಿ BSNL ಮೊಬೈಲ್ ವಾಲೆಟ್ ಆಪ್ ಅನ್ನು ಬಿಡುಗಡೆಮಾಡಿದೆ. BSNL ಪರವಾಗಿ ಮೊಬಿಕ್ವಿಕ್ ಮೊಬೈಲ್ ವಾಲೆಟ್ ಅನ್ನು ಅಭಿವೃದ್ಧಿ ಪಡಿಸಿದೆ.

By Tejaswini P G
|

ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ 100 ಮಿಲಿಯನ್ ಗ್ರಾಹಕರಿಗಾಗಿ ತಂದಿದೆ ಮೊಬೈಲ್ ವಾಲೆಟ್ ಆಪ್.ತನ್ ಗ್ರಾಹಕರಿಗೆ ಬಿಲ್ ಪಾವತಿ ಮಾಡಲು ಮತ್ತು ಇ-ಕಾಮರ್ಸ್ ನಲ್ಲಿ ವ್ಯವಹರಿಸಲು ಸುಲಭವಾಗುವಂತೆ ಮಾಡಲು BSNL ಈ ಹೆಜ್ಜೆಯಿಟ್ಟಿದೆ.

ಮೊಬಿಕ್ವಿಕ್ ಜೊತೆ ಕೈಜೋಡಿಸಿ ಮೊಬೈಲ್ ವಾಲೆಟ್ ಲಾಂಚ್ ಮಾಡಿದ BSNL

BSNL ಪರವಾಗಿ ಮೊಬಿಕ್ವಿಕ್ ಮೊಬೈಲ್ ವಾಲೆಟ್ ಅನ್ನು ಅಭಿವೃದ್ಧಿ ಪಡಿಸಿದೆ. 1.5 ಮಿಲಿಯನ್ಗೂ ಅಧಿಕ ವರ್ತಕರನ್ನು ತನ್ನ ಜಾಲದಲ್ಲಿ ಹೊಂದಿದ್ದು, BSNL ವಾಲೆಟ್ ಭಾರತದಲ್ಲಿ ಟೆಲಿಕಾಮ್ ಕಂಪೆನಿಯೊಂದು ಹೊಂದಿರುವ ಅತ್ಯಂತ ದೊಡ್ಡ ವಾಲೆಟ್ ಎನಿಸಿದೆ ಎಂದು BSNL ತಿಳಿಸಿದೆ.

ಈ ಆಪ್ ಮೂಲಕ ಅತ್ಯಂತ ವೇಗವಾಗಿ ಆನ್ಲೈನ್ ರೀಚಾರ್ಜ್ ಮಾಡಬಹುದಲ್ಲದೆ, ಬಿಲ್ ಪಾವತಿ,ಶಾಪಿಂಗ್,ಬಸ್ ಟಿಕೆಟ್ ಕಾಯ್ದಿರಿಸುವಿಕೆಯನ್ನೂ ಮಾಡಬಹುದು.ಇದು ಯಾವುದೇ ಮೊಬೈಲ್ ಅನ್ನು ರೀಚಾರ್ಜ್ ಮಾಡಿಸಲು ಸರಳ, ಕ್ಷಿಪ್ರ ಮತ್ತು ಸುರಕ್ಷಿತ ಮಾಧ್ಯಮವಾಗಿದೆ.ಬಳಕೆದಾರರು ಎಲ್ಲಾ ರೀತಿಯ ಟಾಪ್ ಅಪ್ ಗಳು,SMS,ಡೇಟಾ(2G,3G,4G), ಸ್ಥಳೀಯ,STD,ISD,ಪೋಸ್ಟ್ ಪೇಯ್ಡ್, DTH ಪ್ಲಾನ್ಗಳು,ವೌಚರ್ಗಳು,ಫುಲ್ ಟಾಕ್ ಟೈಮ್ ರೀಚಾರ್ಜ್ಗಳನ್ನು ಪಡೆಯಬಹುದು. ಬಳಕೆದಾರರು BSNL ವಾಲೆಟ್ ಬಳಸಿ IRCTC ರೈಲಿನ ಟಿಕೆಟ್ಗಳಿಗೂ ಹಣ ಪಾವತಿಸಬಹುದು.

ಸಿನಿಮಾ ತಯಾರಿಕೆಗೆ ಮುಂದಾದ ಫೇಸ್‌ಬುಕ್!!..ಕೆಲಸಕ್ಕೆ ಆಹ್ವಾನ!!ಸಿನಿಮಾ ತಯಾರಿಕೆಗೆ ಮುಂದಾದ ಫೇಸ್‌ಬುಕ್!!..ಕೆಲಸಕ್ಕೆ ಆಹ್ವಾನ!!

BSNL ವಾಲೆಟ್ ನ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಟೆಲಿಕಾಮ್ ಸಚಿವ ಮನೋಜ್ ಸಿನ್ಹ ಅವರು "BSNL ವಾಲೆಟ್ ಮೂಲಕ, ಸುಲಭವಾಗಿ ಬಿಲ್ ಪಾವತಿ ಮಾಡುವ ಸೌಲಭ್ಯ ಎಲ್ಲಾ ಗ್ರಾಹಕರಿಗೂ ದೊರೆಯಲಿದೆ. ಹೆಚ್ಚಾಗಿ ನಿರ್ಲಕ್ಷ್ಯಕ್ಕೊಳಗಾಗುವ ಗ್ರಾಮೀಣ ಜನರಿಗೂ ಈ ಸೌಲಭ್ಯ ದೊರಕಲಿದ್ದು ಅವರನ್ನೂ ಈ ಮೂಲಕ ಸಶಕ್ತರನ್ನಾಗಿಸಬಹುದು." ಎಂದು ಹೇಳಿದ್ದಾರೆ.

BSNL ನ ಮುಖ್ಯಸ್ಥರಾದ ಅನುಪಮ್ ಶ್ರೀವಾಸ್ತವ ಅವರು "BSNL ಮತ್ತು ಮೊಬಿಕ್ವಿಕ್ ನ ಈ ಸಹಭಾಗಿತ್ವದ ಮುಖಾಂತರ ನಾವು ಕಡಿಮೆ ಕ್ಯಾಶ್ ಆಧಾರಿತ ಸಮಾಜದತ್ತ ಹೆಜ್ಜೆಯಿಡುತ್ತಿದ್ದು ಪ್ರಧಾನಮಂತ್ರಿ ಮೋದಿಯವರ ಡಿಜಿಟಲ್ ಇಂಡಿಯಾದ ಕನಸನ್ನು ನನಸು ಮಾಡುವ ದಿಕ್ಕಿನತ್ತ ಸಾಗುತ್ತಿದ್ದೇವೆ.

ನಾವು ಈ ಯೋಜನೆಯ ಭಾಗವಾಗಿರುವುದು ನಮಗೆ ಹೆಮ್ಮೆಯ ಸಂಗತಿ.ನಾವು ಈ ಮೂಲಕ ನಮ್ಮ 100 ಮಿಲಿಯನ್ ಗ್ರಾಹಕರು ಯಾವುದೇ ಅಡೆತಡೆ ಇಲ್ಲದೆ, ಸುಲಭವಾಗಿ ತಮ್ಮ ಮೊಬೈಲ್ ಮತ್ತು ಇತರ ಬಿಲ್ಗಳ ಪಾವತಿಯನ್ನು BSNL ವಾಲೆಟ್ ಮೂಲಕ ನಿರ್ವಹಿಸುವಂತೆ ಅನುವುಮಾಡಿಕೊಡುತ್ತೇವೆ" ಎಂದು ಹೇಳಿದ್ದಾರೆ.

ಮೊಬಿಕ್ವಿಕ್ ನ ಸ್ಥಾಪಕರು ಮತ್ತು ಸಿಇಓ ಆದ ಬಿಪಿನ್ ಪ್ರೀತ್ ಸಿಂಗ್ ಅವರು " BSNL ಜೊತೆಗಿನ ಈ ಮೈತ್ರಿಯ ಮೂಲಕ ಭಾರತದ ಕೋಟ್ಯಂತರ ಜನರಿಗೆ ನಂಬಿಕರ್ಹವಾದ ಇಂಟರ್ನೆಟ್ ಕನೆಕ್ಟಿವಿಟಿ ಮತ್ತು ಡಿಜಿಟಲ್ ಪೇಯ್ಮೆಂಟ್ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗುತ್ತದೆ" ಎಂದಿದ್ದಾರೆ.

"ಇಷ್ಟೇ ಅಲ್ಲದೆ ಜನರು ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ ಮತ್ತು ದೈನಂದಿನ ಖರೀದಿಗಳ ಹಣ ಪಾವತಿಗೂ BSNL ವಾಲೆಟ್ ಬಳಸಬಹುದಾಗಿದೆ. BSNL ವಾಲೆಟ್ ಸ್ಮಾರ್ಟ್ಫೋನ್ ಮತ್ತು ಫೀಚರ್ ಫೋನ್ ಎರಡರಲ್ಲೂ ಕಾರ್ಯನಿರ್ವಹಿಸಬಲ್ಲದು" ಎಂದು ಶ್ರೀವಾಸ್ತವ ಅವರು ತಿಳಿಸಿದ್ದಾರೆ.

Best Mobiles in India

Read more about:
English summary
The wallet has been developed and issued by MobiKwik on behalf of BSNL.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X