BSNLನ ಈ ಗ್ರಾಹಕರಿಗೆ ಬೊಂಬಾಟ್‌ ಸುದ್ದಿ; ಪ್ರತಿ ತಿಂಗಳೂ 200 ರೂ. ಉಳಿತಾಯ!

|

ಟೆಲಿಕಾಂ ಸೇವೆಯಲ್ಲಿ ಏರ್‌ಟೆಲ್‌, ಜಿಯೋ ಹಾಗೂ ವಿ ತಮ್ಮದೇ ಆದ ಪ್ಲ್ಯಾನ್‌ ಮೂಲಕ ಗ್ರಾಹಕರಿಗೆ ವಿಭಿನ್ನ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಲ್ಲದೇ ಅದಕ್ಕೆ ತಕ್ಕಂತಹ ಹಣವನ್ನು ಸಹ ಸಂಪಾದನೆ ಮಾಡುತ್ತಾ ಬರುತ್ತಿವೆ. ಆದರೆ, ಎಂದಿಗೂ ಬಿಎಸ್‌ಎನ್‌ಲ್‌ ನೀಡಿರುವ ಈ ರೀತಿಯ ಪ್ಲ್ಯಾನ್‌ ಪರಿಚಯಿಸಿಲ್ಲದಿರುವುದು ಒಂದು ಕಡೆಯಾದರೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎನ್‌ ಮಾತ್ರ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಈ ಕೊಡುಗೆ ನೀಡಿರುವುದು ಗ್ರಾಹಕರಿಗೆ ಸಂತಸದ ಸಂಗತಿಯಾಗಿದೆ.

ಭಾರತ

ಹೌದು, ಭಾರತ ಸಂಚಾರ ನಿಗಮ ಲಿಮಿಟೆಡ್ ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆಯನ್ನು ಘೋಷಿಸಿದೆ. ಈ ಮೂಲಕ ಅವರು ವರ್ಷಕ್ಕೆ ಬರೋಬ್ಬರಿ 1200 ರೂ. ಗಳನ್ನು ಉಳಿಸಬಹುದಾಗಿದೆ. ಅರೇ.. ಅದೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಖಂಡಿತಾ ಮೂಡಿರುತ್ತದೆ. ಯಾಕಾಗಿ ಬಿಎಸ್‌ಎನ್‌ಎಲ್‌ ಈ ಕೊಡುಗೆ ನೀಡುತ್ತಿದೆ?, ಎಲ್ಲಿಯ ವರೆಗೆ ಇದು ಮಾನ್ಯವಾಗಿರುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಬೊಂಬಾಟ್‌ ಆಫರ್‌

ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಬೊಂಬಾಟ್‌ ಆಫರ್‌

ಬಿಎಸ್‌ಎನ್‌ಎಲ್‌ ನ ಈ ಹೊಸ ವರ್ಷದ ಕೊಡುಗೆಯು ಕಂಪೆನಿಯ ಫೈಬರ್ ಇಂಟರ್ನೆಟ್ ಸೇವೆಗೆ ಸಂಬಂಧಿಸಿದ್ದಾಗಿದ್ದು, ಡಿಜಿಟಲ್ ಚಂದಾದಾರರಿಕೆ ಲೈನ್ (ಡಿಎಸ್‌ಎಲ್‌) ಸಂಪರ್ಕವನ್ನು ಹೊಂದಿರುವರಿಗೆ ಮಾತ್ರ ಅನ್ವಯಿಸುತ್ತದೆ. ಇದನ್ನು ನಿಮಗೆ ಅರ್ಥವಾಗುವ ಹಾಗೆ ಹೇಳಬೇಕು ಎಂದರೆ ಬಿಎಸ್‌ಎನ್‌ಎಲ್‌ನ ಡಿಎಸ್‌ಎಲ್ ಸಂಪರ್ಕಗಳನ್ನು ಬಳಸುವ ಹೆಚ್ಚಿನ ಸಂಖ್ಯೆಯ ಇಂಟರ್ನೆಟ್ ಚಂದಾದಾರರು ಇದ್ದರೂ, ಅವರು ಇನ್ನೂ ಫೈಬರ್ ಇಂಟರ್ನೆಟ್ ಸೇವೆಗಳಿಗೆ ಬದಲಾಗಿಲ್ಲ. ಹೀಗಾಗಿ ಅವರನ್ನು ಸೆಳೆಯುವ ತಂತ್ರವಾಗಿದೆ.

ಯಾಕಾಗಿ ಈ ಕೊಡುಗೆ?

ಯಾಕಾಗಿ ಈ ಕೊಡುಗೆ?

ಬಿಎಸ್‌ಎನ್‌ಎಲ್‌ ತನ್ನ ಭಾರತ್ ಫೈಬರ್ ಸೇವೆಗಳನ್ನು ಭಾರತದ ಹೆಚ್ಚಿನ ಭಾಗಗಳಲ್ಲಿ ಆರಂಭಿಸಿದೆ. ಆದರೂ ಡಿಎಸ್‌ಎಲ್‌ನ ಸಂಪರ್ಕಗಳನ್ನು ಬಳಸುವ ಇಂಟರ್ನೆಟ್ ಚಂದಾದಾರರು ಭಾರತ್ ಫೈಬರ್ ಸೇವೆಗಳ ಕಡೆಗೆ ಮುಖ ಮಾಡುತ್ತಿಲ್ಲ. ಪರಿಣಾಮ ಅವರಿಗಾಗಿ ಈ ಹೊಸ ಆಫರ್‌ ಅನ್ನು ಘೋಷಣೆ ಮಾಡಲಾಗಿದೆ.

ಪ್ರತಿ ತಿಂಗಳು 200 ರಿಯಾಯಿತಿ!

ಪ್ರತಿ ತಿಂಗಳು 200 ರಿಯಾಯಿತಿ!

ಬಿಎಸ್‌ಎನ್‌ಎಲ್‌ ಈ ಸಂಬಂಧ ಮಾಹಿತಿ ನೀಡಿದ್ದು, ಡಿಎಸ್‌ಎಲ್‌ ಬ್ರಾಡ್‌ಬ್ಯಾಂಡ್ ಗ್ರಾಹಕರು ಭಾರತ್ ಫೈಬರ್ ಸೇವೆಗಳಿಗೆ ಬದಲಾಯಿಸಿದರೆ ವಿಶೇಷ ರಿಯಾಯಿತಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಅಂದರೆ ಭಾರತ್ ಫೈಬರ್ ಸೇವೆಗೆ ಬದಲಾಯಿಸಿದ ನಂತರ, ಮುಂದಿನ 6 ತಿಂಗಳವರೆಗೆ ಪ್ರತಿ ತಿಂಗಳು 200 ರೂ. ರಿಯಾಯಿತಿ ಪಡೆದುಕೊಳ್ಳಬಹುದು. ಈ ಮೂಲಕ ಒಟ್ಟು 1200 ರೂ. ಗಳನ್ನು ಉಳಿಸಬಹುದಾಗಿದೆ.

275 ರೂ. ಗಳಷ್ಟೇ ಸಾಕು!

275 ರೂ. ಗಳಷ್ಟೇ ಸಾಕು!

ಇನ್ನು ಪ್ರತಿ ತಿಂಗಳು 300Mbps ವರೆಗಿನ ಇಂಟರ್ನೆಟ್ ವೇಗ ಮತ್ತು ಓಟಿಟಿ (ಓವರ್-ದಿ-ಟಾಪ್) ಪ್ರಯೋಜನ ಪಡೆದುಕೊಳ್ಳಲು ಕೇವಲ 275 ರೂ. ಗಳನ್ನು ಮಾತ್ರ ಪಾವತಿ ಮಾಡಬೇಕಿದೆ. ಇದರಿಂದ ಕಡಿಮೆ ಹಣದಲ್ಲಿ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಫೈಬರ್‌ ಸೇವೆಗಳ ಬೆಲೆ 275 ರೂ. ಗಳಿಂದಲೂ ಆರಂಭವಾಗುತ್ತವೆ.

ಬೊಕ್ಕಸದಲ್ಲಿ ಹಣವಿಲ್ಲ...

ಬೊಕ್ಕಸದಲ್ಲಿ ಹಣವಿಲ್ಲ...

ಬ್ರಾಡ್‌ಬ್ಯಾಂಡ್ ವಿಭಾಗಕ್ಕೆ ಸಂಬಂಧಿಸಿದಂತೆ ಬಿಎಸ್‌ಎನ್‌ಎಲ್ ತನ್ನ ನೆಲೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಫೈಬರ್ ಮಾರುಕಟ್ಟೆಯಲ್ಲಿ ಪ್ರಮುಖ ಇಂಟರ್ನೆಟ್ ಸೇವಾ ಪೂರೈಕೆದಾರರಾಗಿ ಹೊರಹೊಮ್ಮಿದ್ದು, ಬಹುಪಾಲು ಮಂದಿ ಈ ಕಡೆ ಮುಖ ಮಾಡಿದ್ದಾರೆ. ಅದರಲ್ಲೂ ಇತ್ತೀಚಿನ ಮಾಹಿತಿಯ ಪ್ರಕಾರ ವಾಯರ್‌ಲೆಸ್‌ ವಿಭಾಗದಲ್ಲಿ ಜಿಯೋ ಬಿಎಸ್‌ಎನ್‌ಎಲ್‌ ಅನ್ನು ಹಿಂದಿಕ್ಕಿದೆ. ಹಾಗೆಯೇ ಏರ್‌ಟೆಲ್ ಸಹ ಬಿಎಸ್‌ಎನ್‌ಎಲ್‌ ಮೀರಿಸುವ ಹಂತದಲ್ಲಿದೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ನಲ್ಲಿ ಹಲವು ಸಮಸ್ಯೆಗೆ ಮೂಲ ಕಾರಣ ಹಾಗೂ ಫೈಬರ್ ಮೂಲ ಸೌಕರ್ಯವನ್ನು ವಿಸ್ತರಿಸಲು ಹಣದ ಕೊರತೆ ಇದೆ. ಇದರ ಹೊರತಾಗಿಯೂ ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ ನೊಂದಿಗೆ, ಬಿಎಸ್ಎನ್‌ಎಲ್‌ನ ಫೈಬರ್ ಸೇವೆ ವಿಸ್ತರಿಸುತ್ತಲೇ ಇರುವುದು ಗಮನಾರ್ಹ.

Best Mobiles in India

English summary
BSNL New Year Offer for Existing Broadband Customers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X