ಬಿಎಸ್‌ಎನ್‌ಎಲ್‌ನ ಆರಂಭಿಕ ರೀಚಾರ್ಜ್ ಪ್ಲ್ಯಾನ್‌ಗಳ ಲಿಸ್ಟ್‌; ಯಾವ ಪ್ರಯೋಜನ ಲಭ್ಯ!

|

ಟೆಲಿಕಾಂ ಕಂಪೆನಿಗಳಲ್ಲಿ ಶೀಘ್ರಗತಿಯಲ್ಲಿ ಮುನ್ನುಗ್ಗುತ್ತಿರುವ ಏರ್‌ಟೆಲ್‌, ಜಿಯೋಗೆ ಸೆಡ್ಡು ಹೊಡೆಯಲು ಬಿಎಸ್‌ಎನ್‌ಎಲ್‌ ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ಅದರಂತೆ ಈಗಾಗಲೇ ತನ್ನ ಗ್ರಾಹಕರಿಗೆ ಹಲವು ರೀತಿಯ ಸೇವೆ ನೀಡುತ್ತಾ ಬರುತ್ತಿದ್ದು, ಬಿಎಸ್ಎನ್‌ಎಲ್‌ ಪ್ರಿಪೇಯ್ಡ್ ಪ್ಲ್ಯಾನ್‌ಗಳು ತುಂಬಾ ಕಡಿಮೆ ದರದಿಂದ ಆರಂಭವಾಗುತ್ತವೆ. ಇನ್ನು ಭಾರತದಲ್ಲಿ ದೀರ್ಘಾವಧಿಯ ಸೆಲ್ಯುಲಾರ್ ಪೂರೈಕೆದಾರರಾದ ಸಂಚಾರ್ ನಿಗಮ ಲಿಮಿಟೆಡ್ (BSNL) ದೇಶದ ಶ್ರೇಣಿ II ಮತ್ತು ಶ್ರೇಣಿ III ವಲಯದ ಬಳಕೆದಾರರಿಗೆ ಉತ್ತಮ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ನಿರಂತರವಾಗಿ ಉತ್ತಮ ಪ್ಲ್ಯಾನ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದ್ದು, ಇದರ ಭಾಗವಾಗಿ ಇತರೆ ಖಾಸಗಿ ಕಂಪೆನಿಗಳ ಟೆಲಿಕಾಂ ಪ್ಲ್ಯಾನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಇನ್ನು ಏರ್‌ಟೆಲ್‌ ಹಾಗೂ ಜಿಯೋ, ವಿ ಗೆ ಹೋಲಿಕೆ ಮಾಡಿದರೆ ಬಿಎಸ್ಎನ್‌ಎಲ್‌ನ ರೀಚಾರ್ಜ್ ಸುಂಕಗಳು ರಾಷ್ಟ್ರದಲ್ಲಿ ಕಡಿಮೆ ಇರುವುದು ಗಮನಾರ್ಹ ವಿಷಯ. ಇನ್ಯಾಕೆ ತಡ ಯಾವೆಲ್ಲಾ ಪ್ರಿಪೇಯ್ಡ್ ಪ್ಲ್ಯಾನ್‌ಗಳು ಏನೆಲ್ಲಾ ಪ್ರಯೋಜನ ನೀಡಲಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

18 ರೂ. ಪ್ಲ್ಯಾನ್‌

18 ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ 18 ರೂ. ಗಳ ರೀಚಾರ್ಜ್ ಪ್ಲ್ಯಾನ್‌ ಪರಿಚಯಿಸಿದ್ದು, ಈ ಪ್ಲ್ಯಾನ್‌ 2 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಹಾಗೆಯೇ ಇದರಿಂದ ನೀವು ಅನಿಯಮಿತ ಕರೆಗಳನ್ನು ಮಾಡಬಹುದು ಹಾಗೂ 1GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಇನ್ನು ಗ್ರಾಹಕರು 80 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೇವೆ ಬಳಸಬಹುದು. ಇದೇ ಪ್ಲ್ಯಾನ್‌ ಏರ್‌ಟೆಲ್‌ ನಲ್ಲಿಯೂ ಇದ್ದು, ಇದಕ್ಕೆ ನೀವು 19 ರೂ. ಗಳನ್ನು ಪಾವತಿ ಮಾಡಬೇಕು. ಹಾಗೆಯೇ ಇದು ಕೇವಲ ಒಂದು ದಿನದ ಮಾನ್ಯತೆಯನ್ನು ಮಾತ್ರ ಹೊಂದಿದೆ.

29 ರೂ. ನ ಪ್ಯಾಕ್‌

29 ರೂ. ನ ಪ್ಯಾಕ್‌

ಬಿಎಸ್‌ಎನ್‌ಎಲ್‌ ನ ಈ 29 ರೂ. ಪ್ರಿಪೇಯ್ಡ್ ಪ್ಲ್ಯಾನ್‌ ಅನಿಯಮಿತ ಕರೆ ಪ್ರಯೋಜನಗಳನ್ನು ಹೊಂದಿದ್ದು, 1GB ಡೇಟಾ ಪ್ರಯೋಜನ ನೀಡಲಿದೆ. ಅದರಲ್ಲೂ ವಿಸೇಷವಾಗಿ ಈ ಪ್ಲ್ಯಾನ್ 5 ದಿನಗಳ ವರೆಗೆ ಮಾನ್ಯವಾಗಿರುತ್ತದೆ.

49 ರೂ. ಗಳ ರೀಚಾರ್ಜ್ ಪ್ಲ್ಯಾನ್

49 ರೂ. ಗಳ ರೀಚಾರ್ಜ್ ಪ್ಲ್ಯಾನ್

49 ರೂ. ಗಳ ರೀಚಾರ್ಜ್ ಪ್ಲ್ಯಾನ್‌ ನಲ್ಲಿ ನೀವು 100 ನಿಮಿಷಗಳ ವಾಯ್ಸ್‌ ಕಾಲ್‌ ಪ್ರಯೋಜನದೊಂದಿಗೆ 1GB ಡೇಟಾ ಬಡೆಯಬಹುದು. ಹಾಗೆಯೇ ಈ ಪ್ಲ್ಯಾನ್‌ ನಿಮಗೆ 20 ದಿನಗಳ ವರೆಗೆ ಮಾನ್ಯತೆ ಹೊಂದಿರಲಿದೆ. ಇದರೊಂದಿಗೆ ನಿಮ್ಮ ಸಿಮ್‌ ಸಕ್ರಿಯವಾಗಿರಲು ಅನುಕೂಲ ಮಾಡಲಿದೆ.

87 ರೂ. ಗಳ ರೀಚಾರ್ಜ್ ಪ್ಯಾಕ್

87 ರೂ. ಗಳ ರೀಚಾರ್ಜ್ ಪ್ಯಾಕ್

87 ರೂ. ಗಳ ಈ ರೀಚಾರ್ಜ್ ಪ್ಯಾಕ್‌ನಲ್ಲಿ ನೀವು ದಿನಕ್ಕೆ 1GB ಡೇಟಾವನ್ನು ಪಡೆಯಬಹುದು ಹಾಗೂ ಅನಿಯಮಿತ ಕರೆ ಪ್ರಯೋಜನ ಸಹ ಇದರಿಂದ ಲಭ್ಯವಾಗಲಿದೆ. ಇನ್ನುಳಿದಂತೆ ಈ ಪ್ಲ್ಯಾನ್‌ ವ್ಯಾಲಿಡಿಟಿ 14 ದಿನಗಳ ವರೆಗೆ ಇರಲಿದೆ. ಈ ಪ್ಲ್ಯಾನ್‌ ಮೂಲಕ ನೀವು ಹಾರ್ಡಿ ಮೊಬೈಲ್ ಗೇಮ್‌ಗಳ ಸೇವೆಯನ್ನು ಪಡೆಯಬಹುದು.

99ರೂ. ಗಳ ರೀಚಾರ್ಜ್

99ರೂ. ಗಳ ರೀಚಾರ್ಜ್

ಬಿಎಸ್‌ಎನ್‌ಎಲ್‌ನ ಈ 99 ರೂ. ಪ್ಲ್ಯಾನ್‌ ಅನಿಯಮಿತ ಕರೆ ಪ್ರಯೋಜನಗಳನ್ನು ನೀಡಲಿದೆಯಾದರೂ ಇದರಲ್ಲಿ ನಿಮಗೆ ಯಾವುದೇ ಡೇಟಾ ಹಾಗೂ ಎಸ್‌ಎಮ್‌ಎಸ್‌ ಸೇವೆ ಲಭ್ಯವಾಗುವುದಿಲ್ಲ. ಬದಲಾಗಿ ನೀವು ಈ ಪ್ಲ್ಯಾನ್‌ ಮೂಲಕ ಉಚಿತ ಕಾಲರ್ ಟ್ಯೂನ್ ಸೆಟ್‌ ಮಾಡಿಕೊಳ್ಳಬಹುದು. ಹಾಗೆಯೇ ಈ ಪ್ಲ್ಯಾನ್‌ ವ್ಯಾಲಿಡಿಟಿ 18 ದಿನಗಳು ಮಾತ್ರ.

105ರೂ. ಗಳ  ರೀಚಾರ್ಜ್ ಪ್ಲ್ಯಾನ್

105ರೂ. ಗಳ ರೀಚಾರ್ಜ್ ಪ್ಲ್ಯಾನ್

ಬಿಎಸ್ಎನ್‌ಎಲ್‌ನ ಈ 105 ರೂ. ಗಳ ರೀಚಾರ್ಜ್ ಪ್ಲ್ಯಾನ್‌ ನಲ್ಲಿ ನೀವು ಅನಿಯಮಿತ ಕರೆ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಇದರಲ್ಲೂ ಸಹ ಇತರೆ ಯಾವುದೇ ಸೇವೆ ಇರುವುದಿಲ್ಲ. ಆದರೆ ಉಚಿತ ಕಾಲರ್‌ಟ್ಯೂನ್‌ ಸೆಟ್‌ ಮಾಡಿಕೊಳ್ಳಬಹುದಾದ ಅವಕಾಶ ನೀಡಲಾಗಿದೆ. ಇನ್ನು ಈ ಪ್ಲ್ಯಾನ್‌ ನಿಮಗೆ 22 ದಿನಗಳ ವರೆಗೆ ಮಾನ್ಯವಾಗಿರುತ್ತದೆ.

Best Mobiles in India

English summary
BSNL Recharge Plan Starting from Rs.18 , Which pack will provide what benefits?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X