Subscribe to Gizbot

ರಕ್ಷಾಬಂಧನಕ್ಕೆ BSNL ಉಡುಗೊರೆ.. 74 ರೂ.ಗೆ 1GB ಡೇಟಾ..ಅನ್‌ಲಿಮಿಟೆಡ್ ಕಾಲ್!!

Written By:

ರಕ್ಷಾಬಂಧನ ಹಬ್ಬದ ಪ್ರಯುಕ್ತ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಆಫರ್ ಒಂದನ್ನು ಬಿಡುಗಡೆ ಮಾಡಿದೆ.!! "ರಾಕಿಯ ಉಡುಗೊರೆ'' ಎಂಬ ಆಫರ್ ಮೂಲಕ BSNL ಕೇವಲ 74 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಲಿಮಿಟೆಡ್ ಡೇಟಾ ಆಫರ್ ನೀಡಿ ಗಮನ ಸೆಳೆದಿದೆ.!!

BSNL ಬಿಡುಗಡೆ ಮಾಡಿರುವ ನೂತನ 'ರಾಕಿಯ ಉಡುಗೊರೆ' ಆಫರ್ ಇಂದಿನಿಂದಲೇ ಅಂದರೆ, 3 ನೇ ತಾರೀಖಿನಿಂದಲೇ ಶುರುವಾಗಲಿದ್ದು, ಹಾಗಾದರೆ, BSNL ನೂತನ ಆಫರ್ ಯಾವೆಲ್ಲಾ ಆಫರ್ ಅನ್ನು ಹೊಂದಿದೆ.? ಗ್ರಾಹಕರಿಗೆ ನೂತನ ಆಫರ್‌ನಿಂದ ಏನೆಲ್ಲಾ ಲಾಭ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
74 ರೂಪಾಯಿಗೆ ಏನೆಲ್ಲಾ ಆಫರ್!!

74 ರೂಪಾಯಿಗೆ ಏನೆಲ್ಲಾ ಆಫರ್!!

BSNL ಬಿಡುಗಡೆ ಮಾಡಿರುವ ನೂತನ 74 ರೂಪಾಯಿಯ ಆಫರ್ BSNL ಟು BSNL ಅನ್‌ಲಿಮಿಟೆಡ್ ಕಾಲ್ ಮತ್ತು 74 ರೂಪಾಯಿಗಳ ಪೂರ್ಣ ಟಾಕ್‌ಟೈಮ್ ಅನ್ನು ಹೊಂದಿದೆ. ಇದರ ಜೊತೆಗೆ ಒಂದು ಜಿಬಿ ಡೇಟಾ ಕೂಡ ಲಭ್ಯವಿದೆ.!!

ವ್ಯಾಲಿಡಿಟಿ ಎಷ್ಟು?

ವ್ಯಾಲಿಡಿಟಿ ಎಷ್ಟು?

ಕೇವಲ 74 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಲಿಮಿಟೆಡ್ ಡೇಟಾ ಆಫರ್ ನೀಡಿ ಗಮನ ಸೆಳೆದಿದ್ದರೂ ಈ ಆಫರ್ ಕೇವಲ 5 ದಿವಸಗಳ ವ್ಯಾಲಿಡಿಟಿಯನ್ನು ಹೊಂದಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
BSNLನ ಇತರ ಆಫರ್‌ಗಳು ಯಾವುವು?

BSNLನ ಇತರ ಆಫರ್‌ಗಳು ಯಾವುವು?

BSNL ತನ್ನ ಪ್ರೀಪೇಡ್ ಗ್ರಾಹಕರಿಗೂ ಭಾರಿ ಆಫರ್‌ಗಳನ್ನು ನೀಡಿದ್ದು, ಚೌಕಾ-444, ಸಿಕ್ಸರ್-666, BSNL ಟ್ರಿಪಲ್ ಏಸ್-333 ಆಫರ್‌ಗಳ ವ್ಯಾಲಿಡಿಟಿಯನ್ನು ಹೆಚ್ಚಿಸಿದೆ.! ಹಾಗಾಗಿ, ಈ ಎಲ್ಲಾ ಆಫರ್‌ಗಳಿ ಜಿಯೋ ಮತ್ತು ಏರ್‌ಟೆಲ್‌ಗಿಂತಲೂ ಬೆಸ್ಟ್ ಆಫರ್ ಆಗಿದೆ!!

BSNL ಟ್ರಿಪಲ್ ಏಸ್-333

BSNL ಟ್ರಿಪಲ್ ಏಸ್-333

BSNL ಟ್ರಿಪಲ್ ಏಸ್-333 ಆಫರ್ ಮೂಲಕ ಮೂರು ತಿಂಗಳು ಪ್ರತಿದಿನ 3GB ಡೇಟಾ ಬಳಕೆಮಾಡಬಹುದಾಗಿದೆ.! ಪ್ರತಿ ಒಂದು GB ಡೇಟಾ 1 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ.!!

BSNL ಚೌಕಾ-444

BSNL ಚೌಕಾ-444

ಚೌಕಾ-444 ಆಫರ್ ಮೂಲಕ BSNL ಪ್ರೀಪೆಡ್ ಗ್ರಾಹಕರು ಪ್ರತಿದಿನ 4GB ಡೇಟಾವನ್ನು 4 ತಿಂಗಳ ವ್ಯಾಲಿಡಿಟಿಯಲ್ಲಿ ಬಳಸಬಹುದಾಗಿದೆ.!!

BSNL ಸಿಕ್ಸರ್-666

BSNL ಸಿಕ್ಸರ್-666

ಟೆಲಿಕಾಂನಲ್ಲಿ ಹೆಚ್ಚು ವ್ಯಾಲಿಡಿಟಿಯ ಆಫರ್ ಇದಾಗಿದ್ದು, BSNL ಸಿಕ್ಸರ್-666 ಆಫರ್ ಮೂಲಕ ಆರು ತಿಂಗಳ ವ್ಯಾಲಿಡಿಟಿಯಲ್ಲಿ ಪ್ರತಿದಿನ ಎರಡು ಜಿಬಿ ಡೇಟಾವನ್ನು ಬಳಕೆ ಮಾಡಬಹುದು.!!

ಓದಿರಿ:ಜಿಯೋ ಎಫೆಕ್ಟ್..ಭಾರತದಲ್ಲಿ ಯಾವಾಗಲೂ ಆನ್‌ಲೈನ್‌ನಲ್ಲಿ ಇರೋರು ಎಷ್ಟು ಜನ?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This new BSNL prepaid plan has a validity of five days.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot