ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ಸಹ ತನ್ನ ಗ್ರಾಹಕರಿಗೆ ಹೊಸ ಸಂಭ್ರಮದಲ್ಲಿ ದೇಶಿಯ ಟೆಲಿಕಾಂ ಬೆಚ್ಚುವಂತೆ ಫ್ರಿ ನೈಟ್ ಕಾಲಿಂಗ್ ಸೇವೆಯಲ್ಲಿ ಕಡಿತವನ್ನು ಮಾಡಲು ಮುಂದಾಗಿದೆ. ಈ ಮೂಲಕ ತನ್ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಆರಂಭದಿಂದಲೇ BSNL ನೀಡುತ್ತದ್ದ ಫ್ರೀ ಕಾಲಿಂಗ್‌ಗೆ ಬ್ರೇಕ್ ಹಾಕಿದ್ದು, ಮೊದಲು ಇದ್ದ ಟೈಮಿಂಗ್‌ಗೆ ಕತ್ತರಿ ಹಾಕಿದೆ.

ಓದಿರಿ: ಭಾರತದಲ್ಲಿ ಜಿಯೋನೇ ಬೆಸ್ಟ್: ಸ್ಪೀಡ್ ಇಲ್ಲ ಅನ್ನುವವರೇ ಇಲ್ನೋಡಿ..!
BSNL ಗ್ರಾಹಕರು ನೈಟ್ ವಾಯ್ಸ್ ಕಾಲಿಂಗ್ ಸೇವೆಯನ್ನು ಬದಲಾದ ಸಮಯದಲ್ಲಿ ರಾತ್ರಿ 10:30 ರಿಂದ ಬೆಳಿಗ್ಗೆ 6 ಗಂಟೆಯ ವರೆಗೂ BSNL ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಉಚಿತ ಕರೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ.
ಬದಲಾಗಿದೆ ಪ್ಲಾನ್‌ಗಳು:
BSNL ಬ್ರಾಡ್ ಬ್ಯಾಂಡ್ ಬಳಕೆದಾರರು ಈ ಮೊದಲು ಭಾನುವಾರದಂತು ಇಡೀ ದಿನ ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಿತ್ತು, ಅಲ್ಲದೇ ಪ್ರತಿ ನಿತ್ಯ ರಾತ್ರಿ 9 ರಿಂದ ಬೆಳಿಗ್ಗೆ 7 ಗಂಟೆಯ ವರೆಗೆ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ. ಇಡೀ ಭಾರತದ್ಯಾಂತ ಈ ಪ್ಲಾನ್ ಬಳಕೆದಾರರಿಗೆ ದೊರೆಯುತ್ತಿತ್ತು.
ಬದಲಾದ ಸಮಯ:
BSNL ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಭಾನುವಾರದಂತು ಉಚಿತ ಕರೆ ಮಾಡುವ ಅವಕಾಶವನ್ನು ಕಟ್ ಮಾಡಲಿದೆ. ಅಲ್ಲದೇ ಬದಲಾದ ಸಮಯದಲ್ಲಿ ರಾತ್ರಿ 10:30 ರಿಂದ ಬೆಳಿಗ್ಗೆ 6 ಗಂಟೆಯ ವರೆಗೂ ಮಾತ್ರವೇ BSNL ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಉಚಿತ ಕರೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ.
ರೂ.499 ಪ್ಲಾನ್:
BSNL ಬ್ರಾಡ್ ಬ್ಯಾಂಡ್ ಬಳಕೆದಾರಕೆದಾರರು ರೂ.499ಕ್ಕಿಂತ ಹೆಚ್ಚಿನ ಪ್ಲಾನ್ ಅನ್ನು ಹಾಕಿಸಿಕೊಳ್ಳಬೇಕಾಗಿದೆ. ಹೀಗೆ ಹಾಕಿಸಿಕೊಂಡಲ್ಲಿ ಲ್ಯಾಂಡ್ ಲೈನಿನಿಂದ ಪ್ರತಿ ರಾತ್ರಿ 10:30 ರಿಂದ ಬೆಳಿಗ್ಗೆ 6 ಗಂಟೆಯ ವರೆಗೂ ಉಚಿತವಾಗಿ ಕರೆ ಮಾಡಬಹುದಾಗಿದೆ ಎನ್ನಲಾಗಿದೆ.
ರೂ.1199 ಪ್ಲಾನ್:
BSNL ತನ್ನ ಬಳಕೆದಾರರಿಗೆ ಈ ಹಿಂದಿನಂತೆ ರೂ.1199ರ ಪ್ಲಾನ್‌ನಲ್ಲಿ ಅತೀ ಹೆಚ್ಚಿನ ಲಾಭವನ್ನು ನೀಡುತ್ತಿದೆ ಎನ್ನಲಾಗಿದೆ. ಇದರಲ್ಲಿ ಗ್ರಾಹಕರು ದಿನದ 24 ಗಂಟೆಗಳ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.