ಬಿಎಸ್ಎನ್ಎಲ್ 999ರೂ.ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಸರ್‌ಪ್ರೈಸ್‌ ಆಫರ್!

|

ದೇಶದ ಟೆಲಿಕಾಂ ವಲಯದಲ್ಲಿ ಸದ್ಯ ಪೈಪೋಟಿ ಜೋರಾಗಿದೆ. ಖಾಸಗಿ ಟೆಲಿಕಾಂಗಳು ಪೈಪೋಟಿಯ ವೇಗಕ್ಕೆ ಸರಿಸಮನಾಗಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಹ ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಸ್ಪರ್ಧೆ ಒಡ್ಡಿದೆ. ಇತ್ತೀಚಿಗೆ 4G ನೆಟವರ್ಕ ಸೇವೆಗೆ ಲಗ್ಗೆ ಇಟ್ಟಿರುವ ಬಿಎಸ್ಎನ್ಎಲ್ ಅದರೊಂದಿಗೆ ಅಧಿಕ ಡೇಟಾ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಘೋಷಿಸಿದೆ. ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಖುಷಿ ಸಂಗತಿ ಹೊರಹಾಕಿದೆ.

 ಬಿಎಸ್ಎನ್ಎಲ್ ಟೆಲಿಕಾಂ

ಹೌದು, ಬಿಎಸ್ಎನ್ಎಲ್ ಟೆಲಿಕಾಂ ಜನಪ್ರಿಯ 999ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಬದಲಾವಣೆ ಮಾಡಿದ್ದು, ವ್ಯಾಲಿಡಿಟಿ ಅವಧಿಯಲ್ಲಿ ಹೆಚ್ಚಳ ಘೋಷಿಸಿದೆ. ಹೀಗಾಗಿ 999ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಇನ್ನು 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಅವಧಿ ಸಿಗಲಿದೆ. ಚೆನ್ನೈ ಮತ್ತು ತಮಿಳನಾಡು ಸರ್ಕಲ್ ವ್ಯಾಪ್ತಿಯಲ್ಲಿ ವಾಲ್ತಿಯಿರುವ ಜನಪ್ರಿಯ ಬಿಎಸ್ಎನ್ಎಲ್ ಮಾರುತಮ್ ಪ್ಲ್ಯಾನ್‌ನಂತೆ ಈ ಪ್ಲ್ಯಾನ್ ಸಹ ಹೆಚ್ಚು ವ್ಯಾಲಿಡಿಟಿ ಪಡೆದಂತೆ ಆಗಿದೆ.

ಹೆಚ್ಚುವರಿ ವ್ಯಾಲಿಡಿಟಿ

ಹೆಚ್ಚುವರಿ ವ್ಯಾಲಿಡಿಟಿ

ಬಿಎಸ್ಎನ್ಎಲ್ ಹಲವು ದೀರ್ಘಾವಧಿಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ 999ರೂ. ಪ್ಲ್ಯಾನ್ ಸಹ ಒಂದು. ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 240 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಆದರೆ ಇದೀಗ ಬಿಎಸ್ಎನ್ಎಲ್ ಈ ಪ್ಲ್ಯಾನಿನಲ್ಲಿ ಬದಲಾವಣೆ ಮಾಡಿರುವ ಕಾರಣ 30 ದಿನಗಳ ಹೆಚ್ಚುವರಿಯಾಗಿ ಸೇರಲಿವೆ. ಹೀಗಾಗಿ ಒಟ್ಟು 270 ದಿನಗಳ ವ್ಯಾಲಿಡಿಟಿ ಅವಧಿ ಗ್ರಾಹಕರಿಗೆ ಸಿಗಲಿದೆ.

ಬಿಎಸ್‌ಎನ್ಎಲ್ 999ರೂ. ಪ್ಲ್ಯಾನ್

ಬಿಎಸ್‌ಎನ್ಎಲ್ 999ರೂ. ಪ್ಲ್ಯಾನ್

ಬಿಎಸ್‌ಎನ್ಎಲ್‌ನ 999ರೂ. ಪ್ಲ್ಯಾನ್ ದೀರ್ಘಾವಧಿಯ ಮತ್ತು ವಾಯಿಸ್‌ ಕರೆ ಸೌಲಭ್ಯದ ಪ್ಲ್ಯಾನ್ ಆಗಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 250 ನಿಮಿಷಗಳ ಉಚಿತ ಕರೆಯ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಎಸ್ಎಮ್ಎಸ್ ಲಭ್ಯ. ಪ್ರತಿದಿನ ಪ್ರತ್ಯೇಕ ಯಾವುದೇ ಡೇಟಾ ಪ್ರಯೋಜನ ದೊರೆಯುವುದಿಲ್ಲ. ಆದರೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 5GB ಡೇಟಾ ಪ್ರಯೋಜನ ಇರುತ್ತದೆ.

ಸೀಮಿತ ಅವಧಿಯ ಕೊಡುಗೆ

ಸೀಮಿತ ಅವಧಿಯ ಕೊಡುಗೆ

ಬಿಎಸ್‌ಎನ್ಎಲ್‌ನ 999ರೂ. ಪ್ಲ್ಯಾನಿನಲ್ಲಿ ಆಫರ್ ಘೋಷಿಸಿದ್ದು, ಗ್ರಾಹಕರಿಗೆ ಹೆಚ್ಚುವರಿಯಾಗಿ 30 ದಿನಗಳ ವ್ಯಾಲಿಡಿಟಿ ಅವಧಿ ಲಭ್ಯವಾಗಲಿದೆ. ಸದ್ಯ ಈ ಪ್ಲ್ಯಾನಿನಲ್ಲಿ 240 ದಿನಗಳ ವ್ಯಾಲಿಡಿಟಿ ಇದ್ದು, ಆಫರ್‌ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೇ ಒಟ್ಟು 270 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಈ ಆಫರ್ ಸೀಮಿತ ಅವಧಿಯದ್ದಾಗಿದ್ದು, ಇದೇ ಫೆ.15, 2020 ರಿಂದ ಮಾರ್ಚ್ 31, 2020 ವರೆಗೂ ಮಾತ್ರ ಇರಲಿದೆ.

ಈ ಪ್ಲ್ಯಾನ್ ಉತ್ತಮವೇ?

ಈ ಪ್ಲ್ಯಾನ್ ಉತ್ತಮವೇ?

ಬಿಎಸ್ಎನ್ಎಲ್‌ನ 999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರತಿದಿನ ಡೇಟಾ ಪ್ರಯೋಜನ ಪಡೆದಿಲ್ಲ ಹೀಗಾಗಿ ಅಧಿಕ ಡೇಟಾ ಮತ್ತು ಪ್ರತಿದಿನ ಡೇಟಾ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಸೂಕ್ತವಲ್ಲ. ಆದರೆ ಹೆಚ್ಚಿನ ಡೇಟಾ ಬಳಸದ, ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ವಾಯಿಸ್‌ ಕರೆಗಳ ಸೌಲಭ್ಯ ಬಯಸುವ ಚಂದಾದಾರರಿಗೆ ಈ ಪ್ಲ್ಯಾನ್ ಉತ್ತಮ ಅನಿಸುತ್ತದೆ.

Best Mobiles in India

English summary
BSNL has increased the validity of Rs 999 prepaid plan to 270 days from the earlier 240 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X