Just In
- 4 min ago
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
- 16 hrs ago
ಅಗ್ಗದ ದರದಲ್ಲಿ ರಿಯಲ್ಮಿ C20 ಸ್ಮಾರ್ಟ್ಫೋನ್ ಅನಾವರಣ: ಫೀಚರ್ಸ್ ಏನು?
- 17 hrs ago
ಏರ್ಟೆಲ್ 449ರೂ. ಮತ್ತು ವಿ 449ರೂ. ಪ್ಲ್ಯಾನ್: ರೀಚಾರ್ಜ್ಗೆ ಯಾವುದು ಓಕೆ!
- 20 hrs ago
ಸ್ಮಾರ್ಟ್ಫೋನಿನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಕ್ರಮ ಅನುಸರಿಸಿ!
Don't Miss
- Sports
ಐಎಸ್ಎಲ್: ಮಿಂಚಲು ಸಜ್ಜಾದ ಬೆಂಗಳೂರಿಗೆ ಒಡಿಶಾ ಎದುರಾಳಿ
- Automobiles
ವಾರದ ಪ್ರಮುಖ ಆಟೋ ಸುದ್ದಿ: ಆಲ್ಟ್ರೊಜ್ ಐಟರ್ಬೋ ಬಿಡುಗಡೆ, ಜಾರಿಗೆ ಬರಲಿದೆ ಹೊಸ ಆಟೋ ಇನ್ಸುರೆನ್ಸ್..
- News
ಜ.26ರ ರೈತರ ಟ್ರಾಕ್ಟರ್ ಜಾಥಾಕ್ಕೆ ದೆಹಲಿ ಪೊಲೀಸರ ಅನುಮತಿ
- Movies
ಫೋಟೋ ಶೇರ್ ಮಾಡಿ ಮಗಳ ಹುಟ್ಟುಹಬ್ಬಕ್ಕೆ ನೆನಪಿರಲಿ ಪ್ರೇಮ್ ಪ್ರೀತಿಯ ವಿಶ್
- Lifestyle
ಭಾನುವಾರದ ದಿನ ಭವಿಷ್ಯ: ಮೇಷ-ಮೀನದವರೆಗಿನ ದಿನ ಭವಿಷ್ಯ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಎಸ್ಎನ್ಎಲ್ನ ಬಿಗ್ ವ್ಯಾಲಿಡಿಟಿ ಕೊಡುಗೆ : ಬೆಲೆ ಎಷ್ಟು?.ಉಚಿತ ಡೇಟಾ ಎಷ್ಟು?
ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರವಾಗಿ ಪೈಪೋಟಿ ನೀಡುವ ಹೆಜ್ಜೆಗಳನ್ನಿಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಆಕರ್ಷಕ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈಗ ಬಿಎಸ್‌ಎನ್ಎಲ್ ತನ್ನ ಜನಪ್ರಿಯ ಪ್ಲ್ಯಾನ್‌ವೊಂದನ್ನು ಪುನರ್ ಪರಿಚಯಿಸಿದ್ದು, ಈ ಪ್ಲ್ಯಾನ್ ಅಧಿಕ ವ್ಯಾಲಿಡಿಟಿಯ ಜೊತೆಗೆ ಅಧಿಕ ಡೇಟಾ ಸೌಲಭ್ಯವನ್ನು ಒಳಗೊಂಡಿದೆ.

ಹೌದು, ಬಿಎಸ್‌ಎನ್ಎಲ್ ಇದೀಗ ತನ್ನ ಜನಪ್ರಿಯ 1999ರೂ.ಗಳ ವಾರ್ಷಿಕ ಪ್ರೀಪೇಡ್ ಪ್ಲ್ಯಾನ್ ಅನ್ನು ಗ್ರಾಹಕರಿಗೆ ಪುನರ್ ಲಭ್ಯವಾಗಿಸಿದೆ. ಹಾಗೆಯೇ ತನ್ನ 399ರೂ. ಪ್ರೀಪೇಡ್ ಪ್ಲ್ಯಾನ್ ಅನ್ನು ಅಪ್‌ಡೇಟ್ ಮಾಡಿಕೊಂಡಿದೆ. ಸಂಸ್ಥೆಯು ಗ್ರಾಹಕರಿಗೆ ಹೆಚ್ಚಿನ ಡೇಟಾ ಮತ್ತು ವ್ಯಾಲಿಡಿಟಿ ಸೌಲಭ್ಯವನ್ನು ಒದಗಿಸುವ ಪ್ರೀಪೇಡ್ ಪ್ಲ್ಯಾನ್‌ಗಳಿಗೆ ಹೆಚ್ಚಿನ ಒತ್ತನ್ನು ನೀಡುವತ್ತ ಸಾಗುತ್ತಿದೆ. ಪ್ರಸ್ತುತ ಬಿಎಸ್‌ಎನ್ಎಲ್‌ನ 1999ರೂ. ಪ್ಲ್ಯಾನ್ ಮತ್ತು ಇತ್ತೀಚಿನ ಹೊಸ ಪ್ಲ್ಯಾನ್‌ಗಳ ಬಗ್ಗೆ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್ಎಲ್ 1999ರೂ.ಪ್ಲ್ಯಾನ್
ಬಿಎಸ್‌ಎನ್ಎಲ್ 1999ರೂ.ಪ್ಲ್ಯಾನ್ ಪ್ರೀಪೇಡ್ ಪ್ಲ್ಯಾನ್ ಪ್ರತಿದಿನ 3GB ಡೇಟಾ ಸೌಲಭ್ಯವನ್ನು ಹೊಂದಿದ್ದು, ಇದೊಂದು ವಾರ್ಷಿಕ ಪ್ಲ್ಯಾನ್ ಆಗಿದೆ. ಇದರೊಂದಿಗೆ ಪ್ರತಿದಿನ 250 ನಿಮಿಷದ ಉಚಿತ ಕರೆಗಳ ಪ್ರಯೋಜನವನ್ನು ಒಳಗೊಂಡಿದೆ. ಪ್ರತಿದಿನದ 3GB ಡೇಟಾ ಮಿತಿ ಮುಗಿದ ಬಳಿಕ (FUP ) 80 Kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುವುದು. ಹಾಗೆಯೇ PRBT ಹಾಗೂ 365 ದಿನಗಳ ಸೋನಿ ಲೈವ್ ಚಂದಾದಾರಿಕೆ ಸಿಗಲಿದೆ.

ಬಿಎಸ್‌ಎನ್ಎಲ್ 399ರೂ. STV
ಬಿಎಸ್‌ಎನ್ಎಲ್ 399ರೂ.(STV) ಪ್ರೀಪೇಡ್ ಪ್ಲ್ಯಾನ್ ಅನ್ನು ಪರಿಷ್ಕರಣೆ ಮಾಡಿದ್ದು, ಈ ಪ್ಲ್ಯಾನ್ ಒಟ್ಟು 80 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 1GB ಡೇಟಾ ಮತ್ತು 100 ಉಚಿತ ಎಸ್ಎಮ್ಎಸ್‌ಗಳ ಸೌಲಭ್ಯವು ಸಿಗಲಿದೆ. ಹಾಗೆಯೇ ಇದರೊಂದಿಗೆ PRBT ಪ್ರಯೋಜನಗಳು ಸಹ ದೊರೆಯಲಿವೆ.

180 ದಿನಗಳ ವ್ಯಾಲಿಡಿಟಿ ಪ್ಲ್ಯಾನ್
ಬಿಎಸ್‌ಎನ್‌ಎಲ್ ಇತ್ತೀಚಿಗೆ 997ರೂ. ಪ್ರೀಪೇಡ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ಲೋಕಲ್ ಮತ್ತಯ ನ್ಯಾಶನಲ್ ಕರೆಗಳು ಉಚಿತವಾಗಿ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 3GB ಡೇಟಾ ಸೌಲಭ್ಯವು ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ಗಳ ಪ್ರಯೋಜನವು ಲಭ್ಯವಾಗಲಿದೆ.

ವರ್ಷದ ವ್ಯಾಲಿಡಿಟಿ ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ 1699ರೂ.ಗಳ ವಾರ್ಷಿಕ ಪ್ರೀಪೆಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ದೊರೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಮತ್ತು ಅನಿಯಮಿತ ಲೋಕಲ್ ಹಾಗೂ ನ್ಯಾಶನಲ್ ಉಚಿತ ಕರೆಗಳು ಸಹ ಲಭ್ಯವಾಗುತ್ತವೆ. ಹಾಗೆಯೇ ಪ್ರತಿದಿನ ಉಚಿತ 100 ಎಸ್ಎಮ್ಎಸ್ಗಳ ಪ್ರಯೋಜನವು ಸಹ ಸೇರಿದೆ.

ಇತರೆ ಪ್ರೀಪೇಡ್ ಪ್ಲ್ಯಾನ್‌ಗಳು
ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಹಲವು ಆಕರ್ಷಕ ನೂತನ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಖಾಸಗಿ ಸಂಸ್ಥೆಗಳಿಗೆ ಟಾಂಗ್ ನೀಡುತ್ತಿದೆ. ಬಿಎಸ್‌ಎನ್ಎಲ್ 365ರೂ. ಪ್ರೀಪೇಡ್ ಪ್ಲ್ಯಾನ್, ಇದೇ ರೀತಿ ಬಿಎಸ್‌ಎನ್ಎಲ್ 998ರೂ. (STV) ಪ್ರೀಪೇಡ್ ಪ್ಲ್ಯಾನ್, ಹಾಗೂ ಇತ್ತೀಚಿನ ಬಿಎಸ್ಎನ್‌ಎಲ್ 1198ರೂ. ಪ್ಲ್ಯಾನ್ ಸಹ ಹೆಚ್ಚು ಆಕರ್ಷಕವಾಗಿ ಗುರುತಿಸಿಕೊಂಡಿವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190